45 ದಿನದ ಹಿಂದಷ್ಟೇ ಮದುವೆಯಾಗಿದ್ದ ಚಿಕ್ಕಮಗಳೂರಿನ ಹರೀಶ್.. ಆದರೆ ಹೊಸ ವರ್ಷದ ದಿನವೇ ಏನಾಗಿ ಹೋದ ನೋಡಿ.. ಮನಕಲಕುತ್ತದೆ..

0 views

ಜೀವನ ಯಾವಾಗ ಯಾವ ರೀತಿ ಬದುಕಿನಲ್ಲಿ ತಿರುವು ನೀಡುತ್ತದೋ ಹೇಳಲು ಅಸಾಧ್ಯ.. ನಲವತ್ತೈದು ದಿನದ ಹಿಂದಷ್ಟೇ ಮದುವೆಯಾಗಿತ್ತು.. ನೂತನ ಜೀವನ ಆರಂಭ ಮಾಡಿದ್ದವ ಮಡದಿಯ ಜೊತೆ ಮುಂದಿನ ಜೀವನವನ್ನು ನೆಮ್ಮದಿಯಾಗಿ ಸಾಗಿಸಬೇಕಿತ್ತು.. ಮನೆಯಲ್ಲಿ ಇನ್ನೂ ಸಹ ಮದುವೆಯ ಸಂಭ್ರಮ ಹಾಗೆಯೇ ಇತ್ತು.. ಆದರೆ ಮದುವೆಯ ಸಂಭ್ರಮ ತುಂಬಿದ್ದ ಮನೆಯೀಗ ಸೂತಕದ ಮನೆಯಾಗಿ ಹೋಯ್ತು.. ನೂರಾರು ಕನಸು ಕಂಡು ಮದುವೆಯಾಗಿದ್ದ ಯುವಕನೀಗ ಕಾಲದ ಮುಂದೆ ಸೋತು ಕೊನೆಯುಸಿರೆಳೆದುಬಿಟ್ಟ‌.. ಅತ್ತ ಆತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು ಯಾರಿಗೂ ಇಂತಹ ಸ್ಥಿತಿ ಬಾರದಿರಲಿ ಎನ್ನುವಂತಾಗಿದೆ.. ಹೌದು ಈತನ ಹೆಸರು ಹರೀಶ್.. ವಯಸ್ಸಿನ್ನು ಕೇವಲ ಇಪ್ಪತ್ತೆಂಟು.. ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿ..

ಕಳೆದ ನಲವತ್ತೈದು ದಿನಗಳ ಹಿಂದಷ್ಟೇ ಹರೀಶ್ ಗೆ ಮದುವೆ ಮಾಡಲಾಗಿತ್ತು.. ಹರೀಶ್ ಆರ್ ಆರ್ ಎಸ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸವನ್ನೂ ಸಹ ಮಾಡುತ್ತಿದ್ದ.. ಜೀವನ ಸಾಗಿಸಲು ಒಂದು ಕೆಲಸವೂ ಇತ್ತು.. ಇತ್ತ ಮದುವೆ ಯೂ ಆಗಿತ್ತು.. ಮುಂದಿನ ಜೀವನವನ್ನು ನೆಮ್ಮದಿಯಾಗಿ ಸಾಗಿಸುವ ಕನಸು ಕಂಡಿದ್ದ ಹರೀಶ್ ಮದುವೆಯಾದ ನಲವತ್ತೈದು ದಿನದಲ್ಲಿಯೇ ಜೀವ ಕಳೆದುಕೊಳ್ಳುವಂತಾಗಿ ಹೋಯ್ತು.. ಹೌದು ಹರೀಶ್ ಮದುವೆಯಾಗಿ ಶಾಸ್ತ್ರ ಸಂಪ್ರದಾಯಗಳನ್ನು ಮುಗಿಸಿಕೊಂಡು ಇನ್ನು ಜೀವನ ನಡೆಸಲು ಮತ್ತೆ ಕೆಲಸಕ್ಕೆ ಹಾಜರಾಗಬೇಕೆಂದು ಮದುವೆಯಾದ ಕೆಲವೇ ದಿನಗಳಲ್ಲಿ ಮತ್ತೆ ತನ್ನ ಕೆಲಸಕ್ಕೆ ಮರಳಿದ್ದನು..

