ಜಿಟಿ ದೇವೇ ಗೌಡರ ಮೊಮ್ಮಗು ಗೌರಿ ಅಗಲಿಕೆಗೆ ಹೊರಬಿತ್ತು ನಿಜವಾದ ಕಾರಣ.. ಕೊನೆ ಕ್ಷಣದಲ್ಲೂ ಮಗಳನ್ನು ತೋಳಿನಿಂದ ಇಳಿಸದೇ ಕಣ್ಣೀರಿಟ್ಟ ತಂದೆ ಹರೀಶ್ ಗೌಡ..

0 views

ಜಗತ್ತಿನ ನಿಯಮದಂತೆ ಹಿರಿಯರು ಬದುಕಿ ಬಾಳಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಅನುಭವಿಸಿದ ಬಳಿಕ ಇಹಲೋಕ ತ್ಯಜಿಸಿ ಹೋಗುವುದು.. ಇತ್ತ ಹೊಸ ಕಂದಮ್ಮಗಳು ಜನ್ಮ ತಾಳಿ ತಮ್ಮ ಜೀವನ ಕಟ್ಟಿಕೊಂಡು ಭವಿಷ್ಯ ರೂಪಿಸಿಕೊಂಡು ಬದುಕಿ ಬಾಳುವುದು.. ಇದೇ ಜಗದ ನಿಯಮ.. ಇದೇ ನಿಯಮ ಪಾಲನೆಯಾದರೆ ಎಲ್ಲವೂ ನಡೆಯುವ ರೀತಿ ನಡೆಯುತ್ತದೆ.. ಹಿರಿಯರು ಹೋದಾಗ ದುಃಖ ವಾಗುವುದು ಸಹಜ.. ಆದರೆ ಅದೇ ಜೀವನದ ನಿಯಮವಾಗಿರೋದರಿಂದ ಆ ನೋವಿನ ಜೊತೆಗೇ ಮುಂದೆ ಸಾಗಲೇ ಬೇಕಿರುವುದು ಅನಿವಾರ್ಯ.. ಆದರೆ ನಮ್ಮ ಕಣ್ಣ ಮುಂದೆ ನಮ್ಮಿಂದಲೇ ಜನ್ಮ ತಾಳಿ ಹುಟ್ಟಿ ಬೆಳೆದ ಮಕ್ಕಳು ಅದರಲ್ಲೂ ಏನೂ ಅರಿಯದ ಪುಟ್ಟ ಕಂದಮ್ಮಗಳು ನಮ್ಮ‌ ಕಣ್ಣ ಮುಂದೆಯೇ ಕೊನೆಯುಸಿರೆಳೆದರೆ ನಿಜಕ್ಕೂ ಅಂತಹ ಸ್ಥಿತಿ ಯಾರಿಗೂ ಬೇಡ ಎನ್ನುವಂತಾಗುತ್ತದೆ..

ಅದೇ ರೀತಿಯ ಸಂದರ್ಭ ನಿನ್ನೆ ಮೈಸೂರಿನ ರಾಜಕೀಯ ಮುಖಂಡರಾದ ಜಿ ಟಿ ದೇವೇ ಗೌಡರ ಕುಟುಂಬದಲ್ಲಿ ಎದುರಾಗಿದ್ದು ಮೂರು ವರ್ಷದ ಹಿಂದಷ್ಟೇ ಮನೆಗೆ ಮಹಾಲಕ್ಷ್ಮಿಯಂತೆ ಆಗಮಿಸಿದ ಮುದ್ದು ಕಂದಮ್ಮ ನಿನ್ನೆ ಎಲ್ಲರನ್ನು ಅಗಲಿ ಹೊರಟು ಹೋದಳು.‌. ಜಿಟಿ ದೇವೇ ಗೌಡರ ಕುಟುಂಬಕ್ಕೆ ಭಗವಂತ ಎಲ್ಲವನ್ನೂ ಕೊಟ್ಟ.. ಅವರಿಗೆ ಕಡಿಮೆ ಅಂತ ಏನೂ ಇಲ್ಲ.. ಆದರೆ ಕಣ್ಣ ಮುಂದೆ ಬೆಳೆದು ದೊಡ್ಡವಳಾಗಿ ಜೀವನ ಸಾಗಿಸಬೇಕಿದ್ದ ಪುಟ್ಟ ಗೌರಿಯನ್ನು ಕಿತ್ತುಕೊಂಡು ಬಿಟ್ಟನಾ ಜವರಾಯ ಎನ್ನುವಂತಾಗಿದೆ..

ಹೌದು ಜಿಟಿ ದೇವೇಗೌಡರನ್ನು ಹತ್ತಿರದಿಂದ ನೋಡಿದವರಿಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ.. ಈಗ ಶಾಸಕರಾದಾಗ ಮಾತ್ರವಲ್ಲ ಅವರು ದಶಕಗಳ ಹಿಂದೆ ಮೊದಲ ಬಾರಿಗೆ ಶಾಸಕರಾದಾಗಿನಿಂದಲೂ ಈಗಿನವರೆಗೂ ಸಹ ತಮ್ಮದಾಗಲಿ ಅಥವಾ ತಮ್ಮ ಕುಟುಂಬದವರಿಗಾಗಲಿ ಒಮ್ಮೆಯೂ ಆರೋಗ್ಯ ಕೆಟ್ಟಾಗ ಸರ್ಕಾರದಿಂದ ಚಿಕಿತ್ಸಾ ವೆಚ್ಛ ಪಡೆದುಕೊಂಡವರಲ್ಲ.. ಈ ಬಗ್ಗೆ ಯಾವುದೋ ಸಂದರ್ಭದಲ್ಲಿ ಮಾತನಾಡಿದಾಗ ನಮಗೆ ದೇವರು ಕೊಟ್ಟಿದ್ದಾನೆ.. ಅದೇ ದುಡ್ಡು ಯಾರಾದರೂ ಬಡವರಿಗೆ ಚಿಕಿತ್ಸೆ ಕೊಡಲು ಆಗುತ್ತದೆ.. ಅದನ್ನು ನಾವು ಪಡೆದುಕೊಂಡು ಬಡವರಿಗ್ಯಾಕೆ ಅನ್ಯಾಯ ಮಾಡೋದು ಎನ್ನುವ ಮಾತನಾಡಿದ್ದರು.. ನಿಜಕ್ಕೂ ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿರುವ ಜಿಟಿ ದೇವೇ ಗೌಡರು ಯಾರ ಮುಂದೆಯೂ ನಾಟಕದ ಬಾಳು ಬಾಳಿದವರಲ್ಲ.. ಇವರ ಕ್ಷೇತ್ರದ ಜನರೂ ಅಷ್ಟೇ ಇವರನ್ನು ಅಷ್ಟೇ ಪ್ರೀತಿ ಗೌರವದಿಂದ ನೋಡುವರು.. ಅದಕ್ಕೆ ಕಾರಣವೇ ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಮುಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೊಡ್ಡ ಮತಗಳ ಅಂತರದಿಂದ ಗೆದ್ದಿದ್ದರು..

ಇನ್ನು ಇವರ ಮಗ ಹರೀಶ್ ಗೌಡ ಅವರೂ ಸಹ ಅಪ್ಪನ ಹಾದಿಯನ್ನು ಹಿಡಿದು ಸರಳವಾಗಿ ಎಲ್ಲರೊಟ್ಟಿಗೆ ಬೆರೆತು ನಡೆಯುತ್ತಿರುವ ವ್ಯಕ್ತಿ.. ಮನೆಗೆ ಯಾರೇ ಬರಲಿ ಅಷ್ಟೇ ಗೌರವ ಪ್ರೀತಿಯಿಂದ ನಡೆಸಿಕೊಳ್ಳುವ ಹರೀಶ್ ಗೌಡ ಅವರು ಒಬ್ಬ ಮಂತ್ರಿಯ‌ ಮಗನಾಗಿದ್ದರೂ ಸಹ ಯಾವುದೇ ಆಡಂಬರವಿಲ್ಲದೇ ಬದುಕಿದವರು. ಇದಕ್ಕೆ ನೈಜ್ಯ ಉದಾಹರಣೆ ಅವರ ಮದುವೆ.. ಹೌದು ಶಾಸಕನ ಮಗನೋ ಅಥವಾ ಎಂ ಎಲ್ ಸಿ ಮಗನೋ ಅಥವಾ ಗ್ರಾಮ ಪಂಚಾಯಿತಿ ಅಧ್ಯಕ್ಷನ ಮಗನೋ ಆದರೂ ಸಾಕು ತಲೆಯಲ್ಲೇ ನಡೆಯುವ ಜನರ ನಡುವೆ ಹರೀಶ್ ಗೌಡ ಅವರು ವಿನಯದಲಿ ತಲೆ ಬಾಗಿ ನಡೆದರೆ ಜನರು ನಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುವರು ಎನ್ನುವಂತಿದ್ದವರು‌.. ಅವರ ಸರಳ ವ್ಯಕ್ತಿತ್ವದ ಕಾರಣದಿಂದಲೇ ಅವರು ಮಂತ್ರಿಯ ಮಗನಾಗಿದ್ದರೂ ಸಹ ಸರಳವಾಗಿ ತಿರುಪತಿಯಲ್ಲಿ ಮದುವೆ ಸಮಾರಂಭ ನೆರವೇರಿತ್ತು..

