ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಅಳಿಸಿ ಅಭಿವೃದ್ಧಿಯ ಮುನ್ನುಡಿ ಬರೆಯುತ್ತಿರುವ ಯುವ ಶಾಸಕ.. ಇಂತವರು ಬೇಕು ರಾಜಕೀಯಕ್ಕೆ..

0 views

ರಾಜಕೀಯ ಪಕ್ಷ ಯಾವುದಾದರೂ ಆಗಲಿ.. ರಾಜಕೀಯಕ್ಕೆ ಯುವಕರು ಕಾಲಿಟ್ಟು ಒಳ್ಳೆಯ ಕೆಲಸಗಳನ್ನು‌ ಮಾಡಿದಾಗ ನಿಜಕ್ಕೂ ಆಗೋ ಸಂತೋಷವೇ ಬೇರೆ.. ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೇ ಈಗಲೂ ಎಲೆ ಮರೆ ಕಾಯಿಯಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಸಾಕಷ್ಟು ಪ್ರಾಮಾಣಿಕ ರಾಜಕಾರಣಿಗಳು ನಮ್ಮ ನಡುವೆ ಇರೋದು ಕಂಡಾಗ ಅವರುಗಳ ಬಗ್ಗೆ ಬರೆಯದೇ ಇದ್ದರೆ ಬಹುಶಃ ನಮ್ಮ ವೃತ್ತಿ ಧರ್ಮವೇ ನಮ್ಮ ಒಪ್ಪದೆನ್ನಬಹುದು.. ಹೌದು ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿ ಕೊಂಡಿರುವ ಹೆಚ್ ಡಿ ಕೋಟೆ ತಾಲೂಕಿನ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿರುವ ಯುವ ಶಾಸಕರಾದ ಅನಿಲ್ ಚಿಕ್ಕಮಾದು ಅವರ ಕಾರ್ಯ ವೈಖ್ಯರಿಗಳ ಕಂಡು ಇದು ಅವರ ಕರ್ತವ್ಯ ಎನಿಸಿದರೂ ಸಹ ಒಂದು ಕಡೆ ನಿಜಕ್ಕೂ ಆಶ್ಚರ್ಯವೂ ಆಯಿತು.. ಯಾವುದೇ ಮಾದ್ಯಮದ ಮುಂದೆ ತೋರ್ಪಡಿಕೆಗೆ ಮಾತ್ರ ಕೆಲಸ ಮಾಡದೇ ಇದು ನನ್ನ ಕರ್ತವ್ಯ ಎಂದು ಸುಮ್ಮನೆ ತಮ್ಮ ಪಾಡಿಗೆ ತಾವು ಹೆಚ್ ಡಿ ಕೋಟೆಯ ಅಭಿವೃದ್ಧಿಗಾಗಿ ಪರಿಶ್ರಮಿಸುತ್ತಿರುವುದು ನಿಜಕ್ಕೂ ಮೆಚ್ಚುವ ವಿಚಾರ..

ಅದರಲ್ಲೂ ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಂಪನ್ಮೂಲ ಭರಿತವಾದ ಹೆಗ್ಗಡದೇವನಕೋಟೆಯನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ಸಂಪೂರ್ಣ ತಯಾರಿ ನಡೆಸಿ ಸರ್ಕಾರಕ್ಕೆ ದಾಖಲೆಗಳ ಸಮೇತ ಮನವಿಯನ್ನೂ ಸಹ ಸಲ್ಲಿಸಿದ್ದಾರೆ.. ಬಹಳಷ್ಟು ಜನನಾಯಕರು ಅಧಿವೇಶನಗಳನ್ನು ಸಮಯ ಕಳೆಯಲು ಬಳಸುವರಷ್ಟೇ ಎನ್ನುವ ಅಭಿಪ್ರಾಯ ಜನಸಾಮಾನ್ಯರಲ್ಲಿ ಇರೋದು ಸುಳ್ಳಲ್ಲ.. ಆದರೆ ಈ ನಡುವೆ ತಮ್ಮ ಜವಾಬ್ದಾರಿ ಅರಿತ.. ತಮ್ಮ ಕರ್ತವ್ಯದ ಮೇಲೆ ಪ್ರೀತಿ ಇರುವ ಕೆಲ ಜನ ಪ್ರತಿನಿಧಿಗಳು ತಮಗೆ ಸಿಗುವ ಕೆಲವೇ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಸರ್ಕಾರದ ಗಮನ ಸೆಳೆದು ತಾಲೂಕಿನ ಅಭಿವೃದ್ಧಿಗೆ ಶತಾಯಗತಾಯ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವ ವಿಚಾರ..

ಹೌದು ಕಬಿನಿ, ನುಗು, ತಾರಕ, ಹೆಬ್ಬಾಳ ಎಂಬ ನಾಲ್ಕು ಜಲಾಶಯಗಳು, ಕಾಕನಕೋಟೆ ಯಂತಹ ರಮಣೀಯ ಅರಣ್ಯ ಪ್ರದೇಶ.. ಇನ್ನೂ ಅನೇಕ ವಿಶೇಷತೆಗಳಿಂದ ಕೂಡಿರುವ ಹೆಚ್ ಡಿ ಕೋಟೆಗೆ ಅದ್ಯಾಕೋ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಮಾತ್ರ ಹೋಗಲಾಡಿಸಲು ಯಾರಿಂದಲೂ ಆಗಿರಲಿಲ್ಲ.. ಆದರೆ ಈಗ ಆ ಹಣೆಪಟ್ಟಿ ಅಳಿಸಬೇಕೆಂಬ ಹೆಚ್ ಡಿ ಕೋಟೆ ಜನರ ಕನಸು ಬಹುಶಃ ಈಗಿನ ಯುವ ಶಾಸಕರಾದ ಅನಿಲ್ ಚಿಕ್ಕಮಾದು ಅವರಿಂದ ನನಸಾಗಬಹುದಾಗಿದೆ.. ಇದಕ್ಕೆ ಕಾರಣ ಆ ವ್ಯಕ್ತಿ ತಾಲೂಕಿಗಾಗಿ ಮಾಡುತ್ತಿರುವ ಕೆಲಸಗಳು.. ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ರೀತಿ..

ಹೌದು ಮಾದ್ಯಮದ ಮುಂದೆ ಶೋ ಕೊಡುವ ಶೋಕಿ ಇಲ್ಲದ ಈ ಯುವ ಶಾಸಕರ ಕೆಲಸ ತಿಳಿದು ಅದನ್ನು ಮೆಚ್ಚಿಕೊಳ್ಳದೇ ಇದ್ದರೆ ಅದು ನಿಜಕ್ಕೂ ತಪ್ಪಾಗಬಹುದು.. ತಮ್ಮ ದಿನ ನಿತ್ಯದ ಸಾರ್ವಜನಿಕ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಪಾರದರ್ಶಕವಾಗಿ ತಿಳಿಸುವ ಅನಿಲ್ ಚಿಕ್ಕಮಾದು ಅವರು ತೊಂದರೆ ಅಂತ ಬಂದ ಸಾರ್ವಜನಿಕರ ಅಹವಾಲುಗಳನ್ನು ಅಷ್ಟೇ ತಾಳ್ಮೆ ಇಂದ ಕೇಳಿ ಅದನ್ನು ಬಗೆಹರಿಸುವ ಪ್ರಯತ್ನ ಮಾಡುವುದು ನಿಜಕ್ಕೂ ಒಬ್ಬ ಜನಪ್ರತಿನಿಧಿಗೆ ಇರಬೇಕಾದ ಕರ್ತವ್ಯ ಪ್ರಜ್ಞೆಯನ್ನು ತೋರುತ್ತದೆ.. ಸರ್ಕಾರಕ್ಕೆ ತಮ್ಮ ತಾಲೂಕಿನ ಸಮಸ್ಯೆಗಳ ಬಗ್ಗೆ ಸುಮ್ಮನೆ ಹೇಳದೇ.. ಆ ಬಗ್ಗೆ ಎಲ್ಲಾ ಫೋಟೋಗಳು ದಾಖಲೆಗಳನ್ನು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ರೀತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಅದಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ಪಡೆಯುವ ರೀತಿ ನಿಜಕ್ಕೂ ಇವರ ಕರ್ತವ್ಯ ನಿಷ್ಠೆಯನ್ನು ತೋರುತ್ತದೆ.. ಅಷ್ಟೇ ಅಲ್ಲದೇ ಈ ಬಾರಿಯ ಸದನದ ಅಧಿವೇಶನದಲ್ಲಿ ಸಿಕ್ಕ ಅವಕಾಶ ಬಳಸಿಕೊಂಡು ಹೆಚ್ ಡಿ ಕೋಟೆಯನ್ನು ಪ್ರವಾಸಿ ಕೇಂದ್ರವನ್ನಾಗಿ ಘೋಷಿಸಿ ಅದನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು ಅನಿಲ್ ಚಿಕ್ಕಮಾದು ಅವರು ವಿವರಿಸಿದ ರೀತಿಗೆ ಅದೇ ಕ್ಷಣ ಸ್ಪಂದಿಸಿದ ಸಚಿವರಾದ ಆರ್ ಅಶೋಕ್ ಅವರು ಅನಿಲ್ ಚಿಕ್ಕಮಾದು ಅವರ ಮನವಿಯನ್ನು ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದ್ದು ಅನಿಲ್ ಚಿಕ್ಕಮಾದು ಅವರ ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸಹ ವ್ಯಕ್ತ ಪಡಿಸಿದರು..

ಅದಕ್ಕೂ ಮಿಗಿಲಾಗಿ ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆಯ ನಿರ್ವಹಣೆ.. ಮಕ್ಕಳಿಗಾಗಿ ಉಚಿತ ಶಿಕ್ಷಣ.. ಅದೂ ಸಹ ಹೈ ಟೆಕ್ ವ್ಯವಸ್ಥೆ ಇರುವ ವಸತಿ ಶಾಲೆಗಳ ನಿರ್ವಹಣೆ.. ಪ್ರತಿಯೊಂದರ ಬಗ್ಗೆಯೂ ಕಾಳಜಿ ತೋರಿ ಏನೇ ತೊಂದರೆ ಆದರೂ ಆ ಕ್ಷಣವೇ ಈ ವ್ಯಕ್ತಿ ಸ್ಪಂದಿಸುವ ರೀತಿ ನೋಡಿದರೆ ಹೆಚ್ ಡಿ ಕೋಟೆ ಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ಖಚಿತವೆನ್ನಬಹುದು.. ಒಳ್ಳೆದಾಗಲಿ.. ಇವರ ಈ ಕೆಲಸಗಳು ಹೆಚ್ ಡಿ ಕೋಟೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವಂತಾಗಲಿ.. ಇವರ ಈ ಪ್ರಯತ್ನಗಳಿಂದ ಎಲ್ಲಾ ತಾಲೂಕುಗಳಂತೆ ಮುಂದುವರೆದ ತಾಲೂಕುಗಳಲ್ಲಿ ಹೆಚ್ ಡಿ ಕೋಟೆಯೂ ಒಂದಾಗಲಿ..