ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾರಾ ಕನ್ನಡದ ಖ್ಯಾತ ನಟ..

0 views

ಸಿನಿಮಾಗಳ ಜೊತೆಗೆ ತಮ್ಮ ಅದ್ಬುತ ಪ್ರತಿಭೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಟ ಗಣೇಶ್. ತಮ್ಮ ವಿಭಿನ್ನ ರೀತಿಯ ಡ್ಯಾನ್ಸ್ ನ ಮೂಲಕವೇ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ರೋಬೋ ಗಣೇಶ್ ಎಂದೇ ಗುರುತಿಸಿಕೊಂಡಿದ್ದಾರೆ. ತಮ್ಮ ವಿಭಿನ್ನವಾದ ನೃತ್ಯ ಕಲೆಯ ಮೂಲಕ ಬೋನ್ ಲೆಸ್ ವಂಡರ್ ಎಂದು ಅಂತರಾಷ್ಟ್ರೀಯ ಮಟ್ಟಡಲ್ಲಿ ಹೆಸರು ಮಾಡಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ತಮ್ಮ ನೃತ್ಯ ಕಲೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ನಟ ಗಣೇಶ್ ಈಗ ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ. ರೋಬೋ ಗಣೇಶ್ ಈಗ ಏನು ಮಾಡುತ್ತಿದ್ದಾರೆ? ಹೇಗಿದ್ದಾರೆ ಗೊತ್ತಾ..

2009 ರಲ್ಲಿ ತೆರೆಕಂಡ ಜೋಶ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ರೋಬೋ ಗಣೇಶ್ ತಮ್ಮ ಸಿನಿ ಜರ್ನಿಯನ್ನ ಆರಂಭಿಸಿದರು. ಎಸ್ ವಿ ಬಾಬು ಅವರು ಜೋಶ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಈ ಸಿನಿಮಾದಲ್ಲಿ ನಟ ಗಣೇಶ್ ಅವರಿಗೆ ವಿಶೇಷವಾದ ಖಳನಾಯಕನ ಪಾತ್ರ ನೀಡಲಾಗಿತ್ತು. ಈ ಸಿನಿಮಾ 100 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಆದರೆ ಈ ಸಿನಿಮಾದಿಂದ ಗಣೇಶ್ ಅವರು ಅಷ್ಟಾಗಿ ಹೆಸರು ಮಾಡಲಿಲ್ಲ. ಗಣೇಶ್ ಅವರು ಜನಪ್ರಿಯತೆ ಪಡೆದುಕೊಂಡಿದ್ದು ರಿಯಾಲಿಟಿ ಶೋಗಳ ಮೂಲಕವೇ. ಸಾಕಷ್ಟು ಡ್ಯಾನ್ಸ್ ರಿಯಾಲಿಟಿ ಶೋಗಳ ಮೂಲಕ ರೋಬೋ ಗಣೇಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ರೋಬೋ ಗಣೇಶ್ ತಮ್ಮ ಜೀವನದ ಕಹಿ ಘಟನೆಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಚಿಕ್ಕಿ ವಯಸ್ಸಿನಿಂದಲ್ಲೂ ನಟನಾಗಬೇಕೆಂಬ ಆಸೆ ನನಗಿತ್ತು. ಆ ಕಾರಣದಿಂದ ಸಿನಿಮಾರಂಗದಲ್ಲಿ ಸಾಕಷ್ಟು ಅವಕಾಶಗಳನ್ನು ಹುಡುಕಿಕೊಂಡು ಬಂದೆ. ಮೊದ ಮೊದಲು ಜ್ಯೂನಿಯರ್ ಆರ್ಟಿಸ್ಟ್ ಆಗಿ ನಾನು ಕೆಲಸ ಮಾಡುತ್ತಿದೆ. ಆ ವೇಳೆ ತಮಿಳಿನ ನಿರ್ದೇಶಕರೊಬ್ಬರು ನನ್ನ ಟ್ಯಾಲೆಂಟ್ ನೋಡಿ ನನ್ನನ್ನು ವೇದಿಕೆಗೆ ಪರಿಚಯಿಸಿದರು. ಆ ಸಮಯದಲ್ಲಿ ನಾನು ಏನಾದರೂ ವಿಭಿನ್ನ ರೀತಿಯಲ್ಲಿ ಮಾಡಿ ಜನರನ್ನು ನನ್ನ ಕಡೆ ಆಕರ್ಷಿಸಿಕೊಳ್ಳಬೇಕು ಎಂದು ಪಣ ತೊಟ್ಟೆ.

