ಜೀವನದಲ್ಲಿ ನಡೆಯುವ ಅತಾಚುರ್ಯಗಳು ಒಮ್ಮೊಮ್ಮೆ ನಮ್ಮನ್ನು ಯಾವ ಹಂತಕ್ಕೆ ತಂದು ನಿಲ್ಲಿಸುತ್ತವೆ ಎಂದು ಹೇಳಲು ಸಹ ಅಸಾಧ್ಯವಾಗಿಬಿಡುತ್ತದೆ.. ಅಂತಹುದೇ ಒಂದು ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಆ ಮಗು ಜೀವ ಕಳೆದುಕೊಂಡಿತು ಎಂದು ಈ ಯುವಕನೂ ಸಹ ತನ್ನ ಜೀವ ಬಿಟ್ಟಿದ್ದು ಕಾರಣ ನಿಜಕ್ಕೂ ಮನಕಲಕುವಂತಿದೆ.. ಹೌದು ಆತನ ಹೆಸರು ಸುನೀಲ್ ವಯಸ್ಸಿನ್ನು ಕೇವಲ ಇಪ್ಪತ್ತ ಮೂರು ವರ್ಷ.. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪಿ ಹೆಚ್ ಡಿ ಪದವಿ ಓದುತ್ತಿದ್ದನು.. ಆದರೆ ಆತನ ಜೀವನದಲ್ಲಿ ನಡೆದ ಆ ಒಂದು ಘಟನೆ ಇಂದು ಆ ಮಗುವಿನ ವಿಚಾರವಾಗಿ ಈತನೂ ಜೀವ ಕಳೆದುಕೊಳ್ಳುವಂತಾಗಿ ಹೋಯ್ತು..

ಹೌದು ಸುನೀಲ್ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಸವಕನಹಳ್ಳಿ ಪಾಳ್ಯದವ.. ಮೈಸೂರಿನಲ್ಲಿ ಪಿ ಹೆಚ್ ಡಿ ವ್ಯಾಸಂಗ ಮಾಡುತ್ತಿದ್ದ.. ಇನ್ನೂ ಅದೇ ಗ್ರಾಮದ ಬಾಲಕ ಹರ್ಷ ಎಂಬ ಪುಟ್ಟ ಹುಡುಗ ಆತನ ವಯಸ್ಸು ಕೇವಲ ಐದು ವರ್ಷ.. ಈ ಇಬ್ಬರೂ ಸಹ ಇದೀಗ ಜೀವ ಕಳೆದುಕೊಂಡಿದ್ದು ಎರಡೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.. ಹೌದು ಅತಾಚುರ್ಯಗಳು ಹೀಗೂ ನಡೆಯಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.. ಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಒಂದರ ಸಲುವಾಗಿ ಜಮೀನೊಂದನ್ನು ಸಮತಟ್ಟು ಮಾಡಬೇಕಾಗಿತ್ತು.. ಈ ಕೆಲಸಕ್ಕೆ ಸುನೀಲ್ ಮುಂದಾಗಿದ್ದನು.. ತನಗೆ ಗೊತ್ತಿರುವವರೊಬ್ಬರ ಟ್ರ್ಯಾಕ್ಟರ್ ಪಡೆದು ಜಮೀನನ್ನು ಸಮತಟ್ಟು ಮಾಡುತ್ತಿದ್ದನು.. ಆದರೆ ಅಲ್ಲಿ ಬೇರೆಯದ್ದೇ ಘಟನೆ ನಡೆದು ಹೋಯಿತು.. ಹೌದು ಜಮೀನು ಸಮತಟ್ಟು ಮಾಡುವುದನ್ನು ಆ ಪುಟ್ಟ ಹುಡುಗ ಐದು ವರ್ಷದ ಹರ್ಷ ಸುಮ್ಮನೆ ನೋಡುತ್ತಾ ನಿಂತಿದ್ದನು..

