ನೀನೆ ಬೇಕು ಎಂದು ಹಾಸನದಲ್ಲಿ ಒಬ್ಬನಿಗಾಗಿ ಇಬ್ಬರು ಹುಡುಗಿಯರ ಕಿತ್ತಾಟ.. ಕೊನೆಗೆ ಆ ಹುಡುಗ ಆಯ್ಕೆ ಮಾಡಿಕೊಂಡದ್ದು ಯಾರನ್ನು ಗೊತ್ತಾ.. ಶಾಕ್ ಆದ ಗ್ರಾಮಸ್ಥರು..

0 views

ದಿನ ಬೆಳಗೆದ್ದರೆ ಒಂದಿಲ್ಲೊಂದು ಪ್ರೇಮ ಕತೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾದ್ಯಮಗಳಲ್ಲಿ ಪತ್ರಿಕೆ ಗಳಲ್ಲಿ ನೋಡುತ್ತಿರುತ್ತೇವೆ.. ಯುವಕ ಯುವತಿ ಪ್ರೀತಿಯಲ್ಲಿ ಬಿದ್ದು ಮದುವೆಯಾದದ್ದೋ ಅಥವಾ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಂಡದ್ದೋ ಅಥವಾ ಮತ್ತಿನ್ನೊಂದು ಸುದ್ದಿಗಳು ಸಾಮಾನ್ಯ.. ಆದರೆ ಇಲ್ಲೊಬ್ಬ ಮಹಾಶಯ ಒಂದೇ ಬಾರಿಗೆ ಇಬ್ಬರು ಹೆಣ್ಣು ಮಕ್ಕಳನ್ನು ಪ್ರೀತಿಸಿ ಕೊನೆಗೆ ಈ ವಿಚಾರ ಇಬ್ಬರೂ ಹೆಣ್ಣು ಮಕ್ಕಳಿಗೆ ತಿಳಿದರೂ ಸಹ ತಮಗೆ ಮೋಸ ಮಾಡಿದ ಎಂಬ ಒಂದಿಷ್ಟೂ ಕೋಪವೂ ಇಲ್ಲದೇ ನನಗೆ ನೀನೆ ಬೇಕು ಎಂದು ದೊಡ್ಡ ಪಂಚಾಯಿತಿ ನಡೆದ ವಿಚಿತ್ರ ಘಟನೆ ಹಾಸನದಲ್ಲಿ‌ ನಡೆದಿದ್ದು ಕೊನೆಗೆ ಈ ಸ್ಟೋರಿ ಯಾರೂ ಊಹಿಸಿರದ ತಿರುವನ್ನು ಪಡೆದುಕೊಂಡಿದೆ.. ಹೌದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.. ಹೌದು ಅದೇ ಗ್ರಾಮದ ಯುವಕ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಪಕ್ಕದೂರಿನ ಯುವತಿಯೊಬ್ಬಳನ್ನು ಪ್ರೀತಿ ಮಾಡಿದ್ದಾನೆ.. ಒಬ್ಬಳು ಸಾಲದೆಂಬಂತೆ ಅದೇ ಸಮಯದಲ್ಲಿ ಮತ್ತೊಂದು ಪಕ್ಕದ ಊರಿನ ಮತ್ತೊಂದು ಯುವತಿಯನ್ನೂ ಸಹ ಪ್ರೀತಿಸಿದ್ದಾನೆ.. ಇಬ್ಬರನ್ನೂ ಒಂದೇ ಸಮಯದಲ್ಲಿ ಪ್ರೀತಿಸಿ ಹೀಗೆ ತನ್ನ ಪ್ರೀತಿಯ ಕತೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದನು..

