ತೆರೆ ಮೇಲೆ ನಕ್ಷತ್ರಾಳ ಗಂಡ.. ಆದರೆ ನಟ ಜಗನ್ ನ ನಿಜ ಜೀವನದ ಹೆಂಡತಿ ಯಾರು ಗೊತ್ತಾ.. ಸಿಕ್ಕಾಪಟ್ಟೆ ಫೇಮಸ್..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ‌ ಒಂದಾಗಿರುವ ಲಕ್ಷಣ ಧಾರಾವಾಹಿ ಸಧ್ಯ ಟಾಪ್ ಹತ್ತು ಧಾರಾವಾಹಿಗಳಲ್ಲಿ ಒಂದಾಗಿದ್ದು ರೋಚಕ ತಿರುವುಗಳ ಜೊತೆ ಧಾರಾವಾಹಿ ಯಶಸ್ಸಿನ ಪಯಣವನ್ನು ಮುಂದುವರೆಸುತ್ತಿದೆ.. ಹೌದು ಲಕ್ಷಣ ಧಾರಾವಾಹಿಯಲ್ಲಿ ಕೃಷ್ಣ ಸುಂದರಿ ನಕ್ಷತ್ರಾ ಹಾಗೂ ಭೂಪತಿಯ ಜೋಡಿ ಸಧ್ಯ ಮದುವೆ ಸಂಚಿಕೆಗಳನ್ನು ಮುಗಿಸಿದ್ದು ಇಬ್ಬರ ನಡುವಿನ ವೈಮನಸ್ಸು ಕರಗಿ ಇನ್ನೇನು ಇಬ್ಬರ ನಡುವೆ ಪ್ರೀತಿ ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು ಒಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ನಕ್ಷತ್ರಾಳಾ ಅಭಿನಯ ಒಂದು ರೀತಿ ಕಿರಿಕಿರಿ ಎಂದರೆ ಮತ್ತೊಂದಷ್ಟು ಜನ ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.. ಇನ್ನು ಧಾರಾವಾಹಿಯಲ್ಲಿ ತೆರೆ ಮೇಲೆ ನಕ್ಷತ್ರಾಳ ಪತಿಯಾಗಿರುವ ಭೂಪತಿ ಪಾತ್ರಧಾರಿ ನಟ ಜಗನ್ ಅವರ ನಿಜ ಜೀವನದ ಪತ್ನಿ ಯಾರೆಂದು ತಿಳಿದರೆ ಆಶ್ವರ್ಯವಾಗುವುದು..

ಹೌದು ಜಗನ್ ಅವರು ಇನ್ನೂ ಸಹ ಸಿಂಗಲ್ ಎಂದೇ ಬಹಳಷ್ಟು ಮಂದಿ ಅಂದುಕೊಂಡಿದ್ದಾರೆ.. ಆದರೆ ನೋಡಲು‌ ಸಿಂಗಲ್ ನಂತೆಯೇ ಕಾಣುವ ನಟ ಜಗನ್‌ ಮದುವೆಯಾಗಿ ಅದಾಗಲೇ ಮೂರು ವರ್ಷಗಳಾಗಿ ಹೋಗಿದೆ.. ಅಷ್ಟಕ್ಕೂ ಜಗನ್‌ ಕೈಹಿಡಿದ ಆ ಹುಡುಗಿ ಯಾರು ಗೊತ್ತಾ..ಹೌದು ನಟ ಜಗನ್ ಕಿರುತೆರೆಗೂ ಮುನ್ನ ಸಿನಿಮಾ ನಟನಾಗಿ ಈ ಬಣ್ಣದ ಬದುಕನ್ನು ಆರಂಭಿಸಿದವರು.. ಕಳೆದ ಹತ್ತು ವರ್ಷಗಳ ಹಿಂದೆಯೇ ಜೋಶ್ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಜಗನ್ ನಂತರ ಬೇರೆ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಲು ಅವಕಾಶ ದೊರೆಯಲಿಲ್ಲ‌.. ನಂತರ ಸಾಕಷ್ಟು ಬ್ರೇಕ್ ಪಡೆದು ಕಿರುತೆರೆಗೆ ಎಂಟ್ರಿ ನೀಡಿದ ಜಗನ್ ಹಿಂತಿರುಗಿ ನೋಡಲಿಲ್ಲ..

