ವಿಷ್ಣುವರ್ಧನ್ ಅವರಿಗೆ ಗೌರವ ಕೊಡಿ ಎಂದದ್ದಕ್ಕೆ ಜಗ್ಗೇಶ್ ಅವರು ಹೇಳಿದ ಮಾತೇನು ಗೊತ್ತಾ..

0 views

ಮೊನ್ನೆಮೊನ್ನೆಯಷ್ಟೇ ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಅವರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 40 ವರ್ಷಗಳು ಸಂಪೂರ್ಣ ಗೊಂಡ ಕಾರಣ ಎಲ್ಲರೂ ಜಗ್ಗೇಶ್ ಅವರಿಗೆ ಶುಭಾಶಯ ತಿಳಿಸಿದ್ದರು.. ಬಹಳಷ್ಟು‌ ಮಾದ್ಯಮದಲ್ಲಿ ಸಂದರ್ಶನ ನೀಡಿದ್ದರು.. ಬಹಳ ಕಷ್ಟ ಪಟ್ಟು ಮೇಲೆ‌ ಬಂದ ನಟ ಜಗ್ಗೇಶ್ ಅವರು ತಮ್ಮ ಸಿನಿಮಾ ಜರ್ನಿಯ ಬಗ್ಗೆ ತೆರೆದಿಟ್ಟಿದ್ದರು.. ಈ ಸಮಯದಲ್ಲಿ ಕನ್ನಡಕ್ಕೆ ಬೇರೆ ಭಾಷೆಯ ಸಿನಿಮಾ ಹಾಗೂ ಧಾರಾವಾಹಿಗಳು ಡಬ್ಬಿಂಗ್ ಆಗುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು.. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾದಿಂದ ಏನೂ ಉಪಯೋಗವಿಲ್ಲ ಎಂದಿದ್ದರು..

ಈ ವಿಚಾರಕ್ಕೆ ಸಂಬಂಧ ಒಅಟ್ಟ ಹಾಗೆ ಸುದೀಪ್ ಹಾಗೂ ಯಶ್ ಅವರ ಅಭಿಮಾನಿಗಳು ಜಗ್ಗೇಶ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.. ಇನ್ನೊಬ್ಬರ ಬಕೆಟ್ ಹಿಡಿದು ಮೇಲೆ ಬಂದವರು ಜಗ್ಗೇಶ್ ಎಂಬ ಮಾತುಗಳು ಕೇಳಿ ಬಂದಿತ್ತು.. ಈ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಜಗ್ಗೇಶ್ ಅವರು ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಬಕೆಟ್ ಹಿಡಿಯಲೇ ಬೇಕು.. ಪ್ರತಿಯೊಂದು ಹೆಜ್ಜೆಯಲ್ಲಿಯೂ ಕಷ್ಟವನ್ನು ಅನುಭವಿಸಿ ಬಂದವರಿಗೆ ಮಾತ್ರವೇ ಆ ದಾರಿಯ ಬಗ್ಗೆ ತಿಳಿದಿರುತ್ತದೆ ಎಂದಿದ್ದರು.. ಆದರೆ ಇದು ಇಷ್ಟಕ್ಕೇ ನಿಲ್ಲದೇ ಜಗ್ಗೇಶ್ ಅವರ ಕುರಿತು ಸಾಕಷ್ಟು ಟ್ರೋಲ್ ಗಳು ಹರಿದಾಡಿದ್ದವು..‌

ಇನ್ನು ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳ‌ ಕೆಂಗಣ್ಣಿಗೂ ಸಹ ಜಗ್ಗೇಶ್ ಅವರು ಗುರಿಯಾಗಿದ್ದಾರೆ.‌ ಹೌದು ಮಾತನಾಡುವ ಸಮಯದಲ್ಲಿ ಜಗ್ಗೇಶ್ ಅವರು ಬೇರೆ ಎಲ್ಲಾ ನಟರಿಗೂ ಬಹುವಚನದಲ್ಲಿ‌ ಮಾತನಾಡಿದ್ದು ವಿಷ್ಣುವರ್ಧನ್ ಅವರ ವಿಚಾರ ಬಂದಾಗ ವಿಷ್ಣು.. ಎಂದು ಏಕವಚನದಲ್ಲಿ‌‌ ಮಾತನಾಡಿದ್ದು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದು ಜಗ್ಗೇಶ್ ಅವರ ಬಗ್ಗೆ ಬಹಳಷ್ಟು ಕೆಟ್ಟ ರೀತಿಯಲ್ಲಿ ಪೋಸ್ಟ್ ಗಳು ಹರಿದಾಡಿದವು‌.. ಅಷ್ಟೇ ಅಲ್ಲದೇ ಬಹಳಷ್ಟು ಜನರು ನೇರವಾಗಿ ಜಗ್ಗೇಶ್ ಅವರನ್ನೇ ಕೇಳಿದ್ದಾರೆ.. ವಿಷ್ಣುವರ್ಧನ್ ಅವರನ್ನೇಕೆ ಹಾಗೆ ಮಾತನಾಡಿಸ್ತೀರಿ ಎಂದು ನೇರವಾಗಿಯೇ ಜಗ್ಗೇಶ್ ಅವರನ್ನು ಕೇಳಿದ್ದು ಇದೀಗ ಅದೇ ರೀತಿಯ ಕಮೆಂಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ..