ಇನ್ನು ಹರೀಶ್ ಗೌಡ ಅವರಿಗೆ ಮೂರು ವರ್ಷದ ಹಿಂದೆ ಮಗಳು ಹುಟ್ಟಿದಾಗ ಸ್ನೇಹಿತರಿಗೆಲ್ಲಾ ಸಿಹಿ ಹಂಚಿ ಮನೆಗೆ ಮಹಾಲಕ್ಷ್ಮಿ ಬಂದಳೆಂದು ಸಂಭ್ರಮ ಪಟ್ಟಿದ್ದರು.. ಅಷ್ಟೇ ಅಲ್ಲದೇ ಅರ್ಥವಿಲ್ಲದ ಪಾಶ್ಚಾತ್ಯ ಸಂಸ್ಕೃತಿಯ ಟ್ರೆಂಡ್ ನ ನಡುವೆ ಮಗಳಿಗೆ ಅರ್ಥಪೂರ್ಣವಾಗಿ ಗೌರಿ ಎಂದು ನಾಮಕರಣ ಮಾಡಿ ಮನೆಗೆ ಪುಟ್ಟ ಗೌರಿಯನ್ನು ಬರಮಾಡಿಕೊಂಡಿದ್ದರು..

ಆದರೆ ವಿಧಿಯ ನಿರ್ಣಯ ಬೇರೆಯೇ ಆಗಿ ಹೋಗಿತ್ತು.. ಕೇವಲ ಮೂರು ವರ್ಷಕ್ಕೆ ಪುಟ್ಟ ಗೌರಿ ತನ್ನನ್ನು ದೇವತೆಯಂತೆ ಕಾಣುತ್ತಿದ್ದ ಅಪ್ಪ ಅಮ್ಮ ಅಜ್ಜಿ ತಾತ ಹಾಗೂ ಸಂಪೂರ್ಣ ಕುಟುಂಬವನ್ನು ಬಿಟ್ಟು ಹೊರಟು ಹೋದಳು. ಹೌದು ಅನಾರೋಗ್ಯದಿಂದ ಬಳಲುತ್ತಿದ್ದ ಗೌರಿ ಮೊನ್ನೆ ಶನಿವಾರ ಮಧ್ಯ ರಾತ್ರಿ ಹನ್ನೆರೆಡು ಮೂವತ್ತರ ಸಮಯದಲ್ಲಿ ಕೊನೆಯುಸಿರೆಳೆದಿದ್ದು ಆ ತಂದೆ ತಾಯಿಯ ಆಕ್ರಂದನ ನಿಜಕ್ಕೂ ಯಾರಿಗೂ ಬೇಡ ಎನ್ನುವಂತಾಗಿತ್ತು.. ಅಷ್ಟಕ್ಕೂ ಇಷ್ಟು ಚಿಕ್ಕ ವಯಸ್ಸಿಗೆ ಆ ಮಗುವಿಗೆ ಅಂತಹ ಅನಾರೋಗ್ಯವೇನು ಕಾಡಿತ್ತು ಎನ್ನುವ ಕುತೂಹಲ ಮೂಡುವುದು ಸಹಜ..

