ಮೂರಾಬಟ್ಟೆ ಆಯ್ತು ಹನುಮಂತನ ಬದುಕು.. ಕಾಸೂ ಇಲ್ಲ.. ಮನೆಯೂ ಇಲ್ಲ..

0 views

ಕನ್ನಡದ ಅತಿದೊಡ್ಡ ಸಿಂಗಿಂಗ್ ಶೋ ಎನಿಸಿಕೊಂಡಿರುವ ಜೀ ಕನ್ನಡದ ಸರಿಗಮಪ ಶೋ ಖ್ಯಾತಿಯ ಹನುಮಂತ ಯಾರಿಗೆ ತಾನೆ ಗೊತ್ತಿಲ್ಲಾ? ಒಂದು ಕಾಲದ ಟಿ ಆರ್ ಪಿ ಕಿಂಗ್ ಆಗಿದ್ದ ಹನುಮಂತನ ಬದುಕು ಈಗ ಮೂರಾಬಟ್ಟೆಯಾಗಿದೆ.. ಹೌದು ಸ್ವತಃ ಹನುಮಂತನೇ ತನ್ನ ಪಾಡಿನ ಬಗ್ಗೆ ಹೇಳಿಕೊಂಡಿದ್ದಾನೆ.. ಶೋ ಮೂಲಕ ಖ್ಯಾತಿಯೇನೋ ಬಂತು.. ಆದರೆ ಅದನ್ನು ಬಿಟ್ಟು ಆರ್ಥಿಕವಾಗಿ ಏನೂ ಇಲ್ಲ ಎನ್ನುವ ವಿಚಾರ ನಿಜಕ್ಕೂ ಬೇಸರ ತರಿಸುತ್ತದೆ..

ಈಗಿನ ಎಲ್ಲಾ ರಿಯಾಲಿಟಿ ಶೋಗಳು ಕೂಡ ಸ್ಕ್ರಿಪ್ಟೆಡ್ ಎಂದು ಎಲ್ಲರಿಗೂ ತಿಳಿದೇ ಇಲ್ಲ.. ಎಲ್ಲವೂ ಬಂಡಲ್ ಬಡಾಯಿ ಮಾರಾಯ.. ಎನ್ನುವಂತದ್ದೆ.. ಆದರೆ ಮನರಂಜನೆಗಾಗಿ ನೋಡುತ್ತೇವೆ ಎಂದು ಸುಮ್ಮನೆ ನೋಡಬೇಕಷ್ಟೆ.. ಆದರೆ ರಿಯಾಲಿಟಿ ಶೋಗಳ ಬೇರೆಯದ್ದೇ ಮುಖ ನಿಜಕ್ಕೂ ಬೇಸರ ತರಿಸುತ್ತದೆ..

ಹೌದು ಸರಿಗಮಪ ಶೋ ಮೂಲಕ ಹೆಸರು ಗಳಿಸಿದ್ದ ಹನುಮಂತನನ್ನು ಆ ಸೀಸನ್ ನ ರನ್ನರ್ ಅಪ್ ಎಂದು ಘೋಷೊಸಲಾಗಿತ್ತು.. ಆತನಿಗೆ ಮನೆ ಕೂಡ ಕೊಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು.. ಆದರೆ ನಿಜವಾದ ವಿಚಾರ ಬೇರೆಯೇ ಇದೆ.. ಹೌದು ಹನುಮಂತ ಉತ್ತರ ಕನ್ನಡ ಜಿಲ್ಲೆ ಕಡೆ ಕೆಲಸದ ನಿಮ್ಮಿತ್ತ ಹೋಗಿದ್ದ ಹನುಮಂತ ದಾರಿಯಲ್ಲಿ ಬೇಕರಿಯೊಂದರಲ್ಲಿ ನಿಂತು ತಿಂಡಿ ಖರೀದಿಸುವಾಗ ಬೇಕರಿಯವರು ಹನುಮಂತನನ್ನು ಮಾತನಾಡಿಸಿದ್ದಾರೆ.. ಆ ಸಮಯದಲ್ಲಿ ಇರೋದನ್ನು ಇದ್ದಂಗೆ ಹಂಚಿಕೊಂಡಿದ್ದಾನೆ.. ಹೌದು “ಜೀ ಕನ್ನಡದಲ್ಲಿ ಹಾಡಲು ಅವಕಾಶ ಸಿಕ್ಕಿದ್ದು ಹೊಸ ಅನುಭವ.. ಜನರು ನನ್ನನ್ನು ಗುರುತಿಸುತ್ತಾರೆ.. ಇದು ಸಂತೋಷ.. ಆದರೆ ಬೆಲೆ ಮಾತ್ರ ಸಿಗಲಿಲ್ಲ ಎಂದಿದ್ದಾರೆ.. ರನ್ನರ್ ಅಪ್ ಆಗಿದ್ದ ನನಗೆ ಬೆಂಗಳೂರಿನಲ್ಲಿ ಮನೆ ಕೊಡಿಸುತ್ತೇವೆ ಎಂದಿದ್ದರು..

