ಆಕೆ ನೋಟಿಸ್‌ ಕೊಡಲಿ, ನಾನು ವಾದ ಮಾಡೋದಿಲ್ಲ.. ಕೇಸ್‌ ನಿಂದ ಹೊರ ಬಂದ್ರಾ ವಕೀಲ ಜಗದೀಶ್?

0 views

ರಮೇಶ್‌ ಆರಕಿಹೋಳಿ ಪ್ರಕರಣಕ್ಕೆ ಇಂದು ದೊಡ್ಡ ತಿರುವು ದೊರೆತಿದೆ.. ಹೌದು ಸತತ 28 ದಿನಗಳ ಕಾಲ ಯಾರ ಕಣ್ಣಿಗೂ ಕಾಣದಂತೆ ವೀಡಿಯೋಗಳ ಮೂಲಕ ಮಾತ್ರ ಮಾತನಾಡುತ್ತಿದ್ದ ರಮೇಶ್ ಜಾರಕಿಹೋಳಿ ಅವರ ಸಿಡಿಯಲ್ಲಿನ ಲೇಡಿ ಮೊನ್ನೆಯಷ್ಟೇ ಕೋರ್ಟ್ ಮುಂದೆ ಹಾಜರಾಗಿ ತಾನು ನೀಡಬೇಕಿದ್ದ ಎಲ್ಲಾ ಹೇಳಿಕೆಗಳನ್ನು ದಾಖಲಿಸಿದಳು.‌ ನಂತರದಲ್ಲಿ ಎಸ್ ಐ ಟಿ ವಿಚಾರಣೆಯಲ್ಲಿಯೂ ಹಾಜರಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾಳೆ.. ಜೊತೆಗೆ ನಿನ್ನೆ ಹಾಗೂ ಮೊನ್ನೆ ಯುವತಿ ಇದ್ದ ಪಿಜಿ.. ರಮೇಶ್ ಜಾರಕಿಹೋಳಿ ಹಾಗೂ ಯುವತಿ ಆಗಾಗ ಸೇರುತ್ತಿದ್ದರು ಎನ್ನಲಾದ ಅಪಾರ್ಟ್ಮೆಂಟ್ ಎಲ್ಲವನ್ನೂ ಸಹ ಮಹಜರು ನಡೆಸಿ ಅಕ್ಕಪಕ್ಕದವರ ಹೇಳಿಕೆಗಳನ್ನು ಸಹ ಪಡೆದಿದ್ದಾರೆ..

ಇನ್ನು ಇದೀಗ ಇಂದು ರಮೇಶ್ ಜಾರಕಿ ಹೋಳಿ ಅವರು ವಿಚಾರಣೆಗೆ ಹಾಜರಾಗಬೇಕಿತ್ತು.. ಆದರೆ ನನಗೆ ಆರೋಗ್ಯ ಸರಿ ಇಲ್ಲ ಎಂಬ ಕಾರಣ ನೀಡಿ ಎರಡು ದಿನಗಳ ಕಾಲಾವಕಾಶವನ್ನು ಕೇಳಿದ್ದಾರೆ.. ಈ ಬಗ್ಗೆ ಮಾತನಾಡಿರುವ ರಮೇಶ್ ಜಾರಕಿಹೋಳಿ ಪರವಾದ ಲಾಯರ್ ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದರು.. ಈಗ ಅವರಿಗೆ ಆರೋಗ್ಯ ಸರಿ ಇಲ್ಲ.ಮ್ ಇನ್ನೆರೆಡು ದಿನದಲ್ಲಿ ವಿಚಾರಣೆಗೆ ಹಾಜರಾಗ್ತಾರೆ ಎಂದು ವಕೀಲರು ಮನವಿ ಮಾಡಿದ್ದಾರೆ.. ಆದರೆ ಈ ನಡುವೆ ಹೊಸ ವಿಚಾರವೊಂದು ಹೊರ ಬಿದ್ದಿದೆ.. ಹೌದು ಯುವತಿ ಪರ ವಕೀಲರಾದ ಜಗದೀಶ್ ಅವರು ಕೇಸ್ ನಿಂದ ಹೊರ ಬರುವ ಮಾತನಾಡಿದ್ದಾರೆ..

