ನೋವಿನ ವಿಚಾರ ಹಂಚಿಕೊಂಡ ಕಾಮಿಡಿ ಕಿಲಾಡಿಗಳು ದಿವ್ಯಾಶ್ರೀ.. ಜೊತೆಯಲ್ಲಿದ್ದವರೇ ಎಂತಹ ಕೆಲಸ ಮಾಡಿದ್ದಾರೆ ನೋಡಿ..

0 views

ಕಾಮಿಡಿ ಕಿಲಾಡಿಗಳು ಶೋ ಕನ್ನಡ ಕಿರುತೆರೆಯ ಖ್ಯಾತ ಶೋಗಳಲ್ಲಿ ಒಂದೆನ್ನಬಹುದು‌.. ಆ ಶೋ ಮೂಲಕ ಸಾಕಷ್ಟು ಪ್ರತಿಭೆಗಳು ತಮ್ಮ ಜೀವನವನ್ನು ಕಟ್ಟಿಕೊಂಡರು.. ಅಂತವರಲ್ಲಿ ಒಬ್ಬರು ದಿವ್ಯಾ.. ಎಂ ಕಾಂ ಮಾಡಿ ಒಳ್ಳೆಯ ಕೆಲಸದಲ್ಲಿದ್ದ ದಿವ್ಯಾ ನಂತರ ಕಲೆಯ ಮೇಲಿನ ಅಸಕ್ತಿಯಿಂದ ಕಾಮಿಡಿ ಕಿಲಾಡಿಗಳು ಶೋಗೆ ಬಂದರು.. ಸಾಕಷ್ಟು ಕಷ್ಟ ಪಟ್ಟು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡರು.. ಅದೇ ಶೋನ ಗೋವಿಂದೇ ಗೌಡ ಅವರನ್ನು ಮದುವೆಯಾದ ದಿವ್ಯಾ ಅವರು ಸಧ್ಯ ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ಇನ್ನು ಇದೇ ದಿವ್ಯಾ ಅವರು ಕಾಮಿಡಿ ಕಿಲಾಡಿಗಳು ಶೋಗೆ ಬಂದ ನಂತರ ಅನುಭವಿಸಿದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.. ಅದರಲ್ಲಿಯೂ ಜೊತೆಯಲ್ಲಿಯೇ ಇದ್ದವರು ದಿವ್ಯಾ ಜೊತೆ ಕೆಲ ವ್ಯಕ್ತಿಗಳ ಜೊತೆ ಸಂಬಂಧ ಕಟ್ಟಿ ಮಾತನಾಡಿದ್ದು ಇದೀಗ ದಿವ್ಯಾ ಎಲ್ಲಾ ವಿಚಾರವನ್ನೂ ಹಂಚಿಕೊಂಡಿದ್ದಾರೆ..

ಹೌದು “ಈ ಕಡೆ ನಾವು ಮಿನುಗೋ ತಾರೆಗಳು ಅಲ್ಲ.. ಮಿಂಚಿ ಮರೆಯಾಗೋರೂ ಅಲ್ಲ.. ಆತರ ಮಧ್ಯದಲ್ಲಿ ಸಿಕ್ಕಿ ಹಾಕೋಬಿಟ್ವಿ.. ಕೆಲವರು ಕಂಡು ಹಿಡಿತಿದ್ರು.. ಕೆಲವರು ಹೇ ಇವರ್ ಯಾವ್ ಮಹಾ ಎನ್ನುತ್ತಿದ್ದರು.. ಮುಂದೇನು ಕೆಲಸ ಇಲ್ಲ.. ಮನೆಲಿ‌ ಮದುವೆನಾ ಹೀಗೆ ಸಾಕಷ್ಟು ಗೊಂದಲದಲ್ಲಿದ್ದೆ‌‌‌.. ಇದರ ನಡುವೆ ಇಂಡಸ್ಟ್ರಿ ಹೀಗಿದೆ‌.. ಹೆಣ್ಣು ಮಕ್ಕಳಿಗೆ ಸೇಫ್ ಇಲ್ಲ.. ಕಿಡಿಗೇಡಿಗಳು ಅಂತ ಇರ್ತಾರಲ್ಲ.. ಹೆಣ್ಣು ಮಕ್ಕಳಿಗೆ ಅಂತವರು ಇದ್ದರೇನೇ ಧೈರ್ಯ ಬರೋಕೆ ಸಾಧ್ಯ.. ನನ್ನ ವಿಚಾರದಲ್ಲಿಯೂ ಕೆಲವರು ಶುರು ಮಾಡಿದ್ರು.. ದಿವ್ಯಾ ಸರಿ ಇಲ್ಲ.. ದಿವ್ಯಾ ಅವನ ಜೊತೆ ಹೋಗ್ತಾಳೆ.. ದಿವ್ಯಾಗೆ ಅವನ ಜೊತೆ ಸಂಬಂಧ ಇದೆ.. ದಿವ್ಯಾ ಕರೆದ ಕಡೆ ಎಲ್ಲಾ ಬರ್ತಾಳೆ.. ದಿವ್ಯಾ ಜೊತೆ ನಾನು ಓಡಾಡಿದಿನಿ.. ದಿವ್ಯಾದು ನನಗೆಲ್ಲಾ ಗೊತ್ತು.. ಈ ಮಾತುಗಳು ಇವತ್ತು ನಾನು ಬಹಳ ಸುಲಭವಾಗಿ ನಿಮ್ಮ ಬಳಿ ಹೇಳ್ತಾ ಇದ್ದೀನಿ.. ಆದರೆ ಆ ಸಮಯದಲ್ಲಿ ನನಗೆ ಇದೆಲ್ಲಾ ಬೇಕಿತ್ತಾ.. ಎಂ ಕಾಂ ಓದಿ ಒಳ್ಳೆ ಕೆಲಸದಲ್ಲಿ ಇದ್ದು ಆ ಕೆಲಸ ಬಿಟ್ಟು ಕಾಮಿಡಿ ಕಿಲಾಡಿಗಳು ಶೋಗೆ ನಾನು ಬರಬೇಕಿತ್ತಾ..