ಆದರೆ ಇದುವರೆಗೂ ರಿಜಿಸ್ಟ್ರೇಷನ್ನೇ ಆಗಿಲ್ಲ.. ಕ್ಯಾಮರಾ ಮುಂದೆ ಹೇಳುವ ಆಶ್ವಾಸನೆ ಅನಿಸುತ್ತದೆ.. ಪ್ರಚಾರಕ್ಕಾಗಿ ಏನೇನೋ ಹೇಳಿ ನಮ್ಮಂತವರ ಬಾಳಲ್ಲಿ ಆಸೆ ತೋರಿಸುತ್ತಾರೆ.. ಅದರ ಬದಲು ನಮ್ಮ ಕಲೆಯನ್ನು ಮೆಚ್ಚಿ ಕಳುಹಿಸಿದರೆ ಸಾಕು.. ನಾವು ಕೂಡ ಯಾವುದೇ ಆಸೆ ಇಟ್ಟುಕೊಳ್ಳಲ್ಲ.. ಆದರೆ ಕ್ಯಾಮರಾ ಮುಂದೆ ಆಸೆ ಹುಟ್ಟಿಸಿ ಸುಮ್ಮನಾಗ್ತಾರೆ.. ಕಲೆ ಮೆಚ್ಚಿ ಕಳುಹಿಸಿದರೆ ನಾವೂ ಕೂಡ ಮೊದಲಿನಂತೆಯೇ ಬದುಕುತ್ತೇವೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ನಿಮ್ಮ ಜಿಲ್ಲೆಯಲ್ಲಿ ಯಾವುದಾದರು ಹಾಡುವ ಅವಕಾಶ ಇದ್ದರೆ ಕಾರ್ಯಕ್ರಮ ಇದ್ದರೆ ತಿಳಿಸಿ.. ನಾನು ಬಂದು ಹಾಡುತ್ತೇನೆ.. ಹಣಕ್ಕಾಗಿ ಅಂತ ಅಲ್ಲ.. ಬದಲಿಗೆ ನನ್ನ ಕಲೆ ಜೀವಂತವಾಗಿರಲಿ ಎನ್ನುವ ಕಾರಣಕ್ಕೆ ಎಂದಿದ್ದಾರೆ..

ಇದಿಷ್ಟೇ ಅಲ್ಲ ಬೇರೆ ರಿಯಾಲಿಟಿ ಶೋಗಳ ಬಗ್ಗೆಯೂ ಪತ್ರಿಕೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು.. ಕನ್ನಡ ಕೋಟ್ಯಾಧಿಪತಿ ಗೆದ್ದ ಹೊನ್ನಾವರದ ಮೀನುಗಾರ ಮಹಿಳೆ ಲಕ್ಷ ಲಕ್ಷ ಗೆದ್ದಿದ್ದರು.. ಆದರೆ ನಿಮಗೆ ಫೋನ್ ಮಾಡ್ತೀವಿ ಅಂತ ಕಳುಹಿಸಿ ಅವರಿಗೆ ಯಾವ ಫೋನ್ ಕೂಡ ಮಾಡಿಲ್ಲ ಎನ್ನಲಾಗಿದೆ.. ಕ್ಯಾಮರಾ ಮುಂದೆ ಮಾತ್ರ ಅದೆಲ್ಲಾ.. ಬರಿಗೈಯಲ್ಲಿ ಕಳುಹಿಸಿದ್ದಾರೆ ಎಂದಿದ್ದಾರೆ..

ಇದರ ಜೊತೆಗೆ ಮತ್ತೊಂದು ಮಹಿಳೆಯರ ಶೋನಲ್ಲಿ ಪಾಲ್ಗೊಂಡಿದ್ದ ಹೊನ್ನಾವರ ಮೂಲದ ಮತ್ತೊರ್ವ ಮಹಿಳೆಯೊಬ್ಬರು ಮಾತನಾಡಿದ್ದು ಅವರ ಪ್ರಕಾರ “ನೀವು ಕೇವಲ ಪಾಲ್ಗೊಳ್ಳುವವರು.. ಗೆಲ್ಲುವವರು ಬೇರೆಯೇ ಇದ್ದಾರೆ.. ಎಂದು ಮೊದಲೇ ಹೇಳಿದ್ದರು.. ಅಷ್ಟೇ ಅಲ್ಲದೇ ಕ್ಯಾಮರಾ ಮುಂದೆ ಕಣ್ಣೀರು ಇಡಬೇಕು ಅಂತಲೂ ಹೇಳುತ್ತಾರಂತೆ..

ಮೊದಲೇ ಎಲ್ಲವೂ ಸ್ಕ್ರಿಪ್ಟ್ ರೆಡಿ ಇರುತ್ತದೆ ಅದರಂತೆ ಪಾಲ್ಗೊಳ್ಳಬೇಕು.. ಜೊತೆಗೆ ಗೆದ್ದ ಪಾರಿತೋಷಕವನ್ನು ಸಹ ಅಲ್ಲಿಯೇ ಬಿಟ್ಟು ಹೋಗಬೇಕು ಎಂದು ಗದರಿಸುತ್ತಾರೆ ಎಂದಿದ್ದಾರೆ.. ಇದರ ಜೊತೆಗೆ ಬೆಂಗಳೂರಿಗೆ ಹೋಗಿ ಬರುವ ಖರ್ಚು ಕೂಡ ನಮ್ಮದೇ ಎಂದಿದ್ದಾರೆ.. ಒಟ್ಟಿನಲ್ಲಿ ಎಲ್ಲವೂ ಟಿ ಆರ್ ಪಿ ಗಾಗಿ ಅಷ್ಟೇ ಎನ್ನುವಂತಾಗಿದೆ..

ಈ ಮೊದಲು ಸಹ ರಿಯಾಲಿಟಿ ಶೋಗಳು ಎಲ್ಲವೂ ಹೇಳಿ ಮಾಡಿಸೋದು ಎನ್ನವ ಮಾತಿತ್ತು.. ಆದರೀಗ ಎಲ್ಲರಿಗೂ ತಿಳಿದಿರುವ ವಿಚಾರವೇ..