ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕನ್ನಡತಿ ಧಾರಾವಾಹಿಯ ಹರ್ಷ ಭುವಿ‌‌.. ಸರಳ ಮಂಟಪದಲಿ ಒಂದಾಗುತ್ತಿರುವ ಸುಂದರ ಜೋಡಿ..

0 views

ಕನ್ನಡತಿ.. ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ಧಾರಾವಾಹಿಯ ಸ್ಟಾರ್ ಜೋಡಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಮೋಡಿ ಮಾಡಿರುವ ಜೋಡಿ.. ಹರ್ಷ ಹಾಗೂ ಭುವಿ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಹೌದು ಸಾವಿರಾರು ಅಭಿಮಾನಿಗಳ ಬಹುದಿನದ ಬೇಡಿಕೆ ಇದೀಗ ಈಡೇರುತ್ತಿದ್ದು ಸರಳವಾದ ಮಂಟಪದಲ್ಲಿ ವಿವಾಹ ಜೀವನಕ್ಕೆ ಕಾಲಿಡುತ್ತಿರುವ ಕನ್ನಡತಿಯ ಸ್ಟಾರ್ ಜೋಡಿಯ ಮದುವೆಗೆ ಕನ್ನಡತಿ ಧಾರಾವಾಹಿಯ ಅಷ್ಟೂ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ..

ಹೌದು ಸಿನಿಮಾ ಆದರೆ ಒಮ್ಮೆ ನೋಡಿ ಮರಳಿಬಿಡುತ್ತೇವೆ.. ಆದರೆ ಕಿರುತೆರೆ ಆರೀತಿಯಲ್ಲ.. ಪ್ರತಿದಿನ ಪ್ರಸಾರವಾಗುವ ಧಾರಾವಾಹಿಗಳು ಅದರಲ್ಲಿನ ಪಾತ್ರಧಾರಿಗಳು ಜನರ ಮನಸ್ಸಿಗೆ ಬಹಳ ಹತ್ತಿರವಾಗಿ ಬಿಡುತ್ತಾರೆ.. ಅದರಲ್ಲಿಯೂ ಧಾರಾವಾಹಿಯ ನಾಯಕ ನಾಯಕಿಯ ನವಿರಾದ ಪ್ರೀತಿಯನ್ನು ನೋಡಿದ ಅಭಿಮಾನಿಗಳು ನಿಜ ಜೀವನದಲ್ಲಿಯೂ ಆ ಜೋಡಿಗಳು ಒಂದಾಗಲಿ ಎಂದು ಅಪೇಕ್ಷೆ ಪಡುವುದು ಉಂಟು.. ಅದೇ ರೀತಿ ಎಷ್ಟೋ ಧಾರಾವಾಹಿಗಳ ಜೋಡಿಗಳು ನಿಜ ಜೀವನದಲ್ಲಿಯೂ ಒಂದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಂದರ ಸಂಸಾರ ಕಟ್ಟಿಕೊಂಡಿದ್ದಾರೆ..

ಇನ್ನು ಕನ್ನಡತಿ ಧಾರಾವಾಹಿ ಶುರು ಆದಾಗಿನಿಂದಲೂ ಅದ್ಭುತ ಪ್ರತಿಕ್ರಿಯೆ ಪಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಧಾರಾವಾಹಿಯ ಕುರಿತ ಸಾಕಷ್ಟು ವಿಚಾರಗಳು ಆಗಾಗ ಸುದ್ದಿಯಾಗೋದುಂಟು‌.. ಅದರಲ್ಲಿಯೂ ಹರ್ಷ ಭುವಿ ನಡುವಿನ ಪ್ರಬುದ್ಧ ಪ್ರೀತಿಗೆ ಫಿದಾ ಆಗದವರಿಲ್ಲ ಎನ್ನಬಹುದು.. ಇನ್ನು ಹರ್ಷ ಭುವಿ ಜೋಡಿಯನ್ನು ಆದಷ್ಟು ಬೇಗ ಮದುವೆಯಾಗಿ ಎಂದು ಸಾವಿರಾರು ಅಭಿಮಾನಿಗಳು ಕೇಳಿದ್ದುಂಟು..

ಇನ್ನು ಅನೇಕರು ಈ ಜೋಡಿ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಸಹ ಆಸೆ ಪಟ್ಟು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದುಂಟು.. ಇದೀಗ ಒಂದಷ್ಟು ಅಭಿಮಾನಿಗಳ ಆಸೆಯಂತೆ ಈ ಜೋಡಿ ಇದೀಗ ತೆರೆ ಮೇಲೆ ಒಂದಾಗುತ್ತಿದ್ದಾರೆ.. ಹೌದು ಧಾರಾವಾಹಿಯಲ್ಲಿ ಸಧ್ಯ ಅಮ್ಮಮ್ಮನ ಆರೋಗ್ಯ ಸರಿ ಇಲ್ಲದ ಕಾರಣ ಹರ್ಷ ತನ್ನ ತಾಯಿಯ ಆಸೆಗಳನ್ನು ನೆರವೇರಿಸಲು ಮುಂದಾಗಿದ್ದಾನೆ.. ಭುವಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಸಲುವಾಗಿ ಅಮ್ಮಮ್ಮನ ಜೊತೆ ಹಸಿರುಪೇಟೆಗೆ ಬಂದಿದ್ದು ಅದಾಗಲೇ ನಾಲ್ಕು ಗುಂಟೆ ಮಂಗಳಮ್ಮನಿಂದ ಅವಮಾನವಾಗಿ ಮನೆಯಿಂದ ಹೊರ ನಿಲ್ಲುವಂತಾಗಿದೆ..

ಇತ್ತ ವರೂ ಕೂಡ ಅದೇ ಮನೆಯಲ್ಲಿದ್ದು ಭುವಿಯನ್ನು ಮದುವೆಯಾಗಲು ಅದೇ ಊತಿನ ಅಕ್ಕಿ ಮಿಲ್ ಮಾಲೀಕ ಸಹ ಮನೆಗೆ ಆಗಮಿಸುತ್ತಿದ್ದಾನೆ.. ಆದರೆ ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಹರ್ಷ ಹಾಗೂ ಭುವಿಯ ಮದುವೆ ಸಂದರ್ಭದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಹೌದು ಭುವಿ ಹಾಗೂ ಹರ್ಷನ ಮದುವೆಯ ಚಿತ್ರೀಕರಣದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕನ್ನಡತಿ ಧಾರಾವಾಹಿಗಳ ಅಭಿಮಾನಿಗಳ ಪುಟಗಳಲ್ಲಿ ವೈರಲ್ ಆಗುತ್ತಿದ್ದು ಪ್ರೇಕ್ಷಕರು ಕಾತುರರಾಗಿದ್ದಾರೆ..

ಹೌದು ಹಸಿರುಪೇಟೆಯ ಮನೆ ಮುಂದೆಯೇ ಹಸಿರು ಗರಿಯ ಚಪ್ಪರದ ಮಂಟಪದಲ್ಲಿ ಭುವಿ ಹಾಗೂ ಹರ್ಷ ನಡುವಿನ ದೃಶ್ಯಗಳು ಚಿತ್ರೀಕರಣಗೊಂಡಿದೆ.. ಇನ್ನು ಎಲ್ಲಾ ಅಭಿಮಾನಿಗಳ ಅಪೇಕ್ಷೆಯಂತೆ ಹರ್ಷ ಭುವಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಕೆಲವೇ ದಿನಗಳಲ್ಲಿ ತೆರೆ ಮೇಲೆ ಮೂಡಿ ಬರಲಿದ್ದು ಅಭಿಮಾನಿಗಳಿಗೆ ರಸದೌತಣವೆನ್ನಬಹುದು.. ಇನ್ನು ವೀಡಿಯೋ ನೋಡಿದ ಅಭಿಮಾನಿಗಳು ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ಈ ಜೋಡಿ ಒಂದಾಗಲಿ ಎನ್ನುತ್ತಿದ್ದಾರೆ.. ಸಧ್ಯ ತೆರೆ ಮೇಲಿನ ಈ ಜೋಡಿಯ ಕಲ್ಯಾಣವನ್ನು ನೋಡಲು ಜನರು ಕಾತುರರಾಗಿದ್ದು ಹರ್ಷ ಭುವಿಯ ಮದುವೆ ಸಂಚಿಕೆಗಳಿಂದಾಗಿ ಧಾರಾವಾಹಿಯ ಟಿ ಆರ್ ಪಿ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ..