ದಯವಿಟ್ಟು ಯಾರೂ ಈ ಕೆಲಸ ಮಾಡಬೇಡಿ.. ಕಣ್ಣೀರಿಟ್ಟ ನಟ ಜಗ್ಗೇಶ್..

0 views

ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದು ಯಾರೂ ಸಹ ಜೀವನದಲ್ಲಿ ಇಂತಹ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಜಗ್ಗೇಶ್ ಅವರು ಆಗಾಗ ತಮ್ಮ ಜೀವನದ ಅನುಭವಗಳನ್ನು ಸಿನಿಮಾರಂಗದಲ್ಲಿ ಬೆಳೆದು ಬಂದ ಹಾದಿಯನ್ನು ದಿಗ್ಗಜ ಕಲಾವಿದರ ಜೊತೆ ಕಳೆದ ದಿನಗಳನ್ನು ಆ ನೆನಪುಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.. ರಾಯರ ಭಕ್ತರೂ ಆಗಿರುವ ಜಗ್ಗೇಶ್ ಅವರು ರಾಯರ ಕುರಿತ ಫೋಟೋಗಳು ಮಂತ್ರಾಲಯ ಗುರುಗಳ ದರ್ಶನದ ವೀಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ..

ಇದರ ಜೊತೆಗೆ ತಮ್ಮ ಫೋಟೋಗಳಿಗೆ ಕಮೆಂಟ್ ಮಾಡುವ ಬಹಳಷ್ಟು ಅಭಿಮಾನಿಗಳ ಪ್ರಶ್ನೆಗೆ.. ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ಕೊಟ್ಟ ಸ್ನೇಹದಿಂದ ಮಾತನಾಡಿಸುವುದಷ್ಟೇ ಅಲ್ಲದೇ ಸಲಹೆ ಕೇಳಿದ ಅನೇಕರಿಗೆ ಬುದ್ದಿವಾದ ಹೇಳಿ ಮಾರ್ಹದರ್ಶನವನ್ನೂ ಸಹ ಮಾಡುತ್ತಾರೆ.. ಇನ್ನು ತೆರೆಯ ಮೇಲೆ ಬಹುತೇಕ ನಗಿಸುವ ಪಾತ್ರವನ್ನೇ ಮಾಡಿರುವ ಜಗ್ಗೇಶ್ ಅವರಿಂದು ಕಣ್ಣೀರಿಟ್ಟಿದ್ದಾರೆ.. ಹೌದು ಯಾರೂ ಸಹ ಇಂತಹ ಕೆಲಸವನ್ನು‌ ಮಾಡಬೇಡಿ ಎಂದು ಮನವಿಯನ್ನೂ ಸಹ ಮಾಡಿದ್ದಾರೆ..

ಹೌದು ಅಭಿಮಾನಿಗಳು ತಮ್ಮ ಹೆಸರಿನ ಮುಂದೆ ಕಲಾವಿದರ ರಾಜಕಾರಣಿಗಳ ಹೆಸರನ್ನು ಹಾಕಿಕೊಳ್ಳುವುದು ಸಾಮಾನ್ಯವಾಗಿದೆ.. ಆದರೆ ಜಗ್ಗೇಶ್ ಅವರು ಇಂದು ಅಂತಹ ಕೆಲಸವನ್ನು ಯಾರೂ ಸಹ ಮಾಡಬೇಡಿ ಎಂದಿದ್ದಾರೆ.. ಜಗ್ಗೇಶ್ ಅವರು ಆ ರೀತಿ ಹೇಳಲು ಬಲವಾದ ಕಾರಣವೂ ಇದೆ.. ಹೌದು ಅಪ್ಪನ ಬಗ್ಗೆ ಮಾತನಾಡುತ್ತಾ ಅಭಿಮಾನಿಗಳ ಬಳಿ ಕಣ್ಣೀರಿಟ್ಟಿದ್ದಾರೆ.. ಇಲ್ಲಿದೆ ನೋಡಿ ಜಗ್ಗೇಶ್ ಅವರು ಹೇಳಿದ ಮಾತುಗಳು.‌

“ಅಪ್ಪನ ಜೊತೆ ತೆಗೆಸಿಕೊಂಡ ಕೊನೆ ಚಿತ್ರ.. ಇದು ನನ್ನ ಐವತ್ತನೇ ಹುಟ್ಟುಹಬ್ಬದ ಸಂದರ್ಭ.. ಮಗನ ಹುಟ್ಟುಹಬ್ಬ ಬಂದರೆ ಬೆಳಗಿನ ಜಾವ 5 ಗಂಟೆಗೆ ಮನೆಮುಂದೆ ಇರುತ್ತಿದ್ದರು ಅಪ್ಪ.. ಪ್ರತಿಯೊಬ್ಬ ತಂದೆಗೆ ತನ್ನ ಬೆಳವಣಿಗೆಗಿಂತ ತನ್ನ ಮಕ್ಕಳು ಸಾಧಿಸಿಬಿಟ್ಟರೆ ತಂದೆಗೆ ಆಗುವ ಆನಂದ ಬ್ರಹ್ಮಾನಂದ.. ಈ ವಿಷಯದಲ್ಲಿ ನಾನು ಅಪ್ಪನಿಗೆ ಹೆಮ್ಮೆ ಪಡುವಂತೆ ರಾಯರ ದಯೆಯಿಂದ ಬೆಳೆದು ಅಪ್ಪನ ಹಾಗೂ ವಂಶದ ಗೌರವ ಹೆಚ್ಚಿಸಿದೆ.. ಯಾಕೆ ಜನ್ಮ ಕೊಟ್ಟ ತಂದೆಗೆ ತನ್ನ ಬೆಳವಣಿಗೆಗಿಂತ ಮಕ್ಕಳ ಬೆಳವಣಿಗೆ ನೋಡಲು ಶಬರಿಯಂತೆ ಕಾಯೋದು ಎಂದರೆ ಮಗ ಗೆದ್ದರೆ ತಾನು ಗೆದ್ದಂತೆ.. ತನ್ನ ವಂಶ ಗೆದ್ದಂತಹ ಭಾವ.. ಎಲ್ಲಾ ಯುವ ಸಮಾಜಕ್ಕೂ ನನ್ನ ಸಂದೇಶ.. ದಯವಿಟ್ಟು ಎಷ್ಟೇ ಶ್ರಮವಾದರೂ ಅಪಮಾನವಾದರೂ.. ಅವಮಾನವಾದರೂ.. ಸಹಿಸಿ.. ನಿಮ್ಮ ಮಿತಿಯಲ್ಲಿ ನಿಮ್ಮ ಇಷ್ಟ ಕ್ಷೇತ್ರದಲ್ಲಿ ಅಪ್ಪ ಬದುಕಿರುವಾಗಲೇ ಜೀವನಗೆದ್ದು.. ಅಪ್ಪನಿಗೆ ಹೆಮ್ಮೆ ಪಡುವಂತೆ ಮಾಡಿಬಿಡಿ.. ಆಗ ನಿಮ್ಮ ಮಕ್ಕಳು ನಿಮ್ಮ ಹೆಸರು ಉಳಿಸುವ ಯೋಗ ರಾಯರು ನೀಡ್ತಾರೆ.. ನಾವು ನಡೆದುಕೊಂಡಂತೆ ನಮ್ಮ ಮುಂದಿನ ಪೀಳಿಗೆ ಇರುತ್ತದೆ..

ಜೊತೆಗೆ ನಿಮ್ಮ ಹೆಸರಿನ ಪಕ್ಕ ಅಪ್ಪನ ಹೆಸರು ಹೆಮ್ಮೆಯಿಂದ ಸೇರಿಸಿಕೊಳ್ಳಿ.. ಅದರ ಖುಷಿಯೇ ಬೇರೆ.. ಅದಕ್ಕೆ ನನ್ನ ಹೆಸರು ಜಗ್ಗೇಶ್ ಶಿವಲಿಂಗಪ್ಪ.. ಯಾವುದೇ ಕಾರಣಕ್ಕೂ ನಿಮ್ಮ ಹೆಸರಿನ ಪಕ್ಕ ಯಾವ ನಟನಟಿ ರಾಜಕಾರಣಿ ಹೆಸರು ಸೇರಿಸಬೇಡಿ.. ಜನ್ಮ ಕೊಟ್ಟ ತಂದೆ ಒಳಗೆ ದುಃಖ ಪಡುತ್ತಾನೆ.. ನೆನಪಿಡಿ ನಾವು ಏನೇ ಸಾಧಿಸಿದರೆ ಆ ಸಾಧನೆಗೆ ದೇಹ ಜೀವ ಉಸಿರು ಅಪ್ಪಮ ಭಿಕ್ಷೆಯಿಂದಲೇ.. ಇಂದು ಅಪ್ಪನ ನಾನು ನೆನೆಯಲು ಕಾರಣ ಅಪ್ಪ ಹುಟ್ಟಿದ ದಿನ 21 ಜನವರಿ 1931.. ಅಪ್ಪ ಹುಟ್ಟಿದ್ದು.. ತಿಳಿದೋ ತಿಳಿಯದೆಯೋ ಯವ್ವನದ ಮದದಲ್ಲಿ ಅಪ್ಪನಿಗೆ ನೋಯಿಸಿದ್ದರೆ ಕ್ಷಮೆಯಿರಲಿ ಅಪ್ಪ ನಿನ್ನ ಮಗನ ಮೇಲೆ.. ಲವ್ ಯು ಅಪ್ಪ.. ಎಂದು ಕಣ್ಣೀರಿಟ್ಟಿದ್ದಾರೆ..