ಏನಾದರೂ ವಿಭಿನ್ನವಾದ ರೀತಿಯ ನಾನ್ನು ನನ್ನ ಪ್ರತಿಭೆಯನ್ನು ತೋರಿಸಬೇಕು ಎಂದು ಯೋಚಿಸಿದೆ. ಆಗ ನನಗೆ ತಮಿಳು ಬಿಟ್ಟರೆ ಬೇರೆ ಯಾವುದೇ ಬಾಷೆ ಬರುತ್ತಿರಲಿಲ್ಲ. ಆಗ ನಾನು ಜನರ ಮನಸ್ಸನ್ನು ಗೆಲ್ಲಲ್ಲು ಬಾಷೆ, ಬಣ್ಣ ಹಾಗೂ ಮೈಕಟ್ಟು ಮುಖ್ಯವಲ್ಲ ಎಂದು ನನ್ನ ಮುಖಕ್ಕೆ ಮಾಸ್ಕ್ ಧರಿಸಿ ಹೊಸ ರೀತಿಯಿಂದ ಜನರನ್ನು ರಂಜಿಸಲು ಶುರು ಮಾಡಿದೆ. ನನ್ನ ರೋಬೋ ಮೂವ್ಸ್ ಎಷ್ಟು ಫ್ಹೇಮಸ್ ಆಯಿತು ಎಂದರೆ ನನ್ನನ್ನು ಇಂದಿಗೂ ಸಹ ಎಲ್ಲರೂ ರೋಬೋ ಗಣೇಶ್ ಎಂದೇ ಕರೆಯುತ್ತಾರೆ. ಯಾರಿಗೂ ಸಹ ನಾನು ಗಣೇಶ್ ಎಂದರೆ ತಿಳಿಯುವುದಿಲ್ಲ ರೋಬೋ ಗಣೇಶ್ ಎಂದರೆ ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ನನಗೆ ಯಾರ ಬೆಂಬಲ ಇರಲಿಲ್ಲ ನಾನು ಅಲ್ಲಿ ಇಲ್ಲಿ ನೋಡಿ ಯಾವ ಡ್ಯಾನ್ಸ್ ಕ್ಲಾಸ್ ಗೆ ಹೋಗದೆ ಸಿನಿಮಾಗಳಲ್ಲಿ ನೋಡಿ ನಾನು ಡ್ಯಾನ್ಸ್ ಕಲಿತೆ.

ಕೆಲವರು ನನ್ನ ಮನಸ್ಸಿಗೆ ನೋವಾಗುವಂತೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ನಿಮಗೆಲ್ಲಾ ಸಿನಿಮಾಗಳಲ್ಲಿ ಅವಕಾಶ ಯಾರು ಕೊಡುತ್ತಾರೆ ನಿಮ್ಮ ಮುಖಗಳನ್ನು ಯಾರು ನೋಡುತ್ತಾರೆ ಹೋಗೋ ಎಂದೆಲ್ಲಾ ಹೇಳುತ್ತಿದ್ದರು. ನನಗೆ ಅವಕಾಶಗಳು ಸಿಗದೆ ಇದ್ದಾಗ ನಾನು ಟಿವಿಯಲ್ಲಿ ಒಂದು ಬಾರಿ ಟ್ರೈ ಮಾಡಿ ನೋಡೋಣ ಎಂದು ಹೋದೆ ಆಗ ನನ್ನ ಟ್ಯಾಲೆಂಟ್ ಗೆ ಯಾವ ಪ್ರಶಂಸೆ ಕೂಡ ಸಿಗಲಿಲ್ಲ. ಬೇರೆ ಯಾವುದೇ ಕೆಲಸವಿಲ್ಲದೆ ಇರುವ ಸಮಯದಲ್ಲಿ ನಾನು ಒಂದು ಸಿಟಿಲೈಟ್ ಚಾನಲ್ ಗೆ ಸೆಕ್ಯೂರಿಟಿ ಬೇಕಾಗಿದ್ದಾರೆ ಎಂದು ತಿಳಿದು. ಅವರನ್ನು ಭೇಟಿ ಮಾಡಿ ಅಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡೆ ಎಂದು ತಮ್ಮ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ.