ತಲೆಯಲ್ಲಿನ ಕೂದಲು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವಂಥದ್ದು. ಆದರೆ ನಮಗೆ ಆ ಕೂದಲೇ ಇಲ್ಲದಿದ್ದರೆ? ಹೌದು ನಾವಿಂದು ಮಾತನಾಡುತ್ತಿರುವ ವಿಷಯ ಕೂದಲು ಉದುರುವ ಬಗ್ಗೆ. ಕೂದಲು ಹೆಚ್ಚು ಹೆಚ್ಚು ಉದುರಿ ಹೊಸ ಕೂದಲು ಹುಟ್ಟದೆ ತಲೆ ಬೋಳಾಗುವ ಸಾಧ್ಯತೆಗಳಿರುತ್ತವೆ. ಇದಕ್ಕೆ ನಮ್ಮ ಸುತ್ತಲಿನ ಪರಿಸರ, ಪ್ರದೂಷಣೆ, ಧೂಳು, ನಮ್ಮ ಆಧುನಿಕ ಜೀವನ ಶೈಲಿ ಅಥವಾ ಕಾಲಕ್ಕೆ ಸರಿಯಾಗಿ ಕೂದಲಿನ ಆರೈಕೆ ಮಾಡಿಕೊಳ್ಳದೇ ಇರುವುದು ಸಹ ಆಗಿರಬಹುದು. ಹೀಗಾಗಿ ನಾವು ದಿನಕಳೆದಂತೆ ನಮ್ಮ ಕೂದಲಿನ ಸೌಂದರ್ಯವನ್ನು ಕಳೆದುಕೊಳ್ಳುತ್ತಾ ಬರುತ್ತೇವೆ.
ಆದರೆ ಇನ್ನು ಈ ವಿಷಯದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.
ಹೊಸ ಕೂದಲು ಹುಟ್ಟಿ, ಕೂದಲುದುರುವುದು ಕಡಿಮೆಯಾಗಿ ಕೂದಲಿನ ತರ ಸಮಸ್ಯೆಗಳೂ ನಿವಾರಣೆಯಾಗುವಂತಹ ಒಂದು ಅದ್ಭುತ ಮನೆ ಮದ್ದು ಒಂದನ್ನು ನಿಮಗೆ ನಾವಿಲ್ಲಿ ತಿಳಿಸುತ್ತಿದ್ದೇವೆ. ಈರುಳ್ಳಿ ಎಣ್ಣೆ: ಆ ಮನೆಮದ್ದು ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದಾಗಿರುವಂಥ ಈರುಳ್ಳಿ ಎಣ್ಣೆ ಇದಕ್ಕೆ ಕೇವಲ ಎರಡೇ ವಸ್ತುಗಳು ಸಾಕು. ಈರುಳ್ಳಿ ಹಾಗೂ ತೆಂಗಿನ ಎಣ್ಣೆ.
ಈರುಳ್ಳಿ ಎಣ್ಣೆ ಮಾಡುವ ವಿಧಾನ : ಮೊದಲು ಎರಡು ದೊಡ್ದಗಾತ್ರದ ಕೆಂಪಗಿನ ಈರುಳ್ಳಿಯನ್ನು ತೆಗೆದುಕೊಳ್ಳಿ. ಈ ಈರುಳ್ಳಿ ಹೆಚ್ಚು ಗಾಟಾಗಿರುತ್ತದೆ. ಈ ಈರುಳ್ಳಿಯನ್ನು ಸಿಪ್ಪೆ ತೆಗೆದು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಬಟ್ಟೆಯಿಂದ ಒರೆಸಿ ನೀರಿನಂಶ ಇಲ್ಲದಂತೆ ನೋಡಿಕೊಳ್ಳಿ. ಈರುಳ್ಳಿಯನ್ನು ಹೆಚ್ಚಿಕೊಳ್ಳಿ. ಹೆಚ್ಚಿದ ಈರುಳ್ಳಿಯನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ, ಅದಕ್ಕೆ ಎರಡು ಚಮಚ ಶುದ್ಧವಾದ ತೆಂಗಿನ ಎಣ್ಣೆಯನ್ನು ಹಾಕಿ. ಇದನ್ನು ರುಬ್ಬುವಾಗ ಸ್ವಲ್ಪವೂ ನೀರನ್ನು ಬಳಸಬೇಡಿ. ಚೆನ್ನಾಗಿ ನುಣುಪಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
ನಂತರ ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ. ರುಬ್ಬಿದ ಈ ಪೇಸ್ಟ್ ನ್ನು ಹಾಕಿ ಚೆನ್ನಾಗಿ ಕುದಿಸಿ. ಈ ಎಣ್ಣೆಯನ್ನು ಹದಿನೈದು ದಿನಗಳವರೆಗೆ ಶೇಖರಿಸಿ ಇಡಬಹುದಾದ್ದರಿಂದ ಹೆಚ್ಚು ಎಣ್ಣೆಯನ್ನೇ ಬಳಸಿ. ಮಿಶ್ರಣವು ಕುದಿದು ಅದರ ಬಣ್ಣ ಬದಲಾಗುವವರೆಗೆ ಕುದಿಸಿ. ನಂತರ ಇದನ್ನು ಸಂಪೂರ್ಣವಾಗಿ ಆರಲು ಬಿಡಿ. ಆರಿದ ಎಣ್ಣೆಯನ್ನು ಒಂದು ಗಾಜಿನ ಬಾಟಲಿಗೆ ಸೋಸಿ. ಈ ಎಣ್ಣೆಯನ್ನು ಹದಿನೈದು ದಿನಗಳವರೆಗೆ ಇಡಬಹುದಾದ್ದು, ಯಾರು ಬೇಕಾದರೂ ಬಳಸಬಹುದು. ನೀವು ನಿರಂತರವಾಗಿ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿತ್ತಾ ಬಂದರೆ ನಿಮ್ಮ ಕೂದಲು ಕಳೆದುಕೊಂಡ ಸೌಂದರ್ಯವನ್ನು ಮತ್ತೆ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