ಸರಿಗಮಪ ಮೂಲಕ ಮನೆಮಾತಾಗಿದ್ದ ಹಳ್ಳಿ ಹುಡುಗ ಹನುಮಂತ ಏನಾದ ಗೊತ್ತಾ..

0 views

ಸರಿಗಮಪ ಕನ್ನಡ ಕಿರುತೆರೆಯ ಅತಿದೊಡ್ಡ ಸಂಗೀತ ಶೋಗಳಲ್ಲಿ ಒಂದೆನ್ನಬಹುದು.. ರೇಟಿಂಗ್ ವಿಚಾರದಲ್ಲಿ ಮಾತ್ರವಲ್ಲ ಕಾರ್ಯಕ್ರಮದ ಹಾಡುಗಾರರು ಸಹ ಅದೆಷ್ಟೋ ವರ್ಷ ಕಳೆದರೂ ಇನ್ನೂ ಸಹ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮದಲ್ಲಿ ಕಳೆದ ಎರಡು ವರ್ಷದ ಹಿಂದಷ್ಟೇ ಮನೆ ಮಾತಾದ ಗಾಯಕ ಅದು ಹನುಮಂತ.. ಹೌದು ಜೀ ಕನ್ನಡ ವಾಹಿನಿಯ ಪ್ರಖ್ಯಾತ ಶೋ ಸರಿಗಮಪ ಶೋ ಹದಿನೇಳು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿ ಸಧ್ಯ ಸರಿಗಮಪ ಚಾಂಪಿಯನ್ಷಿಪ್ ಕೂಡ ಆರಂಭವಾಗಿದೆ.. ಆದರೆ ಈ ಹಿಂದೆ ಹಳ್ಳಿಗಾಡಿನಿಂದ ಕುರಿ ಕಾಯುವ ಹುಡುಗನೊಬ್ಬ ಬಂದು ಸರಿಗಮಪ ವೇದಿಕೆಯಲ್ಲಿ ಸಂಚಲನ ಮೂಡಿಸಿ ವರ್ಷಾನುಗಟ್ಟಲೇ ಸುದ್ದಿಯಾಗಿದ್ದ ಹನುಮಂತ ಕಳೆದ ಒಂದು ವರ್ಷದಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.. ಅಷ್ಟಕ್ಕೂ ಹನುಮಂತ ಏನಾದನೆಂಬ ಸಣ್ಣ ಕುತೂಹಲ ಎಲ್ಲರಿಗೂ ಇದ್ದೇ ಇತ್ತು..

ಹೌದು ಸರಿಗಮಪ ಶೋ ನಲ್ಲಿ ಮೊದಲಿನಿಂದಲೂ ಪ್ರತಿಭೆ ಇದ್ದರೂ ಸಹ ಬೆಳಕಿಗೆ ಬಾರದ ಅದೆಷ್ಟೋ ಪ್ರತಿಭೆಗಳನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಹುಡುಕಿ ದೊಡ್ಡ ವೇದಿಕೆಯಲ್ಲಿ ಅವಕಾಶ ನೀಡುತ್ತಾ ಬಂದಿದ್ದಾರೆ.. ಅದೇ ರೀತಿ ಸರಿಗಮಪ ಸೀಸನ್ ಹದಿನೈದರಲ್ಲಿ ಉತ್ತರ ಕರ್ನಾಟಕ ಭಾಗದ ಕುರಿ ಕಾಯುವ ಹುಡುಗನೊಬ್ಬ ಸರಳವಾಗಿ ಲುಂಗಿ ಉಟ್ಟು ವೇದಿಕೆ ಮೇಲೆ ಬಂದಾಗ ಆತನ ಹಳ್ಳಿ ಶೈಲಿಯ ಜಾನಪದ ಹಾಡುಗಳನ್ನು ಕೇಳಿ ಜಡ್ಜಸ್ ಫಿದಾ ಆದರು.. ತೀರ್ಪು ಗಾರರು ಮಾತ್ರವಲ್ಲ ಸಂಪೂರ್ಣ ಕರ್ನಾಟಕ ಹನುಮಂತನ ಹಾಡು ಹಾಗೂ ಆತನ ಮುಗ್ಧತೆಗೆ ಮನಸೋತರು.. ಹನುಮಂತನ ಹಾಡುಗಳು ಸಾಮಾಜಿಕ ಜಾಲತಾಣದಲ್ಲು ವೈರಲ್ ಆದವು.. ಬರುಬರುತ್ತಾ ತನ್ನ ಹಾಡುಗಾರಿಕೆಯನ್ನು ಉತ್ತಮಗೊಳಿಸಿಕೊಳ್ಳುತ್ತಾ ಬಂದ ಹನುಮಂತ ಫಿನಾಲೆ ವರೆಗೂ ತಲುಪಲು ಯಶಸ್ವಿಯಾಗಿ ಎರಡನೇ ಸ್ಥಾನ ಪಡೆದುಕೊಂಡನು..

