ಕನ್ನಡತಿ.. ಕನ್ನಡ ಕಿರುತೆರೆಯಲ್ಲಿ ಸಾಮಾನ್ಯದಂತಿದ್ದರೂ ಒಂದು ರೀತಿ ವಿಭಿನ್ನವಾದ ರೀತಿಯಲ್ಲಿ ತೆರೆ ಮೇಲೆ ಬರುತ್ತಿದ್ದು ಜನರ ಮನಸ್ಸಿಗೆ ಹತ್ತಿರವಾದ ಧಾರಾವಾಹಿ ಕನ್ನಡತಿ ಎಂದರೆ ತಪ್ಪಾಗಲಾರದು.. ಅದರಲ್ಲೂ ಕನ್ನಡದ ಬಗ್ಗೆಗಿನ ಅಭಿಮಾನ.. ಹಾಗೂ ಕನ್ನಡವನ್ನು ಹೆಮ್ಮೆಯಾಗಿ ಧಾರಾವಾಹಿಯಲ್ಲಿ ತೋರುವ ರೀತಿ ನಿಜಕ್ಕೂ ಕನ್ನಡಾಭಿಮಾನಿಗಳಿಗೆ ಮನಸ್ಸಿಗೆ ಒಂದು ರೀತಿ ಮುದವೆನಿಸುತ್ತದೆ.. ಅದರಲ್ಲಿಯೂ ಪ್ರೆಮ ನಿವೇದನೆಯ ಕೆಲ ಸನ್ನಿವೇಶಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಪರಿ ನಿಜಕ್ಕೂ ಎಷ್ಟು ಸೊಗಸು ಎನಿಸುತ್ತದೆ.. ಇನ್ನು ಧಾರಾವಾಹಿ ತೆರೆ ಮೇಲೆ ಎಷ್ಟು ಸದ್ದು ಮಾಡಿತೋ ಅಷ್ಟೇ ಧಾರಾವಾಹಿಯ ಕಲಾವಿದರ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ..

ಹೌದು ಕನ್ನಡತಿ ಧಾರಾವಾಹಿಯ ಎಲ್ಲಾ ಕಲಾವಿದರಿಗೂ ಸಹ ಕನ್ನಡತಿ ದೊಡ್ಡ ಮಟ್ಟದಲ್ಲಿ ಯಶಸ್ಸು ಹೆಸರು ಹಣ ಎಲ್ಲವನ್ನೂ ತಂದುಕೊಟ್ಟಿದೆ.. ಧಾರಾವಾಹಿಯ ಮೂಲಕವೇ ಕಲಾವಿದರನ್ನು ಗುರುತಿಸುತ್ತಿರುವುದೂ ಉಂಟು.. ಇನ್ನು ಈ ಧಾರಾವಾಹಿಯ ಮೂಲಕ ನಟ ಹರ್ಷ ಹಾಗೂ ಭುವಿ ಪಾತ್ರಧಾರಿಗಳಾದ ನಟ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರು ಮನೆಮಾತಾದರು.. ಅದರಲ್ಲೂ ತೆರೆ ಮೇಲೆ ಬಹಳ ಪ್ರಬುದ್ಧತೆ ಇರುವ ಪಾತ್ರ ಮಾಡುತ್ತಿರುವ ಈ ಜೋಡಿಗೆ ಜನರು ಫಿದಾ ಎಂದರೂ ತಪ್ಪಾಗಲಾರದು.. ಇನ್ನು ಎಂದಿನಂತೆ ತೆರೆ ಮೇಲಿನ ಜೋಡಿ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುವುದು ಹೊಸ ವಿಚಾರವೇನೂ ಅಲ್ಲ..

ತಮಗೆ ಇಷ್ಟವಾದ ಜೋಡಿಗಳು ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುವುದುಂಟು.. ಅದೇ ರೀತಿ ಕಿರುತೆರೆ ಹಾಗೂ ಬೆಳ್ಳಿತೆರೆಯ ಅದೆಷ್ಟೋ ಕಲಾವಿದರು ತಮ್ಮ ತಮ್ಮ ಸಹ ಕಲಾವಿದರುಗಳನ್ನು ಮದುವೆ ಆಗಿರೋದು ಉಂಟು.. ಆದರೆ ಕನ್ನಡತಿ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆಯೇ ಹೋಗಿದೆ ಎಂದರೆ ಸುಳ್ಳಲ್ಲ.. ಹೌದು ಕನ್ನಡತಿ ಧಾರಾವಾಹಿಯ ಅಭಿಮಾನಿಗಳು ಸಹ ಹರ್ಷ ಹಾಗೂ ಭುವಿ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಕೇಳಿಕೊಂಡಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿಯೂ ಇಬ್ಬರ ನಡುವೆ ಪ್ರೀತಿ ಇದೆ ಒಂದಾಗ್ತಾರೆ.. ಇಬ್ಬರೂ ಮದುವೆ ಆಗ್ತಾರೆ ಹೀಗೆ ಸಾಕಷ್ಟು ಸುದ್ದಿ ಹರಿದಾಡಿತ್ತು..

ಆದರೆ ಇದೆಲ್ಲವೂ ಸುಳ್ಳು.. ಪಾತ್ರವನ್ನು ಪಾತ್ರವನ್ನಾಗಿ ಮಾತ್ರ ನೋಡಿ ಎಂದು ಹರ್ಷ ಹಾಗೂ ಭುವಿ ಇಬ್ಬರೂ ಸಹ ಕೇಳಿಕೊಂಡಿದ್ದರು.. ಆದರೆ ಕೆಲ ದಿನಗಳ ಹಿಂದೆ ನಡೆದ ವಿಚಾರವೇ ಬೇರೆಯಾಗಿತ್ತು..ಹೌದು ಹರ್ಷ ಹಾಗೂ ಭುವಿ ಓಡಿ ಹೋಗಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.. ಇದು ನಿಜಕ್ಕೂ ಸತ್ಯವಾ ಎನ್ನುವಷ್ಟರ ಮಟ್ಟಕ್ಕೆ ಯೂಟ್ಯೂಬ್ ನಲ್ಲಿ ಸುದ್ದಿಯಾಯಿತು.. ಈ ವಿಚಾರ ಹರ್ಷ ಹಾಗೂ ಭುವಿಯ ಕಿವಿಗೂ ಬಿತ್ತು.. ಇನ್ನು ಕೊನೆಗೆ ಮಾಧ್ಯಮದ ಮುಂದೆ ಬಂದ ಹರ್ಷ ಹಾಗೂ ಭುವಿ ಈ ಬಗ್ಗೆ ಸತ್ಯ ತಿಳಿಸಿದ್ದಾರೆ..

ಹೌದು ಸಧ್ಯ ಕನ್ನಡತಿ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿಯ ಮದುವೆ ಸಂಚಿಕೆಗಳು ನಡೆಯುತ್ತಿದ್ದು ಭುವನೇಶ್ವರಿಯ ದೇವಾಲಯದಲ್ಲಿ ಕನ್ನಡದ ಮದುವೆ ಎನ್ನುವ ಕಾನ್ಸೆಪ್ಟ್ ನಲ್ಲಿ ಧಾರಾವಾಹಿಯ ಹೆಸರಿಗೆ ತಕ್ಕಂತೆ ಕನ್ನಡತಿಯ ಮದುವೆ ಕನ್ನಡದಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ ಎನ್ನಬಹುದು.. ಇನ್ನು ಈ ಮದುವೆ ಸಂಚಿಕೆಗಳ ಚಿತ್ರೀಕರಣದಲ್ಲಿ ತೊಡಗಿದ್ದ ಸಮಯದಲ್ಲಿ ಮಾದ್ಯಮದ ಜೊತೆ ಮಾತನಾಡಿರುವ ಹರ್ಷ ಹಾಗೂ ಭುವಿ ತಮ್ಮ ಧರ್ಮಸ್ಥಳದ ಮದುವೆ ಬಗ್ಗೆ ಮಾತನಾಡಿದ್ದಾರೆ..

ಹೌದು ಒಂದು ಧಾರಾವಾಹಿ ಎಂದ ಮೇಲೆ ಅದರ ಬಗ್ಗೆ ಕೆಲ ಸುದ್ದಿಗಳು ಹರಿದಾಡೋದು ಸಹಜ.. ಆದರೆ ನಮ್ಮಿಬ್ಬರ ವಿಚಾರದಲ್ಲಿ ಸ್ವಲ್ಪ ಜಾಸ್ತಿಯೇ ಆಗಿದೆ.. ನಮ್ಮಿಬ್ಬರಿಗೂ ಸಾಕಷ್ಟು ಬಾರಿ ಯೂಟ್ಯೂಬ್ ನಲ್ಲಿ ಮದುವೆ ಮಾಡಿಸಿದ್ದಾರೆ.. ಅದೆಲ್ಲಕ್ಕೂ ಮೀರಿ ಕೆಲ ದಿನಗಳ ಹಿಂದೆ ಧರ್ಮಸ್ಥಳಕ್ಕೆ ಓಡಿ ಹೋಗಿ ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಸುದ್ದಿಯಾಗಿತ್ತು.. ಸ್ನೇಹಿತರೆಲ್ಲಾ ಕೇಳುವ ಹಂತಕ್ಕೆ ಬಂದು ನಿಂತಿತ್ತು.. ನಿಜಕ್ಕೂ ಅದೊಂದು ಮಾತ್ರ ಅತಿಯಾಗಿತ್ತು ಎನಿಸಿತು.. ನಮಗೆ ಆ ವಿಚಾರ ತಿಳಿದಾಗ ಇಬ್ಬರೂ ಸಹ ಈ ಬಗ್ಗೆ ಮಾತನಾಡಿದ್ವಿ.. ನಿಜಕ್ಕೂ ಈ ರೀತಿ ಎಲ್ಲಾ ಯಾವುದನ್ನೇ ಆಗಲಿ ಅತಿಯಾಗಿ ಮಾಡಬಾರದು ಎಂದರು.. ಅತ್ತ ರಂಜನಿ ಕೂಡ ಈ ಬಗ್ಗೆ ಮಾತನಾಡಿ ನಾವಿಬ್ಬರು ಇಂತಹ ವಿಚಾರಗಳನ್ನು ನೋಡಿದಾಗ ನಕ್ಕು ಸುಮ್ಮನಾಗ್ತೀವಿ.. ಅದರ ಬಗ್ಗೆ ಹೆಚ್ಚು ಯೋಚಿಸಿದರೆ ಪ್ರಯೋಜನವಿಲ್ಲ.. ನಮ್ಮ ನಮ್ಮ ಕೆಲಸದ ಕಡೆ ಗಮನ ನೀಡುತ್ತೇವೆ ಅಷ್ಟೇ ಎಂದರು..