ಅದೇ ರೀತಿ ಜನವರಿ ಒಂದು ಶನಿವಾರದಂದು ಸಹ ಕೆಲಸಕ್ಕೆಂದು ಹೋದ ಹರೀಶ್ ಮರಳಿ ಮನೆಗೆ ಬಾರಲೇ ಇಲ್ಲ.. ಹೌದು ತಾನು ಅತಿಯಾಗಿ ಪ್ರೀತಿಸುತ್ತಿದ್ದ ಚಾಲಕ ವೃತಿ.. ನಿನ್ನೆ ಅದೇ ಕೆಲಸದಿಂದಾಗಿ ತನ್ನ ಜೀವವನ್ನೇ ಕಳೆದುಕೊಂಡುಬಿಟ್ಟ.. ಹೌದು ಶನಿವಾರ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆಯ ಹಳೇಕೋಟೆಯಿಂದ ಮೂಡಿಗೆರೆಗೆ ಬರುವ ಸಮಯದಲ್ಲಿ ಇಳಿಜಾರಿನಲ್ಲಿ ಹರೀಶ್ ಚಾಲನೆ ಮಾಡುತ್ತಿದ್ದ ಟ್ರ್ಯಾಕ್ಟರ್ ನ ಚಕ್ರ ಗುಂಡಿಗೆ ಸಿಲುಕಿಕೊಂಡಿದೆ.. ಎಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣಕ್ಕೆ ಬಾರಲಿಲ್ಲ.. ಅತ್ತ ಹರೀಶ್ ಟ್ರ್ಯಾಕ್ಟರ್ ನಿಯಂತ್ರಣಕ್ಕೆ ಬಾರದಿದ್ದಾಗ ಟ್ರ್ಯಾಕ್ಟರ್ ನಿಂದ ಹಾರಿದ್ದರೆ ಬಹುಶಃ ಇಂದು ಆತನ ಜೀವವಾದರೂ ಉಳಿಯುತಿತ್ತೇನೋ.. ಆದರೆ ಟ್ರ್ಯಾಕ್ಟರ್ ನಲ್ಲಿಯೇ ಕುಳಿತು ಗುಂಡಿಯಿಂದ ಹೊರ ತರಲು ಹರೀಶ್ ಪ್ರಯತ್ನ ಪಡುತ್ತಿರುವಾಗಲೇ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ..

ಟ್ರ್ಯಾಕ್ಟರ್ ಪಲ್ಟಿಯಾದಾಗ ಟ್ರ್ಯಾಕ್ಟರ್ ಅಡಿಯಲ್ಲಿ ಹರೀಶ್ ಸಿಲುಕಿಕೊಂಡಿದ್ದಾನೆ.. ಮರಳಿ ಮೇಲೆ ಏಳಲೇ ಆಗದೇ ಅಲ್ಲಿಯೇ ಜೀವ ಕಳೆದುಕೊಂಡಿದ್ದಾನೆ.. ಎಷ್ಟೇ ಸಮಯವಾದರೂ ಮಗ ಮನೆಗೆ ಮರಳಿ ಬರಲಿಲ್ಲವೆಂದು ಕುಟುಂಬದವರು ಆರಂಕಕ್ಕೊಳಗಾಗಿದ್ದಾರೆ.. ಇತ್ತ ಫೋನ್ ಮಾಡಿದರು ಹರೀಶ್ ಫೋನ್ ತೆಗೆಯುತ್ತಿಲ್ಲ.. ಅತ್ತ ಮನೆಗೂ ಬಾರಲಿಲ್ಲ.. ಇತ್ತ ಊರಿ‌ನಲ್ಲಿ ಎಲ್ಲೂ ಟ್ರ್ಯಾಕ್ಟರ್ ಕೂಡ ಕಾಣಲಿಲ್ಲ.. ಇದರಿಂದ ಹರೀಶ್ ನ ಕುಟುಂಬ ಬಹಳ ಆತಂಕಕ್ಕೊಳಗಾಗಿದ್ದು ಸ್ನೇಹಿತರು ಕುಟುಂಬದವರು ಎಲ್ಲರೂ ಹರೀಶ್ ನನ್ನು ಹುಡುಕಲು ಆರಂಭಿಸಿದ್ದಾರೆ..

