ಐದು ತಿಂಗಳ ಹಿಂದೆ ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಹಾಸನದ ಈ ಹೆಣ್ಣು ಮಗಳು ಇಂದು ಹೆತ್ತವರಿಗೆ ಯಾವ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಗೊತ್ತಾ.. ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

0 views

ವಯಸ್ಸು ಹದಿನಾರು ಹದಿನೇಳು ಬರುತ್ತಿದ್ದಂತೆ ವಯಸ್ಸಿಗೆ ಬಂದ ಯುವ ಪೀಳಿಗೆಯಲ್ಲಿ ಆಗುವ ಆಕರ್ಷಣೆಗಳನ್ನೇ ಪ್ರೀತಿ ಎಂದು ನಂಬಿ ಹೆತ್ತು ಹೊತ್ತು ಕಷ್ಟ ಪಟ್ಟು ಸಾಕಿ ಸಲುಹಿದ ಅಪ್ಪ ಅಮ್ಮನನ್ನೇ ಬಿಟ್ಟು ಹೋಗಿ ಜೀವನವನ್ನ ತಮ್ಮ ಕೈಯ್ಯಾರೆ ತಾವೇ ಹಾಳು ಮಾಡಿಕೊಂಡ ಅದೆಷ್ಟೋ ಘಟನೆಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ.. ಆದರೆ ಇಲ್ಲೊಬ್ಬ ಯುವತಿ ಪ್ರೀತಿಸಿ ಮನೆ ಬಿಟ್ಟು ಹೋಗಿ ಇಂದು ಅಪ್ಪ ಅಮ್ಮನಿಗೆ ಸಿಕ್ಕಿರುವ ಸ್ಥಿತಿ ನೋಡಿದರೆ ನಿಜಕ್ಕೂ ಮನಕಲಕುತ್ತದೆ.. ಹೌದು ಈಕೆಯ ಹೆಸರು ಪೂಜಾ ವಯಸ್ಸಿನ್ನು ಕೇವಲ ಇಪ್ಪತ್ತು ವರ್ಷ.. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಎಂಬ ಗ್ರಾಮದ ನಿವಾಸಿ.. ಚಿಕ್ಕ ಮಗುವಿನಂತೆ ಮುದ್ದಾಗಿರುವ ಈ ಹೆಣ್ಣು ಮಗಳ ಕಂಡರೆ ಅಪ್ಪ ಅಮ್ಮನಿಗೆ ಜೀವವೆನ್ನಬಹುದು..

ಮಗಳನ್ನು ಅಷ್ಟು ಪ್ರೀತಿಯಿಂದ ಸಾಕಿದ್ದರು.. ಕಳೆದ ಐದು ತಿಂಗಳ ಹಿಂದೆ ಮಗಳಿಗೆ ವಯಸ್ಸು ಇಪ್ಪತ್ತಾಯಿತೆಂದು ಮಗಳಿಗೆ ಒಳ್ಳೆ ಕಡೆ ಹುಡುಗನನ್ನು ನೋಡಿ ನಿಶ್ಚಿತಾರ್ಥವನ್ನು ಸಹ ಮಾಡಿದ್ದರು.. ಆದರೆ ಅದಾಗಲೇ ಇತ್ತ ಪೂಜಾ ಫೋನಿನಲ್ಲಿ ಪರಿಚಯವಾದ ಒಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದು ಬಿಟ್ಟಿದ್ದಳು.. ಹೌದು ಎದುರಿಗೆ ಕಂಡಿಲ್ಲ.. ಆತನನ್ನು ನೋಡಿಲ್ಲ‌‌.. ಕೇವಲ ಫೋನಿನಲ್ಲಿ ಮಾತನಾಡಿದ್ದನ್ನೇ ಪ್ರೀತಿ ಎಂದು ನಂಬಿಕೊಂಡು ಅಪ್ಪ ಅಮ್ಮನ ಪ್ರೀತಿಯನ್ನುಇ ಸಹ ಮರೆತುಬಿಟ್ಟಳು.. ಹೌದು ಸಕಲೇಶಪುರ ಮೂಲದ ದೀಪಕ್ ಎಂಬಾತ ಫೋನ್ ಮೂಲಕ ಪರಿಚಯವಾಗಿ ಆತನನ್ನೇ ಪ್ರೀತಿಸುತ್ತಿದ್ದಳು‌‌..