ಹೌದು ಗೌರಿ ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ ಪುಟ್ಟ ಗೌರಿಗೆ ಕ್ಯಾನ್ಸರ್ ಇರುವ ವಿಚಾರ ತಿಳಿಯಿತು.. ಆದರೆ ಎದೆ ಗುಂದದ ತಂದೆ ತಾಯಿ ಆಕೆಯನ್ನು ಗುಣಮುಖಳನ್ನಾಗಿ ಮಾಡುವ ಪಣ ತೊಟ್ಟು ಮಗುವಿಗೆ ಚಿಕಿತ್ಸೆ ಕೊಡಿಸುತ್ತುದ್ದರು.. ಗೌರಿ ಇದನ್ನೆಲ್ಲಾ ಗೆದ್ದು ಬರುವಳೆಂದೇ ಭರವಸೆ ಇಟ್ಟುಕೊಂಡಿದ್ದರು.. ಅವಳನ್ನೇ ಭವಿಷ್ಯ ಎಂದುಕೊಂಡು ಅವಳಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗುತಿತ್ತು.. ಆದರೆ ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ತೀವ್ರ ಏರು ಪೇರಾದ ಕಾರಣ ಅವಳನ್ನು ಮತ್ತೆ ನಾರಾಯಣ ಹೃದಯಾಲಕ್ಕೆ ಸೇರಿಸಲಾಗಿತ್ತು.. ಶನಿವಾರ ಮಧ್ಯಾಹ್ನ ಚೇತರಿಸಿಕೊಂಡಿದ್ದ ಗೌರಿ ಮಧ್ಯ ರಾತ್ರಿಯಷ್ಟರಲ್ಲಿ ಇದ್ದಕಿದ್ದ ಹಾಗೆ ಕೊನೆಯುಸಿರೆಳೆದುಬಿಟ್ಟಿದ್ದಳು..

ಹೌದು ಜಿಟಿ ಡಿ ಮನೆಗೆ ಬೆಳಕಾಗಿದ್ದ ಪುಟ್ಟ ದೀಪವೊಂದು ಬಹುಬೇಗನೇ ನಂದಿ ಹೋಯಿತು.. ಪುಟ್ಟ ಗೌರಿಯ ಅಗಲಿಕೆಗೆ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರು ಸೇರಿದಂತೆ ರಾಜಕೀಯ ನಾಯಕರುಗಳು ಅಭಿಮಾನಿಗಳು ಮೈಸೂರಿನ ಜನರೂ ಸಹ ಕಂಬನಿ ಮಿಡಿದು ಸಂತಾಪ ಸೂಚಿಸಿದರು.. ಇನ್ನು ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದ ಸ್ನೇಹಿತ ಹರೀಶ್ ಗೌಡರಿಗೆ ಸಾಂತ್ವಾನ ಹೇಳಲು ಖುದ್ದು ನಿಖಿಲ್ ಕುಮಾರಸ್ವಾಮಿ ಅವರೇ ಮೈಸೂರಿಗೆ ಆಗಮಿಸಿ ಪುಟ್ಟ ಕಂದನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ನೋವಿನಲ್ಲಿ ಭಾಗಿಯಾದರು.. ಇತ್ತ ಕೊನೆ ಘಳಿಯಲ್ಲಿಯೂ ಹರೀಶ್ ಗೌಡ ಅವರು ಮಗಳನ್ನು ತನ್ನ ತೋಳಿನಲ್ಲಿಯೇ ಅಪ್ಪಿಕೊಂಡು ಮಣ್ಣಿಗೆ ಇಳಿಸದೇ ಕಣ್ಣೀರಿಟ್ಟಿದ್ದು ನಿಜಕ್ಕೂ ಸಂಕಟ ತರುವಂತಿತ್ತು.. ನಮ್ಮ ಕಣ್ಮುಂದೆ ಹುಟ್ಟಿದ ಮಕ್ಕಳು ಯಾವಗಲೂ ಬದುಕಿ ಬಾಳಬೇಕು.. ಅವರ ಮುಂದೆ ನಾವು ಹೋಗಬೇಕು.. ಇಲ್ಲವಾದರೆ ಇಂತಹ ಸಂಕಟ ನೋಡಲಾಗದು.. ಆ ಕುಟುಂಬದಲ್ಲಿ ಗೌರಿ ಮತ್ತೆ ಹುಟ್ಟಿ ಬರುವಂತಾಗಲಿ.. ಆ ತಂದೆ ತಾಯಿಯ ಮಡಿಲನ್ನು ಮತ್ತೆ ಸೇರಿ ನೂರ್ಕಾಲ ಬಾಳುವಂತಾಗಲಿ..