ನಿರ್ದೇಶಕ ಹರ್ಷ ಅವರ ಪತ್ನಿ ಕೂಡ ಕನ್ನಡದ ಸ್ಟಾರ್ ನಟಿ.. ಯಾರು ಗೊತ್ತಾ?

0 views

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸ್ಟಾರ್ ಜೋಡಿ ಗಳು ಇದ್ದಾರೆ.. ಹಿರಿಯ ನಟರಿಂದ ಹಿಡಿದು ಈಗಿನ ಜನರೇಶನ್ ನ ಕಲಾವಿದರೂ ಸಹ ಸಾಕಷ್ಟು ಮಂದಿ ಚಿತ್ರರಂಗದಲ್ಲಿರುವವರನ್ನೇ ಮದುವೆ ಯಾಗಿದ್ದಾರೆ.. ಅದರಲ್ಲೂ ಇತ್ತೀಚೆಗಂತೂ ಕಿರುತೆರೆ ಕಲಾವಿದರು ಸಹ ಕಲಾವಿದರನ್ನೇ ಪ್ರೀತಿಸಿ ವರಿಸಿರುವ ಉದಾಹರಣೆ ಹೆಚ್ಚಿವೆ.. ಇನ್ನು ಈ ವರ್ಷವೂ ಅದೇ ರೀತಿ ಸಾಕಷ್ಟು ಕಲಾವಿದರ ಕಲ್ಯಾಣವಾಗಿತ್ತು.. ಇನ್ನು ಸ್ಯಾಂಡಲ್ವುಡ್ ವಿಚಾರಕ್ಕೆ ಬಂದರೆ ಸ್ಟಾರ್ ನಿರ್ದೇಶಕ ಹರ್ಷ ಅವರ ಮಡದಿ ಕೂಡ ಕನ್ನಡದ ಖ್ಯಾತ ನಟಿ ಅನ್ನೋ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ..

ಹೌದು ಡ್ಯಾನ್ಸ್ ಮಾಸ್ಟರ್ ಆಗಿರುವ ಹರ್ಷ ಅವರು ಸ್ಯಾಂಡಲ್ವುಡ್ ನಲ್ಲಿ ನಿರ್ದೇಶಕನಾಗಿಯೂ ಹೆಸರು ಮಾಡಿದರು.. ಕಾಶಿ ಫ್ರಂ ವಿಲೇಜ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರಿಗೆ ಸಹೋದರನಾಗಿ ಅಭಿನಯಿಸಿದ ಹರ್ಷ ನಂತರದ ದಿನಗಳಲ್ಲಿ ನಟನೆಯ ಕಡೆ ಗಮನ ನೀಡಲಿಲ್ಲ.. ಬದಲಿಗೆ ಸ್ಯಾಂಡಲ್ವುಡ್ ನಲ್ಲಿ ಟಾಪ್ ಕೋರಿಯೋಗ್ರಾಫರ್ ಗಳಲ್ಲಿ ಒಬ್ಬರಾಗಿ ಮಿಂಚಿದರು.. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶನ ಮಾಡಿರುವ ಹರ್ಷ ಅವರು ಮುನ್ನೂರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ..

ಇನ್ನು ನಿರ್ದೇಶನದ ವಿಚಾರಕ್ಕೆ ಬಂದರೆ ಗೆಳೆಯಾ ಸಿನಿಮಾ ಮೂಲಕ ನಿರ್ದೇಶನದ ಕ್ಯಾಪ್ ತೊಟ್ಟ ಹರ್ಷ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.. ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡರು.. ಗೆಳೆಯಾ.. ಬಿರುಗಾಳಿ.. ಚಿಂಗಾರಿ.. ಭಜರಂಗಿ.. ವಜ್ರಕಾಯ.. ಜೈ ಮಾರುತಿ 800.. ಅಂಜನಿಪುತ್ರ.. ಸೀತಾರಾಮ ಕಲ್ಯಾಣ.. ಭಜರಂಗಿ 2.. ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.. ಎಲ್ಲವೂ ಸ್ಟಾರ್ ನಟರ ಸಿನಿಮಾಗಳೇ ಅನ್ನೋದು ಮತ್ತೊಂದು ವಿಶೇಷ..