ಇನ್ನೂ ಎರಡನೇ ಸ್ಥಾನ ಬಂದರೂ ಸಹ ಬೆಂಗಳೂರಿನಲ್ಲಿ ಮನೆಯೊಂದನ್ನು ಉಡುಗೊರೆಯಾಗಿ ಪಡೆದ ಹನುಮಂತ ನಂತರದ ದಿನಗಳಲ್ಲಿ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡನು.. ಹಾಡುಗಾರನಾಗಿದ್ದ ಹನುಮಂತ ಮುಂದೆ ಡ್ಯಾನ್ಸರ್ ಕೂಡ ಆಗಿ ಡ್ಯಾನ್ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿಯೂ ಮಿಂಚಿದನು.. ಇನ್ನು ತನ್ನ ಊರಿನ ಕಾರ್ಯಕ್ರಮಗಳಲ್ಲಿಯೂ ಪ್ರತಿಯೊಂದರಲ್ಲಿಯೂ ಭಾಗಿಯಾಗುತ್ತಿದ್ದ ಹನುಮಂತ ಕಳೆದ ವರ್ಷ ವಿವಾದವೊಂದರಲ್ಲಿ ಸುದ್ದಿಯಾದನು.. ಹೌದು ಧರ್ಮಸ್ಥಳದ ಕಡೆ ಪ್ರವಾಸ ಹೋಗಿದ್ದ ಸಮಯದಲ್ಲಿ ದಾರಿ ಮಧ್ಯ ಬೇಕರಿಯೊಂದಕ್ಕೆ ಭೇಟಿ ನೀಡಿ ಅಗತ್ಯ ತಿನಿಸುಗಳನ್ನು ಕೊಂಡು ಆನಂತರ ಅಲ್ಲಿನ ಬೇಕರಿ‌ ಮಾಲಿಕರ ಜೊತೆ ಕುಶಲೋಪರಿ ಮಾತನಾಡಿದ್ದ ಹನುಮಂತ ತನಗೆ ಬಂದ ಬಹುಮಾನ ಯಾವುದೂ ಕೈ ಸೇರಿಲ್ಲ.. ಮನೆ ಕೂಡ ರಿಜಿಸ್ಟರ್ ಆಗಿಲ್ಲ.. ನಮ್ಮ ಜೀವನ ಅದೇ ತರಹ ಇದೆ.. ನಿಮ್ಮ ಊರಿನಲ್ಲಿ ಯಾವುದಾದರು ಕಾರ್ಯಕ್ರಮ ಇದ್ದರೆ ತಿಳಿಸಿ ಬಂದು ಹಾಡ್ತೇನೆ ಎಂದಿದ್ದರು ಎಂದು ಅಲ್ಲಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಸುದ್ದಿಯಾಗಿತ್ತು..

ಆದರೆ ಆನಂತರ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಖುದ್ದು ಹನುಮಂತನೇ ಮಾದ್ಯಮದ ಮುಂದೆ ಬಂದು ನನಗೆ ಸಿಗಬೇಕಾದದ್ದೆಲ್ಲಾ ಸಿಕ್ಕಿದೆ.. ನಾನು ಆರೀತಿ ಹೇಳಿಲ್ಲ.. ನಾನು ಅಲ್ಲಿ ಕೆಲ ತಿನಿಸುಗಳನ್ನು ತೆಗೆದುಕೊಂಡು ಸಂತೋಷದಿಂದ ಮಾತನಾಡಿ ಬಂದೆಯಷ್ಟೇ.. ಆದರೆ ಅವರು ಯಾಕೆ ಆರೀತಿ ಹೇಳಿದ್ದಾರೋ ಗೊತ್ತಿಲ್ಲ.. ಅವರು ಹೇಳಿದ ಮಾತಲ್ಲಿ ಯಾವುದೂ ಸತ್ಯವಿಲ್ಲ ಎಂದಿದ್ದನು.. ಕೊನೆಗೆ ಅಲ್ಲಿಗೆ ಆ ವಿಚಾರ ತಣ್ಣಗಾಗಿತ್ತು.. ಇನ್ನು ನಿರೂಪಕಿ ಅನುಶ್ರೀ ಅವರಿಗೆ ಹನುಮಂತ ಬಹಳ ಆಪ್ತನಾಗಿದ್ದು ಎಲ್ಲರಿಗೂ ತಿಳಿದೇ ಇದೆ.. ಹನುಮಂತನನ್ನು ಸ್ವಂತ ತಮ್ಮನಂತೆ ಕಾಣುತ್ತಿದ್ದ ಅನುಶ್ರೀ ಹನುಮಂತನಿಗಾಗಿ ಬೈಕ್ ಸಹ ಕೊಡಿಸಿದ್ದರು.. ಅಷ್ಟೇ ಅಲ್ಲದೇ ಹಳ್ಳಿಯಿಂದ ಬಂದ ಹನುಮಂತನನ್ನು ಆಗಾಗ ಬೆಂಗಳೂರನ್ನು ತೋರಿಸಲು ತಮ್ಮ ಜೊತೆ ಕರೆದುಕೊಂಡು ಹೋಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.. ಇನ್ನು ಸರಿಗಮಪ ಡಿಕೆಡಿ ಶೋ ನಂತರ ಹನುಮಂತ ಬೇರೆ ಯಾವುದೇ ಶೋ ಗಳಲ್ಲಿ ಕಾಣಿಸಿಕೊಳ್ಳಲಿಲ್ಲ..

