ಆರು ವರ್ಷ ಪ್ರೀತಿಸಿದರು.‌ ಕಳೆದ ವರ್ಷ ಮದುವೆಯೂ ಆದರು‌.. ಇಂದು ಇವರ ಸ್ಥಿತಿ ಏನಾಗಿದೆ ಗೊತ್ತಾ..

0 views

ಪ್ರೀತಿ ಅನ್ನೋದು ಬಹುತೇಕರ ಜೀವನದಲ್ಲಿ ಆಗುವಂತದ್ದೆ.. ಕೆಲವರು ವಯಸ್ಸಿನ ಆಕರ್ಷಣೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಮ್ಮ ಮುಂದಿನ ಜೀವನದ ಗುರಿಯ ಕಡೆ ಗಮನ ಕೊಡುತ್ತಾರೆ.. ಇನ್ನೂ ಕೆಲವರು ತಮ್ಮದು ನಿಜವಾದ ಪ್ರೀತಿಯಾಗಿದ್ದರೆ ಅರ್ಥ ಮಾಡಿಕೊಂಡು ಜೀವನದಲ್ಲಿ ಸೆಟಲ್ ಆದ ಬಳಿಕ ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆಯೂ ಆಗ್ತಾರೆ.. ಇನ್ನೂ ಕೆಲವರು ಪ್ರೀತಿ ಎನ್ನುವ ಹೆಸರಿನಲ್ಲಿ‌ ಕೆಲವರ ಜೀವನದಲ್ಲಿ ಆಟವನ್ನೂ ಸಹ ಆಡುವರು.. ಇಂತಹ ವಿಚಾರಗಳಲ್ಲಿ ಗಂಡು ಅಥವಾ ಹೆಣ್ಣು ಎಂಬ ವ್ಯತ್ಯಾಸವಿಲ್ಲ.. ಅದೆಷ್ಟೋ ಹೆಣ್ಣು ಮಕ್ಕಳಿಂದ ಪ್ರೀತಿ ಎಂಬ ಹೆಸರಿನಿಂದ ನೊಂದ ಗಂಡು ಮಕ್ಕಳೂ ಇದ್ದಾರೆ.. ಅದೆಷ್ಟೋ ಗಂಡು ಮಕ್ಕಳಿಂದ ಮೋಸಹೋದ ಹೆಣ್ಣು ಮಕ್ಕಳೂ ಇದ್ದಾರೆ..

ಆದರೆ ಇಲ್ಲೊಂದು ಪ್ರೇಮಕತೆ ಬೀದಿಗೆ ಬಂದಿರುವ ರೀತಿ‌ ನೋಡಿದರೆ ನಿಜಕ್ಕೂ ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನುವಂತಾಗುವುದಂತೂ ಸತ್ಯ.. ಹೌದು ಈ ಇಬ್ಬರು ಕಳೆದ ಆರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.. ಕಳೆದ ವರ್ಷ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯನ್ನೂ ಸಹ ರಿಜಿಸ್ಟರ್ ಮಾಡಿಸಿದ್ದರು.. ಆದರೆ ಇಂದು ಬೀದಿಯಲ್ಲಿ ಇಬ್ಬರು ನಡೆದುಕೊಂಡ ರೀತಿ ನೋಡಿದರೆ ಇಂತಹ ಜೀವನಕ್ಕಾ ಇಷ್ಟು ವರ್ಷ ಈ ಇಬ್ಬರು ಪ್ರೀತಿಸಿದ್ದು ಎನ್ನುವಂತಿದೆ..

ಹೌದು ಈತನ ಹೆಸರು ಇರ್ಫಾನ್ ಕಲಬುರುಗಿಯ ಪಟ್ಟಣ ಗ್ರಾಮದ ನಿವಾಸಿ.. ಈಕೆಯ ಹೆಸರು ರಹೀನಾ ಬೆಂಗಳೂರಿನ ನಿವಾಸಿ.. ಈ ಇಬ್ಬರು ಬೆಂಗಳೂರಿನಲ್ಲಿಯೇ ಕೆಲಸ ಮಾಡಿಕೊಂಡಿದ್ದು ಕಳೆದ ಆರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು‌. ಆತ ಈಕೆಗೆ ಪ್ರೀತಿ ಮಾಡುವ ಸನಯದಲ್ಲಿ ಹೇಳಿರುವ ಒಂದೊಂದು ಮಾತುಗಳು ಸಹ ನಿಜಕ್ಕೂ ಇವನದ್ದು ಎಷ್ಟು ಪವಿತ್ರ ಪ್ರೀತಿ ಎನಿಸುತ್ತದೆ.. ಆದರೆ ಅಸಲಿಯತ್ತು ಬೇರೆಯೇ ಇದೆ.. ಹೌದು ಇರ್ಫಾನ್ ಆಕೆಯನ್ನು ಪ್ರೀತಿ ಮಾಡುವ ಸಮಯದಲ್ಲಿ ಸಾಕಷ್ಟು ಪ್ರೇಮ ಪತ್ರಗಳನ್ನು ಬರೆದಿದ್ದು ಪ್ರೀತಿ ಎಂದರೆ ಅದು ಗಾಳಿಯ ರೀತಿ ಅದು ಯಾರಿಗೂ ಕಾಣೋದಿಲ್ಲ ಅದನ್ನು ಫೀಲ್ ಮಾಡಬೇಕು ಎಂದಿದ್ದಾನೆ.. ಅಷ್ಟೇ ಅಲ್ಲದೇ ನೀನೆ ಎಲ್ಲಿರುವೆಯೋ ಅಲ್ಲಿಗೆ ನನ್ನ ಹೃದಯ ಓಡಿ ಬರುವುದು ಎಂದಿದ್ದಾನೆ.. ಕಳೆದ ವರ್ಷ ಮದುವೆಯೂ ಆಗಿದ್ದಾನೆ.. ಆದರೆ ಅಂದು ಗಾಳಿಯಲ್ಲಿ ಫೀಲ್ ಮಾಡಬೇಕು ಎಂದವ ಇಂದು ಆಕೆಯೇ ಸರೊಯಿಲ್ಲವೆಂದು ಓಡಿ ಬಂದಿದ್ದಾನೆ..

ಹೌದು ಇರ್ಫಾನ್ ತನ್ನ ಮನೆಯವರಿಗೆ ವಿಚಾರ ತಿಳಿಸಿ ಅವರ ಸಂಪ್ರದಾಯದಂತೆ ಮದುವೆ ಆಗುವುದಾಗಿ ಹೇಳುತ್ತಿದ್ದ.. ಆದರೆ ಕೆಲ ತಿಂಗಳುಗಳಿಂದ ಮದುವೆಯಾಗೋಕೆ ನಿರಾಕರಿಸಿದ.. ಆಕೆಯನ್ನು ಬೆಂಗಳೂರಿನಲ್ಲಿಯೇ ಬಿಟ್ಟು ಈತ ಕಲಬುರುಗಿಗೆ ಓಡಿ ಬಂದಿದ್ದ.. ಆದರೆ ಅಷ್ಟಕ್ಕೆ ಬಿಡದ ಯುವತಿ ಆತನನ್ನು ಹುಡುಕಿಕೊಂಡು ಕಲಬುರುಗಿಗೆ ಬಂದಿದ್ದಾಳೆ.. ಅದೂ ಸಹ ಅವನನ್ನು ಪೊಲೀಸ್ ಠಾಣೆಗೆ ಬರುವಂತೆ ಮಾಡಿದ್ದಾಳೆ.. ಗ್ರಾಮೀಣ ಪೊಲೊಇಸ್ ಠಾಣೆಯಲ್ಲಿ ಇರ್ಫಾನ್ ಮೇಲೆ ದೂರು ದಾಖಲು ಮಾಡಿದ್ದು.. ಪೊಲೀಸ್ ಠಾಣೆಗೆ ಬಂದ ಇರ್ಫಾನ್ ಗೆ ಠಾಣೆಯ ಮುಂದೆಯೇ ಸರಿಯಾಗಿ ಕೊಟ್ಟಿದ್ದಾಳೆ.. ಸಧ್ಯ ಆಕೆ ಅವನಿಗೆ ಈ ಹಿಂದೆ ಅವನೇ ಹೇಳಿರುವ ಒಂದೊಂದು ಪ್ರೀತಿಯ ಮಾತುಗಳನ್ನು ಹೇಳುತ್ತಾ ಕೊಡುತ್ತಾ ಇದ್ದಳು‌. ಇತ್ತ ಆಕೆ ಅವನಿಗೆ ಕೊಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಹುಡುಗ ಹೇಳುವ ಕತೆಯೇ ಬೇರೆಯಾಗಿದೆ..

ಹೌದು ನಾವು ಪ್ರೀತಿಸಿದ್ದು ನಿಜ.. ಆದರೆ ಆಕೆಗೆ ಬೇರೆಯವರ ಜೊತೆ ಸ್ನೇಹವಿದೆ.. ಅವರ ಜೊತೆ ಸಂಬಂಧ ಹೊಂದಿದ್ದಾಳೆ.. ಅದೇ ಕಾರಣಕ್ಕೆ ಅವಳನ್ನು ಬಿಟ್ಟು ಬಂದೆ ಎಂದಿದ್ದಾನೆ.. ಒಟ್ಟಿನಲ್ಲಿ ಗಾಳಿಯಲ್ಲಿ ಫೀಲ್ ಮಾಡಬೇಕಾದ ಪ್ರೀತಿ ಪೊಲೀಸ್ ಠಾಣೆಯಲ್ಲಿ ಫೀಲ್ ಮಾಡುವ ಹಂತಕ್ಕೆ ಬಂದು ನಿಂತಿದ್ದು ನಿಜಕ್ಕೂ ದುರ್ದೈವವೇ ಸರಿ.. ದಯವಿಟ್ಟು ಯಾರೇ ಆಗಲಿ ಹಿಂದೆ ಮುಂದೆ ಆಲೋಚಿಸದೇ ಈ ರೀತಿ ಪ್ರೀತಿಗೆ ಬಿದ್ದು ಜೀವನವನ್ನು ಈ ರೀತಿ ಬೀದಿಗೆ ಬರುವಂತೆ ಮಾಡಿಕೊಳ್ಳಬೇಡಿ..