ಕೊನೆಗೆ ಶನಿವಾರ ರಾತ್ರಿ ಹರೀಶ್ ನ ಸ್ನೇಹಿತರು ಹುಡುಕಾಡಲಾಗಿ ಮಲೆನಾಡಿನ ತಿರುವುಗಳಲ್ಲಿ ಟ್ರ್ಯಾಕ್ಟರ್ ಒಂದು ಪಲ್ಟಿಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು ಹತ್ತಿರ ಹೋಗಿ ನೋಡಲಾಗಿ ಅದು ಹರೀಶ್ ಎಂದು ತಿಳಿದಿದೆ.. ಕೆಲಸಕ್ಕೆಂದು ಹೋದ ಮಗ ಈ ರೀತಿಯಾದ ಸುದ್ದಿ ಕೇಳಿ ಆ ಕುಟುಂಬದ ಆಕ್ರಂದನ‌ ಮುಗಿಲು ಮುಟ್ಟಿತ್ತು.. ನಲವತ್ತೈದು ದಿನದ ಹಿಂದಷ್ಟೇ ಮದುವೆಯಾಗಿದ್ದ ಹರೀಶ್ ಇದೀಗ ಆ ಹೆಣ್ಣು ಮಗಳ ಜೀವನ ನೆನೆದರೆ ನಿಜಕ್ಕೂ ಸಂಕಟವಾಗುತ್ತದೆ.. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮದುವೆಯ ಸಂಭ್ರಮದಲ್ಲಿದ್ದ ಮನೆ ಈಗ ಸೂತಕದ ಮನೆಯಾಗಿ ಹೋಗಿದೆ..

ಇತ್ತ ಅದೇ ತಾಲೂಕಿನ ಮಾಕೋನ ಹಳ್ಳಿಯ ಬಳಿಯೂ ಇಂತಹುದೇ ಘಟನೆ ನಡೆದು ಟ್ರ್ಯಾಕ್ಟರ್ ರಸ್ತೆಯ ಏರನ್ನು ಹತ್ತಲಾಗದೇ ಹಿಮ್ಮುಖವಾಗಿ ಚಲಿಸಲು ಆರಂಭಗೊಂಡಾಗ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂದು ಅರಿತ ಚಾಲಕ ಟ್ರ್ಯಾಕ್ಟರ್ ನಿಂದ ಹಾರಿ ಜೀವ ಉಳಿಸಿಕೊಂಡಿದ್ದನು. ಇತ್ತ ಗುಂಡಿಗೆ ಸಿಲುಕಿದ್ದ ಟ್ರ್ಯಾಕ್ಟರ್ ನಿಂದ ಹರೀಶ್ ಸಹ ಹೊರಗೆ ಹಾರಿದ್ದರೆ ಆತನೂ ಇಂದು ಇರುತ್ತುದ್ದನೇನೋ.. ಆತನ ಕುಟುಂಬ ಕಣ್ಣೀರು ಹಾಕುವುದು ತಪ್ಪುತ್ತಿತ್ತೇನೋ ಎಂದು ಬೇಸರವಾಗುತ್ತದೆ.. ಹೊಸ ಜೀವನ ಶುರು ಮಾಡಿದ ಸಂತೋಷದಲ್ಲಿದ್ದವ ಕೊನೆಗೆ ಜೀವನವನ್ನೇ ಮುಗಿಸುವಂತಾಗಿ ಹೋಯ್ತು.. ಆ ಕುಟುಂಬಕ್ಕೆ ಹಾಗೂ ಆ ಹೆಣ್ಣು ಮಗಳಿಗೆ ಧೈರ್ಯ ನೀಡಲಿ.. ಚಾಲಕರು ದಯಮಾಡಿ ಎಚ್ಚರವಾಗಿರಿ..