ಧಾರಾವಾಹಿಗಳ ರೇಟಿಂಗ್ ನಲ್ಲಿ ಸಂಪೂರ್ಣ ಬದಲಾವಣೆ.. ಕೆಳಗೆ ಇದ್ದ ಧಾರಾವಾಹಿ ನಂಬರ್ ಒನ್ ಆಯ್ತು..

0 views

ಕನ್ನಡ ಕಿರುತೆರೆ ಕಳೆದ ಎರಡು ಮೂರು ವರ್ಷದಿಂದ ಸಾಕಷ್ಟು ಬದಲಾವಣೆಗಳನ್ನು ತಂದುಕೊಂಡಿದ್ದು ಇತರ ಕಿರುತೆರೆ ಇಂಡಸ್ಟ್ರಿಗಳಿಗೆ ಯಾವುದಕ್ಕೂ ಕಡಿಮೆ ಇಲ್ಲದಂತೆ ಬೆಳೆದು ನಿಂತಿದೆ.. ಅದರಲ್ಲೂ ರೇಟಿಂಗ್ ವಿಚಾರ ಬಂದರೆ ಕನ್ನಡದ ಅನೇಕ ಧಾರಾವಾಹಿಗಳು ಸೌತ್ ಕಿರುತೆರೆ ಇಂಡಸ್ಟ್ರಿಗಳಿಗೆ ಸ್ಪರ್ಧೆಯನ್ನು ನೀಡಿತ್ತು.. ಇನ್ನು ಕನ್ನಡದ ಧಾರಾವಾಹಿಗಳ ನಡುವಿನ ಸ್ಪರ್ಧೆಯ ವಿಚಾರಕ್ಕೆ ಬಂದರೆ ಧಾರಾವಾಹಿ ನಿರ್ಮಾಣ ಇದೀಗ ಮೊದಲಿನಂತಿಲ್ಲ.. ಹೌದು ಸಿನಿಮಾ ರೀತಿಯ ಕತೆಗಳು ಅದ್ಧೂರಿ ಮೇಕಿಂಗ್ ಸಿನಿಮಾ ಹೀರೋಗಳಂತ ಕಲಾವಿದರುಗಳು ಹೀಗೆ ಸಾಕಷ್ಟು ವಿಚಾರಗಳಿಗೆ ಕನ್ನಡದ ಧಾರಾವಾಹಿಗಳು ಪ್ರೇಕ್ಷಕರ ಮನ ಗೆಲ್ಲುತ್ತಿದೆ..

ಅದರಲ್ಲೂ ರೇಟಿಂಗ್ ವಿಚಾರ ಬಂದರೆ ತಾಮುಂದು ನಾಮುಂದು ಎಂಬಂತೆ ಒಂದಕ್ಕೊಂದು ಸ್ಪರ್ಧೆ ನೀಡುತ್ತಿರುವುದು ಸತ್ಯ.. ಇನ್ನು ಈ ವಾರದ ರೇಟಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಕೆಳಗೆ ಬಿದ್ದ ಧಾರಾವಾಹಿ ಮತ್ತೆ ನಂಬರ್ ಒನ್ ಆಗಿ ಹೊರ ಬಂದಿದೆ.. ಹೌದು ಕಳೆದ ಎರಡು ವರ್ಷಗಳಿಂದ ಜೀ ಕನ್ನಡ ವಾಹಿನಿಯ ಧಾರಾವಾಹಿಗಳು ಬಹುತೇಕ ಟಾಪ್ ಐದೂ ಸ್ಥಾನಗಳನ್ನು ಪಡೆದುಕೊಳ್ಳುತ್ತಾ ಬರುತ್ತಿದೆ.. ಆದರೆ ಕಳೆದ ಎರಡು ವರ್ಷದ ಹಿಂದೆ ಶುರುವಾದ ಪಾರು ಗಟ್ಟಿಮೇಳ ಜೊತೆಜೊತೆಯಲಿ ಹೀಗೆ ಕೆಲ ಧಾರಾವಾಹಿಗಳು ಮಾತ್ರವೇ ಮೊದಲ ಸ್ಥಾನಗಳನ್ನು ಅಲಂಕರಿಸುತ್ತಾ ಬಂದಿದ್ದವು..

ಆದರೆ ನಾಗಿಣಿ ೨ ಹಾಗೂ ಸತ್ಯ ಧಾರಾವಾಹಿ ಬಂದ ನಂತರ ಅವುಗಳು ಸಹ ಟಾಪ್ ಎರಡು ಅಥವಾ ಮೂರು ಹೀಗೆ ಟಾಪ್ ಐದು ಸ್ಥಾನಗಳಲ್ಲಿ ಒಂದಾಗಿತ್ತು.. ಇನ್ನು ಕೆಲ ವಾರಗಳ ಹಿಂದೆ ಶುರುವಾದ ಹಿಟ್ಲರ್ ಕಲ್ಯಾಣ ಧಾರಾವಾಹಿ ಜನಮನ ಗೆದ್ದು ಟಾಪ್ ಒನ್ ಧಾರಾವಾಹಿಯಾಗಿತ್ತು ಎಂದರೆ ನಂಬಲೇ ಬೇಕು.. ಆದರೆ ಎರಡು ವರ್ಷಗಳಿಂದ ಟಾಒ ನಲ್ಲಿದ್ದ ಗಟ್ಟಿಮೇಳ ಧಾರಾವಾಹಿಯಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆ ಮಾಡಲಾಗಿತ್ತು.. ಇತ್ತ ನಟ ರಕ್ಷ್ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಸಹ ಹೊತ್ತರು..