ಈ ಮಾತು ಕೇಳೋಕೆ ನಾನ್ ಇರಬೇಕಾ ಎನಿಸಿಬಿಡ್ತು.. ಈ ಮಾತುಗಳನ್ನ ಕೇಳೋಕೆ ನಾನು ನಮ್ ಅಪ್ಪ ಅಮ್ಮನಿಗೆ ನಾನು ಮಾಡಿ ತೋರಿಸ್ತೀನಿ ಅಂತ ಭಾಷಣ ಕೊಡಬೇಕಿತ್ತಾ.. ಆ ದಿನ ಹಾಗಿತ್ತು.. ಒಂದ್ ಹೇಳ್ತೀನಿ.. ನಮ್ಮ ಜೊತೆ ಇರೋರೆ ನಮಗೆ ಕೆಟ್ಟದ್ದನ್ನು ಬಯಸೋದು ಜಾಸ್ತಿ.. ಅವತ್ತಿನ ಸಂದರ್ಭದಲ್ಲಿ ನನಗೆ ಆಗಿದ್ದು ಅದೇ.. ನನ್ನ ಸುತ್ತ ಇದ್ದೋರೆ ನನಗೆ ಮಸಿಯನ್ನು ಬಳಿದ್ರು.. ನಾನು ಯಾರ ಜೊತೆ ಕೂರ್ತಿನಿ ಅವರ ಜೊತೆಯೇ.. ಯಾರ ಜೊತೆ ಹೋಗ್ತೀನಿ ಅವರ ಜೊತೆಯೇ ಸಂಬಂಧ ಅನ್ನೋರು.. ಅವಾಗೆಲ್ಲಾ ಮನೆಯಿಂದ ಸ್ಟುಡಿಯೋಗೆ ಮೂರ್ ಮೂರ್ ಬಸ್ ಬದಲಿಸಬೇಕಿತ್ತು.. ಅದರ ಜೊತೆಗೆ ನಡೆದುಕೊಂಡು ಸಹ ಬರಬೇಕಿತ್ತು.. ಆದಾಯ ಕೂಡ ಇಲ್ಲ.. ಹೇಗಿತ್ತು ನನ್ನ ಪರಿಸ್ಥಿತಿ ಅಂದರೆ.. ಹತ್ತು ರೂಪಾಯಿ ಇದ್ರೆ ಆ ದುಡ್ಡಲ್ಲಿ ಕಾಲ್ ಲೀಟರ್ ಹಾಲ್ ತರಬಹುದು ಅಲ್ವಾ.. ನಡೆದುಕೊಂಡು ಹೋಗಿ ಬಿಡೋಣ ಅಂತೆಲ್ಲಾ ಅನ್ಸಿದೆ..

ನಾನು ಜೀವನದಲ್ಲಿ ಎರಡೂ ತರ ಜೀವನವನ್ನು ನೋಡಿಬಿಟ್ಟೆ.. ಒಳ್ಳೆಯ ಕೆಲಸದಲ್ಲಿದ್ದು ಕೈತುಂಬಾ ಸಂಬಳವನ್ನೂ ಸಹ ನೋಡಿದೆ.. ಹತ್ತು ರೂಪಾಯಿ ಉಳಿಸಿದ್ರೆ ಹಾಲು ತರೋಕೆ ಆಗತ್ತೆ ಅನ್ನೋ ಜೀವನವನ್ನೂ ನೋಡಿದೆ.. ಈತರ ಸಮಯದಲ್ಲಿ ಯಾರಾದ್ರೂ ಡ್ರಾಪ್ ಕೊಟ್ರೆ ಅವರತ್ರ ಡ್ರಾಪ್ ತಗೊಂಡು ಸ್ಟುಡಿಯೋ ತಲುಪೋದು ಇರಬಹುದು‌.. ಕತ್ತಲೆ ಆದಾಗ ಯಾರ ಬಳಿಯಾದ್ರೂ ರಿಕ್ವೆಸ್ಟ್ ಮಾಡ್ಕೊಂಡು ಡ್ರಾಪ್ ತಗೊಳೋದು ಇರಬಹುದು‌.. ಅಂತವರ ಜೊತೆನೂ ಸಂಬಂಧ ಕಟ್ಟಿ ಮಾತನಾಡಿದ್ರು.. ಅವಳದ್ದೆಲ್ಲಾ ಕಂಡಿದ್ದೀನಿ ಎಂದರು.. ಅಂದೊಂದು ರೀತಿ ಸಂದರ್ಭವನ್ನು ಯಾವ ಹೆಣ್ಮಕ್ಕಳು ಸಹ ಎದುರಿಸೋಕೆ ತಯಾರಿರೋದಿಲ್ಲ.. ಇದನ್ನು ನಾನು ಎಲ್ಲಿಯೂ ಹೇಳಿರಲಿಲ್ಲ.‌. ಇವತ್ತು ಹೇಳಿಕೊಂಡೆ..

