ಹರ್ಷನ ತಾಯಿಗೆ ನಿಜಕ್ಕೂ ಜನರಿಂದ ಸೇರಿರುವ ಹಣವೆಷ್ಟು ಗೊತ್ತಾ? ಸತ್ಯ ಬೇರೆಯೇ ಇದೆ..

0 views

ಹರ್ಷ.. ಕಳೆದ ವಾರವಷ್ಟೇ ಶಿವಮೊಗ್ಗದಲ್ಲಿ ಕಿಡಿಗೇಡಿಗಳಿಂದ ಜೀವ ಕಳೆದುಕೊಂಡ ಹಿಂದೂ ಕಾರ್ಯಕರ್ತ ಹರ್ಷನ ಕುಟುಂಬದ ಸಹಾಯಕ್ಕಾಗಿ ಜನರು ಮಿಡಿದಿದ್ದಾರೆ.. ನೂರರಿಂದ ಹಿಡಿದು ಲಕ್ಷಗಳ ವರೆಗೆ ಜನರು ಹಣದ ಸಹಾಯವನ್ನು ಮಾಡುತ್ತಿದ್ದಾರೆ.. ಇದಕ್ಕೆ ಕಾರಣ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬ ಆರ್ಥಿಕವಾಗಿ ಸದೃಢವಾಗಲೆಂದು‌.. ಇಬ್ಬರು ಅಕ್ಕಂದಿರನ್ನು ಹೊಂದಿದ್ದ ಹರ್ಷ ಒಬ್ಬನೇ ಮಗನಾಗಿದ್ದು ಕುಟುಂಬದ ಜವಾಬ್ದಾರಿಯೂ ಅವನ ಮೇಲೆಯೇ ಇತ್ತು.. ಆ ಕಾರಣಕ್ಕಾಗಿ ಇಂತಹ ಸಮಯದಲ್ಲಿ ಆ ಕುಟುಂಬವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ಮುಖಂಡರುಗಳು ಸಹ ಕುಟುಂಬಕ್ಕೆ ನೆರವನ್ನು ನೀಡುತ್ತಿದ್ದಾರೆ..

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ.. ಆದರೆ ಹರ್ಷನ ಕುಟುಂಬಕ್ಕೆ ನಿಜಕ್ಕೂ ಸೇರಿರುವ ಹಣವೆಷ್ಟು ಅಸಲಿ ಸತ್ಯ ಬೇರೆಯೇ ಇದೆ.. ಹೌದು ಹರ್ಷ ಇಲ್ಲವಾದ ಬಳಿಕ ಲಕ್ಷಾಂತರ ಜನರು ಆತನಿಗಾಗಿ ಕಂಬನಿ ಮಿಡಿದರು.. ಮರುಗಿದರು.. ಇದು ಮಾತಿಗೆ ಮಾತ್ರ ಸೀಮಿತವಾಗಲಿಲ್ಲ.. ಬದಲಿಗೆ ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ನಿರ್ಧರಿಸಿ ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಮ್ ಅವರು ಮೊದಲು ಹರ್ಷನ ತಾಯಿ ಪದ್ಮ ಅವರ ಬ್ಯಾಂಕ್ ಮಾಹಿತಿ ಪಡೆದು ತಾವೇ ಒಂದು ಲಕ್ಷ ರೂಪಾಯಿ ಹಾಕುವ ಮೂಲಕ ನೆರವು ಸಂಗ್ರಹಿಸಲು ಮುಂದಾದರು.. ಹರ್ಷನ ತಾಯಿಯ ಬ್ಯಾಂಕ್ ಡೀಟೇಲ್ಸ್ ಅನ್ನು ಸಾಮಾಜಿಕ ಜಾಲತಾಣಸಲ್ಲಿ ಹಾಕಿ ನೇರವಾಗಿ ಅವರ ತಾಯಿಗೆ ಜನರ ಹಣ ಹೋಗುವಂತೆ ಮಾಡಿದರು..

ಇನ್ನು ಅಲ್ಲಿಂದ ಶುರುವಾದ ಮಾನವೀಯ ಕಾರ್ಯ ಮುಂದುವರೆಯುತ್ತಕೇ ಇದೆ.. ನೂರು ಇನ್ನೂರು ಸಾವಿರ ಲಕ್ಷ ಹೀಗೆ ತಮ್ಮ ಕೈಲಾದ ಸಹಾಯವನ್ನು ಜನರು ಮಾಡುತ್ತಲೇ ಇದ್ದಾರೆ.. ಇನ್ನು ಜನರ ಜೊತೆಗೆ ರಾಜಕೀಯ ನಾಯಕರುಗಳು ಸಹ ಕೈ ಜೋಡಿಸಿದ್ದು ರೇಣುಕಾಚಾರ್ಯ ಅವರು ಆರು ಲಕ್ಷ ರೂಪಾಯಿ ಅಶ್ವತ್ಥ್ ನಾರಾಯಣ್ ಅವರು ಹತ್ತು ಲಕ್ಷ ರೂಪಾಯಿ.. ನಟ ಪ್ರಥಮ್ ಇಪ್ಪತ್ತೈದು ಸಾವಿರ ರೂಪಾಯಿ.. ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಾಕಷ್ಟು ಉಳ್ಳುವರು ಸಹ ಲಕ್ಷಗಳಲ್ಲಿ ನೆರವನ್ನು ನೀಡಿದ್ದಾರೆ ಹೀಗೆ ಸಾಕಷ್ಟು ಮಂದಿ ನೆರವು ನೀಡಿದ್ದು ಜನ ಸಾಮಾನ್ಯರಿಂದ ಬಂದ ಹಣವೆಷ್ಟು ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ..

