ತನ್ನ ಅಪ್ಪನ ಜೊತೆ ಸೇರಿ ಸ್ವಂತ ಹೆಂಡತಿಗೆ ಎಂತಹ ಕೆಲಸ ಮಾಡಿಬಿಟ್ಟ ನೋಡಿ.. ಇವನ ಜನ್ಮಕ್ಕಿಷ್ಟು..

0 views

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಮ್ಮೆ ಮದುವೆಯಾದರೆ ಸಾಕು ತನ್ನ ಗಂಡನೆ ಸರ್ವಸ್ವವೆಂದು ಗಂಡನ ಕುಟುಂಬವನ್ನು ಬೆಳೆಸುವಳು.. ಕೊನೆವರೆಗೂ ಆ ಕುಟುಂಬಕ್ಕಾಗಿಯೇ ಬದುಕುವಳು.. ಆಕೆಗಿರುವ ಒಂದೇ ಒಂದು ನಂಬಿಕೆ ವಿಶ್ವಾಸ ಪ್ರೀತಿ ಎಂದರೆ ಅದು ಆಕೆಯ ಗಂಡ ಮಾತ್ರ.. ಅದೇ ರೀತಿ ಗಂಡಸು ಸಹ ತಾನು ಮದುವೆಯಾದ ಪತ್ನಿಗಾಗಿ ತನ್ನ ಕುಟುಂಬಕ್ಕಾಗಿ ತನ್ನ ಜೀವನ ಪೂರ್ತಿ ದುಡಿದು ಸರ್ವಸ್ವವನ್ನೂ ಕುಟುಂಬಕ್ಕಾಗಿ ಮುಡಿಪಾಗಿ ಇಡುತ್ತಾನೆ.. ಈ ರೀತಿ ಪತ್ನಿಗಾಗಿ ಕುಟುಂಬಕ್ಕಾಗಿ ಪ್ರೀತಿ ನೀಡಬೇಕಾದವನೆ ಅಂತಹವನೆ ಇಂತಹ ಕೆಲಸ ಮಾಡಿದರೆ ಅದೂ ಸಹ ತನ್ನ ತಂದೆಯ ಜೊತೆ ಸೇರಿಕೊಂಡು ಮಾಡಿರುವ ಕೆಲಸ ನಿಜಕ್ಕೂ ಅಸಹ್ಯವನ್ನುಂಟು ಮಾಡುತ್ತದೆ.. ಹೌದು ಈ ಹೆಣ್ಣು ಮಗಳ ಹೆಸರು ರೇಖಾ.. ವಯಸ್ಸಿನ್ನೂ ಕೇವಲ ಮೂವತ್ತು ವರ್ಷವಷ್ಟೇ.. ತುಮಕೂರಿನ ದಿಬ್ಬೂರು ಗ್ರಾಮದ ನಿವಾಸಿ..

ಈಕೆಯನ್ನು ಕಳೆದ ಹನ್ನೆರೆಡು ವರ್ಷದ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೆಟೆಯ ನಿವಾಸಿ ನಾರಾಯಣಪ್ಪ ಎಂಬುವವನ ಮಗ ಗಿರೀಶ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು.. ಮದುವೆಯಾಗಿ ಹನ್ನೆರೆಡು ವರ್ಷವೂ ಕಳೆದಿದೆ.. ಹೊಸದರಲ್ಲಿ ಎಲ್ಲವೂ ಸರಿ ಇತ್ತು.. ಆಗಾಗ ಪತ್ನಿಯ ಜೊತೆ ಜಗಳವಾಡಿಕೊಂಡರೂ ಸಹ ಮತ್ತೆ ಎಂದಿನಂತೆ ಸಂಸರ ಸಾಗುತಿತ್ತು.. ಆದರೆ ಕಳೆದ ಎರಡು ವರ್ಷದಿಂದ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು.. ಹೌದು ರೇಖಾಖ ಜೊತೆ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದ ಗಿರೀಶ್.. ಅಪ್ಪನಾಗಿ ಬುದ್ಧಿ ಹೇಳಬೇಕಾದ ಗಿರೀಶ್ ನ ತಂದೆ ನಾರಾಯಣಪ್ಪ ತಾನೇ ಮಗನಿಗೆ ಕುಮ್ಮಕ್ಕು ನೀಡಲು ಶುರು ಮಾಡಿದನು.. ಯಾವ ಮನೆಯಲ್ಲಿ ಸೊಸೆಯನ್ನು ಮಗಳಂತೆ ನೋಡುವುದಿಲ್ಲವೋ ಆ ಕುಟುಂಬ ಏಳಿಗೆಯಾಗೋದಿಲ್ಲ ಎಂದು ಹಿರಿಯರು ಹೇಳೋದುಂಟು..

