ಶಿಕ್ಷಣ ವ್ಯವಸ್ಥೆ ಸರಿಯಿಲ್ಲ.. ಮುಖ್ಯಮಂತ್ರಿಗಳಿಗೆ, ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಸೆಲ್ಪಿ ವೀಡಿಯೋ ಮಾಡಿ ಹಾಸನದ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿಕೊಂಡಿರುವ ಕೆಲಸ ನೋಡಿ.. ಮನಕಲಕುತ್ತದೆ..

0 views

ನಮ್ಮ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ ಎಂಬ ಮಾತು ಅನೇಕ ವರ್ಷಗಳಿಂದ ಕೇಳುತ್ತಲೇ ಇದ್ದೇವೆ.. ಅದರಲ್ಲೂ ವಿದ್ಯಾರ್ಥಿಗಳು ಮಾತ್ರವಲ್ಲ ಅನೇಕರು ಈ ಬಗ್ಗೆ ಸಾಕಷ್ಟು ಮಾತನಾಡಿದ್ದೂ ಉಂಟು ಈಗಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ಸಾಕಷ್ಟು ಮನವಿ ಮಾಡಿದ್ದೂ ಉಂಟು.. ಜನರು ಮಾತನಾಡುತ್ತಾರೆ ಆದರೆ ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಬಳಲಿದ್ದು ಬೇರೆ ದಾರಿ ಕಾಣದೇ ವಿಧ್ಯಾಭ್ಯಾಸ ಮುಗಿಸಿ ಸಿಕ್ಕ ಸಿಕ್ಕ ಕೆಲಸಗಳಲ್ಲಿ ಸೇರಿಕೊಂಡು ಮನೆ ಜವಾಬ್ದಾರಿ ನಿಭಾಯಿಸಲು ಮುಂದಾದ ಅದೆಷ್ಟೋ ವಿದ್ಯಾರ್ಥಿಗಳ ಮನದಾಳದ ಮಾತನ್ನು ಇಂದು ಈ ಹುಡುಗ ವೀಡಿಯೋ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಿಟ್ಟವಾಗಿ ತಿಳಿಸಿ ಕೊನೆಗೆ ಆತ ಮಾಡಿಕೊಂಡಿರುವ ಕೆಲಸ ನಿಜಕ್ಕೂ ಮನಕಲಕುತ್ತದೆ..

ಹೌದು ಈತನ ಹೆಸರು ಹೇಮಂತ್.. ವಯಸ್ಸಿನ್ನು ಕೇವಲ ಇಪ್ಪತ್ತು.. ಆದರೆ ಇಪ್ಪತ್ತನೇ ವರ್ಷಕ್ಕೆ ಈತ ಮಾಡಿರುವ ನಿರ್ಧಾರ ನಿಜಕ್ಕೂ ಬೇಸರವನ್ನುಂಟು ಮಾಡುತ್ತಿದೆ.. ಹೌದು ಹೇಮಂತ್ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಿರಿಯಾಳು ಗ್ರಾಮದ ನಿವಾಸಿ.. ಈತನ ತಂದೆ ತಾಯಿಗೆ ಇವನು ಒಬ್ಬನೇ ಮಗ.. ಮಗ ಚೆನ್ನಾಗಿ ಓದಲಿ ಎಂದು ಬೋರ್ಡಿಂಗ್ ಶಾಲೆಯಲ್ಲಿ ಇಟ್ಟು ಓದಿಸಿದರು.. ನಂತರ ಹಾಸನದ ಪ್ರತಿಷ್ಟಿತ ಖಾಸಗಿ‌ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡಲು ಸೇರಿಕೊಂಡ.. ಇತ್ತ ಮಗ ಚೆನ್ನಾಗಿ ಓದುತ್ತಿದ್ದಾನೆ ಮುಂದೆ ಆತನ ಶಿಕ್ಷಣ ನಮ್ಮ ಮನೆಯ ದಾರಿದೀಪವಾಗುತ್ತದೆ ಎಂದು ಆ ತಂದೆ ತಾಯಿ ನಂಬಿದ್ದರು.. ಆದರೆ ಇಪ್ಪತ್ತನೇ ವರ್ಷಕ್ಕೆ ಅದೇ ಶಿಕ್ಷಣ ಮಗನ ಜೀವನವನ್ನೇ ಮುಗಿಸಿ ಬಿಡುತ್ತದೆ ಎಂದು ಕನಸು ಮನಸ್ಸಿನಲ್ಲಿಯೂ ಅವರು ನೆನೆಸಿರಲಿಲ್ಲ..

