ಇಂದು ಭಾರತಕ್ಕೆ ವಿಶ್ವ ಸುಂದರಿ ಕಿರೀಟ ತಂದುಕೊಟ್ಟ ಹರ್ನಾಜ್ ಕೌರ್ ನಿಜವಾದ ಹಿನ್ನೆಲೆ ಏನು ಗೊತ್ತಾ.. ಆಕೆ ಓದಿರೋದು ಏನು ಗೊತ್ತಾ.. ಶಾಕ್ ಆಗ್ತೀರಾ..

0 views

ಹರ್ನಾಜ್ ಕೌರ್ ಭಾರತದ ಇತಿಹಾಸ ಪುಟದಲ್ಲಿ ಇಂದು ದಾಖಲಾಗಿರುವ ಹೆಸರು.. ಮುಂದಿನ ತಲೆಮಾರುಗಳಿಗೆ ಈ ಹೆಸರು ಇನ್ನು ಓದಲು ಕೇಳಲು ಸಿಗುತ್ತದೆ ಎಂದರೆ ಆಕೆಯ ತಂದೆ ತಾಯಿ ಹಾಗೂ ಸ್ವತಃ ಹರ್ನಾಜ್ ಅವರಿಗೂ ಹೆಮ್ಮೆಯ ವಿಚಾರವೆನ್ನಬಹುದು.. ಹೌದು ಸತತ ಇಪ್ಪತ್ತೊಂದು ವರ್ಷದ ಬಳಿಕ ಇದೀಗ ಭಾರತದ ಮಡಿಲಿಗೆ ವಿಶ್ವ ಸುಂದರಿ ಕಿರೀಟವನ್ನು ಹರ್ನಾಜ್ ಕೌರ್ ತಂದಿದ್ದಾರೆ.. ಹೌದು ಇಸ್ರೇಲ್ ನ ಇಲಾಟ್ ನಲ್ಲಿ ಆಯೋಜನೆಯಾಗಿದ್ದ 2021 ನೇ ಸಾಲಿನ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಮ್ಮ ಭಾರತದ ಚಂಡೀಗಡ ಮೂಲದ ಹರ್ನಾಜ್ ಕೌರ್ ಸಂಧು ಭಾರತಕ್ಕೆ ವಿಶ್ವ ಸುಂದರಿ ಪಟ್ಟವನ್ನು ಗೆದ್ದು ತಂದಿದ್ದಾರೆ.. ಕೇವಲ ಇಪ್ಪತ್ತೊಂದು ವರ್ಷದ ಹರ್ನಾಜ್ ಕೌರ್ ನಿಜಕ್ಕೂ ಯಾರು ಅವರ ಹಿನ್ನೆಲೆಯೇನು ಗೊತ್ತಾ..

ಹರ್ನಾಜ್ ಕೌರ್ ಅವರು ಮಾರ್ಚ್ ಮೂರು 2000 ರಂದು ಚಂಡೀಗಡದಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ್ದು ಇಪ್ಪತ್ತೊಂದು ವರ್ಷದಲ್ಲಿ ಅನೇಕ ಸಾಧನೆಗಳನ್ನು ಅನೇಕ ಕಿರೀಟಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.. ಮಿಸ್ ದಿವಾ 2021, ಫೆಮಿನಾ ಮಿಸ್ ಇಂಡಿಯಾ 2019, ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಹೀಗೆ ಸಾಕಷ್ಟು ಕಿರೀಟಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ಹರ್ನಾಜ್ ಕೌರ್ ಇದೀಗ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ.. 1994 ರಲ್ಲಿ ಸುಶ್ಮಿತಾ ಸೇನ್ ಹಾಗೂ 2000 ರಲ್ಲಿ ಲಾರಾ ದತ್ತಾ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು.. ಆ ಬಳಿಕ ಇದೀಗ ಇಪ್ಪತ್ತೊಂದು ವರ್ಷದ ಬಳಿಕ ಹರ್ನಾಜ್ ಈ ಸಾಧನೆ ಮಾಡಿದ್ದಾರೆ..

