ಚೈತ್ರಾಳ ಅಂಗಾಂಗ ದಾನ ಮಾಡಿದ ಎರಡೇ ದಿನದಲ್ಲಿ ಏನಾಗಿದೆ ನೋಡಿ..

0 views

ಮೊನ್ನೆಮೊನೆಯಷ್ಟೇ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಕೋಲಾರದ ಚೈತ್ರಾರ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಫೆಬ್ರವರಿ ಆರರಂದು ಅರತಕ್ಷತೆಯ ದಿನವೇ ಚೈತ್ರಾ ಕುಸಿದು ಬಿದ್ದು ಬ್ರೇನ್ ಡೆಡ್ಡಾಗಿ ಎರಡು ದಿನದ ಹಿಂದೆ ಆಕೆ ಉಳಿಯುವುದಿಲ್ಲವೆಂದು ಖಚಿತವಾದ ನಂತರ ಆಕೆಯ ಹೃದಯ ಕಿಡ್ನಿ ಕಣ್ಣುಗಳು ಹೀಗೆ ಆಕೆಯಿಂದ ಮತ್ತೊಬ್ಬರಿಗೆ ಉಪಯೋಗವಾಗುವ ಎಲ್ಲಾ ಅಂಗಾಂಗಗಳನ್ನು ಆಕೆಯ ಹೆತ್ತವರು ದಾನ ಮಾಡಿದ್ದರು.. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ನೋವಿನಲ್ಲಿಯೇ ಇಂತಹ ನಿರ್ಧಾರ ಮಾಡಿ ಮಗಳ ಅಗಲಿಕೆಗೆ ಸಾರ್ಥಕತೆ ತುಂಬಿದ್ದರು.. ಆದರೆ ಚೈತ್ರಾರ ಘಟನೆ ನಡೆದ ಎರಡೇ ದಿನಕ್ಕೆ ನಡೆದಿರುವ ಘಟನೆ ನಿಜಕ್ಕೂ ಮನಕಲಕುವಂತಿದೆ..

ಹೌದು ಚೈತ್ರಾರ ಅಗಲಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.. ಇಪ್ಪತ್ತಾರು ವರ್ಷಕ್ಕೆ ಅದರಲ್ಲಿಯೂ ಜೀವನದ ಮಹತ್ತರವಾದ ದಿನವೇ ಇಂತಹ ಘಟನೆ ನಡೆದಿದ್ದು ಸಂಕಟ ತರುವಂತಿದೆ.. ಆದರೆ ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದ್ದು ನಿಜಕ್ಕೂ ಈಗಿನ ಜೀವನ ಶೈಲಿ ಯಾವ ರೀತಿ ಸಾಗುತ್ತಿದೆ.. ನೂರು ವರ್ಷ ಗಟ್ಟಿ ಮುಟ್ಟಾಗಿ ಕೆಲಸ ಕಾರ್ಯ ಮಾಡಿಕೊಂಡು ಇರುತ್ತಿದ್ದ ನಮ್ಮ ಹಿರಿಯರೆಲ್ಲಿ.. ಇಪ್ಪತ್ತು ಇಪ್ಪತ್ತೈದು ವರ್ಷಕ್ಕೆ ಕುಸಿದು ಬಿದ್ದು ಜೀವ ಕಳೆದು ಕೊಳ್ಳುತ್ತಿರುವ ನಾವುಗಳೆಲ್ಲಿ ಎನಿಸುತ್ತಿದೆ..

ಹೌದು ಕೋಲಾರದ ನಂತರ ಶಿವಮೊಗ್ಗದಲ್ಲಿ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು ಕೇವಲ ಇಪ್ಪತ್ತೆರೆಡು ವರ್ಷದ ಹೆಣ್ಣು ಮಗಳು‌ ಕೆಲಸ ಮಾಡುತ್ತಲೇ ಕುಸಿದು ಬಿದ್ದಿದ್ದು ಈಕೆಗೂ ಬ್ರೇನ್ ಡೆಡ್ಡಾಗಿ ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದು ನಿಜಕ್ಕೂ ಮನಕಲಕುವಂತಿದೆ.. ಹೌದು ಈಕೆಯ ಹೆಸರು ಗಾನವಿ.. ವಯಸ್ಸು ಕೇವಲ ಇಪ್ಪತ್ತೆರೆಡು.. ಎನ್ ಆರ್ ಪುರ ತಾಲೂಕು ಕಟ್ಟಿನ ಮನೆ ಹೊಸಕೊಪ್ಪದ ಕೃಷ್ಣಮೂರ್ತಿ ಹಾಗೂ ಲೀಲಾವತಿ ದಂಪತಿಗಳ ಮಗಳು ಈ ಗಾನವಿ ಗೌಡ.. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು..

