ಇಷ್ಟು ಚಿಕ್ಕ ವಯಸ್ಸಿಗೆ ಮೊಬೈಲ್ ನಲ್ಲಿ ನೋಡಬಾರದ್ದು ನೋಡಿ ಮನೆಯ ರೂಮಿನ ಒಳಗೆ ಹೋದ.. ಬಾಗಿಲು ತೆಗೆದು ನೋಡಿದಾಗ ಮಗ ಇದ್ದ ಸ್ಥಿತಿ ಕಂಡು ಬೆಚ್ಚಿಬಿದ್ದ ತಾಯಿ..

0 views

ಮೊಬೈಲ್ ಗಳು ಮಕ್ಕಳ‌ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂದು ಊಹಿಸಲು ಸಹ ಅಸಾಧ್ಯವಾದಂತಾಗಿದೆ.. ಹೌದು ಕಳೆದ ಕೆಲ ವರ್ಷಗಳಿಂದ ಯಾವ ಮಕ್ಕಳ ಕೈ‌ ನೋಡಿದರೂ ಸಹ ಮೊಬೈಲ್ ಕಾಣುತಿತ್ತು.. ಇನ್ನು ಕಳೆದ ವರ್ಷ ಕೊರೊನಾ ನಂತರ ಮತ್ತಷ್ಟು ಮಕ್ಕಳ ಕೈಗೆ ನಾವೇ ಸ್ಮಾರ್ಟ್ ಫೋನ್ ಕೊಟ್ಟು ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಿ ಎನ್ನುತ್ತಿದ್ದೇವೆ..‌ ಆದರೆ ಬೆರಳ ತುದಿಯಲ್ಲಿ ಬೇಕಾದ್ದು ನೋಡಲು ಸಿಗುವ ಮೊಬೈಲ್ ಅನ್ನು ಮಕ್ಕಳ ಕೈಗೆ ಕೊಟ್ಟು ಮಕ್ಕಳನ್ನು ಸ್ವತಃ ನಾವುಗಳೇ ಬೇರೆ ದಾರಿ ತೋರುತ್ತಿದ್ದೇವಾ ಎನ್ನುವಂತಾಗಿದೆ.. ಹೌದು ಮೊವೈಲು ಇಂಟರ್ನೆಟ್ ಸಾಮಾಜಿಕ ಜಾಲತಾಣ ಎಲ್ಲವೂ ಸಹ ಒಳ್ಳೆಯದಾಗಿಯೂ ಬಳಸಿಕೊಳ್ಳಬಹುದು.. ಹಾಗೆಯೇ ಅದರಿಂದ ಬೇರೆ ದಾರಿಯೂ ತುಳಿಯಬಹುದು.. ಆದರೆ ಮಕ್ಕಳನ್ನು ಒಳ್ಳೆಯದಕ್ಕಿಂತ ಹೆಚ್ಚಾಗಿ ಬೇಡದ್ದೇ ಆಕರ್ಷಣೆ ಮಾಡುವುದು ಸಹಜ.. ಇನ್ನು ಅದೇ ರೀತಿ ಮೊಬೈಲ್ ನಲ್ಲಿ ನೋಡಬಾರದ ವೀಡಿಯೋ ನೋಡಿ ಚಿಕ್ಕ ಹುಡುಗನೊಬ್ಬ ಮನೆಯ ರೂಮಿನಲ್ಲಿ ಎಂತಹ ಸ್ಥಿತಿಯಲ್ಲಿ ಸಿಕ್ಕ ಎಂದರೆ ಆ ತಾಯಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ..

ಹೌದು ಈ ಹುಡುಗ ಏಳನೇ ತರಗತಿ ವಿದ್ಯಾರ್ಥಿ.. ಮಗ ತನ್ನ ಆನ್ಲೈನ್ ಕ್ಲಾಸು ಅದು ಇದು ಅಂತ ಅಮ್ಮನ ಮೊಬೈಲ್ ಅನ್ನು ಬಳಸುತ್ತಿದ್ದ.. ಇತ್ತ ಮಗ ಚೆನ್ನಾಗಿ ಓದುತ್ತಿದಾನೆ ಆನ್ಲೈನ್ ಕ್ಲಾಸ್ ಅಂಟೆಂಡ್ ಮಾಡುತ್ತಿದ್ದಾನೆ ಎಂದು ಅಮ್ಮನೂ ಭಾವಿಸಿದ್ದಳು.. ಆದರೆ ಅದರಿಂದಾಚೆಗೆ ಮಗ ಮೊಬೈಲ್ ನಲ್ಲಿ ಬೇರೆಯದ್ದನ್ನೇ ನೋಡುತ್ತಿದ್ದ.. ಹೌದು ಯೂಟ್ಯೂಬ್ ನಲ್ಲಿ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ವೀಡಿಯೋಗಳನ್ನು ನೋಡಲು ಆರಂಭಿಸಿದ್ದ.. ಆದರೆ ಈ ತಾಯಿಗೆ ಅದು ತಿಳಿಯಲೇ ಇಲ್ಲ.. ಯಾವಾಗಲೂ ಮೊಬೈಲ್ ಹಿಡಿದು ಕೂರುತ್ತಿದ್ದ ಆಗ ಮಗ ಬಹಳ ಚೆನ್ನಾಗಿ ಓದುತ್ತಿದ್ದಾನೆ ಎಂದುಕೊಳ್ಳುತ್ತಿದ್ದ ತಾಯಿಹೆ ಅವರಿಗೆ ತಿಳಿಯದ ಹಾಗೆ ಮಗನ ಮನಸ್ಸು ಬಹಳ ಬದಲಾಗಿ ಹೋಗಿತ್ತು.. ಹೌದು ಅದರ ಪರಿಣಾಮವೇ ಕೊನೆಗೆ ನಿನ್ನೆ ಮಗ ರೂಮಿನಲ್ಲಿ ಸಿಕ್ಕ ಸ್ಥಿತಿಯಾಗಿದೆ‌‌..

ಹೌದು ಎರಡು ದಿನಗಳ ಹಿಂದೆ ಈತ ಎಂದಿನಂತೆ ಅಮ್ಮನ ಬಳಿ ಮೊಬೈಲ್ ಕೇಳಿ ಪಡೆದುಕೊಂಡಿದ್ದಾನೆ.. ಆನಂತರ ಮೊಬೈಲ್ ಹಿಡಿದು ಮನೆಯ ರೂಮಿನೊಳಗೆ ಹೋಗಿದ್ದಾನೆ.. ಹೋಗಿ ಬಹಳ ಸಮಯವಾದರೂ ಹೊರಗೆ ಬರಲೇ ಇಲ್ಲ.. ಇತ್ತ ತಾಯಿ ಏನೋ ಓದಿಕೊಳ್ಳುತ್ತಿರಬಹುದು ಎಂದು ಕೊಂಡಿದ್ದಾಳೆ.. ಆದರೆ ಇಪ್ಪತ್ತು ನಿಮಿಷವಾದರೂ ಮಗ ರೂಮಿನಿಂದ ಹೊರಗೆ ಬರಲೇ ಇಲ್ಲ.. ಕೊನೆಗೆ ತಾಯಿ ಅನುಮಾನಗೊಂಡು ರೂಮಿನ ಬಾಗಿಲನ್ನು ತೆಗೆದು ನೋಡಿದ್ದಾಳೆ.. ನೋಡಿದಾಕ್ಷಣ ಅಲ್ಲಿ ರೂಮಿನೊಳಗೆ ಮಗ ಇದ್ದ ಸ್ಥಿತಿಯ ಕಂಡು ಅಲ್ಲಿಯೇ ಕೂಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.. ಹೌದು ಇಷ್ಟು ಚಿಕ್ಕ ವಯಸ್ಸಿನ ಮಗ, ಇಪ್ಪತ್ತು ನಿಮಿಷದ ಹಿಂದಷ್ಟೇ ಅಮ್ಮ ಮೊಬೈಲ್ ಕೊಡು ಎಂದ ಮಗ ಆಗ ರೂಮಿನಲ್ಲಿ ಜೀವ ಕಳೆದುಕೊಂಡುಬಿಟ್ಟಿದ್ದ.. ಹೌದು ಯೂಟ್ಯೂಬ್ ನಲ್ಲಿ ಜೀವ ಕಳೆದುಕೊಳ್ಳುವುದು ಹೇಗೆ ಎಂಬುದನ್ನು ಹುಡುಕಿ ವೀಡಿಯೋ ನೋಡಿಕೊಂಡು ಏಳನೇ ತರಗತಿ ಓದುತ್ತಿದ್ದ ಚಿಕ್ಕ ಹುಡುಗ ತನ್ನ ಜೀವವನ್ನೇ ಕಳೆದುಕೊಂಡು ಬಿಟ್ಟಿದ್ದ..

ಆ ತಾಯಿ ಕೂಗಿಕೊಂಡದ್ದು ಕೇಳಿ ತಕ್ಷಣ ಅಕ್ಕ ಪಕ್ಕದ ಮನೆಯವರು‌ ಓಡಿ ಬಂದು ನೋಡಿ ಮಗನನ್ನು ಫ್ಯಾನ್ ನಿಂದ ಕೆಳಗೆ ಇಳಿಸೊದ್ದಾರೆ.. ಇತ್ತ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿಯನ್ನು ಎಚ್ಚರಗೊಳಿಸಿದ್ದಾರೆ..ಇತ್ತ ಪೊಲೀಸರಿಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಷ್ಟು ಚಿಕ್ಕ ಹುಡುಗ ಇಂತಹ ಕೆಲಸ ಮಾಡಿಕೊಂಡದ್ದನ್ನು ನೋಡಿ ಅವರೂ ಸಹ ಆಶ್ಚರ್ಯಗೊಂಡಿದ್ದಾರೆ.. ಆದರೆ ಅಕ್ಕ ಪಕ್ಕದವರು ಹೇಳುವ ಪ್ರಕಾರ ಆ ಕುಟುಂಬದಲ್ಲಿ ಯಾವುದೇ ಗಲಾಟೆಯಾಗಲಿ ಮತ್ತೊಂದಾಗಲಿ ಮನಸ್ತಾಪವಾಗಲಿ ಏನೂ ಇರಲಿಲ್ಲ.. ಯಾವಾಗಲೂ ಸಂತೋಷವಾಗಿಯೇ ಇದ ಕುಟುಂಬದಲ್ಲಿ ಇಂತಹ ಘಟನೆ ನಡೆದಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.. ಇತ್ತ ಮಗನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ತಾಯಿ ಮಗ ಜೀವ ಕಳೆದುಕೊಂಡ ಸ್ಥಿತಿಗಲ್ಲಿ ಕಂಡು ಶಾಕ್ ಗೆ ಒಳಗಾಗಿದ್ದಾರೆ..ಎಲ್ಲವೂ ಸರಿಯಿದ್ದ ಕುಟುಂಬ ಎಲ್ಲವೂ ಚೆನ್ನಾಗಿದ್ದ ಕುಟುಂಬದಲ್ಲಿ ಮಗ ಮೊಬೈಲ್ ನೋಡಿ ಇಂತಹ ಕೆಲಸ ಮಾಡಿಕೊಂಡಿದ್ದು ಮೊಬೈಲ್ ಗಳು ಮಕ್ಕಳ‌ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿರುವುದು ಎಂದು ಒಂದು ಕ್ಷಣ ಆತಂಕ ಪಡುವಂತಾಗಿದೆ..