ಹೌದು ಜಗ್ಗೇಶ್ ಅವರು ಇಂದು ತಮ್ಮ ಮುದ್ದಿನ ನಾಯಿಯ ಜೊತೆಗಿನ ಫೋಟೋ ಹಂಚಿಕೊಂಡಿದ್ದು ಅದರ ಜೊತೆಗೆ ಪ್ರೀತಿ ಹಂಚಲು ಮನುಷ್ಯ ಬೇಕಿಲ್ಲಾ.. ದೇವರು ಪ್ರೀತಿ ಹಂಚಲು ಅನೇಕ ನಿಷ್ಕಲ್ಮಶ ಆತ್ಮಗಳ ಧರೆಗೆ ಕಳುಹಿಸುತ್ತಾನೆ.. ನನಗೆ ಸಿಕ್ಕ ಶ್ರೇಷ್ಟ ಆತ್ಮ ಸೂರ್ಯ.. ಇವನ ಸಾಂಗತ್ಯ ವಿಶ್ವ ಮರೆಸತ್ತೆ.. ನನ್ನ ಗೆಲ್ಲುವುದು ಪ್ರೀತಿ‌ ಮಾತ್ರ ಎಂದು ಬರೆದು ಪೋಸ್ಟ್ ಮಾಡಿದ್ದರು..

ಈ ಪೋಸ್ಟ್ ಗೆ ಬಹಳಷ್ಟು ಜನರು ಕಮೆಂಟ್ ಮಾಡಿದ್ದರು.. ಅದರಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಯೊಬ್ಬರು ಕಮೆಂಟ್ ಮಾಡಿ.. “ಕನ್ನಡ ಭಾಷೆಯ ವಿಚಾರದಲ್ಲಿ ನಿಮಗೆ ಇರೋ ತಾಕತ್ ನನಗೆ ತುಂಬಾ ಇಷ್ಟ ಆಯ್ತು.. ಆದರೆ ನಮ್ಮ ಯಜಮಾನರು ವಿಷ್ಣು ಸರ್ ಬಗ್ಗೆ ಸ್ವಲ್ಪ ಮರ್ಯಾದೆ ಕೊಟ್ಟು ಮಾತನಾಡಿ.. ಲೆಜೆಂಡರಿ ಸೌತ್ ಇಂಡಿಯನ್ ಆಕ್ಟರ್ ಅವರು” ಎಂದು ಬರೆದು ಕಮೆಂಟ್ ಮಾಡಿದ್ದರು..

ಈ ಕಮೆಂಟ್ ಗೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ಅವರು “ಕಂದ ನನ್ನ ಅವರ ಸ್ನೇಹ.. ಉದ್ಯಮಕ್ಕೆ ಅವರ ಮಡದಿ ಭಾರತಿಯವರಿಗೆ ಗೊತ್ತು.. ನಾನು ನೆನ್ನೆ ಮೊನ್ನೆಯವನಲ್ಲಾ.. ದಯವಿಟ್ಟು ತೆವಲಿಗೆ ಮಾತನಾಡುವ ಫೇಕ್ ಗಳ ಮಾತನ್ನು ನಂಬಿ ಅವರನ್ನು ಅನುಸರಿಸದಿರಿ.. ನಾನು ವಿಷ್ಣು ರವರು ಒಟ್ಟಿಗೆ ತಿಂದು ಹರಟೆ ಹೊಡೆದು ತಮಾಷೆ ಮಾಡಿ ಬದುಕಿದವರು.. ಈ ಕಾಲದ ಚಿಕ್ಕ ಹುಡುಗರಿಗೆ ಏನು ಗೊತ್ತು.. ನಮ್ಮ ಬದುಕು ಸಂಬಂಧ.. ತುಂಬಾ ತಪ್ಪು.‌ ಬೇಡ.. ಈ ನಡತೆ ಒಳ್ಳೆಯದಲ್ಲಾ.. ಗಾಡ್ ಬ್ಲೆಸ್ ಎಂದು ಬರೆದು ಪ್ರತಿಕ್ರಿಯೆ ನೀಡಿದ್ದಾರೆ..