ಜೆಸಿಬಿ ಯಲ್ಲಿ ಹಾವನ್ನು ಇಲ್ಲವಾಗಿಸಿದ್ದರು.. ಇದೀಗ ಆತನ ಮನೆಯಲ್ಲಿ ಏನಾಗಿದೆ ನೋಡಿ.. 

0 views

ಕೆಲವೊಮ್ಮೆ ನಂಬಲು ಅಸಾಧ್ಯವಾದರು ಕೆಲವೊಂದು ಘಟನೆಗಳನ್ನು ನಂಬಲೇ ಬೇಕಾಗುತ್ತದೆ.. ಅದರಲ್ಲಿಯೂ ಹಾವಿನ ವಿಚಾರಗಳಲ್ಲಿ ನಮ್ಮವರಲ್ಲಿ ಬಹಳ ದೊಡ್ಡ ಮಟ್ಟದಲ್ಲಿಯೇ ನಂಬಿಕೆ ಇದೆ.. ಪೂಜಿಸುವ ಕೆಲ ಹಾವುಗಳ ತಂಟೆಗೆ ಯಾರೂ ಸಹ ಹೋಗುವುದಿಲ್ಲ.. ಒಂದು ಪಕ್ಷ ತಿಳಿಯದೇ ನಮ್ಮಿಂದ ಅವುಗಳಿಗೆ ಏನಾದರೂ ಅಪಾಯವನ್ನುಂಟು ಮಾಡಿದರೂ ದೇವರಲ್ಲಿ ಕ್ಷಮೆ ಕೇಳಿ ತಪ್ಪುಕಾಣಿಕೆ ಕಟ್ಟೋದು ಹಳ್ಳಿಗಳ ಕಡೆ ರೂಡಿಯಿದೆ..

ಇನ್ನು ಈ ಹಿಂದೆ ನಮ್ಮ ಕುಟುಂಬದವರು ಹಾವಿಗೆ ಏನೋ ಕೆಡಕುಮಾಡಿದ್ದಾರೆಂದು ಈಗ ನಮಗೆ ಈ ದೋಷ ಬಂದಿದೆ ಎಂದೂ ಸಹ ಕೆಲವರು ಹೇಳೋದನ್ನು ನಾವು ಕೇಳಿರುತ್ತೇವೆ.. ಹಾವುಗಳು ನಿಜಕ್ಕೂ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತೀಕಾರ ತೀರಿಸಿಕೊಳ್ಳುತ್ತಾವಾ ತಿಳಿಯದು.. ಆದರೆ ಕೆಲವೊಂದು ಘಟನೆಗಳು ಮಾತ್ರ ಆಶ್ಚರ್ಯದ ಜೊತೆಗೆ ಆ ರೀತಿ ಮಾಡಬಲ್ಲವು ಎಂದು ನಂಬಿಕೆಯನ್ನೂ ಹುಟ್ಟುಹಾಕಿ ಬಿಡುತ್ತವೆ.. ಇದೀಗ ಅಂತಹುದೇ ಒಂದು ಘಟನೆ ನಡೆದಿದೆ.. ಕೆಲ ವರ್ಷಗಳ ಹಿಂದಷ್ಟೇ ತೋಟದಲ್ಲಿ ಜೆಸಿಬಿ ಗೆ ಸಿಲುಕಿದ ಹಾವನ್ನು ಬಿಡುಗಡೆ ಮಾಡದೇ ಅದರ ಜೀವ ಇಲ್ಲವಾಗಿಸಿದ್ದವರ ಮನೆಯಲ್ಲಿ ನಡೆದಿರುವ ಘಟನೆ ಆಶ್ಚರ್ಯವನ್ನುಂಟು‌ ಮಾಡುತ್ತಿದೆ..

ಹೌದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಕೊಳಚಿ ಗ್ರಾಮದಲ್ಲಿ ದಂಡಿ ಕುಮಾರ ಎಂಬ ರೈತ ತನ್ನ ಜಮೀನಿನಲ್ಲಿ ಜೆಸಿಬಿ ಯಲ್ಲಿ ಕೆಲಸ ಮಾಡಿಸುವ ಸಮಯದಲ್ಲಿ ಜೆಸಿಬಿ ಗೆ ಹಾವು ಸಿಲುಕಿಕೊಂಡಿದೆ.. ಆದರೆ ಹಾವನ್ನು ಬಿಟ್ಟುಬಿಡುವಂತೆ ತಿಳಿಸಿದರೂ ಸಹ ಆತ ಸುಮ್ಮನಿರದೇ ಜೆಸಿಬಿ ಯಲ್ಲಿಯೇ ಅದರ ಜೀವ ಇಲ್ಲವಾಗಿಸಿದ್ದರಂತೆ..