ದಯವಿಟ್ಟು ಮಕ್ಕಳ ಕೈಗೆ ಆದಷ್ಟೂ ಮೊಬೈಲ್ ಕೊಡುವುದನ್ನು ಅವಾಯ್ಡ್ ಮಾಡಿ.. ಅದರಲ್ಲೂ ತರಗತಿಗೆ ಸಂಬಂಧ ಪಟ್ಟಂತೆ ಮೊಬೈಲ್ ಕೊಡಲೇ ಬೇಕಾದ ಅನಿವಾರ್ಯತೆ ಬಂದಲ್ಲಿ ಅವರ ಮೇಲೆ ದಯವಿಟ್ಟು ನಿಗಾ ಇಡಿ.. ಮಕ್ಕಳಿಗೆ ಮೊಬೈಲ್ ಕೊಟ್ಟು ತಮ್ಮ ತಮ್ಮ ಕೆಲಸ ಮಾಡುವ ಸಾಕಷ್ಟು ಪೋಷಕರೂ ಸಹ ಇದ್ದಾರೆ.. ಜೊತೆಗೆ ಮಕ್ಕಳಿಗೆ ಆನ್ಲೈನ್ ಕ್ಲಾಸಿಗೆ ಮೊಬೈಲ್ ಕೊಟ್ಟು ಅದನ್ನೇ ನೋಡುತ್ತಾ ಇರೋಕಾಗತ್ತಾ ಎನ್ನುವವರು ಇದ್ದಾರೆ.. ಹೌದು ಅದು ಸಾಧ್ಯವಿಲ್ಲ ನಿಜ.. ಆದರೆ ಮುಂದೊಂದು ದಿನ ಮೊಬೈಲ್ ಬಳಕೆಯಿಂದ ಮಕ್ಕಳ‌ ಮನಸ್ಸು ಬದಲಾಗಿ ಇಂತಹ ಘಟನೆಗಳು ನಡೆದು ಮಕ್ಕಳನ್ನೇ ಕಳೆದುಕೊಂಡು ನೋವು ಅನುಭವಿಸುವುದಕ್ಕಿಂತ ಈಗ ಕಷ್ಟವಾದರೂ ಸರಿಯೇ ಮಕ್ಕಳ‌ ಕೈಯಲ್ಲಿ ಮೊಬೈಲ್ ಇದ್ದಾಗ ಅವರ ಕಡೆ ಸ್ವಲ್ಪ ಗಮನ ನೀಡುವುದು ಒಳ್ಳೇಯದು.. ಜೊತೆಗೆ ಮಕ್ಕಳು ಬೇರೆ ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ಸಣ್ಣ ಸುಳಿವು ಸಿಕ್ಕರೂ ಸಹ ಮಕ್ಕಳನ್ನು ಒಳ್ಳೆಯ ಮಾತುಗಳಿಂದಲೇ ಅವುಗಳಿಂದ ದೂರ ಮಾಡುವುದು ಒಳ್ಳೆಯದು..

ಕೆಟ್ಟದರ ಕಡೆ ಆಕರ್ಷಿತವಾದ ಮನಸ್ಸುಗಳನ್ನು ಕಠೋರ ಮಾತುಗಳಿಂದಾಗಲಿ ಅಥವಾ ಬೈದಾಗಲಿ ಅವರನ್ನು ತಿದ್ದಲು ಸಾಧ್ಯವಿಲ್ಲ.. ಈಗಿನ ಮಕ್ಕಳ ಮನಸ್ದು ನಿಜಕ್ಕೂ ಬಹಳ ಸೂಕ್ಷ್ಮ ವಾಗಿ ಬಿಟ್ಟಿದೆ.. ನಮ್ಮ ಕಾಲದಲ್ಲಿ ಬ್ಯಾಟು ವೈರು ಬೆಲ್ಟು ಬಾಚಣಿಗೆ ದೋಸೆ ಮುಗುಚುವ ಕೈ ಹೀಗೆ ಎಲ್ಲದರಲ್ಲಿಯೂ ನಮ್ಮಗಳಿಗೆ ಸೇವೆಯಾಗಿದೆ.. ಆದರೆ ಈಗಿನ ಮಕ್ಕಳಿಗೆ ಒಂದು ಮಾತು ಬೈದರುಹ್ ಸಹ ಮನೆ ಬಿಟ್ಟು ಹೋಗುವುದು ಜೀವ ಕಳೆದುಕೊಳ್ಳುವುದು ಈ ರೀತಿಯ ಆಲೋಚನೆಗಳನ್ನೇ ಮಾಡಿಬಿಡುತ್ತಾರೆ.. ಆಧುನಿಕತೆ ಹೆಚ್ಚಾದಂತೆ ಮಕ್ಕಳ‌ ಮನಸ್ಸುಗಳು ಸೂಕ್ಷ್ಮವಾಗುತ್ತಿರುವುದು ನಿಜಕ್ಕೂ ಆತಂಕದ ಬೆಳವಣಿಗೆಯೇ ಎನ್ನಬಹುದು.. ಪಾಪ ಹರಿಯಾಣದ ಗ್ರಾಮವೊಂದರಲ್ಲಿ ನಡೆದಿರುವ ಈ ಘಟನೆಯಿಂದ ಆ ತಾಯಿ ಮಗನನ್ನು ಕಳೆದುಕೊಂಡು ಜೀವನ ಪೂರ್ತಿ ನೋವು ಅನುಭವಿಸುವಂತಾಗಿದೆ.. ಮತ್ಯಾರಿಗೂ ಇಂತಹ ನೋವು ಬಾರದಿರಲಿ ಅಷ್ಟೇ.. ಪೋಷಕರು ಎಚ್ಚರವಾಗಿರಿ..