ಹೌದು ಇಂದು ಮಾದ್ಯಮದ ಜೊತೆ ಮಾತನಾಡುವ ಸಮಯದಲ್ಲಿ ಆಕೆ ನೋಟಿಸ್ ಕೊಟ್ಟರೆ ನಾನು ಹೊರ ಹೋಗ್ತೀನಿ ಎಂದಿದ್ದಾರೆ.. ಇದಕ್ಕೆ ಕಾರಣವೂ ಇದೆ.. ಹೌದು ಇಂದು ಮಾದ್ಯಮದ ಜೊತೆ ಮಾತನಾಡಿರುವ ಜಗದೀಶ್ ಅವರು ಇವತ್ತು ಆರೋಪಿ ವಿಚಾರಣೆಗೆ ಬರ್ತಾರೆ ಎಂದಿದ್ರು.. ಆದರೆ ಬಂದಿಲ್ಲ.. ಅವರಿಗೇನೋ ಆರೋಗ್ಯ ಸರಿ ಇಲ್ಲವಂತೆ.. ಅವರ ಕಡೆ ಲಾಯರ್ ಎರಡು ದಿನ ಟೈಮ್ ಕೇಳಿದ್ದಾರೆ.. ನಮ್ಮ ಕಡೆ ಯುವತಿ ಹಾಜರಾಗಿದ್ದಾಳೆ.. ಇದೇ ಇವತ್ತಿನ ಹಾಟ್ ನ್ಯೂಸ್ ಎಂದಿದ್ದಾರೆ.. ನಂತರ ಮಾದ್ಯಮದವರು “ಎಸ್ ಐ ಟಿ ಅಧಿಕಾರಿಗಳು ನಿಮ್ಮ ಮೇಲೆ ನ್ಯಾಯಾಧೀಶರ ಬಳಿ ದೂರು ನೀಡಿದ್ದಾರಂತೆ?

ನೀವು ಮಾದ್ಯಮದ ಜೊತೆ ಎಲ್ಲಾ ವಿಚಾರವನ್ನು ಬಹಿರಂಗ ಮಾಡುತ್ತಿರುವುದು ವಿಚಾರಣೆಗೆ ತೊಂದರೆ ಆಗ್ತಿದೆಯಂತೆ.. ಕೇಸ್ ನಿಂದ ನಿಮ್ಮನ್ನು ಕೈ ಬಿಡಲು ಮನವಿ ಮಾಡಿದ್ದಾರಂತೆ..” ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.. ಇದಕ್ಕೆ ಉತ್ತರ ನೀಡಿರುವ ಜಗದೀಶ್ ಅವರು.. ಯುವತಿ ಸಹಾಯ ಕೇಳಿ ಫೇಸ್ಬುಕ್ ನಲ್ಲಿ ವೀಡಿಯೋ ಹಾಕಿದಾಗ ನನ್ನನ್ನು ಸಂಪರ್ಕಿಸಬಹುದು ಎಂದು ನಾನು ಹೇಳಿದ್ದಕ್ಕೆ.. ಯುವತಿ ನನನ್ನು ಅವಳ ಪರ ವಕಾಲತ್ತು ವಹಿಸಲು ಕೇಳಿಕೊಂಡಳು.. ಅದಕ್ಕೆ ನಾನು ಈ ಕೇಸ್ ಪಡೆದಿದ್ದೇನೆ.. ಆಕೆ ನನ್ನನ್ನು ಬೇಡ ಎಂದು ನೋಟಿಸ್ ಕೊಟ್ಟರೆ ನಾನಿ ಖಂಡಿತ ಕೇಸ್ ನಿಂದ ಹೊರ ಬರ್ತೇನೆ.. ನಾನು ವಾದ ಮಾಡುವುದಿಲ್ಲ ಎಂದಿದ್ದಾರೆ..

ಇನ್ನು ಸದ್ಯ ಬಾರ್ ಕೌನ್ಸಿಲ್ ವಿಚಾರವಾಗಿಯೂ ಸಾಕಷ್ಟು ಸುದ್ದಿಯಾಗಿದ್ದ ಲಾಯರ್ ಜಗದೀಶ್ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಸ್ಬುಕ್ ಲೈವ್ ಮೂಲಕ ಯುವತಿಯ ಪ್ರಕರಣದ ಕುರಿತು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.‌ ಅತ್ತ ಯುವತಿ ಇಂದು ಎಸ್ ಐ ಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾಳೆ.. ಆಕೆ ಇದೇ ಲಾಯರ್ ಇರಲಿ ಎಂದು ಜಗದೀಶ್ ಅವರನ್ನು ಮುಂದುವರೆಸುವಳೋ ಅಥವಾ ನೋಟಿಸ್ ಕೊಟ್ಟು ವಕೀಲರನ್ನು ಬದಲಿಸುವಳೋ ಕಾದು ನೋಡಬೇಕಿದೆ..