ಆನಂತರ ಕೆಲ ದಿನಗಳ ನಂತರ ಅದೇ ಜಮೀನಿಗೆ ದಂಡಿ ಕುಮಾರ ತೆರಳಿದ್ದ ಸಮಯದಲ್ಲಿ ಹಾವು ಕಚ್ಚಿ ತನ್ನ ಜೀವವೇ ಇಲ್ಲವಾಗಿ ಹೋಯ್ತು.. ಇನ್ನು ದಂಡಿ ಕುಮಾರನ ತಾಯಿ ನಾಲ್ಕು ವರ್ಷದ ಹಿಂದೆ ಅದೇ ಜಮೀನಿನಲ್ಲಿ ತೆಂಗಿನ ಸಸಿಗಳನ್ನು ನೆಟ್ಟಿದ್ದರು.. ಇದೀಗ ಆ ತೆಂಗಿನ ಮರಗಳಿಗೆ ನಾಲ್ಕು ವರ್ಷವಾಗಿದೆ.. ಎಲ್ಲವೂ ಬೆಳೆದು ನಿಂತಿದೆ.. ಆದರೆ ವಿಚಿತ್ರವೊಂದು ಸೃಷ್ಟಿ ಯಾಗಿದೆ..

ಹೌದು ತೆಂಗಿನ ಮರದ ಗರಿಗಳು ಹಾವಿನ ಆಕೃತಿಯಲ್ಲಿ ಬೆಳೆಯ ತೊಡಗಿದೆ.. ಇದೀಗ ಆ ತೆಂಗಿನ ಮರ ನೋಡಲು ಗ್ರಾಮದ ಜನರೆಲ್ಲಾ ಆಗಮಿಸುತ್ತಿದ್ದು ಅದನ್ನು ಮುಟ್ಟಿ ನಮಸ್ಕಾರ ಮಾಡಿಕೊಳ್ಳುತ್ತಿದ್ದಾರೆ.. ಈ ಹಿಂದೆ ನಡೆದ ಘಟನೆಯೇ ತೆಂಗಿನ ಮರದ ಗರಿ ಈ ರೀತಿ ಮೂಡಲು ಕಾರಣ ಎನ್ನುತ್ತಿದ್ದಾರೆ.. ಒಟ್ಟಿನಲ್ಲಿ ಪ್ರಕೃತಿಯ ವಿಸ್ಮಯದ ಜೊತೆ ಜನರ ನಂಬಿಕೆ ಬೆಸೆದುಕೊಂಡಂತೆ ಕಾಣುತ್ತಿದೆ..

ಇನ್ನು ಈ ಬಗ್ಗೆ ಆ ಕುಟುಂಬದವರು ಮಾತನಾಡಿ “ಇಲ್ಲಿ ಒಂದು ಬಾವಿ ಇತ್ತು.. ಆ ಬಾವಿ ಮುಚ್ಚಿಸೋಕೆ ಜೆಸಿಬಿ ತರ್ಸಿದ್ವಿ.. ಮುಚ್ಚಿಸುವಾಗ ಅಲ್ಲೊಂದು ನಾಗರಹಾವಿತ್ತು.. ಜೆಸಿಬಿ ಬಕೆಟ್ ನಲ್ಲಿ ನಾಗರಹಾವು ಹೊರ ಬಂತು.. ಜೆಸಿಬಿ ಅವನು ಏನು ಮಾಡ್ಲಿ ಅಂತ ಕೇಳಿದ.. ನಾನು ಬಿಟ್ಟುಬಿಡು ಅಂದೆ..

ಆದರೆ ನಮ್ ಹುಡುಗ ಜೆಸಿಬಿ ಅಲ್ಲೇ ಕುಕ್ಕು ಅಂದುಬಿಟ್ಟ.. 2014 ರಲ್ಲಿ ಇದು ನಡೀತು.. 2015 ರಲ್ಲಿ ನಮ್ ಹುಡುಗ ಹೊಲಕ್ ಅಂತ ಬಂದ.. ನಾವು ಊರಿಗ್ ಹೊಂಟಿದ್ವಿ.. ಆಗ ನಮ್ ಹುಡುಗ ಹೊಲಕ್ ಬಂದಾಗ ಹಾವ್ ಕಚ್ವಿ ಜೀವ ಹೋಯ್ತು.. ಆಮೇಲೆ ಮಾರನೆ ವರ್ಷದಲ್ಲಿ ನಾವು ಎಲ್ಲಾ ತೆಂಗಿನ ಗಿಡ ಹಾಕಿದ್ವಿ.. ಆಗ್ಲಿಂದ ನಮಗೆ ಹಾವು ಕಾಡಕತ್ತೈತಿ.. ಕನಸಿನಲ್ಲಿಯೂ ಸಹ ಬರ್ತೈತಿ.. ಈಗ ತೆಂಗಿನ ಗರಿಯಲ್ಲಿ ಹಾವಿನ ಆಕೃತಿ ಮೂಡೈತಿ.. ನಾವು ಈಗ ಹಾವಿನ ಕಲ್ಲು ಮಾಡಿಸಿ ಕಟ್ಟೆ ಕಟ್ಟಿಸಿ ಹೊಲದಲ್ಲಿ ಪೂಜೆ ಮಾಡ್ತಾ ಇದ್ದೀವಿ.. ಈಗ ನಮಗೆಲ್ಲಾ ಒಳ್ಳೆದ್ ಆಗ್ತಾ ಇದೆ ಅನ್ನುಸ್ತಾ ಇದೆ.. ಎಂದು ನಡೆದ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ..