ಮಗಳು ಜಾನಕಿ ಧಾರಾವಾಹಿ ನಟಿ ಗಾನವಿ ನಿಜಕ್ಕೂ ಯಾರು ಗೊತ್ತಾ? ಅವರ ಜೀವನದ ನೋವಿನ ಕತೆ ನೋಡಿ..

0 views

ಮಗಳು ಜಾನಕಿ.. ಯಾರಿಗೆ ತಾನೆ ಗೊತ್ತಿಲ್ಲ.. ಧಾರಾವಾಹಿಯ ಹೆಸರು ಮಾತ್ರ ಮಗಳು ಜಾನಕಿಯಲ್ಲ.. ಬದಲಿಗೆ ಈಕೆ ಕರ್ನಾಟಕದ ಧಾರಾವಾಹಿ ಪ್ರಿಯರ ಮನೆಯ ಮಗಳೂ ಕೂಡ ಹೌದು.. ಅಷ್ಟರ ಮಟ್ಟಕ್ಕೆ ಜನರ ಮನೆ ಮನದಾಳದಲ್ಲಿ ಬೇರೂರಿದ್ದ ನಟಿ ಅದು ಗಾನವಿ ಲಕ್ಷ್ಮಣ್..

ಹೌದು ಮೊದಲ ಧಾರಾವಾಹಿಯಲ್ಲೇ ಸೀತಾರಾಮ್ ಅವರ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು.. ಗಾನವಿ ಅವರದ್ದು ಎಂತಹ ಅದೃಷ್ಟ ಎಂದು ಬಹಳಷ್ಟು ಜನ ಅಂದುಕೊಂಡರು.. ಆದರೆ ಆ ಅವಕಾಶ ಸಿಗುವ ಮೊದಲು ಗಾನವಿ ಅನುಭವಿಸಿರುವ ನೋವು ಅಷ್ಟಿಷ್ಟಲ್ಲ.. ಹೌದು ಮನೆಯವರ ವಿರೋಧದ ನಡುವೆ ಬೆಂಗಳೂರಿಗೆ ಬಂದ ಗಾನವಿ ಕತೆ ನಿಜಕ್ಕೂ ಇವರೇನಾ ಆ ದಿಟ್ಟತನದ ಜಾನಕಿ ಎನಿಸುತ್ತದೆ.. ಇಲ್ಲಿದೆ ನೋಡಿ ಗಾನವಿ ಬದುಕಿನ ಕತೆ..

ಗಾನವಿ ಲಕ್ಷ್ಮಣ್ ಹುಟ್ಟಿ ಬೆಳೆದಿದ್ದು ಚಿಕ್ಕಮಗಳೂರಿಬಲ್ಲಿ.. ಚಿಕ್ಕವಯಸ್ಸಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳು.. ನೃತ್ಯ.. ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು.. ನಂತರ ಡಿಗ್ರಿ ಮುಗಿಸಿ ನಂತರ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.. ಆ ಶಾಲೆ ಬೇರೆ ಯಾರದ್ದೂ ಅಲ್ಲ ಕಾಫಿ ಕಿಂಗ್ ಸಿದ್ಧಾರ್ಥ್ ಅವರ ಇಂಟರ್ನ್ಯಾಷನಲ್ ಶಾಲೆಯಲ್ಲಿ ಡ್ಯಾನ್ಸ್ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡರು.. ಅಲ್ಲಿಯೇ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾ ನಟನೆಯ ಬಗ್ಗೆ ಆಸಕ್ತಿ ಹೆಚ್ಚಾಯಿತು.. ‌ಅವರೊಳಗಿದ್ದ ಕಲಾವಿದೆ ನಟಿ ಆಗಲೇಬೇಕೆಂದು ಧೃಡವಾದ ನಿರ್ಧಾರ ಮಾಡಿದರು..

ಆ ಬಳಿಕ ಮನೆಯವರೆಲ್ಲಾ ಗಾನವಿ ಆಯ್ದುಕೊಂಡ ವೃತ್ತಿಯನ್ನು ವಿರೋಧಿಸಿದರು.. ಆದರೆ ಗಾನವಿ ಮಾತ್ರ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಕಲಾವಿದೆಯಾಗಿ ಸಾಧಿಸಲೇ ಬೇಕೆಂದು ಬೆಂಗಳೂರಿನ ಮೆಜಸ್ಟಿಕ್ ಗೆ ಬಂದಿಳಿದರು.. ಆದರೆ ಜೀವನ ಅವರಂದುಕೊಂಡಷ್ಟು ಸುಲಭವಾಗಿರಲಿಲ್ಲ..

ಹೌದು ತಮ್ಮ ಬಟ್ಟೆಗಳಿದ್ದ ಒಂದು ಬ್ಯಾಗ್ ಹಿಡಿದು ಅವಕಾಶಕ್ಕಾಗಿ ಚಪ್ಪಲಿ ಹರಿಯುವವರೆಗೂ ಅಲೆದಾಡಿದ್ದಾರೆ.. ಆದರೆ ಯಾವುದೇ ಅವಕಾಶ ಸಿಗಲಿಲ್ಲ.. ಈ ಬಗ್ಗೆ ಮಾದ್ಯಮವೊಂದಕ್ಕೆ ತನ್ನ ಜೀವನ ಅನುಭವಗಳನ್ನು ಹಂಚಿಕೊಂಡಿರುವ ಗಾನವಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ..

ಬಹಳಷ್ಟು ದಿನಗಳ ಕಾಲ ಅವಕಾಶಕ್ಕಾಗಿ ಅಲೆದ ನಂತರ ಕಲರ್ಸ್ ವಾಹಿನಿಯಲ್ಲಿ ಮಗಳು ಜಾನಕಿ ಧಾರಾವಾಹಿಗೆ ಅವಕಾಶ ಸಿಗುತ್ತದೆ.. ನಾನು ಸಿನಿಮಾದಲ್ಲಿ ಅಭಿನಯಿಸಬೇಕೆಂದು ಬಂದೆ.. ಆದರೆ ದೇವರ ಆಯ್ಕೆ ಕಿರುತೆರೆಯಾಗಿತ್ತು.. ಆ ಧಾರಾವಾಹಿ ಮೂಲಕ ತೆರೆ ಮೇಲೆ ಬಂದೆ.. ಜನರು ನನ್ನನ್ನು ಅಷ್ಟು ಇಷ್ಟ ಪಟ್ಟುದ್ದು ನನ್ನ ಜೀವನದ ಪುಣ್ಯವೆನ್ನುವ ಗಾನವಿ ಅವತು ಸೀತಾರಮ್ ಅವರ ಬಳಿ ಮೊದಲ ಬಾರಿಗೆ ಅವಕಾಶ ಸಿಕ್ಕದ್ದಕ್ಕೆ ಸಾರ್ಥಕವಾಯಿತು ಎಂದಿದ್ದಾರೆ..

ಹೌದು ನಾನು ಅವಕಾಶಕ್ಕಾಗಿ ಅಲೆಯುವಾಗ ನಾನು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ.. ಆದರೆ ಅದನ್ನೆಲ್ಲಾ ಹೇಳಿಕೊಂಡರೆ ಯಾರೂ ಸಹ ನಂಬುವುದಿಲ್ಲ.. ಆದರೆ ಮಗಳು ಜಾನಕಿ ಆಡಿಷನ್ ನಲ್ಲಿ ಆಯ್ಕೆಯಾದಾಗ ನಾನು‌ ಇಷ್ಟು ದಿನ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಕ್ಕಿತ್ತು.. ಕಲಾವಿದರಿಗೆ ಮೊದಲ ಬಾರಿಯೇ ಸೀತಾರಮ್ ಅವರಂತಹ ಗುರುಗಳು ಸಿಕ್ಕಿದರೆ ಅವರು ಬೇರೆನೇ ಲೆವಲ್ ನಲ್ಲಿ ಬೆಳೆಯುತ್ತಾರೆ.. ಇಂದು ನಾನು ಏನೇ ಸಾಧನೆ ಮಾಡಿದರು ಅದಕ್ಕೆಲ್ಲಾ ಮಗಳು ಜಾನಕಿಯ ಜನಪ್ರಿಯತೆಯೇ ಕಾರಣ ಎಂದಿದ್ದಾರೆ..

ಮಗಳು‌ ಜಾನಕಿ‌ ಧಾರಾವಾಹಿಯಲ್ಲಿ ಅಭಿನಯಿಸುವ ಸಮಯದಲ್ಲಿಯೇ ರಿಷಭ್ ಶೆಟ್ಟಿ ಅವರ ನಾಥೂರಾಮ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು..‌ ಆನಂತರ ಕಾರಣಾಂತರಗಳಿಂದ ಆ ಸಿನಿಮಾ ಪೋಸ್ಟ್ ಪೋನ್ ಆಯಿತು.. ನಂತರ ಲಾಕ್ ಡೌನ್ ನಲ್ಲಿ ತನ್ನ ಹುಟ್ಟೂರಿನಲ್ಲಿ ಮನೆಯವರ ಜೊತೆ ಸಮಯ ಕಳೆಯುತ್ತಿದ್ದ ಗಾನವಿಗೆ ಒಂದು ಕಹಿ ಸುದ್ದಿ ಹಾಗೂ ಮತ್ತೊಂದು ಒಳ್ಳೆಯ ಸುದ್ದಿ ಎದುರಾಯ್ತು.. ಹೌದು ಅಪಾರ ಜನಮನ್ನಣೆ ತಂದು ಕೊಟ್ಟ ಮಗಳು ಜಾನಕಿ ಧಾರಾವಾಹಿ ಅರ್ಧಕ್ಕೆ ನಿಂತು ಹೋದದ್ದು ಗಾನವಿಗೆ ಬಹಳಷ್ಟು ಬೇಸರವನ್ನುಂಟು‌ ಮಾಡಿತ್ತು..‌ ಆದರೆ ಕೆಲ ದಿನಗಳಲ್ಲಿ‌ ರಿಷಭ್ ಅವರ ಹೀರೋ ಎನ್ನುವ ಸಿನಿಮಾದಲ್ಲಿ ಅಭಿನಯಿಸಲು ಗಾನವಿ ಅವರಿಗೆ ಅವಕಾಶ ಸಿಕ್ಕಿತು..‌ ಮ್ಯಾಜಿಕ್ ರೀತಿಯಲ್ಲಿ ಲಾಕ್ ಡೌನ್ ಸಮಯದಲ್ಲಿಯೇ ಚಿತ್ರ ಸಂಪೂರ್ಣವೂ ಆಯಿತು.. ಎಲ್ಲಾ ಶೂಟಿಂಗ್ ಚಿಕ್ಕಮಗಳೂರಿನ ಬಳಿಯೇ ನೆರವೇರಿದ್ದರಿಂದ ಗಾನವಿ ಮನೆಯವರ ಜೊತೆಯೇ ಹೆಚ್ಚು ಸಮಯ ಕಳೆಯುವಂತಾಯಿತು‌‌ ಎಂದು ಸಂತೋಷ ಹಂಚಿಕೊಂಡರು‌..

ನನ್ನ ಜೀವನಕ್ಕೆ ಕಲೆಯೇ ಸ್ಪೂರ್ತಿ ಎನ್ನುವ ಗಾನವಿ ಕೊನೆವರೆಗೂ ಕಲಾವಿದೆಯಾಗಿಯೇ ಬಾಳಬೇಕು ಎನ್ನುವ ಮಹತ್ತರದ ಕನಸು ಕಟ್ಟಿಕೊಂಡಿದ್ದಾರೆ.. ಸಿಕ್ಕಾಪಟ್ಟೆ ಸ್ವಾಭಿಮಾನಿಯಾಗಿರುವ ಗಾನವಿ ತಮ್ಮ ಸ್ವಾಭಿಮಾನಕ್ಕೆ ಕೊಂಚ ಧಕ್ಕೆಯಾದರು ಮರುಕ್ಷಣ ಆ ಜಾಗದಿಂದ ಗಾನವಿ ಮಾಯವಾಗಿರುತ್ತಾರೆ.. ಗಾನವಿ ಡ್ಯಾನ್ಸ್ ಟೀಚರ್ ಮಾತ್ರವಲ್ಕ ಯೋಗ ಇನ್ಸ್ಟ್ರಕ್ಟರ್ ಆಗಿಯೂ ಕೆಲಸ ಮಾಡಿರುವ ಕಾರಣ ತಮ್ಮ ಫಿಟ್ನೆಸ್ ಬಗ್ಗೆ ಸಾಕಷ್ಟು ಗಮನ ನೀಡುತ್ತಾರೆ..

ಇನ್ನು‌ ಮತ್ತೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕರೆ ಮಾಡುವುದಿಲ್ಲ ಎನ್ನುತ್ತಾರೆ ಗಾನವಿ.. ಹೌದು ನಾನು ಸಿನಿಮಾದಲ್ಲಿಯೇ ನಟಿಸಬೇಕು ಅಂತ ಬಂದದ್ದು.. ಆದರೆ ದೇ ಅರ ಆಯ್ಕೆ ಕಿರುತೆರೆಯಾಗಿತ್ತು.. ಮಗಳು ಜಾನಕಿ ಆಯಿತು.. ಇನ್ನು ಮುಂದೆ ಸಂಪೂರ್ಣವಾಗಿ ಸಿನಿಮಾಗಳಲ್ಲಿಯೇ ತೊಡಗಿಸಿಕೊಳ್ಳುವೆ.. ಇನ್ನೇನಿದ್ದರೂ ನನ್ನನ್ನು ದೊಡ್ಡ ಪರದೆಯಲ್ಲಿ ನೋಡಬಹುದು ಎಂದರು.. ಜೀವನದಲ್ಲಿ ಸಾಧನೆ ಮಾಡಬೇಕೆಂದರೆ ಬಹಳಷ್ಟು ಅಡೆತಡೆಗಳು.. ತೊಂದರೆಗಳು ಎದುರಾಗುತ್ತವೆ.. ಆದರೆ ಅವನ್ನೆಲ್ಲಾ ಎದುರಿಸಿ ಮುಂದೆ ಬರಬೇಕು.. ಶ್ರದ್ಧೆ ಹಾಗೂ ಪರಿಶ್ರಮ ಇದ್ದರೆ ದೇವರು ಖಂಡಿತ ಕೈ ಹಿಡಿಯುತ್ತಾನೆ.. ನಮ್ಮ ಪ್ರಯತ್ನ ಬೇಕು ಅಷ್ಟೇ ಎನ್ನುತ್ತಾರೆ ಗಾನವಿ‌‌..