ನಟನಿಂದ ನಿರ್ಮಾಪಕನಾದ ರಕ್ಷ್ ಸಾಕಷ್ಟು ಬದಲಾವಣೆಗಳೊಂದಿಗೆ ಧಾರಾವಾಹಿಯನ್ನು ಮುನ್ನಡೆಸುತ್ತಿದ್ದರು.. ಆದರೆ ಅಂದುಕೊಂಡ ಯಶಸ್ಸು ದೊರೆಯಲಿಲ್ಲ.. ಧಾರಾವಾಹಿ ಟಾಪ್ ಐದಕ್ಕಿಂತ ಕೆಳಗೆ ಹೋಯಿತು.. ಇನ್ನು ಈ ಧಾರಾವಾಹಿಯ ರೇಟಿಂಗ್ ಇಷ್ಟೇ ಎಂದು ಕೊಳ್ಳುವಾಗಲೇ ಇದೀಗ ಫೀನಿಕ್ಸ್‌ ಪಕ್ಷಿಯಂತೆ ಎದ್ದು ಬಂದಿದೆ.. ಹೌದು ಸಧ್ಯ ಅಮೂಲ್ಯ ಹಾಗೂ ವೇದಾಂತ್ ಮದುವೆ ಸಂಭ್ರಮ ನಡೆಯುತ್ತಿದ್ದು ಧಾರಾಳವಾಗಿ ಹಣಸುರಿದು ಅದ್ಧೂರಿಯಾದ ಸೆಟ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.. ಕಳೆದ ಒಂದು ವಾರದಿಂದ ಸಾಕಷ್ಟು ತಿರುವುಗಳನ್ನು ನೀಡಿದ ಗಟ್ಟಿಮೇಳ ಧಾರಾವಾಹಿ ಇದೀಗ ನಂಬರ್ ಒನ್ ಧಾರಾವಾಹಿಯಾಗಿದೆ..

ಹೌದು ಕಳೆದ ವಾರದ ರೇಟಿಂಗ್ ಪ್ರಕಾರ ಗಟ್ಟಿಮೇಳ ಧಾರಾವಾಹಿ ನಂಬರ್ ಒನ್ ಆದರೆ ಹಿಟ್ಲರ್ ಕಲ್ಯಾಣ ಧಾರಾವಾಹಿ ಎರಡನೇ ಸ್ಥಾನ.. ಜೊತೆಜೊತೆಯಲಿ ಮೂರನೇ ಸ್ಥಾನ.. ಪಾರು ನಾಲ್ಕನೇ ಸ್ಥಾನ.. ಪಡೆದರೆ ಇತ್ತ ಕಲರ್ಸ್ ಕನ್ನಡ ವಾಹಿನಿಯ ಮಂಗಳ ಗೌರಿ ಮದುವೆ ಐದನೇ ಸ್ಥಾನ ಪಡೆದುಕೊಂಡಿದೆ.. ಇನ್ನು ಇಷ್ಟು ದಿನ ಟಾಪ್ ಒಂದು ಅಥವಾ ಎರಡನೇ ಸ್ಥಾನದಲ್ಲಿರುತ್ತಿದ್ದ ಜೀ ಕನ್ನಡ ವಾಹಿನಿಯ ಸತ್ಯ ಧಾರಾವಾಹಿ ಆರನೇ ಸ್ಥಾನಕ್ಕೆ ಬಂದಿದೆ.. ಇನ್ನುಳಿದಂತೆ ನಾಗಿಣಿ ೨ ಏಳನೇ ಸ್ಥಾನ..

ಕನ್ನಡತಿ ಎಂಟನೇ ಸ್ಥಾನ.. ನಮ್ಮನೆ ಯುವರಾಣಿ ಒಂಭತ್ತನೇ ಸ್ಥಾನ.. ಗೀತಾ ಹತ್ತನೇ ಸ್ಥಾನ.. ತ್ರಿನಯನಿ ಹಾಗೂ ನಂಬರ್ ಒನ್ ಸೊಸೆ ಹನ್ನೊಂದನೇ ಸ್ಥಾನ.. ಗಿಣಿರಾಮ ಹನ್ನೆರೆಡನೇ ಸ್ಥಾನ.. ನನ್ನರಸಿ ರಾಧೆ ಹದಿಮೂರನೇ ಸ್ಥಾನ.. ಲಕ್ಷಣ ಹದಿನಾಲ್ಕನೇ ಸ್ಥಾನ.. ಕಮಲಿ ಹದಿನೈದನೇ ಸ್ಥಾನ‌.. ಪುನರ್ ವಿವಾಹ ಹದಿನಾರನೇ ಸ್ಥಾನ.. ಮುದ್ದು ಲಕ್ಷ್ಮಿ, ಸುಂದರಿ ಹದಿನೇಳನೇ ಸ್ಥಾನ.. ಮನಸಾರೆ ಹದಿನೆಂಟನೇ ಸ್ಥಾನ ಪಡೆದುಕೊಂಡಿದೆ.. ಆಶ್ಚರ್ಯವೆಂದರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಬ್ಬಿಂಗ್ ಧಾರಾವಾಹಿಗಳು ಒಳ್ಳೆಯ ರೇಟಿಂಗ್ ಪಡೆದುಕೊಳ್ಳುತ್ತಿದ್ದು ತ್ರಿನಯನಿ, ನಂಬರ್ ಒನ್ ಸೊಸೆ, ಪುನರ್ ವಿವಾಹ ಧಾರಾವಾಹಿಗಳು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಟಾಪ್ ಹದಿನಾರು ಧಾರಾವಾಹಿಗಳಲ್ಲಿ ಒಂದಾಗಿವೆ..