ಕನ್ನಡತಿ ಧಾರಾವಾಹಿಯ ನಟ ಹರ್ಷ ಯಾವಾಗಲೂ ಕೇಸರಿ ನೀಲಿ ಹಸಿರು ಬಣ್ಣದ ಪಟ್ಟಿ ಇರುವ ಬಟ್ಟೆಗಳನ್ನೇ ಯಾಕೆ ಹಾಕ್ತಾರೆ ಗೊತ್ತಾ.. ಅಸಲಿ ಕಾರಣ ಬೇರೆಯೇ ಇದೆ..

0 views

ಕನ್ನಡತಿ ಧಾರಾವಾಹಿ ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದು..‌ ಧಾರಾವಾಹಿ ತೆರೆ ಮೇಲೆ ಜನರ ಮನ ಗೆಲ್ಲುವುದರ ಜೊತೆಗೆ ಧಾರಾವಾಹಿಯ ಕಲಾವಿದರು‌ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿರೋದು ವಿಶೇಷ.. ಯಾವುದೇ ಧಾರಾವಾಹಿಯಾಗಲಿ ಒಮ್ಮೆ ಇಷ್ಟವಾದರೆ ಧಾರಾವಾಹಿಯ ಕಲಾವಿದರು ಶಾಶ್ವತವಾಗಿ ಕನ್ನಡಿಗರ ಮನಸ್ಸಿನಲ್ಲಿ ಇರುತ್ತಾರೆನ್ನಬಹುದು.. ಇನ್ನು ಕನ್ನಡತಿ ಧಾರಾವಾಹಿಯ ಹರ್ಷ ಹಾಗೂ ಭುವಿ ಕೂಡ ಅದೇ ರೀತಿ ಧಾರಾವಾಹಿ ಮಾತ್ರವಲ್ಲದೇ ತಮ್ಮ ನಿಜ ಜೀವನದ ವ್ಯಕ್ತಿತ್ವದ ಮೂಲಕ ಜನರ ಮನ ಗೆದ್ದಿದ್ದಾರೆ.. ಇನ್ನು ನೆಚ್ಚಿನ ಕಲಾವಿದರ ವ್ಯಯಕ್ತಿಕ ಜೀವನ.. ಅವರ ಆಗುಹೋಗುಗಳ ಬಗ್ಗೆ.. ಅವರು ಹಾಕುವ ಬಟ್ಟೆಗಳು ವಾಚ್ ಕಾರ್ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಇದ್ದೇ ಇರುತ್ತದೆ..

ಅದರಲ್ಲಿಯೂ ಕನ್ನಡತಿ ನಟ ಕಿರಣ್ ರಾಜ್ ಅವರ ವಿಚಾರದಲ್ಲಿ ಈ ಕುತೂಹಲ ತುಸು ಹೆಚ್ಚೇ ಎನ್ನಬೇಕು.. ಇದಕ್ಕೆ ಕಾರಣ‌ ಕಿರಣ್ ರಾಜ್ ಧಾರವಾಹಿಯಲ್ಲಿ ಹಾಕುತ್ತಿರುವ ಬಟ್ಟೆ.. ಹೌದು ಸದಾ ಮೂರು ಬಣ್ಣಗಳ ಪಟ್ಟಿ ಇರುವ ಬಟ್ಟೆಗಳನ್ನೇ ಕಿರಣ್ ರಾಜ್ ಧರಿಸುತ್ತಿದ್ದು ಇದಕ್ಕೆ ಕರಾಣವೇನು ಎಂದೂ ಸಹ ಕೆಲವೊಂದ್ ಪೋಸ್ಟ್ ಗಳಲ್ಲಿ ಜನರು ಕಮೆಂಟ್ ಮೂಲಕ ಕೇಳಿದ್ದಾರೆ.. ಎಲ್ಲದಕ್ಕೂ ಉತ್ತರ ಇಲ್ಲಿದೆ.. ಹೌದು ಕಿರಣ್ ರಾಜ್ ಅವರು ಕನ್ನಡತಿ ಧಾರಾವಾಹಿಯಲ್ಲಿ ಬಳಸುವ ಬಹುತೇಕ ಬಟ್ಟೆಗಳಲ್ಲಿ ಅದರಲ್ಲಿಯೂ ಶರ್ಟ್ ಗಳಲ್ಲಿ ನೀಲಿ ಕೇಸರಿ ಹಾಗೂ ಹಸಿರು ಬಣ್ಣದ ಪಟ್ಟೆಗಳನ್ನು ಕಾಣಬಹುದಾಗಿದೆ..