ನಾನು ಒಂದು ದಿನ ನಮ್ ಅಪ್ಪನಿಗೆ ಹೇಳಿದೆ.. ನಾನು ಅವರ ಹೆಸರನ್ನೆಲ್ಲಾ ಬರೆದಿಟ್ಟು ಜೀವ ಕಳೆದುಕೊಂಡು ಬಿಡ್ತೀನಿ.. ನನಗೆ ಆಗ್ತಾ ಇಲ್ಲ ಅಂತ ಹೇಳಿದೆ.. ಆಗ ನಮ್ ಅಪ್ಪ ಹೇಳಿದ್ರು.. ನೀನೆ ಈ ದಾರಿ ಆಯ್ಕೆ ಮಾಡಿಕೊಂಡಿದ್ದಲ್ವಾ.. ಕಂಪನಿಯಲ್ಲಿ ಒಳ್ಳೆ ಕೆಲಸದಲ್ಲಿ ಇದ್ದೆ.. ಇದು ನಿನ್ನದೇ ಆಯ್ಕೆ.. ಯಾವುದೇ ಕಾರಣಕ್ಕೂ ಭಯ ಪಡಬೇಡ.. ನಿನ್ನ ಮೇಲೆ ನಿನಗೆ ನಂಬಿಕೆ ಇದ್ರೆ ಸಾಕು ಎಂದರು.. ಆ ದಿನ ನನ್ನನ್ನು ಡ್ರಾಪ್ ಮಾಡುತ್ತಿದ್ದ ವ್ಯಕ್ತಿ ಬೇರೆ ಯಾರೂ ಅಲ್ಲ.. ಅದು ಜಿಜಿ.. ಹೌದು ಗೋವಿಂದೇ ಗೌಡ ನನ್ನನ್ನು ಡ್ರಾಪ್ ಮಾಡುತ್ತಿದ್ದರು.. ಆಗ ನಮ್ ಅಪ್ಪ ಹೇಳಿದ್ರು.. ಯಾವ ಜನ ನಿನ್ ಬಗ್ಗೆ ಮಾತಾಡ್ತಾರೋ ಅದೇ ಜನರ ಮುಂದೆ ಮದುವೆಯಾಗಿ ಅವನ ಜೊತೆನೇ ಬಾಳಿ ತೋರಿಸು ಎಂದ್ರು..

ಇವತ್ತು ಅವರುಗಳಿಂದ ನಾನು ಜಿಜಿ ನ ಮದುವೆಯಾದೆ.. ನಿಮಗೆಲ್ಲರಿಗೂ ದೊಡ್ಡ ಥ್ಯಾಂಕ್ಸ್.. ನನಗೆ ಹೆಮ್ಮೆ ಇದೆ.. ಜಿಜಿ ನನ್ನ ಗಂಡ.. ಸ್ವಾಭಿಮಾನದಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡ ಜಿಜಿ ನ ಮದುವೆಯಾಗೋಕೆ ನಾನು ಪುಣ್ಯ ಮಾಡಿದ್ದೆ.. ನನ್ನ್ ಅಪ್ಪ ಅವತ್ತು ಒಳ್ಳೆಯ ನಿರ್ಧಾರ ಮಾಡಿದ್ರು.. ನನಗೆ ಧೈರ್ಯ ಹೇಳಿದ್ರು.. ಎಂದು ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.. ನಿಜಕ್ಕೂ ಸಿನಿಮಾ ರಂಗದಲ್ಲಿರುವ ಅದರಲ್ಲಿಯೂ ಹೆಣ್ಣು ಮಕ್ಕಳು ಇಂತಹ ಸಾಕಷ್ಟು ಸವಾಲುಗಳನ್ನು ಎದುರಿಸಿರುವುದು ಮತ್ತು ಎದುರಿಸುತ್ತಿರುವುದು ಅಕ್ಷರಶಃ ಸತ್ಯವೆನ್ನಬಹುದು.. ಜಿಜಿ ಹಾಗೂ ದಿವ್ಯಾ ಅವರ ಮುಂದಿನ ಜೀವನ ಚೆನ್ನಾಗಿರಲಿ.. ಆದಷ್ಟು ಬೇಗ ಮುದ್ದು ಕಂದನನ್ನು ಬರಮಾಡಿಕೊಳ್ಳಲಿ..