ಆದರೆ ಕೊನೆಗೆ ಈ ವಿಚಾರ ಹೇಗೋ ಇಬ್ಬರೂ ಯುವತಿಯರಿಗೆ ತಿಳಿದು ಹೋಗಿದೆ.. ಹೌದು ಮದುವೆಯಾಗುವ ವಿಚಾರವನ್ನು ಇಬ್ಬರೂ ಸಹ ಮುಂದಿಟ್ಟಿದ್ದಾರೆ.. ನನ್ನನ್ನು ಬಿಟ್ಟು ಮತ್ತೊಬ್ಬಳನ್ನು ಪ್ರೀತಿಸಿದ ಎಂಬ ಕೋಪ ಸ್ವಲ್ಪವೂ ಇಲ್ಲದೇ ನನ್ನನ್ನೇ ಮದುವೆಯಾಗಬೇಕು.. ನನ್ನನ್ನೇ ಮದುವೆಯಾಗಬೇಕು ಎಂದು ಇಬ್ಬರೂ ಸಹ ಕಿತ್ತಾಡಿಕೊಂಡಿದ್ದಾರೆ.. ಆದರೆ ಅತ್ತ ಯುವಕ‌ ಮಾತ್ರ ಇಬ್ಬರ ನಡುವೆ ಸಿಲುಕಿ ಯಾರನ್ನು ಮದುವೆಯಾಗಲಿ ಎಂದು ಯೋಚಿಸುತ್ತಾ ಒಬ್ಬರ ಹೆಸರನ್ನು ನಿಖರವಾಗಿ ಹೇಳಲಾಗದಷ್ಟು ಇಬ್ಬರಿಂದಲೂ ಅಷ್ಟು ಪ್ರೀತಿಯನ್ನೂ ಸಹ ಪಡೆದಿದ್ದ ಎಂಬುದು ಮೇಲ್ನೋಟಕ್ಕೆ ಕಾಣುತಿತ್ತು.. ಆದರೆ ಈ ವಿಚಾರ ದೊಡ್ಡದಾಯಿತು.. ಕೊನೆಗೆ ಇದನ್ನು ನಿರ್ಧಾರ ಮಾಡಲು ಊರಿನಲ್ಲಿ ಹಿರಿಯರು ಪಂಚಾಯಿತಿಯನ್ನೂ ಸಹ ಕರೆದರು.. ಯುವತಿಯರನ್ನು ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಹ ಇಬ್ಬರೂ ಸಹ ಆತನನ್ನು ಮದುವೆ ಮಾಡಿಕೊಳ್ಳಲೇ ಬೇಕು ಎಂದು ಪಟ್ಟು ಹಿಡಿದರು.. ಇತ್ತ ಹುಡುಗ ಮಾತ್ರ ಇಂತವಳು ಬೇಕು ಅಂತ ಧೈರ್ಯವಾಗಿ ಹೇಳಲೇ ಇಲ್ಲ..

ಕೊನೆಗೆ ಆತನನ್ನು ಪ್ರೀತಿಸಿದ ಒಬ್ಬ ಯುವತಿ ಇವನೇ ಬೇಕು ಅಂತ ಜೀವ ಕಳೆದುಕೊಳ್ಳಲು ಸಹ ಮುಂದಾಗಿ ಕೊನೆಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲಾಗಿ ಆ ಹುಡುಗಿ ಉಳಿದುಕೊಂಡಳು.. ಆದರೆ ಇಷ್ಟೆಲ್ಲಾ ನಡೆದರೂ ಸಹ ಇಬ್ಬರೂ ಆ ಹುಡುಗನೇ ಬೇಕೆಂದು ಪಟ್ಟು ಹಿಡಿದರು.. ಆದರೆ ಇವರಿಬ್ಬರ ಕತೆಯನ್ನು ಇತ್ಯರ್ಥ ಮಾಡುವಲ್ಲಿ ಹಿರಿಯರು ಸುಸ್ತಾದರು.. ಮತ್ತೆ ಆ ಯುವತಿ ಆಸ್ಪತ್ರೆಯಿಂದ ಬಂದ ಬಳಿಕ ಮತ್ತೆ ಪಂಚಾಯಿತಿ ಕರೆಯಲಾಯಿತು.. ಆಗಲೂ ಸಹ ಸಮಸ್ಯೆ ಬಗೆ ಹರಿಯಲಿಲ್ಲ.. ಕೊನೆಗೆ ಗ್ರಾಮದ ಹಿರಿಯರು ಟಾಸ್ ಹಾಕುವ ನಿರ್ಧಾರಕ್ಕೆ ಬಂದರು.. ಹೌದು ಆಶ್ಚರ್ಯವಾದರೂ ನಂಬಲೇ ಬೇಕಾದ ಸತ್ಯ. ಟಾಸ್ ಹಾಕಿ ಒಂದು ಹುಡುಗನಿಗೆ ಹುಡುಗಿಯನ್ನು ನಿರ್ಧಾರ ಮಾಡುವ ಹಂತಕ್ಕೆ ಬಂದು ನಿಂತಿದೆ ಎಂದರೆ ಅವರಿಬ್ಬರ ಪ್ರೀತಿ ಅದ್ಯಾವ ಮಟ್ಟದ್ದು ಭಗವಂತನೇ ಬಲ್ಲ..