ಆದರೆ ಶೋ ನಿಂದ ಹೀರೋ ಆದೆ ಎಂದು ಹನುಮಂತ ಎಂದೂ ಸಹ ತಲೆಯಲ್ಲಿ ನಡೆಯಲಿಲ್ಲ.. ಹೌದು ಕಳೆದ ವರ್ಷ ಕೊರೊನಾ ಸಮಯದಲ್ಲಿ ಲಾಕ್ ಡೌನ್ ಆದ ಬಳಿಕ ಹನುಮಂತ ಒಂದು ಸ್ವಲ್ಪವೂ ಅಹಂಕಾರವಿಲ್ಲದೇ ತನ್ನ ಮೊದಲ ಕಾಯಕಕ್ಕೆ ಮರಳಿದ್ದನು.. ಹೌದು ಎಂದಿನಂತೆ ಕುರಿ ಕಾಯುವ ಕೆಲಸಕ್ಕೆ ಮರಳಿದ್ದ ಹನುಮಂತ ಈ ಬಗ್ಗೆ ಮಾಧ್ಯಮವೊಂದರ ಜೊತೆಯೂ ಮಾತನಾಡಿ ಆಗ ಅವಕಾಶ ಇತ್ತು ಹೋಗಿದ್ದೆ.. ಆದರೆ ಈಗ ಸುಮ್ಮನೆ ಕೂರೋಕಾಗುವುದಿಲ್ಲಾ ಅಲ್ವಾ ಅದಕ್ಕೆ ನಮ್ಮ ಕೆಲಸವನ್ನು ನಾವು ಮಾಡಬೇಕು.. ಅದೇ ಕಾರಣಕ್ಕೆ ನಾನು ಕುರಿ ಕಾಯುವ ಕೆಲಸವನ್ನು ಮುಂದುವರೆಸುತ್ತಿದ್ದೇನೆ ಎಂದಿದ್ದನು..

ಇನ್ನು ಇದೀಗ ವರ್ಷದ ಬಳಿಕ ಮತ್ತೆ ಹನುಮಂತ ತೆರೆ ಮೇಲೆ ಬಂದಿದ್ದಾನೆ.. ಹೌದು ಜೀ ವಾಹಿನಿಯಲ್ಲಿ ಮತ್ತೆ ಶುರುವಾಗಿರುವ ಸರಿಗಮಪ ಚಾಂಪಿಯನ್ಸ್ ಶೋ ನಲ್ಲಿ ಹನುಮಂತ ಮತ್ತೆ ಹಾಡಲಿದ್ದಾನೆ.. ಆದರೆ ಈ ಮುನ್ನ ಇದ್ದ ಹನುಮಂತ ಸಂಪೂರ್ಣವಾಗಿ ತನ್ನ ಲುಕ್ ಅನ್ನು ಬದಲಿಸಿಕೊಂಡಿದ್ದು ಗಡ್ಡ ಎಲ್ಲಾ ಬಿಟ್ಟು ತನ್ನ ಅಕ್ಕ ಅನುಶ್ರೀ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ.. ಹೌದು ಹಳೆಯ ಸೀಸನ್ ಗಳ ಖ್ಯಾತ ಗಾಯಕರ ಜೊತೆ ಮತ್ತೆ ಆರಂಭವಾಗಿರುವ ಸರಿಗಮಪ ಚಾಂಪಿಯನ್ಸ್ ನಲ್ಲಿ ಮತ್ತೆ ಹಾಡಲು ಹಳ್ಳಿ ಹೈದ ಹನುಮಂತ ಮತ್ತೆ ಬಂದಿದ್ದು ಹನುಮಂತನ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.. ಅಷ್ಟೇ ಅಲ್ಲದೇ ಅನುಶ್ರೀ ಕೂಡ ತನ್ನ ತಮ್ಮ ಮತ್ತೆ ಸರಿಗಮಪ ಶೋನಲ್ಲಿ ಕಾಣಿಸಿಕೊಂಡದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದು ತಮ್ಮನಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ..