ಹಬ್ಬ ಮಾಡಲು‌ ದುಡ್ಡಿಲ್ಲದೇ 200 ರೂಪಾಯಿ‌ ಕೊಡಿ ಎಂದು ಜಗ್ಗೇಶ್ ಕೇಳಿದ್ದಕ್ಕೆ ರವಿಚಂದ್ರನ್ ಅವರು ಅಂದು ಕೊಟ್ಟ ಹಣವೆಷ್ಟು ಗೊತ್ತಾ..

0 views

ಸಿನಿಮಾ ರಂಗ ಯಾವ ಮಟ್ಟದ ಬದಲಾವಣೆ ಆಗಿದೆ ಎಂದರೆ ದಶಕಗಳ ಹಿಂದಿನ ಚಿತ್ರರಂಗವೇ ಬೇರೆ ಈಗಿನ ಚಿತ್ರರಂಗವೇ ಬೇರೆ.. ಸಾಮಾನ್ಯ ಜೀವನದಂತೆ ಸಿನಿಮಾರಂಗದಲ್ಲಿಯೂ ಆಗ ಸಹಕಲಾವಿದರಿಗೆ ನೂರು ಇನ್ನೂರು ರೂಪಾಯಿ ಸಂಭಾವನೆ ಇತ್ತು.. ಈಗಿನ ಬಹಳಷ್ಟು ಕಲಾವಿದರು ಕಾರಿನಲ್ಲಿಯೇ ಓಡಾಡುತ್ತಿರುತ್ತಾರೆ.. ಆದರೆ ಆಗ ಸಂಸಾರದ ನೌಕೆ ಸಾಗಿಬಿಟ್ಟರೆ ಸಾಕು ಎನ್ನುವ ಕಲಾವಿದರೂ ಸಹ ಇದ್ದರು.. ಅಂತವರಲ್ಲಿ ನಟ ಜಗ್ಗೇಶ್ ಅವರು ಸಹ ಒಬ್ಬರು.. ಊರಿನಲ್ಲಿ ಅವರ ತಂದೆ ಅನುಕೂಲವಾಗಿದ್ದರೂ ಸಹ.. ಸಿನಿಮಾರಂಗದಲ್ಲಿ ಏನಾದರು ಮಾಡಬೇಕು.. ನಟನಾಗಿ ಗುರುತಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಬೆಂಗಳೂರಿಗೆ ಬಂದ ಜಗ್ಗೇಶ್ ಅವರು ನಂತರ ಚಿಕ್ಕ ವಯಸ್ಸಿಗೆ ಪರಿಮಳ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.. ಅತ್ತ ಇನ್ನೂ ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳಬೇಕಿದ್ದ ಜಗ್ಗೇಶ್ ಅವರಿಗೆ ಸಂಸಾರವನ್ನೂ ಸಹ ನೋಡಿಕೊಳ್ಳಬೇಕಾದ ಜವಾಬ್ದಾರಿ ಇತ್ತು..

ಆದರೆ ಆಗೆಲ್ಲ ರವಿಚಂದ್ರನ್ ಅವರು ರಾಜ್ ಕುಮಾರ್ ಕುಟುಂಬ ರಘುವೀರ್ ಕುಟುಂಬ ಹೀಗೆ ಸಾಕಷ್ಟು ಜನರೂ ಸಹ ಸಿನಿಮಾರಂಗದಲ್ಲಿ ಅನುಕೂಲಸ್ಥರಾಗಿದ್ದವರು.. ಸಿನಿಮಾ ನಿರ್ಮಾಣಗಳಲ್ಲಿ ತೊಡಗಿಸಿಕೊಂಡಿದ್ದವರು.. ಇನ್ನು ಇತ್ತ ತಮ್ಮ ಹಳೆಯ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ದಾಟಿ ಬಂದ ಜಗ್ಗೇಶ್ ಅವರು ಆರ್ಥುಕವಾಗಿ ಬಹಳಷ್ಟು ಕಷ್ಟಗಳನ್ನು ಪಟ್ಟಿದ್ದರು.. ನೂರು ಇನ್ನೂರು ರೂಪಾಯಿ ಇದ್ದರೆ ಅವರ ಮನೆಯಲ್ಲಿ ಹಬ್ಬಗಳು ನೆರವೇರುತ್ತಿದ್ದವು.. ಆದರೆ ಕೆಲ ವರ್ಷಗಳ ಹಿಂದಿನ ಸಮಯದಲ್ಲಿ ಗಣೇಶ ಹಬ್ಬದ ಸಮಯದಲ್ಲಿ ಮನೆಗೆ ಬಂದು ಹಬ್ಬ ಮಾಡಲು ಮನೆಯಲ್ಲಿ ದುಡ್ಡು ಇದೆಯಾ ಎಂದು ಪರಿಮಳರನ್ನು ಜಗ್ಗೇಶ್ ಅವರು ಕೇಳಿದ್ದಾರೆ.. ಆ ಸಮಯದಲ್ಲಿ ಮನೆಯಲ್ಲಿ ಹಣವಿಲ್ಲದ ವಿಚಾರ ತಿಳಿದ ಜಗ್ಗೇಶ್ ಅವರು ರವಿಚಂದ್ರನ್ ಅವರ ಬಳಿ ತೆರಳಿದ್ದಾರೆ..

ಆಗ ರವಿಚಂದ್ರನ್ ಅವರ ಬಳಿ ಮಾತನಾಡಲು ಎಲ್ಲರೂ ಹೆದರುತ್ತಿದ್ದರು.. ಇತ್ತ ಜಗ್ಗೇಶ್ ಅವರೂ ಸಹ ಹೆದರಿಕೆಯಿಂದಲೇ ಅವರ ಬಳಿ ಹಣ ಕೇಳಲು ಹೋದರು.. ಆಗ ಇನ್ನೂರು ರೂಪಾಯಿ ದೊಡ್ಡ ಹಣವೂ ಆಗಿತ್ತು.. ಬಾಗಿಲ ಬಳಿ ನಿಂತ ಜಗ್ಗೇಶ್ ಅವರು ರವಿಚಂದ್ರನ್ ಅವರು ಬರುವುದನ್ನೇ ಕಾದು ನಿಂತಿದ್ದರು.. ಅತ್ತ ರವಿಚಂದ್ರನ್ ಅವರು ಬಂದ ಕೂಡಲೇ ಏನೋ ಎಂದು ಕೇಳಿದ್ದಾರೆ.. ಇತ್ತ ಜಗ್ಗೇಶ್ ಅವರು ಸಾರ್ ನಾಳೆ ಹಬ್ಬ ಒಂದಿನ್ನೂರು ರೂಪಾಯಿ ಇದ್ದರೆ ಬೇಕಿತ್ತು ಎಂದಿದ್ದಾರೆ.. ತಕ್ಷಣ ರವಿಚಂದ್ರನ್ ಅವರು ಮಾಡಿದ ಕೆಲಸವೇ ಬೇರೆ.. ಹೌದು ತಕ್ಷಣ ರವಿಚಂದ್ರನ್ ಅವರು ಹಿಂದೆ ಮುಂದೆ ಏನೂ ಯೋಚಿಸದೇ ಹೇ ಬಾಬು.. ಇವನಿಗೆ ಐನೂರು ರೂಪಾಯಿ ಕೊಟ್ಟು ಕಳುಹಿಸು ಎಂದರು.. ತಕ್ಷಣ ಸಂತೋಷಗೊಂಡ ಜಗ್ಗೇಶ್ ಅವರು ಹಣ ತಂದು ತಮ್ಮ ಕುಟುಂಬದ ಜೊತೆ ಸಂತೋಷದಿಂದ ಹಬ್ಬ ಮಾಡಿದರು.. ಆದರೆ

ಈ ವಿಚಾರವನ್ನು ಸ್ವತಃ ಹೇಳಿಕೊಂಡ ಜಗ್ಗೇಶ್ ಅವರು ಪ್ರಭಾಕರ್ ಅವರು ಹಾಗೂ ಅಂಬರೀಶ್ ಅವರ ಬಗ್ಗೆಯೂ ಸಹ ಹೇಳಿದರು‌.. ಹಣಕಾಸಿನ ವಿಚಾರದಲ್ಲಿ ಅವರುಗಳು ಹೇಗೆ ನಡೆದುಕೊಂಡರು ಎಂದು ತಿಳಿಸಿದರು.. ಹೌದು ನಿನ್ನೆ ರಂಗನಾಯಕ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ತಮ್ಮ ಹಳೆಯ ದಿನಗಳನ್ನು ನೆನೆದ ಜಗ್ಗೇಶ್ ಅವರು ಕೊರೊನಾ ದಿಂದಾಗಿ ನಮ್ಮ ಇಂಡಸ್ಟ್ರಿ ತುಂಬಾ ಕಷ್ಟ ಪಟ್ಟಿದೆ.. ತಂತ್ರಜ್ಞರು ಕಲಾವಿದರನ್ನು ನೆನಪಿಸಿಕೊಂಡರೆ ಕಣ್ಣೀರು ಬರುತ್ತದೆ.. ಇಂದು ಬಹಳ ಯಾಂತ್ರಿಕ ಬದುಕು.. ಆದರೆ ನಾವೆಲ್ಲಾ ಬಹಳ ಭಾವನಾತ್ಮಕವಾದ ದಿನಗಳಲ್ಲಿ ಬೆಳೆದವರು.. ನಾವೆಲ್ಲಾ ಆಗ ಸೆಟ್ ಗೆ ಹೋದರೆ.. ಏನೋ ಹೇಗಿದಿಯಾ.. ಪರಿಮಳ ಹೇಗಿದಾಳೆ.. ಎಲ್ಲಾ ಆರಾಮಾ.. ಎಂದೆಲ್ಲಾ ಕೇಳುತ್ತಿದ್ದರು..

ಇನ್ನು ಹಬ್ಬದ ಸಮಯಗಳಲ್ಲಿ ಒಬ್ಬರು ಇನ್ನೊಬ್ಬರಿಗೆ ನೆರವಾಗುತ್ತಿದ್ದರು.. ಒಮ್ಮೆ ಗಣೇಶ ಹಬ್ಬದ ಸಮಯದಲ್ಲಿ ಮನೆಯಲ್ಲಿ ದುಡ್ಡಿಲ್ಲದ ಕಾರಣ ನಾನು ರವಿಚಂದ್ರನ್ ಅವರ ಬಳಿ ಕೇಳಲು ಹೋದೆ.. ಅವರು ಹಿಂದೆ ಮುಂದೆ ನೋಡದೇ ಐನೂರು ರೂಪಾಯಿ ಕೊಟ್ಟು ಕಳುಹಿಸಿದ್ರು.. ನಮ್ಮ ಚಿತ್ರರಂಗ ಅಷ್ಟೊಂದು ಸಹಾಯ ಗುಣವನ್ನು ಹೊಂದಿತ್ತು.. ಇನ್ನು ಪೇಮೆಂಟ್ ವಿಚಾರದಲ್ಲಿ ಪ್ರಭಾಕರ್ ಅವರು ಮತ್ತು ಅಂಬರೀಶ್ ಅವರು ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ.. ಅದೇ ಗುರು ಸ್ವಲ್ಪ ಮನೇಲಿ ರೇಷನ್ ಕಾಲಿ ಆಗಿದೆ.. ಪ್ರಡ್ಯೂಸರ್ ಪೇಮೆಂಟ್ ಕೊಟ್ಟಿಲ್ಲ ಎಂದರೆ ತಕ್ಷಣ ಪ್ರಭಾಕರ್ ಅವರು ಪ್ರಡ್ಯೂಸರ್ ಬಳಿ ಹೋಗಿ ಆ ಹುಡುಗ ಕೆಲಸ ಮಾಡಿದ್ದಾನೆ ಅವನ ಪೇಮೆಂಟ್ ಕೊಡೋಕೆ ಏನಾಗಿದೆ ಅಂತ ಹೇಳಿ ದುಡ್ಡು ಕೊಡಿಸುತ್ತಿದ್ದರು.. ಅಂಬರೀಶ್ ಅವರು ಸಹ ಅದೇ ರೀತಿ ನಡೆದುಕೊಳ್ಳುತ್ತಿದ್ದರು ಎಂದು ಹಳೆಯ ದಿನ ಈಗ ಮತ್ತೆ ಬಾರದು.. ಇದು ಯಾಂತ್ರಿಕ ಬದುಕು ಅಷ್ಟೇ ಎಂದಿದ್ದಾರೆ..