ಹೌದು ಜೀ ಕನ್ನಡ ವಾಹಿನಿಯ ಪುನರ್ ವಿವಾಹ ಧಾರಾವಾಹಿ ಮೂಲಕ‌ ಕಿರುತೆರೆಗೆ ಕಾಲಿಟ್ಟ ಜಗನ್ ಕಿರುತೆರೆಯಲ್ಲಿ ಯಶಸ್ವಿ ನಟ ಎನಿಸಿಕೊಂಡರು.. ನಂತರ ಗಾಂಧಾರಿ.. ಸೀತಾ ವಲ್ಲಭ ಧಾರಾವಾಹಿಗಳಲ್ಲಿ ಅಭಿನಯಿಸಿದ ಜಗನ್ ಬಿಗ್ ಬಾಸ್ ನಲ್ಲಿಯೂ ಸ್ಪರ್ಧಿಸಿದ್ದರು..ಇನ್ನು ಈ ಎಲ್ಲದರ ನಂತರ ನಟನೆಯಿಂದ ಬ್ರೇಕ್ ಪಡೆದ ಜಗನ್ ಕಿರುತೆರೆಯಲ್ಲಿ ನಿರ್ಮಾಪಕನಾಗಿ ಕಾಣಿಸಿಕೊಂಡರು.. ಹೌದು ಕಲರ್ಸ್ ಕನ್ನಡ ವಾಹಿನಿಯ ರಕ್ಷಾಬಂಧನ ಧಾರಾವಾಹಿಯ ಮೂಲಕ ನಿರ್ಮಾಪಕನಾಗಿ ಎಂಟ್ರಿಕೊಟ್ಟ ಜಗನ್ ಗೆ ಆ ಧಾರಾವಾಹಿ ಅಷ್ಟಾಗಿ ಕೈ ಹಿಡಿಯಲಿಲ್ಲ.. ಧಾರಾವಾಹಿ ಶುರುವಾದ ಕೆಲವೇ ದಿನಗಳಲ್ಲಿ ರೇಟಿಂಗ್ ಇಲ್ಲದ ಕಾರಣ ಮುಕ್ತಾಯ ಮಾಡಲಾಯಿತು..

ನಂತರ ಮತ್ತೆ ತಮ್ಮ ಪ್ರಯತ್ನ ಬಿಡದ ಜಗನ್ ಲಕ್ಷಣ ಧಾರಾವಾಹಿಯ ಮೂಲಕ ಮತ್ತೆ ತೆರೆ ಮೇಲೆ ಬಂದರು.. ನಟನಾಗಿ‌ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಬಂದರು.. ಹೌದು ಲಕ್ಷಣ ಧಾರಾವಾಹಿಯ ನಟ ನಿರ್ಮಾಪಕ ಎರಡೂ ಆಗಿರುವ ಜಗನ್ ಅದೇ ಧಾರಾವಾಹಿಯ ಕ್ರಿಯೇಟಿವ್ ಡೈರೆಕ್ಟರ್ ಕೂಡ ಹೌದು‌.. ಇನ್ನು ಧಾರಾವಾಹಿ ಶುರುವಿನಲ್ಲಿ ಅಷ್ಟಾಗಿ ರೇಟಿಂಗ್ ಪಡೆಯದಿದ್ದರೂ ಸಹ ಈಗ ಸಧ್ಯ ಸಾಕಷ್ಟು ರೋಚಕ ಸಂಗತಿಗಳ ಮೂಲಕ ಹಾಗೂ ಭೂಪತಿ‌ ನಕ್ಷತ್ರಾ ಮದುವೆ ಸಂಚಿಕೆಗಳಿಂದೀಚೆಗೆ ಧಾರಾವಾಹಿ ಒಳ್ಳೆಯ ರೇಟಿಂಗ್ ಪಡೆಯುವುದರ ಜೊತೆಗೆ ಯಶಸ್ವಿಯಾಗಿದೆ..

ಇನ್ನು ತೆರೆ ಮೇಲೆ ನಕ್ಷತ್ರಾಳ ಪತಿಯಾಗಿರುವ ಭೂಪತಿ‌ ಅಲಿಯಾಸ್ ಜಗನ್ ಅವರು ಇನ್ನೂ ಸಹ ಸಿಂಗಲ್ ಎಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ.. ಆದರೆ ಜಗನ್ ಮದುವೆಯಾಗಿ ಅದಾಗಲೇ ಮೂರು ವರ್ಷ ಕಳೆದಿದ್ದು ಸಧ್ಯ ಜಗನ್ ಅವರ ಪತ್ನಿ ಕೂಡ ಸಿಕ್ಕಾಪಟ್ಟೆ ಫೇಮಸ್ ಎನ್ನಬಹುದು..ಹೌದು ಜಗನ್ ಅವರು ಕಳೆದ ಹಲವಾರು ವರ್ಷಗಳಿಂದ ರಕ್ಷಿತಾ ಮುನಿಯಪ್ಪ ಎಂಬುವಬರನ್ನು ಪ್ರೀತಿಸಿ ಎರಡೂ ಕುಟುಂಬದಲ್ಲಿ ವಿಚಾರ ತಿಳಿಸಿ ಕಳೆದ ಮೂರು ವರ್ಷಗಳ ಹಿಂದೆಯೇ 2019 ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಅಷ್ಟಕ್ಕೂ ಈ ರಕ್ಷಿತಾ ಮುನಿಯಪ್ಪ ಯಾರು.. ರಕ್ಷಿತಾ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದು ಫ್ಯಾಷನ್ ಲೋಕದಲ್ಲಿ ಸಿಕ್ಕಾಪಟ್ಟೆ ಫೇಮಸ್ ಕೂಡ ಹೌದು..

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ರಕ್ಷಿತಾ ಮುನಿಯಪ್ಪ ಅವರು ನಂತರ ದುಬೈ ನಲ್ಲಿ ಎರಡು ವರ್ಷಗಳ ಕಾಲ ಫ್ಯಾಷನ್ ಡಿಸೈನಿಂಗ್ ಬಗ್ಗೆ ಉನ್ನತ ಕೋರ್ಸ್ ಮುಗಿಸಿ ಬಂದು ಬೆಂಗಳೂರಿನಲ್ಲಿ‌ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡು ತಮ್ಮದೇ ಆದ ಹೆಸರು ಮಾಡಿದರು.. ನಂತರ ಮದುವೆ ಕುಟುಂಬ ಅಂತ ಬ್ಯುಸಿ ಆದ ರಕ್ಷಿತಾ ಮುನಿಯಪ್ಪ ಅವತು ಸಧ್ಯ ಇದೀಗ ತಮ್ಮ ವೃತ್ತಿ ಬದುಕನ್ನು ಪುನರಾರಂಭ ಮಾಡುತ್ತಿದ್ದು ಪತ್ನಿಯ ವೃತ್ತಿ ಬದುಕಿಗೆ ಜಗನ್ ಬೆಂಬಲವಾಗಿ ನಿಂತಿದ್ದಾರೆನ್ನಬಹುದು.. ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾಗಿ ವೃತ್ತಿ ಜೀವನದಲ್ಲಿ ಯೂ ತಮ್ಮದೇ ಆದ ಜೀವನವನ್ನು ಕಟ್ಟಿಕೊಂಡು ಯಶಸ್ವಿ ಜೋಡಿಯಾಗಿರುವ ಜಗನ್ ಹಾಗೂ ರಕ್ಷಿತಾ ಅವರಿಗೆ ಶುಭವಾಗಲಿ..