ಇನ್ನೂ ಹರ್ನಾಜ್ ರೂಪದರ್ಶಿ ಮಾತ್ರವಲ್ಲ ಅವರು ವಿದ್ಯಾವಂತೆಯೂ ಕೂಡ.. ಹೌದು ಸಾಮಾನ್ಯವಾಗಿ ಮಾಡೆಲಿಂಗ್ ಹಾಗೂ ನಟನೆ ಅಂತ ಬಂದರೆ ವಿಧ್ಯಾಭ್ಯಾಸದ ಕಡೆ ಗಮನ ನೀಡೋದು ಕಡಿಮೆ.. ಆದರೆ ವಿಧ್ಯೆ ಜೀವನಕ್ಕೆ ಎಷ್ಟು ಮುಖ್ಯ ಎಂದು ತಿಳಿದಿರುವ ಹರ್ನಾಜ್ ಸಧ್ಯ ತಮ್ಮ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದಾರೆ.. ಮುಂದೆ ಐ ಎ ಎಸ್ ಅಧಿಕಾರಿಯಾಗಬೇಕು ಎಂಬ ಕನಸನ್ನು ಹೊಂದಿದವರಾಗಿದ್ದಾರೆ.. ಇನ್ನು ತಮ್ಮ ಓದಿನ ಜೊತೆಗೆ ಅದಾಗಲೇ ರೂಪದರ್ಶಿ ಹಾಗೂ ನಟಿಯಾಗಿಯೂ ಗುರುತಿಸಿಕೊಂಡಿರುವ ಹರ್ನಾಜ್ ಕೌರ್ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ..

ಸೌಂದರ್ಯ ಸ್ಪರ್ಧೆಗಳಿಗೆ ಹೋಗುವುದಕ್ಕಾಗಲಿ ಅಥವಾ ತಮ್ಮ ಸೌಂದರ್ಯ ಕಾಳಜಿ ವಹಿಸಲು ಬೇಕಾದ ಹಣಕ್ಕಾಗಲಿ ಯಾರ ಬಳಿಯೂ ಕೇಳದೇ ತಾವೇ ದುಡಿದುಕೊಳ್ಳುತ್ತಿದ್ದಾರೆ.. ಅತಿ ಚಿಕ್ಕ ವಯಸಸಿನಲ್ಲಿಯೇ ಇದೀಗ ವಿಶ್ವ ಸುಂದರಿಯಾಗಿರುವ ಹರ್ನಾಜ್ ಫಿನಾಲೆ ವೇದಿಕೆಯಲ್ಲಿ ತಮ್ಮ ಬಗ್ಗೆ ತಾವು ಹೇಳಿಕೊಂಡ ಮಾತುಗಳು ನಿಜಕ್ಕುಇ ಮೈ ಜುಮ್ಮೆನ್ನುತ್ತದೆ.. ಹೌದು ನಿನ್ನೆ ವಿಜೇತ ಪಟ್ಟವನ್ನು ಘೋಷಣೆ ಮಾಡುವ ಮುನ್ನ ಫೈನಲಿಸ್ಟ್ ಗಳಿಗೆ ಮಾತನಾಡಲು ಹೇಳಿದಾಗ ದಿಟ್ಟತನದಿಂದ ಭಾರತವನ್ನು ಪ್ರತಿನಿಧಿಸಿದ ಹರ್ನಾಜ್ ಮಾತನಾಡಿದ ರೀತಿ ನಿಜಕ್ಕೂ ಮೆಚ್ಚುವಂತದ್ದು.. ಹೌದು ಫಿನಾಲೆ ವೇದಿಕೆಯಲ್ಲಿ ತೀರ್ಪುಗಾರರು ಪ್ರಶ್ನೆಯೊಂದನ್ನು ಕೇಳಿದರು..

“ಇತ್ತೀಚಿನ ದಿನಗಳಲ್ಲಿ ಒತ್ತಡವನ್ನು ನಿಭಾಯಿಸಲು ಕಷ್ಟ ಪಡುತ್ತಿರುವ ಯುವ ಮಹಿಳೆಯರಿಗೆ ಏಮು ಸಲಹೆ ನೀಡುವಿರಿ” ಎಂದು ಕೇಳಿದಾಗ ಉತ್ತರ ನೀಡಿದ ಹರ್ನಾಜ್ ಕೌರ್ “ಈಗಿನ ದಿನಗಳಲ್ಲಿ ನಾನು ಕಂಡಿರುವಂತೆ ಯುವ ಜನತೆ ಎದುರಿಸುತ್ತಿರುವ ಹೆಚ್ಚಿನ ಒತ್ತಡ ಎಂದರೆ ಅದು ತಮ್ಮನ್ನು ತಾವು ನಂಬದೇ ಇರುವುದು.. ಹೌದು ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ.. ಯಾರೊಂದಿಗೂ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ.. ಪ್ರತಿಯೊಬ್ಬರೂ ಸಹ ಇಲ್ಲಿ ಯುನೀಕ್ ಆಗಿರುವರು.. ನಮ್ಮನ್ನು ಮತ್ತೊಬ್ಬರ ಜೊತೆ ಹೋಲಿಕೆ ಮಾಡಿಕೊಂಡು ಮಾತನಾಡುವುದನ್ನು ಬಿಟ್ಟು ಪ್ರಪಂಚದಾದ್ಯಂತ ತುಂಬಾ ಒಳ್ಳೆಯ ವಿಚಾರಗಳು ನಡೆಯುತ್ತಿದೆ..ಅದರ ಬಗ್ಗೆ ಮಾತನಾಡಬೇಕು..

ಇದು ನಿಜವಾಗಿ ಎಲ್ಲರಿಗೂ ಅರ್ಥವಾಗಬೇಕು.. ಹೊರಗೆ ಬನ್ನಿ‌.. ಮಾತನಾಡಿ.. ಏಕೆಂದರೆ ನಿಮ್ಮ ಜೀವನಕ್ಕೆ ನೀವೇ ಲೀಡರ್.. ನಿಮ್ಮ ಅನಿಸಿಕೆಗಳಿಗೆ ನೀವೇ ಧ್ವನಿಯಾಗಬೇಕು.. ನಾನು ಸದಾ ನನ್ನಲ್ಲಿ ನಂಬಿಕೆ ಇಡುವೆ.. ಅದೇ ಕಾರಣಕ್ಕೆ ನಾನು ಈದಿನ ಇಲ್ಲಿ ಶೈನ್ ಆಗುತ್ತಿರುವೆ” ಎಂದಿದ್ದಾರೆ.. ಅವರ ಆ ಸ್ಪೂರ್ತಿ ತುಂಬಿದ ಮಾತುಗಳಿಗೆ ನೆರೆದಿದ್ದವರು ಚಪ್ಪಾಳೆಗಳ ಮಳೆಗರೆದರು.. ಇನ್ನು ಇತ್ತ ಸೌಂದರ್ಯ ಸ್ಪರ್ಧೆ ಎಂದರೆ ಇಲ್ಲಿ ನೋಡಲು ಸುಂದರವಾಗಿರುವವರನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಇದೆ.. ಆದರೆ ಅದು ಸತ್ಯವಲ್ಲ.. ಮಿಸ್ ಯೂನಿವರ್ಸ್ ಗೆಲ್ಲಬೇಕೆಂದರೆ ನೋಡಲು ಸಹ ಸುಂದರವಾಗಿರಬೇಕು..

ಅಷ್ಟೇ ಅಲ್ಲದೇ ಅವರ ನಡವಳಿಕೆ ಅವರ ಮಾತುಗಳು.. ಅವರ ಮಾತಿನಲ್ಲಿನ ಕಾನ್ಫಿಡೆನ್ಸ್.. ಅವರ ಧೈರ್ಯ.. ಹೀಗೆ ಸಾಕಷ್ಟು ವಿಚಾರಗಳನ್ನು ಗಮನಿಸಿಯೇ ಕಿರೀಟವನ್ನು ನೀಡಲಾಗುತ್ತದೆ.. ಇನ್ನು ರೀಲ್ಸ್ ಮಾಡುತ್ತಾ ನಾನೇ ಹೀರೋಯಿನ್ ನನಗಿಂತ ಚೆಂದ ಯಾರೂ ಇಲ್ಲ ಎಂದುಕೊಳ್ಳುವ ಕೆಲವರಿಗೆ ಕೆಲವರಿಗೆ ಸರಳವಾಗಿ ಹೇಳಬೇಕೆಂದರೆ ನೋಡಲು ಅಂದವಾಗಿದ್ದರೆ ಮಾತ್ರ ಸಾಲದು ತಲೆಯಲ್ಲಿ ಸ್ವಲ್ಪ ಬುದ್ಧಿಯೂ ಇರಬೇಕು.. ಹಾಗೆ ಹೊರಗಿನ ಜನಗಳ ಜೊತೆ ನಡೆದುಕೊಳ್ಳುವಾಗ ಸ್ವಲ್ಪ ವಿವೇಚನೆಯೂ ಇರಬೇಕು ಎಂದು.. ಸಧ್ಯ ಭಾರತದ ಮಡಿಲೆಗೆ ತನ್ನ ಸೌಂದರ್ಯ ಹಾಗೂ ಜ್ಞಾನದಿಂದ ವಿಶ್ವ ಸುಂದರಿ ಕಿರೀಟ ತಂದುಕೊಂಟ್ಟ ಹರ್ನಾಜ್ ಕೌರ್ ಅವರಿಗೆ ಶುಭವಾಗಲಿ..