ಇನ್ನು ಕೊನೆಗೆ ಹಿರಿಯರು ಟಾಸ್ ಹಾಕಿ ಯಾವ ಹುಡುಗಿ ನಿರ್ಧಾರ ಆಗತ್ತೋ ಅದೇ ಹುಡುಗಿಯನ್ನು ಮದುವೆ ಆಗಬೇಕು.. ಟಾಸ್ ಹಾಕಿದ ನಂತರ ಸೋತವರು ಸುಮ್ಮನೆ ಮನೆಗೆ ಹೋಗಬೇಕು.. ಮತ್ತೆ ಯಾವುದೇ ದೂರು ಕೊಡುವ ಹಾಗಿಲ್ಲ.. ಮತ್ತೆ ಬಂದು ಮದುವೆ ಆಗು ಅಂತ ಕೇಳುವ ಹಾಗಿಲ್ಲ ಎಂದು ಇಬ್ಬರಿಗೂ ಇಬ್ಬರ ಕುಟುಂಬದವರಿಗೂ ತಿಳಿಸಿದರು.. ಯಾರಿಗೆ ಅದೃಷ್ಟ ಇರತ್ತೋ ಅವರು ಮದುವೆಯಾಗ್ತಾರೆ.. ಟಾಸ್ ಆದ ಬಳಿಕ ಯಾರೂ ಸಹ ಮರು ಮಾತನಾಡುವಂತಿಲ್ಲ ಎಂದರು.. ಆಯಿತು ಎಂದು ಎಲ್ಲರೂ ಒಪ್ಪಿಗೆ ಕೊಟ್ಟು ಟಾಸ್ ಹಾಕಲು ಶುಕ್ರವಾರ ಅಂದರೆ ನಿನ್ನೆಗೆ ದಿನ ನಿಗಧಿ ಮಾಡಿದ್ದರು.. ಆದರಂತೆ ಎಲ್ಲರೂ ಸಹ ಆಗಮಿಸಿದರು. ಟಾಸ್ ನಲ್ಲಿ ಯಾವ ಹುಡುಗಿ ನಿರ್ಧಾರ ಆಗುವಳೋ ಎಂದು ಎಲ್ಲರೂ ಸಹ ಕಾತುರರಾಗಿ ಕಾಯುತ್ತಿದ್ದರು.. ಇಬ್ಬರು ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಆತಂಕದ ಜೊತೆ ಕಾತುರತೆ ಇತ್ತು. ಆದರೆ ಇನ್ನೇನು ಟಾಸ್ಕ್ ಹಾಕಬೇಕು ಎನ್ನುವ ಕೊನೆ ಘಳಿಗೆಯಲ್ಲಿ ಹುಡುಗ ಅಲ್ಲಿಂದ ಕಾಲ್ಕಿತ್ತಿದ್ದಾನೆ.. ಹೌದು ಆತನನ್ನು ಮತ್ತೆ ಕರೆಸಿ ಮಾತನಾಡಲಾಗಿ ಆತ ನನಗಾಗಿ ಜೀವ ಕಳೆದುಕೊಳ್ಳಲು ಮುಂದಾದ ಹುಡುಗಿಯೇ ನನ್ನ ಹೆಂಡತಿ ಎಂದು ನೇರವಾಗಿ ಹೇಳಿಬಿಟ್ಟಿದ್ದಾನೆ.. ಇದರಿಂದ ಆ ಯುವತಿಗೆ ದಿಲ್ ಖುಷ್ ಆದರೆ ಮತ್ತೊಬ್ಬ ಯುವತಿ ಸೀದಾ ಬಂದು ಯುವಕನ ಕೆನ್ನೆಗೆ ಸರಿಯಾಗಿ ಕೊಟ್ಟಿದ್ದಾಳೆ..

