ಕನ್ನಡತಿ ಧಾರಾವಾಹಿಯ ರತ್ನಮಾಲಾರಿಗೆ ಏನಾಯ್ತು.. ನಿಜವಾಗಿ ಕಣ್ಣೀರಿಟ್ಟ ಹರ್ಷ..

0 views

ಕನ್ನಡತಿ ಧಾರಾವಾಹಿ.. ಕನ್ನಡ ಕಿರುತೆರೆಯಲ್ಲಿ ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಜನರ ಮೆಚ್ಚುಗೆ ಗಳಿಸಿದ್ದ ಧಾರಾವಾಹಿ.. ಧಾರಾವಾಹಿಯ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಅಭಿಮಾನಿ ಬಳಗಗಳಿವೆ ಎಂದರೂ ತಪ್ಪಾಗಲಾರದು.. ಇನ್ನು ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಹರ್ಷ ಭುವಿ ಅಮ್ಮಮ್ಮ ಸುಚಿ ವರೂ ಬಿಂದು ಸಾನಿಯಾ ಹೀಗೆ ಪ್ರತಿಯೊಬ್ಬರೂ ಸಹ ಜನರ ಮನಗೆದ್ದಿದ್ದು ಮನಸ್ಸಿಗೂ ಬಹಳ ಹತ್ತಿರವಾಗಿದ್ದಾರೆ.. ಎಲ್ಲೇ ಹೋದರೂ ಕನ್ನಡತಿ ಧಾರಾವಾಹಿಯ ಹೆಸರಿನಿಂದಲೇ ಗುರುತಿಸುವಷ್ಟು ಯಶಸ್ಸನ್ನು ಧಾರಾವಾಹಿ ನೀಡಿದೆ.. ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ಹರ್ಷ ಪಾತ್ರದ ಕಿರಣ್ ರಾಜ್.. ಭುವಿ ಪಾತ್ರ ರಂಜನಿ ಹೀಗೆ ಸಾಕಷ್ಟು ಕಲಾವಿದರು ನಿಜ ಜೀವನದಲ್ಲಿಯೂ ಅದೇ ರೀತಿ ಪ್ರಬುದ್ಧತೆಯಿಂದ ನಡೆದುಕೊಳ್ಳುವುದ ಕಂಡು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದೂ ಉಂಟು..

ಇನ್ನು ಧಾರಾವಾಹಿಯಲ್ಲಿ ಹರ್ಷ ಭುವಿ ಬಿಟ್ಟರೆ ಮತ್ತೊಬ್ಬ ಪ್ರಮುಖ ಕಲಾವಿದರೆಂದರೆ ಅದು ಅಮ್ಮಮ್ಮ.. ಹೌದು ಹಸಿರುಪೇಟೆಯಿಂದ ಬೆಂಗಳೂರಿಗೆ ಬರಿಗೈಯಲ್ಲಿ ಬಂದು ಸ್ವಂತ ಪರಿಶ್ರಮದಿಂದ ಮಾಲಾ ವಿದ್ಯಾ ಸಂಸ್ಥೆ ಹಾಗೂ ಮಾಲಾ ಕಾಫಿ ಡೇ ಯನ್ನು ಕಟ್ಟಿ ಬೆಳೆಸಿದ ರತ್ನಮಾಲಾ ಅವರ ಪಾತ್ರವನ್ನು ಬಹಳ ಗಟ್ಟಿಯಾಗಿ ತೋರಿಸಲಾಗಿದೆ.. ಸ್ವಾವಲಂಭಿಯಾಗಿ ಸ್ವಾಭಿಮಾನಿಯಾಗಿ ಹಣದ ಜೊತೆಗೆ ಗೌರವ ಸಂಪಾದಿಸಿದ ರತ್ನಮಾಲಾ ಅವರ ಪಾತ್ರ ಅನೇಕರಿಗೆ ಸ್ಪೂರ್ತಿ ಎಂದರೂ ತಪ್ಪಾಗಲಾರದು.. ಇನ್ನು ಈ ಪಾತ್ರಕ್ಕೆ ಒಂದಷ್ಟು ಅಭಿಮಾನಿ ಬಳಗ ಇದ್ದೀದ್ದೂ ನಿಜ.. ಅದರಲ್ಲೂ ಮಗನ ಜೊತೆ ಅಮ್ಮಮ್ಮ ನಡೆದುಕೊಳ್ಳುವ ರೀತಿ.. ಪ್ರಬುದ್ಧತೆಯಿಂದ ಭುವಿಯ ಜೊತೆಗಿನ ಮಾತುಗಳು ಜನರಿಗೆ ಬಹಳ ಇಷ್ಟವಾಗಿತ್ತು.. ಆದರೆ ಸಧ್ಯ ಇದೀಗ ಅದೇ ಅಮ್ಮಮ್ಮನಿಗೆ ಏನಾಗಿ ಹೋಯ್ತು ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ..