ಇನ್ನು ಹರ್ಷ ಅವರ ಮದುವೆ ವಿಚಾರಕ್ಕೆ ಬಂದರೆ.. ಹರ್ಷ ಅವರ ಪತ್ನಿಯೂ ಕನ್ನಡ ಸಿನಿಮಾ ಇಂಡಸ್ಟ್ರಿಯವರೇ.. ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡವರು.. ಅವರು ಮತ್ಯಾರೂ ಅಲ್ಲ.. ಸಿತಾರಾ ವೈದ್ಯ.. ಹೌದು ಗೋಕರ್ಣ.. ಗೆಳೆಯಾ.. ಬಿರುಗಾಳಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಸಿತಾರಾ ವೈದ್ಯ ಅವರು ನಂತರ ಹರ್ಷ ಅವರೊಟ್ಟಿಗೆ ಮದುವೆಯಾದರು.. ಮದುವೆಯಾದ ಬಳಿಕ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದ ಸೀತಾರ ಅವರು ಸದ್ಯ ಎರಡು ಮಕ್ಕಳ ತಾಯಿಯೂ ಹೌದು..

ಹೌದು 2010 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿತಾರಾ ವೈದ್ಯ ಹಾಗೂ ನಿರ್ದೇಶಕ ಹರ್ಷ ಅವರಿಗೆ ಈಗ ಆರ್ಯ ಜೀವೋತ್ತಮ.. ವಿರಾಜ್ ಜೀವೋತ್ತಮ ಎಂಬ ಎರಡು ಮಕ್ಕಳಿದ್ದಾರೆ.. ಇನ್ನು ಇವರಿಬ್ಬರದ್ದು ಲವ್ ಮ್ಯಾರೆಜ್.. ಹೌದು ಸಿತಾರಾ ಅವರು ಉದಯ ವಾಹಿನಿಯ ನೀತಿ ಚಕ್ರ ಎಂಬ ಧಾರಾವಾಹಿಯೊಂದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಆ ಸಮಯದಲ್ಲಿ ಹರ್ಷ ಅವರು ಸ್ಟೇಜ್ ಕೋರಿಯೋಗ್ರಾಫರ್ ಆಗಿದ್ದರು.. ಉದಯ ವಾಹಿನಿಗೆ ಕಾರ್ಯಕ್ರಮವೊಂದಕ್ಕೆ ಹರ್ಷ ಬಂದಾಗ ಇಬ್ಬರ ಪರಿಚಯವಾಯಿತು.. ನಂತರ ಸ್ನೇಹವಾಗಿ ಹರ್ಷ ಅವರೇ ಮದುವೆಯ ಪ್ರಪೋಸಲ್ ಇಟ್ಟಿದ್ದಾರೆ..

ಕುಟುಂಬಕ್ಕೆ ಬಹಳ ಪ್ರಾಮುಖ್ಯತೆ ನೀಡುವ ಸಿತಾರಾ ಅವರು ಮೊದಲು ನಮ್ಮ ತಂದೆಯ ಬಳಿ ಮಾತನಾಡಿ ಅವರು ಒಪ್ಪಿದರೆ ಸರಿ ಎನ್ನಲಾಗಿ ಹರ್ಷ ಸಿತಾರಾ ಅವರ ಕುಟುಂಬದ ಬಳಿ‌ ಮಾತನಾಡಿದಾಗ ಎರಡೂ ಕುಟುಂಬಕ್ಕೂ ಒಪ್ಪಿಗೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇನ್ನು ಕುಟುಂಬಕ್ಕೇ ನನ್ಮ ಮೊದಲ ಪ್ರಾಮುಖ್ಯತೆ ಎನ್ನುವ ಸಿತಾರಾ ಅವರು ಬಿರುಗಾಳಿ ಸಿನಿಮಾದ ನಂತರ ಚಿತ್ರರಂಗದಿಂದ ಸಂಪೂರ್ಣ ದೂರಾದರು.. ಮಕ್ಕಳನ್ನು ನೋಡಿಕೊಂಡು ಪಕ್ಕಾ ಗೃಹಿಣಿ ಆಗಿರುವ ಸಿತಾರ ಅವರು ತಮ್ಮ ತಂದೆಯ ಬ್ಯುಸಿನೆಸ್ ಅನ್ನು ಸಹ ನೋಡಿಕೊಳ್ಳುವಲ್ಲಿ ಬ್ಯುಸಿ ಆಗಿದ್ದಾರೆ..