ಅತ್ತ ಮನೆಯಲ್ಲಿ ನೋಡಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪೂಜಾ ಅಪ್ಪ ಅಮ್ಮನ ಗೌರವದ ಬಗ್ಗೆ ಆಲೋಚಿಸದೇ ವಯಸ್ಸಿನ ಆಕರ್ಷಣೆಯನ್ನೇ ಪ್ರೀತಿ ಎಂದು ತಿಳಿದು ಮನೆ ಬಿಟ್ಟು ಬಂದು ಕಳೆದ ಮಾರ್ಚ್ ಇಪ್ಪತ್ತರಂದು ದೀಪಕ್ ಜೊತೆ ಮದುವೆಯಾಗಿದ್ದಳು.. ಅಪ್ಪ ಅಮ್ಮನನ್ನು ಬಿಟ್ಟು ಬಂದು ಪ್ರೀತಿಸಿದ ಹುಡುಗನ ಜೊತೆ ಮದುವೆಯಾದ ಪೂಜಾ ತನ್ನ ಬದುಕು ಸ್ವರ್ಗವಾಗಿರುತ್ತದೆ ಅಂದುಕೊಂಡಿದ್ದಳು.. ಆದರೆ ಅಲ್ಲಿ ನಡೆದದ್ದೇ ಬೇರೆ.. ಗುರುತು ಪರಿಚಯ ಇಲ್ಲದವನನ್ನು ನಂಬಿ ಬಂದದ್ದಕ್ಕೆ ಅವಳ ಬದುಕು ಮುಳ್ಳಿನ ಹಾಸಿಗೆಯಾಗಿತ್ತು.. ದೀಪಕ್ ಹಾಗೂ ಆತನ ಮನೆಯವರು ನಿತ್ಯನರಕದರ್ಶನ ಮಾಡಿಸುತ್ತಿದ್ದರಂತೆ.. ಅತ್ತ ಹೆತ್ತವರನ್ನು ಬಿಟ್ಟು ಬಂದು ಜೀವನ ಹಾಳು ಮಾಡಿಕೊಂಡೆ ಎಂದು ಪೂಜಾ ಕೊರಗಿ ಕೊರಗಿ ಕಣ್ಣೀರಿಟ್ಟು ಕೊನೆಗೆ ದುಡುಕಿ ಬೇರೆಯದ್ದೇ ನಿರ್ಧಾರ ತೆಗೆದುಕೊಂಡು ಬಿಟ್ಟಳು..

ಹೌದು ಜೀವನದ ಬಗ್ಗೆ ನೂರಾರು ಕನಸು ಕಂಡು ದೀಪಕ್ ನನ್ನೇ ನಂಬಿ ಬಂದಿದ್ದ ಪೂಜಾ ಅತ್ತ ಹೆತ್ತವರೂ ಇಲ್ಲ ಇತ್ತ ಪ್ರೀತಿಸಿದ ಹುಡುಗನಿಂದ ಒಳ್ಳೆಯ ಜೀವನವೂ ಇಲ್ಲ ಎಂದು ಇದೇ ಕಾರಣಕ್ಕೆ ಮನನೊಂದು ಇಂದು ಹೇಮಾವತಿ ನದಿಗೆ ಹಾರಿ ಜೀವ ಕಳೆದುಕೊಂಡುಬಿಟ್ಟಳು.. ಅತ್ತ ವಿಚಾರ ತಿಳಿದು ಹೇಮಾವತಿ ನದಿ ಬಳಿ ಬಂದಿರುವ ಪೂಜಾಳ ತಂದೆ ತಾಯಿಯ ಸಂಕಟ ನೋವು ಆಕ್ರಂದನ ಯಾವ ಶತ್ರುವಿಗೂ ಬಾರದಿರಲಿ ಎನ್ನುವಂತಿತ್ತು.. ಹೌದು ಮಗಳನ್ನು ಕಳೆದುಕೊಂಡು ನದಿಯ ಬಳಿಯೇ ಬದುಕಿ ಬರುವಳಾ ಎಂದು ಕೂಗಿಕೊಳ್ಳುತ್ತಿದ್ದರು.. ಮಗಳ ಈ ಸ್ಥಿತಿಗೆ ದೀಪಕ್ ಕಾರಣ ಎಂದು ತಿಳಿಸಿದ್ದು ಇತ್ತ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪೂಜಾಳಿಗಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ..

ಪ್ರೀತಿ ಮಾಡೋದು ತಪ್ಪಲ್ಲ.. ಆದರೆ ಇನ್ನೂ ಸಹ ತಿಳುವಳಿಕೆ ಬಾರದ ವಯಸ್ಸಿನಲ್ಲಿ ಆಗುವ ಆಕರ್ಷಣೆಗಳನ್ನೇ ಪ್ರೀತಿ ಎಂದುಕೊಂಡು ದಯವಿಟ್ಟು ಯಾರೂ ಸಹ ಈ ರೀತಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ.. ಜೀವನದಲ್ಲಿ ಮೊದಲು ಒಂದು ಹಂತಕ್ಕೆ ಬಂದು ನಿಲ್ಲಿ.. ಆನಂತರ ಪ್ರೀತಿ ಪ್ರೇಮ ಎಲ್ಲವೂ ಸರಿ.. ಅದೂ ಸಹ ಹೆತ್ತವರನ್ನು ಒಪ್ಪಿಸಿ ಮದುವೆಯಾಗಿ.. ಹೆತ್ತವರಿಲ್ಲದೇ ಅವರಿಗೆ ನೋವು ಕೊಟ್ಟು ಜೀವನದಲ್ಲಿ ಎಂದೂ ಸಹ ಸಂತೋಷವಾಗಿರಲು ಸಾಧ್ಯವಿಲ್ಲ.. ಈಗ ಪೂಜಾಳ ಹೆತ್ತವರ ಸಂಕಟ ನೋಡಿದರೆ ಮನಕಲಕುತ್ತದೆ.. ಯಾರಿಗೂ ಅಂತಹ ನೋವು ಬಾರದಿರಲಿ.. ಪೂಜಾಳಿಗೆ ಆದ ಸ್ಥಿತಿ ಯಾರಿಗೂ ಆಗದಿರಲಿ..