ಹೌದು ಮೊದಲ ದಿನ ಅಂದರೆ ಹರ್ಷನ ತಾಯಿ ಪದ್ಮ ಅವರ ಖಾತೆಯ ಮಾಹಿತಿ ನೀಡಿದ ಇಪ್ಪತ್ತ ನಾಲ್ಕು ಗಂಟೆಯೊಳಗೆ ಬರೋಬ್ಬರಿ ಹದಿನಾರು ಲಕ್ಷದ ಮೂವತ್ತೆರೆಡು ಸಾವಿರ ರೂಪಾಯಿ ಸಂಗ್ರಹವಾಗಿದ್ದು ಇದಿಷ್ಟೂ ಹಣ ನೇರವಾಗಿ ಪದ್ಮ ಅವರ ಖಾತೆಗೆ ಜನ ಸಾಮಾನ್ಯರಿಂದ ಸಂಗ್ರಹವಾದ ಹಣವಾಗಿದೆ.. ಇನ್ನು ಎರಡನೇ ದಿನ ಒಟ್ಟು ಮೂವತ್ತೈದು ಲಕ್ಷ ರೂಪಾಯಿ ವರೆಗೆ ಸಂಗ್ರಹವಾಗಿದ್ದು ಮೂರನೇ ದಿನ ಸಂಜೆ ವೇಳೆಗೆ ನಲವತ್ತೊಂದು ಲಕ್ಷ ರೂಪಾಯಿ ಸಂಗ್ರಹವಾಗಿತ್ತು.. ಆದರೆ ನಿನ್ನೆ ಸಂಜೆ ಅಂದರೆ ಬುಧವಾರ ಸಂಜೆ ವೇಳೆಗೆ ಒಟ್ಟು ಐವತ್ತೈದು ಲಕ್ಷದ ಏಳು ಸಾವಿರ ರೂಪಾಯಿ ಸಂಗ್ರಹವಾಗಿದ್ದು ಎಲ್ಲವೂ ನೇರವಾಗಿ ಪದ್ಮ ಅವರ ಖಾತೆಗೆ ವರ್ಗಾವಣೆಯಾಗಿದೆ‌.

ಇನ್ನೂ ಸಹ ನೆರವು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಹಣದಿಂದ ಆ ಕುಟುಂಬ ಆರ್ಥಿಕವಾಗಿ ಸಧೃಡವಾಗಿ ನಿಲ್ಲಬಹುದಾಗಿದೆ.. ಅಷ್ಟೇ ಅಲ್ಲದೇ ಇದನ್ನು ಹೊರತು ಪಡಿಸಿ ರೇಣುಕಾಚಾರ್ಯ ಅವರು ಗೋಷಿಸಿರುವ ಆರು ಲಕ್ಷ ರೂಪಾಯಿ ಅಶ್ವತ್ಥ್ ನಾರಾಯಣ ಅವರು ಘೋಷಿಸಿರುವ ಹತ್ತು ಲಕ್ಷ ರೂಪಾಯಿ.. ಇದರ ಜೊತೆಗೆ ನಟ ಪ್ರಥ್ಮ್ ಘೋಷಿಸಿರುವ ಇಪ್ಪತ್ತೈದು ಸಾವಿರ ರೂಪಾಯಿ.. ಅಷ್ಟೇ ಅಲ್ಲದೇ ನಟ ಪ್ರಥಮ್ ಕೂಡ ಜನರಿಂದ ಹಣ ಸಂಗ್ರಹ ಮಾಡುತ್ತಿದ್ದು ಆ ಹಣವನ್ನು ಇಂದು ಅಥವಾ ನಾಳೆ ಪದ್ಮ ಅವರಿಗೆ ನೀಡಲಿದ್ದೇನೆ ಎಂದಿದ್ದಾರೆ..

ಪ್ರಥಮ್ ಅವರು ಹಣ ಸಂಗ್ರಹ ಮಾಡುತ್ತಿರುವ ವಿಚಾರ ತಿಳಿದು ಸ್ಟಾರ್ ನಟರೊಬ್ಬರು ಒಂದು ಲಕ್ಷವನ್ನು ಪ್ರಥಮ್ ಗೆ ನೀಡೋದಾಗಿ ಹೇಳಿದ್ದು ಆ ಎಲ್ಲಾ ಹಣವೂ ಎರಡು ದಿನದಲ್ಲಿ ಪದ್ಮರವರ ಕೈ ಸೇರಲಿದೆ ಎನ್ನಲಾಗಿದೆ.. ಇನ್ನು ಜನರ ಸಹಾಯ ಕೂಡ ಮುಂದುವರೆದಿದ್ದು ಎಲ್ಲವೂ ಸೇರಿ ಎಂಭತ್ತು ಲಕ್ಷ ರೂಪಾಯಿಯ ವರೆಗೆ ಹಣ ಹರ್ಷನ ತಾಯಿ ಪದ್ಮ ಅವರ ಕೈ ಸೇರಬಹುದಾಗಿದೆ.. ಮಗನ ಕೊರತೆ ಆ ಕುಟುಂಬಕ್ಕೆ ಇದ್ದೇ ಇರುತ್ತದೆ.. ಆದರೆ ಹೋದ ಮಗ ಮರಳಿ ಬರಲು ಸಾಧ್ಯವಿಲ್ಲ ಆದರೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ತಮ್ಮ ಜೀವನವನ್ನು ಮಗ ಇದ್ದಿದ್ದರೆ ಹೇಗೆ ನೋಡಿಕೊಳ್ಳುತ್ತಿದ್ದನೋ ಅದೇ ರೀತಿ ಜನರ ಈ ನೆರವಿನಿಂದ ಕಟ್ಟಿಕೊಳ್ಳಬಹುದಾಗಿದೆ..