ಹೌದು ಸಾಕಷ್ಟು ವರ್ಷಗಳ ನಂತರ ಹರ್ಷನ ಮದುವೆ ಮಾಡುವ ತಯಾರಿಯಲ್ಲಿದ್ದ ಸಮಯದಲ್ಲು ಅಮ್ಮಮ್ಮನಿಗೆ ಸುಚಿ ಮದುವೆಯ ಪ್ರಸ್ತಾಪ.. ಮನೆಯ ಸದಸ್ಯರ ನಡುವಿನ ಭಿನ್ನಾಭಿಪ್ರಾಯ.. ಅದಾಗಲೇ ಆರೋಗ್ಯ ಕೆಟ್ಟಿದ್ದ ಅಮ್ಮಮ್ಮನನ್ನು ಹೈರಾಣಾಗಿಸಿರೋದು ಸುಳ್ಳಲ್ಲ.. ಇನ್ನು ಇತ್ತ ನಿನ್ನೆಯ ಸಂಚಿಕೆಯಲ್ಲಿ ಅಮ್ಮಮ್ಮ ಕೊನೆಯುಸಿರೆಳೆದಿರುವಂತೆ ತೋರಿಸಲಾಗಿದ್ದು ಅಭಿಮಾನಿಗಳು ಬೇಸರ ಹಾಗೂ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.. ಹೌದು ಹರ್ಷ ಅಮ್ಮಮ್ಮನ ಸ್ಥಿತಿ ಕಂಡು ಧಾರಾವಾಹಿಯಲ್ಲಿ ಕಣ್ಣೀರಿಟ್ಟಂತೆ ಕಾಣಲಿಲ್ಲ.. ಬದಲಿಗೆ ತನಗೂ ಸಹ ಅದೇ ವಯಸ್ಸಿನ ತಾಯಿ ಇದ್ದು ಅವರನ್ನು ನೆನೆದು ಭಾವುಕರಾದ ಹರ್ಷ ನಿಜವಾಗಿ ಕಣ್ಣೀರಿಟ್ಟಿದ್ದು ಸ್ಪಷ್ಟವಾಗಿ ಕಾಣುತಿತ್ತು..

ಹೌದು ನಿನ್ನೆಯ ಸಂಚಿಕೆಯಲ್ಲಿ ಅಮ್ಮಮ್ಮನ ಬಗ್ಗೆ ಆತಂಕದಿಂದಲೇ ಮನೆಗೆ ಬಂದ ಹರ್ಷ ಹಾಸಿಗೆಯ ಮೇಲೆ ಇದ್ದ ಅಮ್ಮಮ್ಮನನ್ನು ನೋಡಿ ಮುಟ್ಟಲಾಗಿ ಕೊನೆಗೆ ಧ್ವನಿಯೇ ಹೊರ ಬರಲಾಗದಷ್ಟು ದುಃಖಿಸಿದ್ದು ನಿಜಕ್ಕೂ ಸಂಕಟ ತರುವಂತಿತ್ತು.. ನೈಜ್ಯ ನಟನೆಯ ಹರ್ಷ ತಮ್ಮ ನಟನೆಯ ಮೂಲಕ ಜನರ ಮನಗೆದ್ದರೂ ಸಹ ಆ ದೃಶ್ಯ ಅದ್ಯಾಕೋ ನಿಜವಾಗಿ ನಡೆಯುತ್ತಿರುವಷ್ಟು ನೈಜ್ಯವಾಗಿ ಹೋಯ್ತು.. ಇತ್ತ ಒಬ್ಬ ತಾಯಿಯನ್ನು ಅಂತಹ ದೃಶ್ಯದಲ್ಲಿ ನೋಡುವ ಸಂದರ್ಭ ಯಾವ ಮಕ್ಕಳಿಗೂ ಬಾರದಿರಲಿ ಎನಿಸಿದ್ದೂ ಉಂಟು.. ಇನ್ನು ಅದು ಪಾತ್ರವೇ ಆದರೂ ಸಹ ಜನರು ತಮ್ಮ ಸುತ್ತಮುತ್ತಲೇ ಆ ಕತೆ ನಡೆಯುತ್ತಿದೆ ಎಂದು ಭಾವಿಸಿದ್ದು ಅಮ್ಮಮ್ಮನ ಪಾತ್ರವನ್ನು ಈ ರೀತಿ ದಯವಿಟ್ಟು ಕೊನೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋವನ್ನು ಕಲರ್ಸ್ ವಾಹಿಂಜ್ ಹಂಚಿಕೊಳ್ಳುತ್ತಿದ್ದಂತೆ ವೀಡಿಯೋಗೆ ಸಾವಿರಾರು ಜನ ಕಮೆಂಟ್ ಮಾಡಿದ್ದು ಬಹುತೇಕ ಎಲ್ಲರೂ ಸಹ ಅಸಮಾಧಾನ ವ್ಯಕ್ತ ಪಡಿಸಿ ಅಮ್ಮಮ್ಮನ ಪಾತ್ರ ಮುಗಿಸಬೇಡಿ ಎಂದಿದ್ದಾರೆ.. ಅಮ್ಮಮ್ಮನ ಪಾತ್ರವಿದ್ದರೇ ಮಾತ್ರವೇ ಆ ಕುಟುಂಬಕ್ಕೊಂದು ಅರ್ಥ ಬರುವುದು.. ಭುವಿ ಹಾಗೂ ಹರ್ಷನ ಬಗ್ಗೆ ಸಾವಿರಾರು ಕನಸು ಕಟ್ಟಿದ್ದ ಅಮ್ಮಮ್ಮ ಅದನ್ನೆಲ್ಲಾ ನೋಡದೇ ದೂರವಾಗುವುದು ಸರಿಯಲ್ಲ.. ಅಷ್ಟೇ ಅಲ್ಲದೇ ಮುಂದೆ ತಾನು ಮೆಚ್ಚಿದ ಭುವಿ ಆ ಮನೆಯನ್ನು ನಿಭಾಯಿಸುವ ರೀತಿ ನೋಡಿ ಹೆಮ್ಮೆ ಪಡಬೇಕು.. ಅದಕ್ಕೂ ಮುಖ್ಯವಾಗಿ ತಮ್ಮ ಬಹು ವರ್ಷದ ಆಸೆ ಹರ್ಷನ ಮದುವೆಯನ್ನು ಕಣ್ತುಂಬಿಕೊಳ್ಳಬೇಕು.. ಇನ್ನೂ ಹೇಳಬೇಕೆಂದರೆ ಹರ್ಷನಿಗೆ ತಾಯಿ ಬೇಕು.. ದಯವಿಟ್ಟು ಪಾತ್ರವನ್ನು ಇಲ್ಲವಾಗಿಸಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ..

ಇದನ್ನೆಲ್ಲಾ ನೋಡಿದರೆ ನಿಜಕ್ಕೂ ಧಾರಾವಾಹಿಗಳು ಮನರಂಜನೆ ಮಾತ್ರ ನೀಡುವುದಿಲ್ಲ.. ನಿಜಕ್ಕೂ ಅವುಗಳು ಜೀವನದ ಭಾಗವೇ ಆಗಿ ಹೋಗುತ್ತದೆ.. ಕೆಲ ಧಾರಾವಾಹಿಗಳು ಜೀವನದಲ್ಲಿ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ.. ಜೀವನ ನಡೆಸುವ ರೀತಿಯನ್ನು ತೋರುತ್ತದೆ.. ಸಂಬಂಧಗಳ ನಡುವಿನ ಬಾಂಧವ್ಯವನ್ನು ತೋರುತ್ತದೆ.. ಅದೇ ರೀತಿ ಹರ್ಷ ಅಮ್ಮಮ್ಮನ ನಡುವಿನ ಅಮ್ಮ ಮಗನ ಸಂಬಂಧ ನಿಜಕ್ಕೂ ಎಷ್ಟೋ ತಾಯಿ ಮಗನ ನಡುವಿನ ಸಂಬಂಧದ ಪ್ರತೀಕವಾಗಿತ್ತು. ಅಂತಹ ಪ್ರೀತಿಯನ್ನು ದೂರ ಮಾಡಬೇಡಿ ಎಂದಷ್ಟೇ ಅಭಿಮಾನಿಗಳ ಕೋರಿಕೆಯಾಗಿದೆ.. ಅಮ್ಮಮ್ಮನ ಪಾತ್ರ ಮುಗಿಸುವರಾ ಅಥವಾ ಏನಾದರೂ ತಿರುವು ನೀಡುವರಾ ಕಾದು ನೋಡಬೇಕಿದೆ..