ಜಗ್ಗೇಶ್ ಅವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದರಾ ನಟಿ ವಿಜಯಲಕ್ಷ್ಮಿ.. ಕಾರಣವೇನು ಗೊತ್ತಾ? ಪಾರ್ವತಮ್ಮನವರು ಮಧ್ಯ ಬಂದು ವಿವಾದ ಬಗೆ ಹರಿಸಿದ್ದರು..

0 views

ಬಹುಭಾಷಾ ನಟಿ ವಿಜಯಲಕ್ಷ್ಮಿ ಅವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.. ಹೌದು ಕನ್ನಡದ ಖ್ಯಾತ ನಟ ನವರಸ ನಾಯಕ ಜಗ್ಗೇಶ್ ಅವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ವಿಚಾರ ಇದೀಗ ಮತ್ತೆ ಸುದ್ದಿಯಾಗುತ್ತಿದೆ.. ಅಷ್ಟಕ್ಕೂ ಏನಾಗಿತ್ತು.. ಅಂದು ನಡೆದದ್ದೇನು.. ಪಾರ್ವತಮ್ಮನವರು ನ್ಯಾಯ ತೀರ್ಮಾನ ಮಾಡಿ ಕೊನೆಗೆ ಮಾಡಿದ್ದೇನು ಗೊತ್ತಾ.‌. ಹೌದು ಒಂದಷ್ಟು ವರ್ಷಗಳ ಹಿಂದೆ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ವಿಜಯಲಕ್ಷ್ಮಿ ಅವರು ನಾಗಮಂಡಲ ಸೂರ್ಯವಂಶ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದರು.. ನಂತರ ಸೃಜನ್ ಅವರ ಜೊತೆಗೆ ಮದುವೆ ಮಾತುಕತೆ.. ಅದ್ಧೂರಿ ನಿಶ್ಚಿತಾರ್ಥ.. ನಂತರ ಮತ್ತೆ ವ್ಯಯಕ್ತಿಕ ಕಾರಣಗಳಿಂದ ದೂರಾದರು. ಆನಂತರ ಇದ್ದಕಿದ್ದ ಹಾಗೆ ಚಿತ್ರರಂಗದಿಂದಲೂ ದೂರವಾದ ನಟಿ ವಿಜಯಲಕ್ಷ್ಮಿ ಅವರು ಕಳೆದ ಎರಡು ವರ್ಷಗಳಿಂದ ಸಾಕಷ್ಟು ಸುದ್ದಿಯಾಗಿದ್ದರು.. ಅನಾರೋಗ್ಯದ ಕಾರಣವಾಗಿ ಸುದ್ದಿಯಾಗಿದ್ದ ವಿಜಯಲಕ್ಷ್ಮಿ ಅವರಿಗೆ ಸಾಕಷ್ಟು ಕಲಾವಿದರು ಸಹಾಯ ಹಸ್ತ ಚಾಚಿದ್ದೂ ಉಂಟು.. ಇನ್ನು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುವ ವಿಜಯಲಕ್ಷ್ಮಿ ಅವರನ್ನು ಸೃಜನ್ ಅವರ ವಿಚಾರಕ್ಕೆ ಸಾಕಷ್ಟು ಟ್ರೋಲ್ ಮಾಡಲಾಗುತಿತ್ತು..