ಹೌದು ಹೇಮಂತ್.. ಈಗಿನ ಶಿಕ್ಷಣ ವ್ಯವಸ್ಥೆ ಸರಿ ಇಲ್ಲ.. ಇದಕ್ಕಾಗಿ ಒಬ್ಬರ ದಾನದ ಅವಶ್ಯಕತೆ ಇದೆ.. ಅದೇ ಕಾರಣಕ್ಕಾಗಿ ನಾನು ಜೀವ ಕಳೆದುಕೊಳ್ಳುತ್ತಿದ್ದೇನೆ.. ನಾನು ಹೋದ ನಂತರವಾದರೂ ಈ ಶಿಕ್ಷಂಅ ವ್ಯವಸ್ಥೆ ಬದಲಾಗಲಿ.. ಇದು ಬದಲಾಗದಿದ್ದರೆ ಸಾಧನೆ ಸಾಧ್ಯವಿಲ್ಲ.. ನನ್ನ ದಾನ ಇದಕ್ಕೆ ದಾರಿದೀಪವಾಗಲಿ.. ಎಂದು ಬರೋಬ್ಬರಿ ಹದಿಮೂರು ನಿಮಿಷಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಾಗೂ ಶಿಕ್ಷಣ ಸಚಿವರನ್ನು ಹಾಗೂ ಇನ್ನಿತರ ಮುಖಂಡರು ಗಳನ್ನು ಮತ್ತು ಆದಿಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿಗಳನ್ನು ಮನವಿ ಮಾಡಿಕೊಂಡಿದ್ದಾರೆ.. ಈಗಿನ ಇಂಜಿನಿಯರಿಂಗ್ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದರೆ ಇಂಜಿನಿಯರಿಂಗ್ ಮಾಡಿದವರು ಕಂಪ್ಯೂಟರ್ ಸೆಂಟರ್ ನಲ್ಲಿ ಕೆಲಸ ಮಾಡಬಹಿದು ಅಷ್ಟೇ.. ನನ್ನ ತಂದೆಯೂ ಶಿಕ್ಷಕರು ಅವರ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ.. ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದೆಲ್ಲವೂ ಸಾಧ್ಯವಿತ್ತು.. ಆದರೆ ಈಗ ಎಲ್ಲವೂ ಬದಲಾಗಿದೆ.. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ.. ಮುಖ್ಯಮಂತ್ರಿಗಳು.. ಶಿಕ್ಷಂಅ ಇಲಾಖೆ.. ವಿಟಿಯು.. ಎಲ್ಲರೂ ಈ ಬಗ್ಗೆ ಚಿಂತಿಸಿ..

ಅಷ್ಟೇ ಅಲ್ಲದೇ ತನ್ನ ಅಪ್ಪ ಅಮ್ಮನ ಬಗ್ಗೆಯು ಮಾತನಾಡಿ ಅಪ್ಪ ಅಮ್ಮ ನಾನು ಹೋದ ಮೇಲೆ ಇಬ್ಬರು ಮಕ್ಕಳನ್ನು ತಂದು ದತ್ತು ಸಾಕಿ ನಾನು ಆ ಮಕ್ಕಳಲ್ಲಿ ಇರುತ್ತೇನೆ.. ನಾನು ಹೋದ ಬಳಿಕ ನನ್ನ ಎಲ್ಲಾ ಅಂಗಾಂಗಗಳನ್ನು ದಾನ ಮಾಡಿ.. ಕೆಲವರಿಗೆ ಇದರಿಂದ ಉಪಯೋಗವಾಗಲಿ ಎಂದಿದ್ದಾರೆ.. ನನಗೆ ಶ್ರೀ ನಿರ್ಮಲಾನಂದ ನಾಥಸ್ವಾಮೀಜಿ ಅವರ ಆಶೀರ್ವಾದ ಪಡೆಯಬೇಕು ಎಂದು ಬಹಳ ಆಸೆಯಿತ್ತು.. ಆದರೆ ಆಗಲಿಲ್ಲ.. ಜೊತೆಗೆ ನನ್ನ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿಗಳು ನಿರ್ಮಾಲಾನಂದನಾಥ ಸ್ವಾಮೀಜಿಗಳು ಎಲ್ಲರೂ ಭಾಗವಹಿಸಬೇಕು ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.. ಜೊತೆಗೆ ಅಪ್ಪ ಅಮ್ಮ ನಾನು ಬೋರ್ಡಿಂಗ್ ನಲ್ಲಿ ಇದ್ದಾಗಲೂ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ.. ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ.. ಹಾಗೂ ತನ್ನ ಗೆಳತಿಗೆ ಥ್ಯಾಂಕ್ಸ್ ಹೇಳಿರುವ ಹೇಮಂತ್ ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.. ಎಲ್ಲಾ ಮಾತನ್ನು ಹದಿಮೂರು ನಿಮಿಷದ ವೀಡೊಯೋದಲ್ಲಿ ಹೇಳಿಕೊಂಡು ಕೊನೆಗೆ ಜೀವ ಕಳೆದುಕೊಂಡೇ ಬಿಟ್ಟಿದ್ದಾನೆ..

ಹೌದು ಶಿಕ್ಷಣ ವ್ಯವಸ್ಥೆ ಬದಲಾಗಲಿ ಎಂಬುದು ಒಳ್ಳೆಯ ಉದ್ದೇಶವೇ ಆದರೆ ಆ ಕಾರಣಕ್ಕಾಗಿ ಬದುಕಿ ಬಾಳಬೇಕಾದವ ಜೀವ ಕಳೆದುಕೊಂಡದ್ದು ಎಷ್ಟು ಸರಿ.. ಆತನ ದುಡುಕಿನ ನಿರ್ಧಾರದಿಂದ ಆ ತಂದೆ ತಾಯಿ ಜೀವನ ಪೂರ್ತಿ ಕೊನೆವರೆಗೂ ನೋವಿನಲ್ಲಿಯೇ ಕಳೆಯುವಂತೆ ಮಾಡಿದ್ದು ಮಗನಾಗಿ ಎಷ್ಟು ಸರಿ ಎನ್ನುವಂತಾಗಿದೆ.. ಇರೋದೊಂದು ಜೀವನ ಇಂತಹ ನಿರ್ಧಾರ ಮಾಡುವ ಮುನ್ನ ದಯವಿಟ್ಟು ಹೆತ್ತ ತಾಯಿಯ ಬಗ್ಗೆ ಒಮ್ಮೆ ಆಲೋಚನೆ ಮಾಡಿ.. ಒಂಭತ್ತು ತಿಂಗಳು ಕಷ್ಟ ಪಟ್ಟು ಹೊತ್ತು ಹೆತ್ತಿದ್ದು ಈ ರೀತಿ ತಮ್ಮ ಕಣ್ಣಮುಂದೆಯೇ ಇಲ್ಲವಾಗೋದನ್ನು ನೋಡೋದಕ್ಕಾ.. ದಯವಿಟ್ಟು ಯಾರೂ ಸಹ ಇಂತಹ ದುಡುಕಿನ ನಿರ್ಧಾರಗಳನ್ನು ಮಾಡಬೇಡಿ..