ಅತ್ತ ಸುನೀಲ್ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ.. ಆ ಸಮಯದಲ್ಲಿ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಆ ಬಾಲಕನಿಗೆ ಗುದ್ದಿದೆ.. ಹರ್ಷನಿಗೆ ತೀವ್ರವಾಗಿ ಪೆಟ್ಟಾಗಿದ್ದು ನೋಡಿ ಸುನೀಲ್ ಗಾಭರಿಗೊಂಡಿದ್ದಾನೆ.. ತಕ್ಷಣ ಆ ಬಾಲಕನನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು.. ಘಟನೆ ನಡೆದ ದಿನವೇ ಸುನೀಲ್ ಊರು ಬಿಟ್ಟು ಮೈಸೂರಿಗೆ ಬಂದುಬಿಟ್ಟಿದ್ದನು.. ಹುಡುಗನಿಗೆ ಏನಾಗುವುದೋ.. ನನ್ನಿಂದ ಹೀಗಾಯ್ತಲ್ಲಾ ಅಂತ ಸುನೀಲ್ ಬಹಳಷ್ಟು ಕೊರಗುತ್ತಲೇ ಇದ್ದನು.. ಆದರೆ ಅತ್ತ ಆ ಪುಟ್ಟ ಹುಡುಗ ಹರ್ಷನಿಗೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಕೊನೆಯುಸಿರೆಳೆದು ಬಿಟ್ಟಿದ್ದಾನೆ.. ಕ್ರಿಕೆಟ್ ನೋಡುವ ಒಂದು ಸಣ್ಣ ಆಸೆಯಿಂದ ಆಕಸ್ಮಿಕವಾಗಿ ನಡೆದ ಆ ಘಟನೆಯಿಂದಾಗಿ ಪುಟ್ಟ ಕಂದನ ಜೀವವೇ ಹೋಗುವಂತಾಗಿ ಹೋಯ್ತು..

ಅಷ್ಟಕ್ಕೇ ವಿಧಿಯಾಟ ನಿಲ್ಲಲಿಲ್ಲ.. ಇತ್ತ ಆ ಪುಟ್ಟ ಹುಡುಗ ಉಳಿಯಲಿಲ್ಲ ಎಂಬ ಸುದ್ದಿ ಕೇಳಿ ಸುನೀಲ್ ತಾನು ಇದ್ದ ರೂಮಿನಲ್ಲಿಯೇ ತಾನೂ ಸಹ ಜೀವ ಕಳೆದುಕೊಂಡು ಬಿಟ್ಟಿದ್ದಾನೆ.. ಹೌದು ನನ್ನಿಂದ ಆ ಮಗುವಿಗೆ ಹೀಗಾಯ್ತು.. ಜೀವನ ಪೂರ್ತಿ ಆ ಕೊರಗು ನನ್ನಲ್ಲಿ ಇದ್ದೇ ಇರುತ್ತದೆ ಎಂದು ಮನನೊಂದು ಈತನೂ ಸಹ ಜೀವ ಕಳೆದುಕೊಂಡು ಬಿಟ್ಟ.. ಸಂಬಂಧವೇ ಇಲ್ಲದ ಈ ಎರಡು ಜೀವಗಳು ಒಂದು ಕ್ರಿಕೆಟ್ ಟೂರ್ನಮೆಂಟ್ ಸಲುವಾಗಿ ಬಾರದ ಲೋಕಕ್ಕೆ ಹೊರಟುಬಿಟ್ಟವು.. ಒಂದು ಕಡೆ ಎದೆ ಎತ್ತರಕ್ಕೆ ಬೆಳೆದ ಮಗ ಇನ್ನಿಲ್ಲದ ಸುದ್ದಿ ಸುನೀಲ್ ನ ಹೆತ್ತವರಿಗೆ ಸಂಕಟ ತಂದರೆ.. ಇತ್ತ ಮಗನ ಬಗ್ಗೆ ನೂರಾರು ಕನಸು ಕಂಡಿದ್ದ ಹರ್ಷನ ತಂದೆ ತಾಯಿಯ ಗೋಳಾಟ ನೋಡಲಾಗದಂತಿದೆ..

ದಯವಿಟ್ಟು ಯಾವುದೇ ಕೆಲಸವಾಗಲಿ ಬಹಳಷ್ಟು ಎಚ್ಚರಿಕೆಯಿಂದಿರಿ.. ಆಕಸ್ಮಿಕವಾಗಿ ನಡೆದರೂ ಸಹ ಇಂತಹ ದೊಡ್ಡ ದೊಡ್ಡ ನೋವುಗಳಿಗೆ ಅಂತಹ ಆಕಸ್ಮಿಕ ಘಟನೆಗಳು ಸಾಕ್ಷಿಯಾಗಿಬಿಡುತ್ತವೆ.. ಅತ್ತ ಪುಟ್ಟ ಹುಡುಗನೂ ಇಲ್ಲ.. ಇತ್ತ ನನ್ನಿಂದಲೇ ಆ ಹಿಡುಗನ ಕುಟುಂಬಕ್ಕೆ ನೋವು ಎಂದು ಮನನೊಂದು ತನ್ನ ಕುಟುಂಬಕ್ಕೂ ನೋವು ಕೊಟ್ಟು ಹೊರಟುಬಿಟ್ಟ.. ಒಂದೇ ಗ್ರಾಮದಲ್ಲಿ ಈ ಇಬ್ಬರ ಅಂತ್ಯ ಸಂಸ್ಕಾರ ನಡೆದಿದ್ದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ..