ಕೊನೆಗೂ ತನ್ನ ಪ್ರೀತಿಯನ್ನು ಹೇಳಿಕೊಂಡ ಭುವಿ.. ಹೇಳಿ ಮಾಡಿಸಿದ ಜೋಡಿ ಎನ್ನುತ್ತಿರುವ ಅಭಿಮಾನಿಗಳು.. ನಿಜ ಜೀವನದಲ್ಲಿಯೂ ಒಂದಾಗಲಿದ್ದಾರಾ ಹರ್ಷ ಭುವಿ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾದ ಕನ್ನಡತಿ ಧಾರಾವಾಹಿ ಸಧ್ಯ ತನ್ನ ರೋಚಕ ಸಂಚಿಕೆಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ನೀಡುತ್ತಿದೆ ಎನ್ನಬಹುದು.. ಸಧ್ಯ ಧಾರಾವಾಹಿಯ ಮೂಲಕ‌ ಜನಮ್ನ ಗೆದ್ದಿರುವ ಭುವಿ ಹರ್ಷನ ಮೇಲಿರುವ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದು ಇಬ್ಬರ ನಡುವಿನ ಪ್ರೇಮದ ಸಂಚಿಕೆಗಳು ಪ್ರಸಾರವಾಗುತ್ತಿದೆ.. ಈ ನಡುವೆ ಹೊಸದೊಂದು ಸಮಾಚಾರವೂ ಬಂದಿದೆ.. ಹೌದು ಕನ್ನಡತಿ ಧಾರಾವಾಹಿ ಸಾಮಾನ್ಯ ಧಾರಾವಾಹಿಗಳಿಗಿಂತ ಕೊಂಚ ಭಿನ್ನವಾಗಿ ಮೂಡಿ ಬರುತ್ತಿದ್ದು ಧಾರಾವಾಹಿಯಲ್ಲಿ ಬಳಸುತ್ತಿರುವ ಭಾಷೆ ಪ್ರಮುಖ ಆಕರ್ಷಣೆಯಾಗಿದೆ.. ಹೌದು ಇದೂ ಸಹ ಎಲ್ಲಾ ಧಾರಾವಾಹಿಗಳಂತೆ ಕನ್ನಡದ ಧಾರಾವಾಹಿಯೇ ಆದರೂ ಸಹ ಧಾರಾವಾಹಿಯಲ್ಲಿ ಅತಿರೇಕವಿಲ್ಲದ ಮಾತುಗಳು ಅಸಹ್ಯತನವಿಲ್ಲದಂತೆ ಪ್ರೀತಿಯನ್ನು ತೋರುತ್ತಿರುವ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬಹುದು..

ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆಯುತ್ತಿರುವ ಕನ್ನಡತಿ ಧಾರಾವಾಹಿ ಟಿವಿಆರ್ ನಲ್ಲಿ ಕನ್ನಡದ ಟಾಪ್ ಹತ್ತು ಧಾರಾವಾಹಿಗಳಲ್ಲಿ ಒಂದಾಗಿದೆ.. ಆದರೆ ವೂಟ್ ನಲ್ಲಿ ಧಾರಾವಾಹಿಯನ್ನು ನೋಡುವವರ ಸಂಖ್ಯೆ ಹೆಚ್ಚಿರುವ ಕಾರಣ ಟಿವಿಆರ್ ನಲ್ಲಿ ಟಾಪ್ ಹತ್ತು ಧಾರಾವಾಹಿಗಳಲ್ಲಿ ಒಂದಾಗಿದೆ ಎನ್ನಲಾಗಿದೆ.. ಇನ್ನು ಧಾರಾವಾಹಿ ಶುರುವಾದ ವರ್ಷ ಅಥವಾ ಎರಡು ವರ್ಷಗಳಲ್ಲಿ ಸಾಮಾನ್ಯವಾಗಿ ಧಾರಾವಾಹಿ ತನ್ನ ಕ್ರೇಜ್ ಅನ್ನು ಕಡಿಮೆ ಮಾಡಿಕೊಂಡು ಬಿಡುತ್ತದೆ.. ಜೊತೆಗೆ ಕಲಾವಿದರೂ ಸಹ ಕೊಂಚ ಬೋರ್ ಆಗೋದು ಉಂಟು.. ಆದರೆ ಕನ್ನಡತಿ ಧಾರಾವಾಹಿ ಶುರುವಾಗಿ ಎರಡು ವರ್ಷಗಳಾದರೂ ಸಹ ತನ್ನ ಹೊಸತನವನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ.. ಕತೆಯ ನಿರೂಪಣೆಯೂ ಸಹ ಫ್ರೆಶ್ ಆಗಿರುವಂತೆಯೇ ನೋಡಿಕೊಂಡಿದ್ದಾರೆ.. ಇನ್ನು ಹರ್ಷ ಭುವಿ ಪ್ರೀತಿಯ ಕತೆಗೆ ಅದರದ್ದೇ ಆದ ಅಭಿಮಾನಿ ಬಳಗವೂ ಇದೆ ಎಂದರೆ ತಪ್ಪಾಗಲಾರದು.

ಹೌದು ಅಪ್ಪಟ ಕನ್ನಡ ಮಾತನಾಡುವ ಹಸಿರುಪೇಟೆ ಟೀಚರ್ ಒಂದು ಕಡೆಯಾದರೆ ಇತ್ತ ಪೇಟೆಯ ಜೀವನ ಶೈಲಿಯ ಮಾಡ್ರನ್ ಹುಡುಗ ಮತ್ತೊಂದು ಕಡೆ.. ಆದರೆ ಹಸಿರುಪೇಟೆ ಭುವಿಯ ನಡೆಗೆ ಮನಸೋತ ಹರ್ಷ ತನ್ನ ಮನದ ಮಾತುಗಳನ್ನು ಹೇಳಿಕೊಂಡು ಭುವಿಯ ಉತ್ತರಕ್ಕಾಗಿ ಚಡಪಡಿಸುತ್ತಿದ್ದ ರೀತಿ ತಾನು ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ಜನಮೆಚ್ಚುಗೆಗೆ ಕಾರಣವಾಗಿತ್ತು.. ಇನ್ನು ರಾಣಿಗಡಕ್ಕೆ ಹರ್ಷ ಭುವಿಯ ಬೈಕ್ ರೈಡ್ ಹಾಗೂ ರಾಣಿಗಡದಲ್ಲಿ ಭುವಿಯ ಮನದ ಮಾತುಗಳು ಹೊರ ಬರುವುದಾ ಎನ್ನುವ ನಿರೀಕ್ಷೆ ಎಲ್ಲವೂ ಸಹ ಕುತೂಹಲದ ಜೊತೆಗೆ ಸಾಗುತಿತ್ತು.. ಆಂದರೆ ಇದೀಗ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದ್ದು ಭುವಿ ತನ್ನ ಮನದ ಮಾತುಗಳನ್ನು ಹೊರ ಹಾಕಿದ್ದು ಕಳೆದ ಎರಡು ದಿನದ ಸಂಚಿಕೆ ಪ್ರೇಕ್ಷಕರಿಗೆ ಹಬ್ಬವೆನ್ನಬಹುದು..

ಹೌದು ಎಂದಿನಂತೆ ಸುಂದರವಾದ ಕನ್ನಡ ಭಾಷೆಯಲ್ಲಿ ಹರ್ಷನನ್ನು ಆಲಿಂಗಿಸಿ ಭುವಿ ತನ್ನ ಮನದ ಮಾತನ್ನು ಹೇಳಿಕೊಂಡ ರೀತಿ ಇತ್ತ ಹರ್ಷ ಅದಕ್ಕೆ ಪ್ರತಿಕ್ರಿಯೆ ನೀಡಿದ ಪರಿ ಎಲ್ಲವೂ ಸಹ ನಮ್ಮ ಭಾಷೆಯಲ್ಲಿ ಪ್ರೀತಿ ಹೇಳಿಕೊಳ್ಳುವ ಮಜಾನೇ ಬೇರೆ ಎನಿಸುವಂತಿತ್ತು.. ಹಾಗೆಯೇ ನಮ್ಮ ಭಾಷೆಯ ತೂಕ ಆ ಪ್ರೀತಿಯ ಜೊತೆ ಸೇರಿ ಪ್ರೀತಿಯ ಮೇಲೆ ಮತ್ತಷ್ಟು ಗೌರವ ಹೆಚ್ವಿಸಿದಂತೆ ಕಂಡಿದ್ದು ಸುಳ್ಳಲ್ಲ.. ಇನ್ನು ಇತ್ತ ಹರ್ಷ ಭುವಿ ಇಬ್ಬರ ಮನದ ಪ್ರೀತಿಯೂ ಹೊರ ಬಂದ ನಂತರ ಒಬ್ಬರನೊಬ್ಬರು ಎದುರಿಸಲು ಮುಜುಗರ ಪಡುತ್ತಿದ್ದ ರೀತಿ ಮುಖದಲ್ಲಿನ ಆ ಮಂದಹಾಸ ಎಲ್ಲವೂ ಪ್ರೇಕ್ಷಕರಿಗೆ ಮುದ ನೀಡುವಂತಿತ್ತು.. ಇನ್ನು ಸಧ್ಯ ಕಳೆದ ಎರಡು ದಿನಗಳಿಂದ ಪ್ರಸಾರವಾಗುತ್ತಿರುವ ಸಂಚಿಕೆಗಳಲ್ಲಿ ಹರ್ಷ ಭುವಿಯ ಪ್ರೀತಿಯ ಸವಿಯನ್ನು ಸವಿಯುತ್ತಿರುವ ಪ್ರೇಕ್ಷಕರು ಮುಂದಿನ ಸಂಚಿಕೆಗಾಗಿ ಕಾದು ಕುಳಿತಿದ್ದಾರೆನ್ನಬಹುದು‌..

ಸಾಮಾಜಿಕ ಜಾಲಾತಾಣದಲ್ಲಿ ಧಾರಾವಾಹಿ ಪ್ರಿಯರು ಹಾಗೂ ಅಭಿಮಾನಿ ಬಳಗದವರು ಸಧ್ಯ ಹರ್ಷ ಭುವಿಯ ಫೋಟೋಗಳನ್ನು ರಾರಾಜಿಸುತ್ತಿದ್ದು ಸಂಚಿಕೆಗಳು ಸುಂದರವಾಗಿ ತೆರೆ ಮೇಲೆ ಬರುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.. ಇನ್ನು ಇದೆಲ್ಲದರ ನಡುವೆ ಅಭಿಮಾನಿಗಳು ತೆರೆಯ ಮೇಲೆ ಹರ್ಷ ಭುವಿಯ ಆತ್ಮೀಯತೆ ಪ್ರೀತಿ ಪರಸ್ಪರ ಗೌರವವನ್ನು ನೋಡಿ ಮೆಚ್ಚಿಕೊಂಡಿದ್ದು ಈ ಜೋಡಿ ನಿಜ ಜೀವನದಲ್ಲಿಯೂ ಒಂದಾದರೆ ಎಷ್ಟು ಚೆಂದವೆನ್ನುತ್ತಿದ್ದಾರೆ.. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ನೇರವಾಗಿಯೇ ಕಮೆಂಟ್ ಮೂಲಕ ಇಬ್ಬರನ್ನು ನಿಜ ಜೀವನದಲ್ಲಿಯೂ ಒಂದಾಗಿ ಎಂದು ಮನವಿ ಮಾಡುತ್ತಿರುವುದು ಸಹ ಕಂಡು ಬಂದಿದೆ..

ತೆರೆ ಮೇಲಷ್ಟೇ ಅಲ್ಲ ನಿಜ ಜೀವನದಲ್ಲಿಯೂ ಹರ್ಷ ಹಾಗೂ ಭುವಿ ಪಾತ್ರಧಾರಿಗಳಾದ ಕಿರಣ ರಾಜ್ ಹಾಗೂ ರಂಜನಿ ಅವರ ಗುಣ ನಡತೆ ಇದೇ ರೀತಿ ಇದ್ದು ಈ ಜೋಡಿ ಒಂದಾದರೆ ಧಾರಾವಾಹಿಯಷ್ಟೇ ಇವರ ಜೀವನವೂ ಸುಂದರವಾಗಿರಬಹುದಾಗಿದ್ದು ಸಧ್ಯ ಈ ಇಬ್ಬರೂ ನಿಜ ಜೀವನದಲ್ಲಿಯೂ ಆತ್ಮೀಯರಾಗಿದ್ದು ಈ ಆತ್ಮೀಯತೆ ಅಭಿಮಾನಿಗಳ ಆಸೆಯಂತೆ ಈ ಜೋಡಿಯನ್ನು ಒಂದು ಮಾಡುವುದೋ ಅಥವಾ ತೆರೆ ಮೇಲಷ್ಟೇ ಹರ್ಷನಿಗೆ ಭುವಿ ಜೋಡಿಯಾಗುವಳೋ ಕಾದು ನೋಡಬೇಕಷ್ಟೇ‌‌.. ಒಟ್ಟಿನಲ್ಲಿ ಟಿ ಆರ್ ಪಿ ಗಾಗಿ ಅತಿರೇಕತನದ ಅರ್ಥವಿಲ್ಲದ ಪ್ರಣಯ ತೋರುವ ಕೆಲ ಧಾರಾವಾಹಿಗಳ ನಡುವೆ ಕನ್ನಡತಿ ಕೊಂಚ ಭಿನ್ನವೇ ಎನ್ನಬಹುದು..