ಅಪ್ಪನ ಅಂತ್ಯ ಸಂಸ್ಕಾರ ನೀವೆ ಮಾಡಿ.. ಆದರೆ ಆ ಹಣವನ್ನು ನಾನಿರುವ ಜಾಗಕ್ಕೆ ತಂದು ಕೊಡಿ ಎಂದ ಮಗ.. ಆತನ ಅಪ್ಪ ಇಟ್ಟಿದ್ದ ಹಣವೆಷ್ಟು ಗೊತ್ತಾ?

0 views

ಕೊರೊನಾದಿಂದಾಗಿ ಜನರ ಜೀವನ ಬೀದಿಗೆ ಬಿದ್ದಿದೆ.. ಆರೋಗ್ಯ ಎಂಬುದು ಬಂದಮೇಲೆ ಕೆಲವೊಬ್ಬರ ವಿಚಾರದಲ್ಲಿ ಮಾನವೀಯತೆ ಹೊರಬಂದರೆ ಮತ್ತೆ ಕೆಲವರ ವಿಚಾರದಲ್ಲಿ ಅವರ ನಿಜಬಣ್ಣ ತಿಳಿಯುತ್ತಿದೆ.. ಅದರಲ್ಲಿಯೂ ಯಾರು ನಮ್ಮವರು.. ಯಾರು ನಮ್ಮವರಲ್ಲ ಎಂಬ ಪಾಠವನ್ನು ಸರಿಯಾಗಿಯೇ ಕಲಿಸುತ್ತಿದೆ.. ಕೊರೊನಾ ಸೋಂಕು ಬಂದು ಬಿಟ್ಟರೆ ಮುಗಿದೇ ಹೋಯಿತು.. ನಾವೊಂದು ರೀತಿ ಬದುಕಿದ್ದರೂ ಜೀವ ಇಲ್ಲದವರಂತೆ.. ಮುಟ್ಟೋರು ಸಹ ಗತಿ ಇಲ್ಲದಂತಾಗಿ ಹೋಗುತ್ತದೆ.. ಅಲ್ಲೆಲ್ಲೋ ಕೊರೊನಾದಿಂದ ಗುಣಮುಖಳಾಗಿ ಬಂದ ತಾಯಿಯನ್ನು ಮನೆಗೆ ಸೇರಿಸದೇ ಬಾಗಿಲು ಹಾಕಿಕೊಂಡ ಮಗ.. ಮನನೊಂದ ತಾಯಿ ಕೆರೆಗೆ ಹಾರಿ ತನ್ನ ಜೀವ ಕಳೆದುಕೊಂಡಿದ್ದರ ಬಗ್ಗೆ ವರದಿಯಾಗಿತ್ತು..

ನಿಜಕ್ಕೂ ಅಂತಹ ಘಟನೆಗಳು ಮನಸ್ಸನ್ನು ತಲ್ಲಣಗೊಳಿಸಿಬಿಡುತ್ತವೆ.. ಇರೋ‌ ಮೂರು ದಿನದ ಬದುಕಿಗೆ ಇಷ್ಟೊಂದು ಸಣ್ಣತನದಿಂದ ಬದುಕಬೇಕಾ ಎನಿಸುತ್ತದೆ.. ಇನ್ನು ಇಂದು ಮೈಸೂರಿನಲ್ಲಿಯೂ ಅಂತಹುದೇ ಅಮಾನವೀಯ ಘಟನೆಯೊಂದು ನಡೆದಿದೆ.. ಹೌದು ಕೊರೊನಾದಿಂದ ಜನ್ಮ ಕೊಟ್ಟ ತಂದೆ ಜೀವ ಕಳೆದುಕೊಂಡಿದ್ದರೂ ಸಹ ಅಪ್ಪ ಬೇಡ ಆತ ಇಟ್ಟಿರುವ ಹಣವನ್ನು ತಂದು ನನಗೆ ತಲುಪಿಸಿ ಎಂದು ಅಹಂಕಾರದ ಮಾತುಗಳನ್ನು ಆಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.. ಹೌದು ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿ ವೃದ್ಧರೊಬ್ಬರು ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದರು.. ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.. ಆದರೆ ಅದರಿಂದ ಚೇತರಿಸಿಕೊಳ್ಳಲಾಗದೆ ಅವರು ಜೀವ ಕಳೆದುಕೊಂಡಿದ್ದರು.. ನಂತರ ಈ ವಿಚಾರವನ್ನು ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಕೆ ವಿ ಶ್ರೀಧರ್ ಅವರು ಆ ವೃದ್ಧರ ಮಗನಿಗೆ ಆತನ ತಂದೆ ಇಲ್ಲವಾದ ವಿಚಾರವನ್ನು ತಿಳಿಸಿದ್ದಾರೆ.. ಆಗ ಮಗ ಕೊಟ್ಟ ಉತ್ತರ ನೋಡಿ ಶ್ರೀಧರ್ ಅವರೇ ಬೆಚ್ಚಿ ಬಿದ್ದಿದ್ದಾರೆ..

ಹೌದು ಅಪ್ಪ ಇಲ್ಲವಾದ ವಿಚಾರ ಕೇಳಿ ಮಗ ಗೋಳಾಡಬಹುದು ಎಂದು ನಿರೀಕ್ಷಿಸಿದ್ದ ಪಾಲಿಕೆ ಸದಸ್ಯ ಶ್ರೀಧರ್ ಅವರಿಗೆ ನಿಜಕ್ಕೂ ಶಾಕ್ ಆಗಿದೆ.. ಹೌದು ಮಗ ಕೊಟ್ಟ ಉತ್ತರವೇ ಬೇರೆ ಆಗಿತ್ತು.. ಅಪ್ಪನಿಗೆ ನೀವೆ ಅಂತ್ಯ ಸಂಸ್ಕಾರ ಮಾಡಿಬಿಡಿ.. ಆದರೆ ಅವರು ಮನೆಯಲ್ಲಿ ಇಟ್ಟಿರುವ ದುಡ್ಡನ್ನು ನಾನು ಇರುವ ಜಾಗಕ್ಕೆ ತಂದು ಕೊಡಿ.. ಅದೇ ದುಡ್ಡಲ್ಲಿ ನೀವು ಖರ್ಚು ಮಾಡಿರುವ ಹಣವನ್ನು ವಾಪಸ್ ಕೊಡ್ತೀನಿ‌ ಎಂದು ಅಹಂಕಾರದ ಮಾತುಗಳನ್ನ ಆಡಿದ್ದಾರೆ.. ಹೌದು ಆ ಬಡಪಾಯಿ ತಂದೆ ತನ್ನ ಕೊನೆಗಾಲಕ್ಕೆಂದು ಒಟ್ಟು ಆರು ಲಕ್ಷ ರೂಪಾಯಿಗಳನ್ನು ಕೂಡಿಟ್ಟಿದ್ದರು.. ಆದರೆ ಕೊರೊನಾದಿಂದಾಗಿ ಜೀವ ಕಳೆದುಕೊಂಡರು.. ಆದರೆ ಒಬ್ಬಂಟಿಯಾಗಿ ಜೀವನ ಮಾಡಿ ಕೊನೆಗೆ ಕೊರೊನಾಗೆ ಜೀವ ಕಳೆದುಕೊಂಡ ಅಪ್ಪನ ಬಗ್ಗೆ ಸ್ವಲ್ಪವೂ ನೋವಿಲ್ಲದೇ ಆತ ಇಟ್ಟಿರುವ ಹಣವನ್ನು ತಾನು ಇರುವ ಜಾಗಕ್ಕೆ ತಂದು ಕೊಡಿ ಎಂದು ಅಹಂಕಾರದ ಮಾತುಗಳನ್ನಾಡಿದ್ದಾನೆ ಮಗ..

ಮಗನ ಈ ಅಹಂಕಾರದ ಮಾತುಗಳನ್ನು ಕೇಳಿದ ಪಾಲಿಕೆ ಸದಸ್ಯರಾದ ಶ್ರೀಧರನ್ ಅವರು ಮಗನಿಗೆ ಬೈದು ತರಾಟೆಗೆ ತೆಗೆದುಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಆತನ ಅಹಂಕಾರದ ಮಾತುಗಳಿಗೆ ಕಡಿವಾಣ ಹಾಕು ಜನ್ಮ ಕೊಟ್ಟವನೇ ಬೇಡ ಎಂದು ಹಣ ಕೇಳಲು ನಾಚಿಕೆಯಾಗೋದಿಲ್ವಾ ಎಂದು ಜಾಡಿಸಿದ್ದಾರೆ.. ಹೆತ್ತವರು ಮಕ್ಕಳಿಗಾಗಿ ಜೀವ ತೇಯುತ್ತಾರೆ.. ಆದರೆ ಕೊನೆಗಾಲದಲ್ಲಿ ಹೆತ್ತವರು ಇಟ್ಟ ಹಣಕಷ್ಟೇ ಕೆಲ ಮಕ್ಕಳು ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ.. ಇಂತಹ ಮಕ್ಕಳಿರುವುದರಿಂದಲೇ ಬಹುಶಃ ಕೊರೊನಾ ಅದು ಇದು ಅಂತ ಬಂದಿರಬೇಕು.. ಇಂತವರಿಗೆ ಅದ್ಯಾವಾಗ ಬುದ್ದಿ ಬರುವುದೋ.. ಇವರಿಗೂ ವಯಸ್ಸಾದ ಬಳಿಕ ಇವರ ಮಕ್ಕಳೂ ಸಹ ಅದೇ ರೀತಿ ಬೀದಿಯಲ್ಲಿ ಬೀಸಾಡಿದರೆ ಅದೇನು ಮಾಡುವರೋ ತಿಳಿಯದು..