ಫೆಬ್ರವರಿ ಎಂಟರಂದು ಕೆಲಸ ಮಾಡುತ್ತಿದ್ದ ಸಮಯದಲ್ಲಿಯೇ ಆಸ್ಪತ್ರೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.. ಗಾನವಿ ಮತ್ತೆ ಮೇಲೆ ಏಳಲೇ ಇಲ್ಲ.. ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಇಷ್ಟೂ ದಿನಗಳ ಕಾಲ ಚಿಕಿತ್ಸೆ ನೀಡಿದರೂ ಸಹ ಉಪಯೋಗವಾಗಲಿಲ್ಲ.. ಗಾನವಿಯ ಬ್ರೇನ್ ಡೆಡ್ಡಾಗಿದೆ ಎಂದು ವೈದ್ಯರು ತಿಳಿಸಿದರು.. ಇತ್ತ ಗಾನವಿಯ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.. ಚೆನ್ನಾಗಿ ಆರೋಗ್ಯವಾಗಿದ್ದ ಮಗಳು ಇದ್ದಕಿದ್ದ ಹಾಗೆ ಇಲ್ಲವೆಂದರೆ ಹೆತ್ತವರ ಸಂಕಟ ಹೇಳತೀರದು.. ಇನ್ನೂ ಮನಕಲಕುವ ವಿಚಾರವೆಂದರೆ..

ಇದೇ ಫೆಬ್ರವರಿ ಇಪ್ಪತ್ತಕ್ಕೆ ಗಾನವಿಯ ಸಹೋದರಿಯ ಮದುವೆ ನಿಶ್ಚಯವಾಗಿತ್ತು.. ಕೆಲವೇ ದಿನಗಳಲ್ಲಿ ಗಾನವಿ ಕೆಲಸಕ್ಕೆ ರಜೆ ಹಾಕಿ ಅಕ್ಕನ ಮದುವೆಯ ಓಡಾಟದಲ್ಲಿ ಪಾಲ್ಗೊಳ್ಳಬೇಕಿತ್ತು.. ಆದರೆ ವಿದಿಯ ನಿರ್ಣಯವೇ ಬೇರೆ ಇತ್ತು.. ಗಾನವಿ ಇನ್ನು ಉಳಿಯುವುದಿಲ್ಲವೆಂದು ತಿಳಿದ ಬಳಿಕ ಗಾನವಿಯ ತಂದೆ ತಾಯಿ ಆಕೆಯ ಅಂಗಾಂಗವನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.. ಅವರ ನಿರ್ಧಾರದಂತೆ ಗಾನವಿಯ ಕಣ್ಣುಗಳು ಕಿಡ್ನಿಗಳು ಹೃದಯ ಹಾಗೂ ಲಿವರ್ ಅನ್ನು ದಾನ ಮಾಡಲಾಗಿದ್ದು ಏಳು ಜನರ ಬಾಳಿಗೆ ಬೆಳಕಾಗಿದ್ದು ಗಾನವಿ ಅವರುಗಳ ಮೂಲಕ‌ ಇನ್ನು ಮುಂದೆ ಜೀವಿಸಲಿದ್ದಾರೆ..

ಆದರೆ ಇತ್ತ ಗಾನವಿಯ ಕುಟುಂಬ ಕೂಲಿ ಕಾರ್ಮಿಕರಾಗಿದ್ದು.. ಚಿಕ್ಕ ವಯಸ್ಸಿನಲ್ಲಿಯೇ ಓದಿ ಕೆಲಸಕ್ಕೆ ಸೇರಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ ಮಗಳನ್ನು ಕಳೆದುಕೊಂಡು ಕುಟುಂಬ ಅಕ್ಷರಶಃ ಇನ್ನಷ್ಟು ಕಷ್ಟದ ಜೊತೆ ನೋವು ಅನುಭವಿಸುವಂತಾಯಿತು.. ಕೆಲವೇ ದಿನಗಳಲ್ಲಿ ಮದುವೆಯ ಸಂಭ್ರಮದಲ್ಲಿ ಇರಬೇಕಾದ ಮನೆ ಸೂತಕದ ಮನೆಯಾಗಿ ಹೋಯ್ತು.. ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಜನರ ಬಾಳಿಕೆ ಬೆಳಕಾಗಿ ಹೋದ ಗಾನವಿಗೆ ಶಾಂತಿ ಸಿಗಲಿ..