ಮಗ ಗಲಾಟೆ ಮಾಡಿದಾಗ ಸೊಸೆಯ ಬೆನ್ನಿಗೆ ನಿಂತು ಸೊಸೆಗೆ ಧೈರ್ಯ ಹೇಳಿ ಮಗನಿಗೆ ಬುದ್ಧಿ ಹೇಳಬೇಕಾದವನೇ ಈಗ ಸೊಸೆಗೆ ಮಾಡಿರೋ ಕೆಲಸ ನಿಜಕ್ಕೂ ಮನಕಲಕುವಂತಿದೆ‌‌.. ಹೌದು ಮೊದಲೆಲ್ಲಾ ಸರಿಯಾಗಿಯೇ ಇದ್ದ ಗಿರೀಶ್ ಕಳೆದ ಎರಡು ವರ್ಷಗಳಿಂದ ರೆಖಾಳಿಗೆ ತನ್ನ ತವರು ಮನೆಯಿಂದ ಹಣ ತರುವಂತೆ ಪ್ರತಿದಿನ ಗಲಾಟೆ ಮಾಡುತ್ತಲೇ ಇದ್ದು ಆಕೆಗೆ ಎಲ್ಲಾ ರೀತಿಯಲ್ಲಿಯೂ ನೋವು ನೀಡುತ್ತಲೇ ಇದ್ದನು.. ಸ್ವಂತ ಪರಿಶ್ರಮದಲ್ಲಿ ದುಡಿದು ಹೆಂಡತಿ ಮಕ್ಕಳನ್ನು ಸಾಕಲಾಗದವ ಶೋಕಿ ಮಾಡುವ ಸಲುವಾಗಿ ಹೆಂಡತಿಯ ತವರಿಂದ ಪದೇ ಪದೇ ಹಣ ತರುವಂತೆ ಒತ್ತಾಯ ಮಾಡುತ್ತಲೇ ಇದ್ದ.. ಈತನ ಜೊತೆಗೆ ಇವನ ಅಪ್ಪ ನರಾಯಣಪ್ಪನೂ ಸಹ ಸೇರಿಕೊಂಡು ಸೊಸೆಗೆ ಎಲ್ಲಾ ರೀತಿಯ ನೋವನ್ನೂ ನೀಡ ತೊಡಗಿದ.. ಇತ್ತ ಇವರುಗಳ ಹಿಂಸೆ ತಾಳಲಾರದೆ ರೇಖಾ ಕೂಡ ತನ್ನ ತವರು ಮನೆಗೆ ವಿಚಾರ ತಿಳಿಸಿ ಆಗಾಗ ಹಣ ತಂದು ಕೊಡುತ್ತಿದ್ದಳು‌‌.. ಕೂತು ತಿನ್ನೋನಿಗೆ ಕುಡಿಕೆ ಹೊನ್ನು ಸಾಲದು ಎಂಬಂತೆ ನಾರಾಯಣಪ್ಪ ಹಾಗೂ ಗಿರೀಶ್ ನ ಆಟ ದಿನದಿಂದ ದಿನಕ್ಕೆ ಹೆಚ್ಚಾಗಿ ಹೋಯ್ತು‌.

ರೇಖಾಳಿಗೆ ಪ್ರತಿದಿನ ಇದೇ ರೀತಿ ನೋವು ನೀಡಲು ಆರಂಭಿಸಿದರು.. ಯಾವಾಗ ರೇಖಾ ಹಣ ತರಲು ನಿರಾಕರಿಸಿದಳೋ ಇತ್ತ ಸ್ವಂತ ಮಾವ ನಾರಾಯಣಪ್ಪ ಹಾಗೂ ಗಂಡ ಗಿರೀಶ್ ಇಬ್ಬರೂ ಸೇರಿಕೊಂಡು ಹಣ ಕೊಡದೇ ಇದ್ದರೆ ನಿನ್ನನ್ನು ಇಲ್ಲವಾಗಿಸಿ ಬಿಡ್ತೀವಿ ಎಂದರು.. ಹೇಳಿದ್ದು ಮಾತ್ರವಲ್ಲ ಬಹುಶಃ ಅವರಿಬ್ಬರು ಅದಾಗಲೇ ನಿರ್ಧಾರ ಮಾಡಿಕೊಂಡೇ ಬಂದಿದ್ದರು.. ಭಯಗೊಂಡ ರೇಖಾ ತಕ್ಷಣ ತನ್ನ ಹೆತ್ತವರಿಗೆ ಫೋನ್ ಮಾಡಿ ತಕ್ಷಣ ಮನೆಗೆ ಬರುವಂತೆ ಭಯದಿಂದಲೇ ಕೇಳಿಕೊಂಡಿದ್ದಾಳೆ.. ಮಗಳು ಭಯ ಪಟ್ಟು ಮಾತನಾಡುವುದನ್ನು ನೋಡಿದ ರೇಖಾಳ ಅಪ್ಪ ಅಮ್ಮ ತಕ್ಷಣ ಡಾಬಸ್ ಪೇಟೆಯಲ್ಲಿನ ಮಗಳ ಮನೆಗೆ ಬಂದಿದ್ದಾರೆ.. ಆದರೆ ಅವರು ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.. ಹೌದು ಮಾವ ನಾರಾಯಣಪ್ಪ ಹಾಗೂ ಗಂಡ ಗಿರೀಶ್ ಸೇರಿಕೊಂಡು ರೇಖಾಳನ್ನು ಇಲ್ಲವಾಗಿಸಿಬಿಟ್ಟಿದ್ದರು.. ಮಗಳನ್ನು ಆ ಸ್ಥಿತಿಯಲ್ಲಿ ಕಂಡ ಹೆತ್ತವರು ಕುಸಿದು ಬಿದ್ದರು..

ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ‌‌.. ಇತ್ತ ಮಗಳನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಮುಂದಿನ ಪ್ರಕ್ರಿಯೆಗೆ ಕಣ್ಣೀರಿಡುತ್ತಲೇ ಕರೆದುಕೊಂಡು ಹೋದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.. ಮಗಳು ಸಂತೋಷವಾಗಿರಲೆಂದು ಮದುವೆ ಮಾಡಿಕೊಟ್ಟರೆ ಈಗ ಈ ರೀತಿ ಮಗಳನ್ನು ತಮ್ಮ ಕಣ್ಣ ಮುಂದೆಯೇ ನೋಡುವಂತಾಯಿತು.. ಫೋನ್ ಮಾಡಿ ಅಮ್ಮ ಬೇಗ ಬಾ ಎಂದು ಕೇಳಿಕೊಂಡವಳು ಅಮ್ಮ ಬರುವ ಕೆಲವೇ ಗಂಟೆಯಲ್ಲಿ ಇಲ್ಲವಗಿ ಹೋದಳು.. ಹೆಣ್ಣಾಗಲಿ ಗಂಡಾಗಲಿ ಅಥವಾ ಯಾರೇ ಆಗಲಿ ಯಾರು ಇಲ್ಲಿ ಶಾಶ್ವತವಲ್ಲ.. ಇರೋದು ಮೂರು ದಿನ.. ಇರುವಷ್ಟು ದಿನ ನಮ್ಮವರು, ನಮ್ಮ ಕುಟುಂಬ ಎನ್ನುವ ಪ್ರೀತಿ ಇರಲಿ.. ಇದ್ದಷ್ಟು ದಿನವೂ ಮತ್ತೊಬ್ಬರಿಗೆ ನೋವು ನೀಡುತ್ತಲೇ ಜೀವನ ಸಾಗಿಸಿದರೆ ಆ ಜೀವನಕ್ಕೇನು ಅರ್ಥ..

ಇಲ್ಲಿ ತಂದೆಯಾಗಬೇಕಾದ ಮಾವನೇ ಸೊಸೆಯ ಜೀವನ ಮುಗಿಸಿದ.. ಗಂಡನಾಗಿ ಕೊನೆವರೆಗೂ ಪ್ರೀತಿ ಹಂಚಿಕೊಳ್ಳಬೇಕಾದ ಗಂಡನೇ ಆಕೆಗೆ ಕೊಡಬರಾದ ನೋವನ್ನೆಲ್ಲಾ ಕೊಟ್ಟು ಕೊನೆಗೆ ಆಕೆಯನ್ನೇ ಇಲ್ಲವಾಗಿಸಿದ.. ಇದರಿಂದ ಆ ಇಬ್ಬರಿಗೂ ಸಿಕ್ಕಿದ್ದಾದರೂ ಏನು.. ಮುಂದೆ ಜೀವನ ಪೂರ್ತಿ ಸಿಲ್ವರ್ ತಟ್ಟೆಯಲ್ಲಿ ಮುದ್ದೆಯಷ್ಟೇ.. ಆದರೆ ಆ ಹೆಣ್ಣು ಮಗಳು ಮಾಡಿದ ತಪ್ಪಾದರೂ ಏನು.. ಬದುಕಿ ಬಾಳಬೇಕಾದ ಆಕೆಯ ಜೀವನ ಮೂವತ್ತಕ್ಕೆ ಮುಕ್ತಾಯವಾಗುವಂತಾಯ್ತು.. ಆಕೆಯ ಹೆತ್ತವರು ಏನು ತಪ್ಪು ಮಾಡಿದ್ದರು.. ಇನ್ನು ಅವರಿರುವ ತನಕ ತನ್ನ ಮಗಳ ಜೀವನ ಈ ರೀತಿ ಅಯ್ತು ಅಂತ ಕಣ್ಣೀರಿಡುತ್ತಲೇ ದಿನಗಳನ್ನು ಕಳೆಯಬೇಕಿದೆ.. ಜೀವನದ ನಿಜವಾದ ಅರ್ಥವನ್ನು ತಿಳಿದು ಹೆಂಡತಿ ಗಂಡ ಮಕ್ಕಳು ತಂದೆ ತಾಯಿ ಹೀಗೆ ಪ್ರೀತಿ ಹಂಚಿ ಬದುಕಬೇಕಷ್ಟೇ..