ಸೃಜನ್ ಅವರಿಗೆ ಕೈಕೊಟ್ಟದ್ದಕ್ಕೆ ನೀವು ಬೀದಿಗೆ ಬಂದದ್ದು ಎಂದೂ ಸಹ ಹೇಳಲಾಗುತಿತ್ತು.. ಇದೆಲ್ಲಾ ಕಾರಣಗಳಿಂದ ಇದೀಗ ವೀಡಿಯೋ ಮೂಲಕ ವಿಜಯಲಕ್ಷ್ಮಿ ಅವರು ಸ್ಪಷ್ಟನೆ ನೀಡಿದ್ದು ಅಂದು ಸೃಜನ್ ಅವರ ಜೊತೆ ಮದುವೆ ಮುರಿದು ಬೀಳಲು ನಿಜವಾದ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.. ಜೊತೆಗೆ ಜಗ್ಗೇಶ್ ಅವರಿಗೆ ಚಪ್ಪಳಿಯಲ್ಲಿ ಹೊಡೆದ ವಿವಾದದ ಬಗ್ಗೆಯೂ ಮಾತನಾಡಿದ್ದಾರೆ.. ಹೌದು ಮೊದಲು ಸೃಜನ್ ಅವರ ಮದುವೆ ವಿಚಾರ ಮಾತನಾಡಿರುವ ವಿಜಯಲಕ್ಷ್ಮಿ ಅವರು.. “ಈಗ ಎಲ್ಲಾ ಕಡೆ ನೋಡಿದ್ರೂ ಸೃಜನ್ ನ ಯಾಮಾರಿಸಿದ್ದಕ್ಕೆ ಬೀದಿಗೆ ಬಂದುಬಿಟ್ಲು ಅಂತ ಹೇಳ್ತಿದ್ದಾರೆ.. ನಾನು ಯಾವ ಬೀದಿಗೆ ಬಂಡಿದ್ದೀನಿ ಅಂತ ಸ್ವಲ್ಪ ಹೇಳ್ಬೇಕು.. ಯಾಕಂದರೆ ಮಾದ್ಯಮದವರೇ ಎಲ್ಲವನ್ನೂ ಹೇಳ್ತಾರೆ.. ನಾವ್ ಹೇಗಿದಿವಿ ಎಲ್ಲಿ ಹುಟ್ಟಿದ್ವಿ.. ಯಾರನ್ನ ಯಾಮಾರೆಸಿದ್ವಿ.. ಜಾತಕ ಹೇಳೋರ ಹತ್ರ ಹೋಗೋದೆ ಬೇಡ.. ಎಲ್ಲವನ್ನು ಮಾದ್ಯಮದವರೇ ಹೇಳಿ ಬಿಡ್ತಾರೆ.. ಈಗ ಹೇಳಿ ನಾನು ಯಾರನ್ನ ಯಾಮಾರಿಸಿದೆ.. ಯಾಮಾರೆಸಿದೆ ಅನ್ನೋದು ದೊಡ್ಡ ಪದ.. ಬೇಕಿದ್ರೆ ಸೃಜನ್ ಅವರನ್ನ ಹೋಗಿ ಕೇಳಿ.. ಲಕ್ಷ ಖರ್ಚು ಮಾಡಿ ಚೆನ್ನೈ ನಲ್ಲಿ ನಿಶ್ಚಿತಾರ್ಥ ಮಾಡ್ಸಿದ್ದು ನಾವೇ.. ಒಂದಲ್ಲಾ ಎರಡಲ್ಲಾ ಬಹಳಷ್ಟು ಲಕ್ಷ ಖರ್ಚು ಮಾಡಿ ನಿಶ್ಚಿತಾರ್ಥ ಮಾಡ್ಸಿದ್ದು ನಾವೇ.. ಅದಾದ ಮೇಲೆ ಎಲ್ಲಾ ತಯಾರಿ‌ ಮಾಡ್ತಾ ಮಾಡ್ತಾ ಒಂದು ಮಾತು ಬಂತು.. ನೀವು ತಮಿಳವರು..ನೀವ್ ಈ ಈ ತರ ಮಾಡ್ತೀರಾ.. ನಾವ್ ಕನ್ನಡದವರು ನಾವ್ ಈ ರೀತಿ ಮಾಡಲ್ಲಾ ಹಾಗೆ ಹೀಗೆ ಅಂತ.. ಒಂದ್ ಸರಿ ಎರಡ್ ಸರಿ ಅಲ್ಲ.. ಪದೇ ಪದೇ ಆ ರೀತಿ ಮಾತು ಬಂತು..

ದಿನಾ ಒಂದ್ ತರ ಜಗಳದಲ್ಲಿಯೇ ಇತ್ತು.. ನನ್ನ ಸೃಜನ್ ನಡುವಿನ ಸಂಬಂಧದಲ್ಲಿ ಯಾವುದೇ ಬಿರುಕು ಇರ್ಲಿಲ್ಲ.. ನಾವ್ ಒಳ್ಳೆಯ ಸ್ನೇಹಿತರೇ ಆಗಿದ್ವಿ.. ಆದರೆ ಮನೆಯಲ್ಲಿ ಈತರ ಮಾತ್ ಬಂತು.. ಸೃಜನ್ ಅವರು ನಮ್ಮ ತಂದೆ ಇಲ್ಲವಾದ ಮನೆಗೆ ಬಂದು ಒಳ್ಳೆ ಉದ್ದೇಶದಿಂದಲೇ ಬಂದು ಮದುವೆ ಮಾಡಿಕೊಳ್ಳೋದಾಗಿ ಹೇಳಿದ್ರು.. ನಂತರ ಎಲ್ಲ ಒಪ್ಪಿಗೆಯಾಗಿ ನಿಶ್ಚಿತಾರ್ಥ ಆಯ್ತು.. ಆದರೆ ಈ ರೀತಿ ತಮಿಳವರು ಅಂತ ಮನಸ್ತಾಪ ಬಂತು.. ಆಗ ಬಹಳ ಭಾರವಾದ ಮನಸ್ಸಿನಿಂದಲೇ ಇಬ್ಬರೂ ಕೂತ್ಕೊಂಡು ಪ್ರಬುದ್ಧವಾಗಿಯೇ ನಿರ್ಧಾರ ತಗೊಂಡ್ವಿ.. ನಾನು ಸೃಜನ್ ಅವರನ್ನ ಕೂರಿಸಿಕೊಂಡು ಹೇಳಿದೆ.. ನಾನು ಬಹಳ ಒಳ್ಳೆಯ ರೀತಿಯಲ್ಲಿಯೇ ಬಯಸಿದೆ.. ಮನೆಯವರು ಆಸೆ ಪಡೋ ರೀತಿ.. ಬಯಸೋ ರೀತಿಯಲ್ಲಿಯೇ ಹೆಣ್ಣು ಸಿಗಬೇಕು.. ಆಗಲೇ ಜೀವನ ಚೆನ್ನಾಗಿರೋದು.. ಅದನ್ನ ನಾನು ಸ್ವಚ್ಛವಾದ ಪ್ರೀತಿ ಅಂತ ಭಾವಿಸ್ತೇನೆ.. ಯಾವುದು ಪ್ರೀತಿ ಅಂದ್ರೆ.. ನಮಗೆ ಅವರು ಸಿಗ್ತಾರಾ ಇಲ್ವಾ ಅನ್ನೋದಲ್ಲ.. ಅವರು ಚೆನ್ನಾಗಿರ್ಬೇಕು ಅಂತ ಬಯಸೋದು ನಿಜವಾದ ಪ್ರೀತಿ.. ನಾನು ಅದನ್ನೇ ಹೇಳಿದೆ.. ಮನೆಯಲ್ಲಿ ಈತರ ಭಾಷೆ ವಿಚಾರದಲ್ಲಿ ಮನಸ್ತಾಪ ಇದ್ದಾಗ ಇದನ್ನ ಮುಂದುವರೆಸೋದು ಬೇಡ ಅಂತ.. ದೇವರ ಸಾಕ್ಷಿಯಾಗಿ ಅವರನ್ನ ಕೂರಿಸ್ಕೊಂಡು ಇದನ್ನೇ ಹೇಳಿದೆ.. ಜೀವನದ ಉದ್ದಕ್ಕೂ ಇದೇ ಮನಸ್ತಾಪ‌ ಮುಂದುವರೆಸಿಕೊಂಡು ಹೋಗೋಕೆ ಆಗಲ್ಲ.. ಮನೆಯವರು ನೆಮ್ಮದಿಯಾಗಿ ಇರ್ಬೇಕು ಅಂತ ಹೇಳಿದೆ.. ಅವತ್ತು ನಾನು ಏನು ಬಯಸಿದ್ನೋ ಇವತ್ತು ಸೃಜನ್ ಅವರು ಅದೇ ರೀತಿ ಬದುಕ್ತಾ ಇದ್ದಾರೆ.. ಬಾಳ್ತಾ ಇದ್ದಾರೆ..

