ಗಟ್ಟಿಮೇಳ ಜೊತೆಜೊತೆಯಲಿ ಧಾರಾವಾಹಿಗಳಿಗೆ ಸೋಲಿನ ರುಚಿ ತೋರಿಸಿ ಕನ್ನಡದ ನಂಬರ್ ಒನ್ ಆಯ್ತು ಬೇರೊಂದು ಧಾರಾವಾಹಿ..

0 views

ಬೇರೆ ಎಲ್ಲಾ ಉದ್ಯಮಗಳಲ್ಲಿ ಕಾಂಪಿಟೇಷನ್ ಇರುವಂತೆ ಕಿರುತೆರೆಯಲ್ಲಿಯೂ ಇದೆ.. ಆದರೆ ಇದು ವಾಹಿನಿ ವಾಹಿನಿಗಳ ನಡುವೆ ಒಂದು ರೀತಿಯ ಸ್ಪರ್ಧೆ ಇದ್ದರೆ.. ಧಾರಾವಾಹಿಗಳ ನಡುವೆ ಮತ್ತೊಂದು ರೀತಿಯ ಸ್ಪರ್ಧೆ ಇರುತ್ತದೆ.. ಒಂದು ವಾರ ಪೂರ್ತಿ ಯಾವ ಧಾರಾವಾಹಿಯನ್ನು ವೀಕ್ಷಕರು ಹೆಚ್ಚು ನೋಡಿರುವರು ಎಂಬ ಲೆಕ್ಕಾಚಾರದ ಪ್ರಕಾರ ಬಾರ್ಕ್ ಸಂಸ್ಥೆಯಿಂದ ಪ್ರತಿ ವಾರ ರೇಟಿಂಗ್ ಬಿಡುಗಡೆಯಾಗುತ್ತದೆ.. ಜಾಹಿರಾತುದಾರರು ಸಹ ಹೆಚ್ಚು ರೇಟಿಂಗ್ ಇರುವ ಧಾರಾವಾಹಿಯನ್ನು ಮೊದಲು ಆಯ್ಕೆ ಮಾಡಿಕೊಂಡು ಹೆಚ್ಚು ಜನರನ್ನು ತಲುಪಲು ಯೋಚಿಸುತ್ತಾರೆ..

ಇನ್ನು ಕಲಾವಿದರ ನಡುವೆ ಯಾವುದೇ ಸ್ಪರ್ಧೆ ಇಲ್ಲವಾದರೂ.. ನಮ್ಮ ಧಾರಾವಾಹಿಯೂ ನಂಬರ್ ಒನ್ ಆಗಬೇಕೆಂದು ಪ್ರತಿಯೊಬ್ಬರಿಗೂ ಅನಿಸದೇ ಇರದು.. ಇನ್ನು ಸದ್ಯ ಕನ್ನಡ ಕಿರುತೆರೆಯಲ್ಲಿ ಕಳೆದೊಂದು ವರ್ಷದಿಂದ ಜೀ ಕನ್ನಡ ನಂಬರ್ ಒನ್ ವಾಹಿನಿ ಆಗಿದ್ದಷ್ಟೇ ಅಲ್ಲದೇ ಜೀ ವಾಹಿನಿಯ ಬಹುತೇಕ ಎಲ್ಲಾ ಧಾರಾವಾಹಿಗಳು ಟಾಪ್ ಹತ್ತರ ಸ್ಥಾನ ಪಡೆದುಕೊಂಡಿದ್ದವು.. ಅದರಲ್ಲೂ ಕಳೆದ ವರ್ಷ ಶುರುವಾದ ಗಟ್ಟಿಮೇಳ ಹಾಗೂ ಜೊತೆಜೊತೆತಲಿ ಧಾರಾವಾಹಿ ಸಂಪೂರ್ಣ ವರ್ಷ ನಂಬರ್ ಒಂದು ಹಾಗೂ ನಂಬರ್ ಎರಡರ ಸ್ಥಾನವನ್ನು ಬೇರೆ ಯಾವ ಧಾರಾವಾಹಿಗೂ ಬಿಟ್ಟುಕೊಡದೇ ತನ್ನ ರೇಟಿಂಗ್ ಅನ್ನು ಕಾಯ್ದುಕೊಂಡಿದ್ದವು.. ಅದರಲ್ಲೂ ಕಳೆದ ವರ್ಷಾಂತ್ಯದಲ್ಲಿ 15 ರಿಂದ ಹದಿನಾರರ ಟಿವಿಆರ್ ವರೆಗೂ ದಾಟಿ ದಾಖಲೆ ಬರೆದಿದ್ದವು..

ಇನ್ನು ಇದೀಗ ರೇಟಿಂಗ್ ವಿಚಾರದಲ್ಲಿ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ಹೊಸ ಧಾರಾವಾಹಿಯೊಂದು ನಂಬರ್ ಒನ್ ಪಟ್ಟಕ್ಕೇರಿದೆ.. ಹೌದು ಆ ಧಾರಾವಾಹಿ ಮತ್ಯಾವುದೂ ಅಲ್ಲ ಸತ್ಯ.. ಜೀ ಕನ್ನಡ ವಾಹಿನಿಯ ಮತ್ತೊಂದು ಹೊಸ ಧಾರಾವಾಹಿ ಸತ್ಯ ಇದೀಗ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗಿ ಹೊರಹೊಮ್ಮಿದೆ.. ಕಳೆದ ವಾರವಷ್ಟೇ ತನ್ನ ಪ್ರಸಾರವನ್ನು ಶುರು ಮಾಡಿದ ಧಾರಾವಾಹಿ ಮೊದಲ ವಾರವೇ 9.2 ಟಿ ವಿ ಆರ್ ಪಡೆದು ಜೊತೆಜೊತೆಯಲಿ ಧಾರಾವಾಹಿಯನ್ನು ಹಿಂದಿಕ್ಕಿ ಕನ್ನಡ ಕಿರುತೆರೆಯ ನಂಬರ್ 2 ಧಾರಾವಾಹಿಯಾಗಿ ಗುರುತಿಸಿಕೊಂಡಿತು.. ಇದೀಗ ಎರಡನೇ ವಾರದಲ್ಲಿಯು ತನ್ನ ಯಶಸ್ಸಿನ ಪಯಣವನ್ನು ಮುಂದುವರೆಸಿದ್ದು ಗಟ್ಟಿಮೇಳ ಧಾರಾವಾಹಿಯನ್ನು ಸಹ ಹಿಂದಿಕ್ಕಿ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗಿದೆ.. ಒಟ್ಟು 10.9 ಟಿವಿಆರ್ ಪಡೆಯುವ ಮೂಲಕ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿಕೊಂಡಿದೆ.. ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ನಿರ್ದೇಶನ ಮಾಡಿದ್ದ ಸ್ವಪ್ನ ಕೃಷ್ಣ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸತ್ಯ ಧಾರಾವಾಹಿ ಎರಡೇ ವಾರಕ್ಕೆ ಜನರ ಮನಗೆದ್ದಿದ್ದು ಧಾರಾವಾಹಿ ತಂಡ ಹಾಗೂ ಸತ್ಯ ಧಾರಾವಾಹಿಯ ಕತೆ ಎಣೆಯುತ್ತಿರುವ ವಾಹಿನಿ‌ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರ ತಂಡ ಸಂತೋಷದಿಂದಿದ್ದಾರೆನ್ನಬಹುದು..