ಇಂತಹ ಬಣ್ಣದ ಪಟ್ಟೆ ಇರುವ ಬಟ್ಟೆಗಳನ್ನು ಕಿರಣ್ ರಾಜ್ ಅವರೇಕೆ ಬಳಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ತಿಳಿದರೆ ನಿಜಕ್ಕೂ ಹೆಮ್ಮೆ ಎನಿಸಬಹುದು.. ಹೌದು ಕಿರಣ್ ರಾಜ್ ಎಲ್ಲರಿಗೂ ತಿಳಿದಿರುವಂತೆ ಕನ್ನಡದ ಕಿನ್ನರಿ ಧಾರಾವಾಹಿ ಮೂಲಕ‌ ಕನ್ನಡ ಕಿರುತೆರೆಗೆ ಕಾಲಿಟ್ಟವರು.. ನಂತರ ಕೆಲವೊಂದು ಸಿನಿಮಾ ಮಾಡಿದರೂ ಸಹ ಅವುಗಳು ಅಷ್ಟಾಗಿ ಕೈ ಹಿಡಿಯಲಿಲ್ಲ.. ಆದರೆ ಕಿರಣ್ ರಾಜ್ ಮಾತ್ರ ತಾನೆಂದೂ ಕುಗ್ಗಲಿಲ್ಲ.. ನಂತರ ಮುಂಬೈ ಗೆ ತೆರಳಿದರು.. ಅಲ್ಲಿ ಹಿಂದಿ ಕಿರುತೆರೆಯಲ್ಲಿ ದೊಡ್ಡ ದೊಡ್ಡ ಅವಕಾಶ ಪಡೆದರು.. ಕೈತುಂಬಾ ದುಬಾರಿ ಸಂಭಾವನೆಯನ್ನೂ ಸಹ ಪಡೆಯುತ್ತಿದ್ದರು.. ಆದರೆ ತಾನು ಹುಟ್ಟಿದ ಜಾಗದಲ್ಲಿಯೇ ಹೆಸರು ಮಾಡಬೇಕೆಂದು ಮರಳಿ‌ ಕನ್ನಡಕ್ಕೆ ಬಂದರು.. ಕನ್ನಡತಿ ಧಾರಾವಾಹಿ ಮೂಲಕ ದೊಡ್ಡ ಯಶಸ್ಸು ಪಡೆದರು..

ನಂತರದಲ್ಲಿ ಮತ್ತೆ ಧಾರಾವಾಹಿಯ ಜೊತೆಗೆ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದು ಭರ್ಜರಿ ಗಂಡು ಸಿನಿಮಾ ತಯಾರಿ ಕೊನೆಯ ಹಂತದಲ್ಲಿದ್ದು ಕೆಲ ತಿಂಗಳಲ್ಲಿ ತೆರೆ ಕಾಣಲಿದೆ.. ಇನ್ನು ಇದೆಲ್ಲದರ ಜೊತೆಗೆ ತನ್ನದೇ ಆದ ಫೌಂಡೇಶನ್ ಒಂದನ್ನು ಸ್ಥಾಪಿಸಿಕೊಂಡು ಬಡ ಮಕ್ಕಳಿಗೆ ಹಾಗೂ ಕಷ್ಟದಲ್ಲಿರುವ ಇನ್ನು ಅನೇಕರಿಗೆ ಸಹಾಯ ಹಸ್ತ ಚಾಚುತ್ತಿರುವುದು ನಿಜಕ್ಕೂ ಮೆಚ್ಚುವ ವಿಚಾರ.. ಹಬ್ಬಗಳಲ್ಲಿ ಬಡಜನರ ಜೊತೆ ಹಬ್ಬ ಆಚರಿಸುವರು.. ದೀಪಾವಳಿ ಹಾಗೂ ಮತ್ತಿತರ ಹಬ್ಬಗಳಲ್ಲಿ ಇಲ್ಲದವರಿಗೆ ತಮ್ಮ ದುಡಿಮೆಯಿಂದ ಉಡುಗೊರೆಗಳನ್ನು ಬಟ್ಟೆಗಳನ್ನು ಕೊಡಿಸಿ ತಾವೂ ಸಹ ಅವರುಗಳ ಜೊತೆಯೇ ಹಬ್ಬ ಆಚರಿಸಿ ಸಂತೋಷ ಪಡುವರು.. ಅಷ್ಟೇ ಅಲ್ಲದೇ ಕೊರೊನಾ ಸಮಯದಲ್ಲಿ ಸಾವಿರಾರು ಜನರಿಗೆ ಆಹಾರ ಕಿಟ್ ಗಳನ್ನು ಒದಗಿಸಿದ್ದರು.. ಜೊತೆಗೆ ತಮ್ಮ ದುಡಿಮೆಯ ಇಂತಿಷ್ಟು ಭಾಗವನ್ನು ಇಂತಹ ಕೆಕಸಗಳಿಗೆ ಬಳಸುವ ನಿರ್ಧಾರ ಮಾಡಿರುವುದು ನಿಜಕ್ಕೂ ಅವರ ದೊಡ್ಡತನವೆನ್ನಬಹುದು..

