ಮದುವೆಗೆ ಮುನ್ನ ಹುಡುಗ ಹುಡುಗಿ ಈ ಕೆಲಸ ಮಾಡಲೇ ಬೇಕು.. ಮಾಡದಿದ್ದರೆ ಮದುವೆಯೇ ಇಲ್ಲ.. ಬರುತ್ತಿದೆ ಹೊಸ ಕಾನೂನು..

0 views

ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಮದುವೆ ಎಂದೊಡನೆ ನೆನಪಾಗುವುದು ಮನೆಯವರೆಲ್ಲಾ ಹುಡುಕಿ ತಮ್ಮ ಕುಟುಂಬಕ್ಕೆ ಒಳ್ಳೆಯ ಸೊಸೆಯಾಗುವ ಹುಡುಗಿ ಅಥವಾ ಮಗಳಿಗೆ ಗಂಡನಾಗುವ ಯೋಗ್ಯ ವರನನ್ನ ನೋಡಿ ಅವರುಗಳ ಬಗ್ಗೆ ನಾಲ್ಕಾರು ಕಡೆಗಳಲ್ಲಿ ವಿಚಾರಿಸಿ ನಂತರ ಮದುವೆ ಮಾಡುತ್ತಿದ್ದರು.. ಮದುವೆಯ ನಂತರ ಹಿರಿಯರು ನಿಶ್ಚಯಿಸಿದ ಹುಡುಗ ಅಥವಾ ಹುಡುಗಿ ಎಂದು ಪಾಲಿಗೆ ಬಂದದ್ದು ಪಂಚಾಮೃತವೆಂದು ಭಾವಿಸಿ ಅನ್ಯೂನ್ಯವಾಗಿ ಸಂಸಾರವನ್ನೂ ಸಹ ಮಾಡುತ್ತಿದ್ದರು.. ಆದರೆ ಈ ಕಾಲದಲ್ಲಿ ಆ ರೀತಿ ಇಲ್ಲ.. ಕಾಲೇಜಿನಲ್ಲೇ ಲವ್ವು.. ಕೆಲಸ ತೆಗೆದುಕೊಳ್ಳುವ ಮುನ್ನ ಮದುವೆ ನಂತರ ಮದುವೆಯಾದ ಕೆಲವೇ ದಿನಗಳಲ್ಲಿ ಬೀದಿ ಪಾಲಾಗುವ ಜೋಡಿಗಳು ಒಂದೆಡೆಯಾದರೆ.. ಜೀವನದಲ್ಲಿ ಒಂದೊಳ್ಳೆ ಕೆಲಸ ಪಡೆದು ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಸೆಟೆಲ್ ಆಗಿ ಪ್ರೀತಿಸಿ ಮದುವೆಯಾಗಿ ಜೀವನದ ನಿಜವಾದ ಅರ್ಥವನ್ನು ಕಂಡುಕೊಂಡು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಖವಾಗಿ ಸಂಸಾರ ಮಾಡುವ ಜೋಡಿಗಳು ಸಹ ಇದ್ದಾರೆ..

ಇವೆರಡನ್ನೂ ಹೊರತು ಪಡಿಸಿದರೆ ಕುಟುಂಬದಲ್ಲಿ ಅಪ್ಪ ಅಮ್ಮ ನೋಡಿದ ಸಂಗಾತಿಯನ್ನು ಸಹ ಮದುವೆಯಾಗಿ ಸಂಸಾರ ನಡೆಸುವವರು ಕೆಲವರು ಮಾತ್ರವೆನ್ನಬಹುದು.. ಹಿರಿಯರು ನಿಶ್ವಯಿಸಿದ ಮದುವೆಯಲ್ಲಿ ವಿವಾಹದ ನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ.. ಪ್ರೀತಿಸಿ ಮದುವೆಯಾದ ಜೋಡಿಗಳು ಮದುವೆಗೆ ಮುನ್ನವೇ ಅರ್ಥ ಮಾಡಿಕೊಂಡು ನಂತರವೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.. ಆದರೆ ಇದೀಗ ಸರ್ಕಾರ ಹೊಸ ನಿಯಮವೊಂದನ್ನು ಮಾಡಿದ್ದು ಮದುವೆಗೆ ಮುನ್ನ ಹುಡುಗ ಹುಡುಗಿ ಇಬ್ಬರೂ ಸಹ ಈ ಒಂದು ಕೆಲಸವನ್ನು ಮಾಡಲೇಬೇಕಿದೆ.. ಹೌದು ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಅದರಲ್ಲಿಯೂ ಮದುವೆಯಾದ ಆರು ತಿಂಗಳಿಂದ ಒಂದು ವರ್ಷದೊಳಗೆ ಒಬ್ಬರನ್ನೊಬ್ಬರು ಬಿಟ್ಟು ದೂರಾಗುತ್ತಿರುವ ಪ್ರಕರಣಗಳು ಹೆಚ್ಚಾಗಿರುವ ಕಾರಣ ಈ ಒಂದು ಆದೇಶವನ್ನ ಹೊರಡಿಸಲು ತೀರ್ಮಾನ ಮಾಡಲಾಗಿದೆ..