ಇನ್ನುಳಿದಂತೆ ಗಟ್ಟಿಮೇಳ ಎರಡನೇ ಸ್ಥಾನ.. ಜೊತೆಜೊತೆಯಲಿ ಮೂರು.. ಮಂಗಳ ಗೌರಿ ಮದುವೆ ಹಾಗೂ ಪಾರು ಧಾರಾವಾಹಿ ನಾಲ್ಕನೇ ಸ್ಥಾನ.. ಗೀತಾ ಧಾರಾವಾಹಿ ಐದನೇ ಸ್ಥಾನ.. ನಾಗಿಣಿ ಆರನೇ ಸ್ಥಾನ.. ಕನ್ನಡತಿ ಏಳನೇ ಸ್ಥಾನ.. ನಮ್ಮನೆ ಯುವರಾಣಿ ಎಂಟನೇ ಸ್ಥಾನ.. ಮುದ್ದು ಲಕ್ಷ್ಮೀ ಒಂಭತ್ತನೇ ಸ್ಥಾನ.. ನನ್ಮರಸಿ ರಾಧೆ ಹತ್ತು.. ಕಮಲಿ ಹನ್ನೊಂದು.. ಗಿಣಿರಾಮ ಹನ್ನೆರೆಡು.. ಮಹಾನಾಯಕ ಹದಿಮೂರು.. ಜೀವ ಹೂವಾಗಿದೆ ಹದಿನಾಲ್ಕು.. ರಾಧಾ ಕೃಷ್ಣ ಹದಿನಾಲ್ಕು. ಕಾವ್ಯಾಂಜಲಿ ಹದಿನೈದು.. ಮನಸಾರೆ ಹದಿನೈದು.. ಮಿಥುನ ರಾಶಿ ಹದಿನಾರು.. ಹೂಮಳೆ ಹದಿನೇಳು.. ಬ್ರಹ್ಮಗಂಟು ಹದಿನೇಳು.. ಸರಸು ಹದಿನೆಂಟು.. ಸಂಘರ್ಷಧಾರಾವಾಹಿ ಹತ್ತೊಂಬತ್ತು ಸೇವಂತಿ‌ ಇಪ್ಪತ್ತನೇ ಸ್ಥಾನ ಪಡೆದುಕೊಂಡಿದೆ..

ಇನ್ನು ವಾಹಿನಿಗಳ‌ ವಿಚಾರಕ್ಕೆ ಬಂದರೆ ಜೀ ಕನ್ಮಡ ವಾಹಿನಿ‌‌ ಮೊದಲ ಸ್ಥಾನ.. ಕಲರ್ಸ್ ಕನ್ನಡ ವಾಹಿನಿ ಎರಡನೇ ಸ್ಥಾನ.. ಸ್ಟಾರ್ ಸುವರ್ಣ ವಾಹಿನಿ ಮೂರನೇ ಸ್ಥಾನ..‌ ಉದಯ ಟಿವಿ ನಾಲ್ಕು‌ ಹಾಗೂ ಉದಯ ಮೂವೀಸ್ ಐದನೇ ಸ್ಥಾನದಲ್ಲಿದೆ.. ಲಾಕ್ ಡೌನ್ ಸಮಯದಲ್ಲಿ ಡಬ್ಬಿಂಗ್ ಧಾರಾವಾಹಿಗಳು ತುಂಬಿಕೊಂಡಿದ್ದವು ಆದರೀಗ ಬಹುತೇಕ ಎಲ್ಲಾ ಡಬ್ಬಿಂಗ್ ಧಾರಾವಾಹಿಗಳಿಗೂ ರೇಟಿಂಗ್ ಕಡಿಮೆ ಆಗಿದ್ದು ಕನ್ನಡದ ಧಾರಾವಾಹಿಗಳು ಎಂದಿನಂತೆ ಮುನ್ನುಗ್ಗುತ್ತಿದೆ.. ಟಾಪ್ ಹತ್ತು ಧಾರಾವಾಹಿಗಳಲ್ಲಿ ಜೀ ವಾಹಿನಿಯ ಐದು ಧಾರಾವಾಹಿಗಳಿದ್ದರೆ ಕಲರ್ಸ್ ಕನ್ನಡದ ಐದು ಧಾರಾವಾಹಿಗಳು ಸ್ಥಾನ ಪಡೆದುಕೊಂಡಿದೆ..