ಇತ್ತ ಸಾಮಾಜಿಕ ಜಾಲತಾಣದಲ್ಲಿಯೂ ಕಿರಣ್ ರಾಜ್ ಬಹಳ ಫೇಮಸ್.. ಅಷ್ಟೇ ಅಲ್ಲದೇ ಕಿರಣ್ ರಾಜ್ ಅವರ ಡೈಲಾಗ್ ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಕೂಡ ಹೌದು.. ಜೀವನದಲ್ಲಿ ಹೆಸರು ಮಾಡಬೇಕು ಸೋಮಾರಿಯಾಗಿರಬಾರದು.. ಬಿದ್ದಾಗ ಯಾರು ಬರಲ್ಲ.. ಹೀಗೆ ಸಾಕಷ್ಟು ಸ್ಪೂರ್ತಿ ತುಂಬುವ ಮಾತುಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುವರು.. ಇವರ ಡೈಲಾಗ್ ಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ವೈರಲ್ ಆಗಿದ್ದು ಟ್ರೋಲ್ ಪೇಜ್ ಗಳಲ್ಲಿಯೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.. ಸಾಕಷ್ಟು ಜನ ಇವರ ಮಾತುಗಳನ್ನು ರೀಲ್ಸ್ ಮಾಡಿ ಟ್ರೆಂಡ್ ಮಾಡಿದ್ದೂ ಉಂಟು.. ಇನ್ನು ಕಿರಣ್ ರಾಜ್ ಅವರ ಮಾತು ಕೇವಲ ಮಾತಾಗಿರಲಿಲ್ಲ.. ಅದನ್ನು ಖುದ್ದು ಅವರೇ ಅನುಸರಿಸಿದರು..

ಇಹೌದು ಕಿರಣ್ ರಾಜ್ ಹಾಕುವ ಬಟ್ಟೆಯ ಮೇಲಿನ ಆ ಮೂರು ಬಣ್ಣದ ಪಟ್ಟೆಗಳು ಮತ್ಯಾವುದೂ ಅಲ್ಲ.. ಅದು ಕಿಂಗ್ ರಾಂಪೇಜ್ ಎನ್ನುವ ಬ್ರಾಂಡ್ ನ ಬಣ್ಣಗಳು.. ಹೌದು ಜೀವನದಲ್ಲಿ ಸುಮ್ಮನೆ ಇರಬಾರದು.. ನಮಗೆ ನಾವೇ ಬ್ರ್ಯಾಂಡ್ ಆಗಬೇಕು ಎನ್ನುವ ಕಿರಣ್ ರಾಜ್ ತಾವೇ ತಮ್ಮ ಪರಿಶ್ರಮದಿಂದ ಹುಟ್ಟುಹಾಕಿದ ಬ್ರ್ಯಾಂಡ್ ಕಿಂಗ್ಸ್ ರಾಮ್ ಪೇಜ್.. ಹೌದು ಇದೊಂದು ಬಟ್ಟೆಯ ಬ್ರ್ಯಾಂಡ್ ಆಗಿದ್ದು.. ಈ ಬ್ರ್ಯಾಂಡ್ ನ ಲೋಗೋ ನೀಲಿ ಕೇಸರಿ ಹಾಗೂ ಹಸಿರು ಬಣ್ಣದಿಂದ ಕೂಡಿದೆ..ನ್ನು ಧಾರಾವಾಹಿಯಲ್ಲಿ ತಮ್ಮದೇ ಬ್ರ್ಯಾಂಡ್ವ್ನ‌ ಬಟ್ಟೆ ಹಾಕಿಕೊಳ್ಳುವುದರಿಂದ ಪ್ರಚಾರವೂ ಸಿಗುತ್ತದೆ ಎಂಬ ಕಾರಣಕ್ಕೆ ಧಾರಾವಾಹಿ ಬಹುತೇಕ ತಮ್ಮದೇ ಬ್ರ್ಯಾಂಡ್ ಕಿಂಗ್ಸ್ ರಾಂಪೇಜ್ ನ ಶರ್ಟ್ ಗಳನ್ನೇ ಧರಿಸಿರುತ್ತಾರೆ..