ನನ್ನಮ್ಮ ಸೂಪರ್ ಸ್ಟಾರ್ ನಲ್ಲಿರುವ ಜಾಹ್ನವಿ ಗ್ರಂಥ್ ನಿಜಕ್ಕೂ ಯಾರು ಗೊತ್ತಾ..

0 views

ಕನ್ನಡ ಕಿರುತೆರೆಯ ಖ್ಯಾತ ಶೋ.. ಸಧ್ಯದ ಮಟ್ಟಿಗೆ ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆಯುತಿರುವ ನನ್ನಮ್ಮ ಸೂಪರ್ ಸ್ಟಾರ್ ಶೋ ಫಿನಾಲೆ ಹಂತಕ್ಕೆ ಬಂದು ನಿಂತಿದೆ.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ಶೋ ಮುಕ್ತಾಯವಾದ ನಂತರ ಅಮ್ಮಂದಿರನ್ನು ಸಂಭ್ರಮಿಸುವ ಸಲುವಾಗಿ ಶುರುವಾದ ಶೋ ನನ್ನಮ್ಮ ಸೂಪರ್ ಸ್ಟಾರ್.. ಸೃಜನ್ ಲೋಕೇಶ್ ತಾರಮ್ಮ ಅನುಪ್ರಭಾಕರ್ ಅವರ ಸಾರಥ್ಯ ಹಾಗೂ ಅನುಪಮಾ ಅವರ ನಿರೂಪಣೆಯಲ್ಲಿ ಮೂಡಿ ಬಂದ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಹದಿನೈದು ಅಮ್ಮ ಮಗುವಿನ ಜೋಡಿ ಸ್ಪರ್ಧೆಗಿಳಿದಿತ್ತು.. ವಂಶಿಕಾ, ಅದ್ವಿತ್.. ಇಬ್ಬನಿ.. ರೋಹಿತ್.. ಆರ್ಯ ಹೀಗೆ ಎಲ್ಲಾ ಮಕ್ಕಳು ಸಹ ಗಮನ ಸೆಳೆದಿದ್ದವು‌..

ಶೋ ಅಂದುಕೊಂಡಂತೆ ದೊಡ್ಡ ಮಟ್ಟದಲ್ಲಿಯೇ ಹಿಟ್ ಆಯಿತು.‌. ಇದೀಗ ಫಿನಾಲೆ ಹಂತಕ್ಕೆ ಬಂದು ನಿಂತಿದ್ದು ಆರು ಅಮ್ಮ ಮಕ್ಕಳ ಜೋಡಿಗಳು ಫೈನಲಿಸ್ಟ್ ಗಳಾಗಿದ್ದಾರೆ.. ಹೌದು ಕಳೆದ ನಾಲ್ಕು ತಿಂಗಳ ನನ್ನಮ್ಮ ಸೂಪರ್ ಸ್ಟಾರ್ ಜರ್ನಿ ಇನ್ನೇನು ಮುಕ್ತಾಯವಾಗುತ್ತುದ್ದು ಫಿನಾಲೆಗೆ ಭರ್ಜರಿ ತಯಾರಿ ನಡೆಯುತ್ತಿದೆ.. ಈ ಸೋಮವಾರ ಫಿನಾಲೆಯ ಚಿತ್ರೀಕರಣ ನಡೆಯಲಿದ್ದು ಮುಂದಿನ ವಾರಾಂತ್ಯದಲ್ಲಿ ನನ್ನಮ್ಮ ಸೂಒಅರ್ ಸ್ಟಾರ್ ಫಿನಾಲೆ ಪ್ರಸಾರವಾಗಲಿದೆ ಎನ್ನಲಾಗಿದೆ.. ಇನ್ನು ಟಾಪ್ ಆರು ಜೋಡಿಗಳಾಗಿ ಯಶಸ್ವಿನಿ ವಂಶಿಕಾ.. ಜಾಹ್ನವಿ ಗ್ರಂಥ್.. ಸುಪ್ರಿತಾ ಇಬ್ಬನಿ.. ವಿಂದ್ಯಾ ರೋಹಿತ್.. ನಂದಿನಿ ಅದ್ವಿತ್.. ಪುನೀತ್ ಆರ್ಯ ಇದ್ದು ಆರು ಜೋಡಿಗಳ ನಡುವೆ ಸೂಪರ್ ಸ್ಟಾರ್ ಪಟ್ಟಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ..

ಇನ್ನು ಅದಾಗಲೇ ಎಲ್ಲಾ ಜೋಡಿಗಳು ಫಿನಾಲೆಗೆ ತಯಾರಿ ನಡೆಸುತ್ತಿದ್ದು ಫಿನಾಲೆಯಲ್ಲಿ ಮತ್ತಷ್ಟು ಧೂಳೆಬ್ಬಿಸಲಿದ್ದಾರೆ ಎನ್ನಲಾಗಿದೆ.. ಇನ್ನು ಫಿನಾಲೆ ಗೆದ್ದ ಜೋಡಿಗೆ ಹತ್ತು ಲಕ್ಷ ಬಹುಮಾನ ಸಿಗಲಿದ್ದು ಅದಾಗಲೇ ವೋಟಿಂಗ್ ಲೈನ್ ಗಳು ಕೂಡ ತೆರೆದಿದೆ.. ಹೌದು ನನ್ನಮ್ಮ ಸೂಪರ್ ಸ್ಟಾರ್ ಶೋನ ವಿಜೇತರನ್ನು ನಾವುಗಳೇ ಆಯ್ಕೆ ಮಾಡಬಹುದಾಗಿದ್ದು ಜನರ ವೋಟಿಂಗ್ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುವುದು ಎಂದು ತಿಳಿದು ಬಂದಿದೆ.. ಇನ್ನು ಇತ್ತ ಸ್ಪರ್ಧಿಗಳು ಸಹ ಭರ್ಜರಿಯಾಗಿಯೇ ತಮಗೆ ವೋಟ್ ಮಾಡುವಂತೆ ಪ್ರಚಾರ ಮಾಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸೆಲಿಬ್ರೆಟಿಗಳು ಸ್ನೇಹಿತರು ಆಪ್ತರ ಬಳಿಯಲ್ಲಿ ಸ್ಪರ್ಧಿಗಳು ತಮಗೆ ವೋಟ್ ಮಾಡುವಂತೆ ಪ್ರಚಾರ ಮಾಡಿಸುತ್ತಿದ್ದಾರೆ..

ಇನ್ನೂ ಕೆಲವರು ತಮಗಿಷ್ಟ ಆಗುವ ಸ್ಪರ್ಧಿಯನ್ನು ತಾವೇ ಫೋಟೋ ಹಂಚಿಕೊಂಡು ಬೆಂಬಲಿಸುತ್ತಿದ್ದಾರೆ.. ಇನ್ನು ಫಿನಾಲೆ ಹಂತದವರೆಗೂ ಬಂದಿರುವ ಆರು ಜೋಡಿಗಳೂ ಸಹ ಒಂದಲ್ಲಾ ಒಂದು ವಿಚಾರವಾಗಿ ಜನರ ಮನಗೆದ್ದಿದ್ದು ಫಿನಾಲೆ ಯಾರು ಗೆಲ್ಲುವರು ಎಂಬ ಕುತೂಹಲ ಹುಟ್ಟುಹಾಕಿದ್ದಾರೆ.. ಇನ್ನು ಫಿನಾಲೆಯ ಆರು ಜೋಡಿಗಳಲ್ಲಿ ಒಬ್ಬರಾಗಿರುವ ಜಾಹ್ನವಿ ಗ್ರಂಥ್ ಅವರನ್ನು ಬೆಂಬಲಿಸುವ ಸಲುವಾಗಿ ಇದೀಗ ನೇರವಾಗಿ ಸ್ಯಾಂಡಲ್ವುಡ್ ನ ಮೋಹಕ ತಾರೆಯೇ ಕಣಕ್ಕಿಳಿದಿದ್ದಾರೆ.. ಹೌದು ಸ್ಯಾಂಡಲ್ವುಡ್ ನ ಎವರ್ ಗ್ರೀನ್ ಟಾಪ್ ನಟಿ ರಮ್ಯಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಜಾಹ್ನವಿ ಹಾಗೂ ಗ್ರಂಥ್ ಅವರಿಗೆ ವೋಟ್ ಮಾಡುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ..

ಹೌದು ಅಷ್ಟಕ್ಕೂ ರಮ್ಯಾ ಅವರಿಗೂ ಜಾಹ್ನವಿ ಅವರಿಗೂ ಏನು ಸಂಬಂಧ ಎನ್ನುವ ಸಣ್ಣ ಕುತೂಹಲ‌ ಮೂಡಬಹುದು.. ಹೌದು ಜಾಹ್ನವಿ ಅವರು ಸಾಕಷ್ಟು ವರ್ಷಗಳಿಂದಲೂ ಸುದ್ದಿ ಮಾದ್ಯಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು ಎಲ್ಲಾ ಸೆಲಿಬ್ರೆಟಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ.. ಅದರಲ್ಲಿಯೂ ಕೆಲವರ ಜೊತೆ ಆತ್ಮೀಯರಾಗಿದ್ದು ಕುಟುಂಬದವರಂತೆ ಇದ್ದಾರೆ.. ಅಂತವರಲ್ಲಿ ಒಬ್ಬರು ನಟಿ ರಮ್ಯಾ.. ಹೌದು ಜಾಹ್ನವಿ ಅವರು ರಮ್ಯಾ ಅವರ ಆತ್ಮೀಯ ಸ್ನೇಹಿತರೂ ಹೌದು..

ಸದಾ ಹೊಸಬರನ್ನು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುವ ರಮ್ಯಾ ಅವರು ಸಧ್ಯ ಇದೀಗ ತಮ್ಮ ಆತ್ಮೀಯರಲ್ಲಿ ಒಬ್ಬರಾದ ಜಾಹ್ನವಿ ಹಾಗೂ ಗ್ರಂಥ್ ಅವರಿಗೆ ಶುಭ ಕೋರಿದ್ದು ಎಲ್ಲರೂ ವೋಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.. ಇನ್ನು ಇತ್ತ ನನ್ನಮ್ಮ ಸೂಪರ್ ಸ್ಟಾರ್ ಪ್ರೇಕ್ಷಕರು ಬೇರೆಯದ್ದೇ ಲೆಕ್ಕಾಚಾರ ಶುರು ಮಾಡಿದ್ದು ಬಹುತೇಕರ ಅಭಿಪ್ರಾಯದಂತೆ ವಂಶಿಕಾ ಅಂಜನಿ ಕಶ್ಯಪ ಹಾಗೂ ಯಶಸ್ವಿನಿ ಅವರು ಶೋ ಗೆಲ್ಲ ಬಹುದು ಎನ್ನಲಾಗುತ್ತಿದು ಇನ್ನೊಂದಿಷ್ಟು ದಿನ ಕಾದು ನೋಡಬೇಕಿದೆ..