ಕೊಟ್ಟು ಆತನಿಗೆ ಮಂಗಳಾರತಿ ಮಾಡಿ ಅಲ್ಲಿಂದ ಹೊರ ನಡೆದಿದ್ದಾಳೆ.. ಹೋದರೆ ಹೋಯಿತು ಸಧ್ಯ ಸಮಸ್ಯೆ ಬಗೆಹರಿಯಿತು ಎಂದು ಯುವಕ ಇಬ್ಬರಲ್ಲಿ ತಾನು ಹೆಚ್ಚಾಗಿ ಪ್ರೀತಿಸಿದ ಹುಡುಗಿಯನ್ನು ಕೈ ಹಿಡಿದಿದ್ದು ಆ ಯುವತಿ ಸಹ ಸಂತೋಷವಾಗಿ ಮದುವೆಯಾಗಿದ್ದಾಳೆ.. ಆದರೆ ಇಬ್ಬರೂ ಸಹ ಸಮಸ್ಯೆ ಬಗೆ ಹರಿಯಿತೆಂದು ಸಂತೋಷವಾಗಿ ಸಂಸಾರ ಮಾಡಿಕೊಂಡು ಮುಂದೆ ಸಾಗಿದರೆ ಒಳ್ಳೆಯದು.. ಆದರೆ ಮುಂದೊಂದು ದಿನ ಇಬ್ಬರನ್ನು ಪ್ರೀತಿಸಿದ ವಿಚಾರವಾಗಿ ಮತ್ತೆ ಈ ಜೋಡಿಯ ನಡುವೆ ಮನಸ್ತಾಪಗಳು ಮೂಡದೇ ಜೀವನ ನೆಮ್ಮದಿಯಾಗಿರಲಿ.. ಆದರೆ ಇಬ್ಬರನ್ನು ಪ್ರೀತಿಸಿದ ಈತನ ಧೈರ್ಯ ಮೆಚ್ಚಲೇ ಬೇಕು.. ಆದರೆ ತನನ್ನು ಬಿಟ್ಟು ಮತ್ತೊಬ್ಬಳನ್ನು ಪ್ರೀತಿಸಿದಾಗ ಆತನ ಬಗ್ಗೆ ಕೋಪ ಮಾಡಿಕೊಳ್ಳದೇ ಆತನೇ ಬೇಕು ಅಂತ ಪಟ್ಟು ಹಿಡಿದಿದ್ದ ಕಂಡು ನಮ್ಮ ಗಂಡ್ ಹೈಕಳು ನಮಗೆ ಒಬ್ಬರೇ ಸಿಗ್ತಿಲ್ಲಾ.. ಈತನಿಗಾಗಿ ಇಬ್ಬಿಬ್ಬರು ಬೇಕು ಅಂತಾವ್ರಲ್ಲಾ ಗುರು ಅನ್ನೋದಂತೂ ಸತ್ಯ..