ಹೌದು ಆ ತೀರ್ಮಾನ ಮತ್ಯಾವುದೂ ಅಲ್ಲ.. ಹುಡುಗ ಹುಡುಗಿ ಇಬ್ಬರೂ ಸಹ ಮದುವೆಯಾಗುವ ಮುನ್ನ ಅವರಿಬ್ಬರೂ ಸಹ ಕೌನ್ಸಲಿಂಗ್ ನಲ್ಲಿ ಭಾಗವಹಿಸಲೇ ಬೇಕಿದೆ.. ಅದರಲ್ಲಿ ಇಬ್ಬರಿಗೂ ದಾಂಪತ್ಯ ಜೀವನದ ಅರಿವು ಹಾಗೂ ಪರಸ್ಪರ ಇಬ್ಬರ ಬಗ್ಗೆಯೂ ಇನ್ನಿತರ ಕೆಲ ಸಂಗತಿಗಳನ್ನು ತಿಳಿಸಲಾಗುವುದು.. ನಂತರ ಅವರಿಬ್ಬರು ಮದುವೆಯಾಗೋದು ಬಿಡೋದು ಅವರವರಿಗೆ ಬಿಟ್ಟದ್ದಾಗಿದೆ.. ಹೌದು ಇಂತಹದೊಂದು ಹೆಜ್ಜೆ ಇಟ್ಟಿರುವುದು ಪಕ್ಕದ ಗೋವಾ ಸರ್ಕಾರ.. ಹೌದು ಗೋವಾ ರಾಜ್ಯದಲ್ಲಿ ಪ್ರತಿ ತಿಂಗಳು ಲೆಕ್ಕವಿಲ್ಲದಷ್ಟು ಸಾಂಸಾರಿಕ ತೊಂದರೆಯಿಂದ ಪತಿ ಪತ್ನಿ ದೂರಾಗಲು ವಿಚ್ಛೇದನದ ಅರ್ಜಿಗಳು ಬರುತ್ತಿರುವ ಕಾರಣ ಇದನ್ನು ಗಂಭೀರವಾಗಿ ಪರಿಗಣಿಸಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ..

ಹೌದು ಈ ಬಗ್ಗೆ ಗೋವಾದ ಕಾನೂನು ಸಚಿವ ನಿಲೇಶ್ ಕ್ಯಾಬ್ರಲ್ ಮಾಹಿತಿ ನೀಡಿದ್ದು ಗೋವಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಆಂಡ್ ರೂರಲ್ ಡೆವಲಪ್ಮೆಂಟ್ ಸತಿ ಪತಿ ಆಗಬೇಕಿರುವ ಯುವಕ ಯುವತಿಯ ಕೌನ್ಸಲಿಂಗ್ ಕೋರ್ಸ್ ಹಾಗೂ ಅದರ ಸ್ವರೂಪವನ್ನು ತೀರ್ಮಾನಿಸಲಿದೆ ಎಂದು ತಿಳಿಸಿದ್ದಾರೆ.. ಹೌದು ಗೋವಾದಲ್ಲಿ ದಿನದಿಂದ ದಿನಕ್ಕೆ ಗಂಡ ಹೆಂಡತಿ ದೂರಾಗುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ವಿವಾಹ ಪೂರ್ವ ಕೌನ್ಸಲಿಂಗ್ ಅನ್ನು ಖಡ್ಡಾಯಗೊಳಿಸಲು ತೀರ್ಮಾನ ಮಾಡಲಾಗಿದೆ.. ಕೌನ್ಸಲಿಂಗ್ ನಲ್ಲಿ ದಾಂಪತ್ಯದ ಬಗ್ಗೆ ಅರಿವು ಮೂಡಿಸಿ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿದೆ..

ಹೌದು ಮದುವೆಯಾದ ಹೊಸದರಲ್ಲಿ ಗಂಡಾಗಲಿ ಹೆಣ್ಣಾಗಲಿ ಇಬ್ಬರಿಗೂ ಹೊಸ ಹೊಸ ಕುಟುಂಬ ದೊರೆಯುತ್ತದೆ.. ಹೊಸದರಲ್ಲಿ ಹೊಸ ಹೊಸ ಕುಟುಂಬಗಳಿಗೆ ಅನುಸರಿಸಿಕೊಂಡು ಹೋಗೋದು ಕೊಂಚ ಕಷ್ಟವೇ.. ಆದರೆ ಆ ಸಮಯದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತರೆ ಮುಂದಿನ ಬಾಳು ಸುಖಮಯವಾಗಿರುತ್ತದೆ.. ಅದರಲ್ಲಿಯೂ ಹೆತ್ತವರನ್ನು ಬಿಟ್ಟು ಬಂದು ಹೊಸ ಕುಟುಂಬವನ್ನೇ ತನ್ನ ಕುಟುಂಬ ಎಂದುಕೊಳ್ಳುವ ಹೆಣ್ಣಿಗೆ ಪತಿಯಿಂದ ಸಿಗಬೇಕಾದ ಪ್ರಾಮುಖ್ಯತೆ ಹಾಗೂ ಪ್ರೀತಿ ಸಿಕ್ಕರೆ ಆಕೆಯೂ ಪತಿಯ ಕುಟುಂಬವನ್ನು ತನ್ನದೇ ಕುಟುಂಬವೆಂದುಕೊಳ್ಳುವಳು.. ಇತ್ತ ಗಂಡನಿಗೆ ಗೌರವ ಹಾಗೂ ಆತನ ಪೋಷಕರಿಗೆ ಅಕ್ಕರೆ ತೋರಿಸಿದರೆ ಬಹುಶಃ ಯಾವ ಸಂಗಾತಿಗಳೂ ದೂರಾಗುವ ಮಾತೇ ಬರುವುದಿಲ್ಲ ಎನಿಸುತ್ತದೆ.. ಅದೇನಾದರೂ ಆಗಲಿ ಆ ಹೊಸ ಕಾನೂನಿನಿಂದಾರೂ ಗಂಡ ಹೆಂಡಿರು ಸಣ್ಣ ಪುಟ್ಟ ಮನಸ್ತಾಪಗಳಿಗೆ ದೂರಾಗುವುದು ನಿಲ್ಲುವಂತಾದರೆ ಸಾರ್ಥಕವಷ್ಟೇ..