ಆದರೆ ನೀವೇನ್ ಹೇಳ್ತಿದ್ದೀರಾ ಅಂದ್ರೆ ಸೃಜನ್ ಗೆ ನೀನು ಮೋಸ ಮಾಡಿದ್ದಕ್ಕೆ ಬೀದಿಗೆ ಬಂದಿದ್ದೀಯಾ ಅಂತಿದ್ದೀರಾ.. ನಾನೇನ್ ಮಾಡಿದೆ.. ಈಗಿನವರ ತರ ಮದುವೆಯಾಗಿ ಆಮೇಲೆ ಜಗಳ ಮಾಡಿಕೊಂಡು ಡಿವೋರ್ಸ್ ತಗೊಂಡು ಕೊಡು ನನಗೆ ಒಂದ್ ಕೋಟಿ ಪರಿಹಾರ ಅಂದುಕೊಂಡು ನಾನ್ ಮಾಡ್ಲಿಲ್ಲವಲ್ಲ.. ಕನ್ನಡದಲ್ಲಿ ಎಲ್ಲಾ ನಟಿಯರಿಗೂ ಡಿವೋರ್ಸ್ ಆಗಿದೆ.. ಈಗ ಮತ್ತೊಬ್ಬರ ಜೊತೆ ಜೀವನ ಮಾಡ್ತಿದ್ದಾರೆ.. ಅವರ ಬಗ್ಗೆ ಬರೀತಾ ಇದ್ದೀರಾ.. ಇವನನ್ನ ಯಾಮಾರಿಸಿ ಬೀದಿಗೆ ಬಂದ್ಳು ಅಂತ ಬರೀತಾ ಇದ್ದೀರಾ.. ಇಲ್ಲಾ ತಾನೆ.. ಆದ್ರೆ ನನ್ನ ಬಗ್ಗೆ ಯಾಕ್ ಹೀಗೆ ಬರೀತಾ ಇದ್ದೀರಾ.. ಜೀವನದಲ್ಲಿ ನಾನು ಬಹಳಷ್ಟು ಕಷ್ಟ ಪಟ್ಟು ಬಂದಿದ್ದೀನಿ.. ಸುಮ್ನೆ ಯಾರ್ಯ್ರಾರೋ ಏನೇನೋ ಮಾತಾಡೋದು ನನಗೆ ಇಷ್ಟವಿಲ್ಲ.. ನನ್ನನ್ನ ಮಾತೃಭಾಷೆ ತಮಿಳು ಅಂತ ಮಾತನಾಡಿದ್ರು.. ಆದರೆ ಆಮೇಲೆ ಪೂಜಾ ಅವರು ತಮಿಳು ಧಾರಾವಾಹಿಯಲ್ಲಿ ಅಭಿನಯಿಸಿದ್ರು.. ಆಗ ನನಗೆ ಆಶ್ಚರ್ಯ ಆಯ್ತು.. ನನ್ನ ಮಾತೃ ಭಾಷೆ ತಮಿಳು ಅಂತ ಹೇಳ್ಬಿಟ್ಟು ಈಗ ತಮಿಳಲ್ಲಿ ಅಭಿನಯಿಸ್ತಾ ಇದ್ದಾರೆ.. ಅಂತ ನಾನು ಸುಮ್ಮನಾಗ್ಬಿಟ್ಟೆ.. ಎಂದಿದ್ದಾರೆ.. ಇದರ ಜೊತೆಗೆ ನಟ ಜಗ್ಗೇಶ್ ಅವರ ಬಗ್ಗೆಯೂ ಮಾತನಾಡಿರುವ ವಿಜಯಲಕ್ಷ್ಮಿ ಅವರು ಅಂದು ಜಗ್ಗೇಶ್ ಅವರಿಗೆ ಚಪ್ಪಲಿಯಲ್ಲಿ ಹೊಡೆದ ವಿಚಾರದ ಕುರಿತು ತಿಳಿಸಿದ್ದಾರೆ..

ಹೌದು ನನ್ನ ಬಗ್ಗೆ ಮೊದಲು ವಿವಾದ ಸೃಷ್ಟಿ ಮಾಡಿದ್ದು ಜಗ್ಗೇಶ್ ಅವರು.. ಅವರು ವಿಜಯಲಕ್ಷ್ಮಿ ನನಗೆ ಚಪ್ಪಲಿಯಲ್ಲಿ ಹೊಡೆದಳು ಎಂದು ವಿವಾದ ಸೃಷ್ಟಿ ಮಾಡಿ ನನ್ನನ್ನು ಫಿಲಂ ಛೇಂಬರ್ ಗೆ ಅಲೆಯುವಂತೆ ಮಾಡಿ ಪದೇ ಪದೇ ನನ್ನ ಬಳಿ ಕ್ಷಮೆ ಕೇಳಿಸಿದ್ರು.. ಆಗ ಪಾರ್ವತಮ್ಮ ಅವರು ನನ್ನನ್ನು ಕರೆಸಿ ಈ ವಿವಾದದಿಂದ ನನಗೆ ಮುಕ್ತಿ ನೀಡಿದ್ರು.. ಜಗ್ಗೇಶ್ ಅವರು ಪ್ರತಿಯೊಂದು ಮಾತಿನಲ್ಲೂ ರಾಘವೇಂದ್ರ ಸ್ವಾಮಿಗಳು ರಾಘವೇಂದ್ರ ಸ್ವಾಮಿಗಳು ಅಂತಾರಲ್ಲಾ.. ಅದೇ ರಾಘವೇಂದ್ರ ಸ್ವಾಮಿಗಳ ಮೇಲೆ ಪ್ರಮಾಣ ಮಾಡಿ ಹೇಳಲಿ ವಿಜಯಲಕ್ಷ್ಮಿ ಅವರು ನನಗೆ ಚಪ್ಪಲಿಯಲ್ಲಿ ಹೊಡೆದಿದ್ರು ಅಂತ.. ಆಗ ನಾನು ಒಪ್ಪಿಕೊಳ್ತೇನೆ.. ಎಂದಿದ್ದಾರೆ.. ಅಷ್ಟೇ ಅಲ್ಲದೇ ಈ ರೀತಿ ಪದೇ ಪದೇ ನನ್ನನ್ನು ವಿವಾದಕ್ಕೆ ಸಿಲುಕಿಸಿ ನಾನು ಬೆಂಗಳೂರು ಬಿಡುವಂತೆ ಮಾಡಿದ್ರು.. ಆದರೆ ಈಗ ಹದಿನೈದು ವರ್ಷಗಳ ನಂತರ ಮತ್ತೆ ಬೆಂಗಳೂರಿಗೆ ಬಂದು ನೆಲೆಸಿದ್ದೇನೆ.. ಇನ್ನಾದರೂ ನನ್ನ ಬಗ್ಗೆ ಸೃಜನ್ ಗೆ ಯಾಮಾರಿಸಿದೆ ಅಂತ ಹೇಳಬೇಡಿ.. ನಾನು ಮಾಡಿರುವ ಒಳ್ಳೆಯ ಕೆಲಸದ ಬಗ್ಗೆ ಬರೆಯಿರಿ.. ಆಗಿನ ಕಾಲದಲ್ಲಿಯೇ ಫಿಲಂ ಅಸೋಸಿಯೇಷನ್ ಗೆ ನಾನು ಒಂದು ಲಕ್ಷ ಕೊಟ್ಟಿದ್ದೆ.. ಆದರೆ ಯಾರು ಸಹ ಅದರ ಬಗ್ಗೆ ಮಾತನಾಡೊಲ್ಲ.. ಸೃಜನ್ ಗೆ ಯಾಮಾರಿಸಿದೆ ಯಾಮಾರಿಸಿದೆ ಅಂತೀರಾ.. ಇನ್ನಾದರೂ ನನ್ನ ಬಗ್ಗೆ ಒಳ್ಳೆಯದನ್ನು ಬರೆಯಿರಿ ಎಂದಿದ್ದಾರೆ.. ಇನ್ನು ಬಹುತೇಕ ಆಆರಿಗೂ ತಿಳಿಯದ ವಿಚಾರವನ್ನು ಇದೀಗ ವಿಜಯಲಕ್ಷ್ಮಿ ಅವರು ಬಿಚ್ಚಿಟ್ಟಿದ್ದು ಈ ಬಗ್ಗೆ ಜಗ್ಗೇಶ್‌ ಅವರು ಪ್ರತಿಕ್ರಿಯೆ ನೀಡುವರಾ ಕಾದು ನೋಡಬೇಕಿದೆ..