ಹೆರಿಗೆಗೆ ಆಂಬ್ಯುಲೆನ್ಸ್ ನಲ್ಲಿ ಹೋಗುತ್ತಿದ್ದ ಒಂಭತ್ತು ತಿಂಗಳ ಗರ್ಭಿಣಿ.. ಆದರೆ ಮಾರ್ಗ ಮಧ್ಯೆಯೇ ಏನಾಗಿ ಹೋಯ್ತು ನೋಡಿ..‌ ಬೆಚ್ಚಿಬಿದ್ದ ಕುಟುಂಬದವರು..

0 views

ದುರಾದೃಷ್ಟವೆಂದರೆ ಬಹುಶಃ ಈ ಕುಟುಂಬದ್ದೇ ಇರಬೇಕು.. ತುಂಬು ಗರ್ಭಿಣಿಯೊಬ್ಬಳು ಹೆರಿಗೆಗಾಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ದಾರಿಯ ಮಧ್ಯೆಯೇ ನಡೆದ ಈ ಘಟನೆ ನಿಜಕ್ಕೂ ಎಂತಹ ಕಲ್ಲು ಮನಸ್ಸಿನವರ ಕಣ್ಣಿನಲ್ಲೂ ನೀರು ತರಿಸುತ್ತಿದೆ.. ಹೌದು ಆಕೆಯೊಬ್ಬಳು ತುಂಬು ಗರ್ಭಿಣಿ.. ಹೆರಿಗೆಯ ದಿನಾಂಕವೂ ಹತ್ತಿರ ಇತ್ತು.. ಅಂದುಕೊಂಡಂತೆ ಹೆರಿಗೆಯ ನೋವು ಸಹ ಬಂತು.. ಇನ್ನೇನು ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗಿ ಆಕೆ ಹೊಸ ಜೀವವೊಂದಕ್ಕೆ ಜನ್ಮ ನೀಡಿ ಆ ಮನೆಗೆ ಪುಟ್ಟ ಕಂದನ ಆಗಮನವಾಗಬೇಕಿತ್ತು.. ಆದರೆ ನಡೆದದ್ದೇ ಬೇರೆ.. ಹೌದು ಈ ಮನಕಲಕುವ ಘಟನೆ ನಡೆದಿರುವುದು ತಮಿಳು ನಾಡಿನ ಕಲಕುರಿಚಿಯಲ್ಲಿ.. ಹೌದು ಆಕೆಯ ಹೆಸರು ಜಯಲಕ್ಷ್ಮೀ ಸೊರಪಟ್ಟು ಗ್ರಾಮದ ನಿವಾಸಿ.. ಆಕೆ ಒಂಭತ್ತು ತಿಂಗಳ ತುಂಬು ಗರ್ಭಿಣಿ..

ಒಂದು ಕಡೆ ಕೊರೊನಾಗೆ ಗರ್ಭಿಣಿಯರು ಬಹಳಷ್ಟು ಮಂದಿ ಜೀವ ಕಳೆದುಕೊಳ್ಳುತ್ತಿರುವ ಸುದ್ದಿ ನೋಡಿಯೇ ಇದ್ದೇವೆ.. ಆದರೆ ಸಧ್ಯ ದೇವರ ದಯೆಯಿಂದ ಆ ರೀತಿ ಏನೂ ಆಗದೇ ಹೆಂಡತಿ ಆರೋಗ್ಯದಿಂದಿದ್ದಾಳೆ.. ಇನ್ನು ಕೆಲವು ದಿನಗಳಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿ ನಮ್ಮ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಲಿದೆ ಎಂದು ಜಯಲಕ್ಷ್ಮೀಯ ಗಂಡ ಹಾಗೂ ಕುಟುಂಬದವರು ಸಂತೋಷದಲ್ಲಿದ್ದರು.. ಆದರೆ ವಿಧಿಯ ನಿರ್ಣಯ ಬೇರೆಯೇ ಇತ್ತು.. ಹೌದು ಜಯಲಕ್ಷ್ಮೀ ಅವರಿಗೆ ಇಂದು ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದೆ.. ಒಂದು ಕಡೆ ಹೆರಿಗೆಯ ತಡೆಯಲಾಗದ ನೋವಿದ್ದರೂ ಸಹ ತನ್ನ ಪ್ರತಿರೂಒಅ ಜನ್ಮ ತಾಳಲಿದೆ ಎಂದು ಮಗುವಿನ ಮುಖ ನೋಡುವ ಕಾತುರದಲ್ಲಿ ಜಯಲಕ್ಷ್ಮಿ ಇದ್ದರು.. ಅದೇ ರೀತಿ ಆಂಬ್ಯುಲೆನ್ಸ್ ಕರೆಸಿ ಜಯಲಕ್ಷ್ಮೀ, ಆಕೆಯ ಅತ್ತೆ ಸೆಲ್ವಿ.. ಹಾಗೂ ಜಯಲಕ್ಷ್ಮೀ ಅವರ ನಾದಿನಿ ಅಂಬಿಕಾ ಮೂವರೂ ಸಹ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಬರುತ್ತಿದ್ದರು..

ಹೆರಿಗೆ ನೋವಿನಲ್ಲಿ ನರಳುತ್ತಿದ್ದ ಸೊಸೆಯನ್ನು ಸಮಾಧಾನ ಮಾಡುತ್ತಲೇ ಸಾಗುತ್ತಿದ್ದರು.. ಆದರೆ ಮಾರ್ಗ ಮಧ್ಯೆ ಅವರು ಕನಸಿನಲ್ಲಿಯೂ ಊಹಿಸದ ಘಟನೆ ನಡೆದು ಹೋಯಿತು.. ಹೌದು ಗರ್ಭಿಣಿಯನ್ನು ಬೇಗ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ವೇಗವಾಗಿ ಹೋಗುತ್ತಿದ್ದ ಆಂಬ್ಯುಲೆನ್ಸ್ ನ ಟಯರ್ ಹೊಡೆದು ಮರಕ್ಕೆ ಹೋಗಿ ಡಿಕ್ಕಿಯಾಯಿತು.. ಸ್ಥಳದಲ್ಲಿಯೇ ಗರ್ಭಿಣಿ ಜಯಲಕ್ಷ್ಮಿ ಅತ್ತೆ ಸೆಲ್ವಿ ನಾದಿನಿ ಅಂಬಿಕಾ ಮೂವರು ಸಹ ಜೀವ ಕಳೆದುಕೊಂಡುಬಿಟ್ಟರು.. ಇತ್ತ ಕುಟುಂಬದವರಿಗೆ ವಿಚಾರ ತಿಳಿದ ತಕ್ಷಣ ನಿಜಕ್ಕೂ ಎಲ್ಲರೂ ಒಮ್ಮೆಲೆ ಬೆಚ್ಚಿಬಿದ್ದರು.. ಮನೆಗೆ ಹೊಸ ಜೀವವೊಂದರ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಮಗುವನ್ನೇ ಸೇರಿ ನಾಲ್ವರು ಜೀವ ಕಳೆದುಕೊಂಡ ಸುದ್ದಿ ಅರಗಿಸಿಕೊಳ್ಳದಂತಾಯಿತು..

ಅತ್ತ ಆಂಬ್ಯುಲೆನ್ಸ್ ಚಾಲಕನ ಸ್ಥಿತಿ ಸಹ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಇತ್ತ ಈ ವಿಚಾರ ತಿಳಿದ ಮುಖ್ಯಮಂತ್ರಿ ಸ್ಟಾಲಿನ್ ತಕ್ಷಣ ಸಂತಾಪ ಸೂಚಿಸಿ ಜಯಲಕ್ಷ್ಮಿ ಕುಟುಂಬಕ್ಕೆ ಐದು ಲಕ್ಷ ಹಾಗೂ ಸೆಲ್ವಿ ಹಾಗೂ ಅಂಬಿಕಾ ರ ಕುಟುಂಬಕ್ಕೆ ತಲಾ ಮೂರು ಲಕ್ಷ ರೂಪಾಯಿಗಳ ಪರಿಹಾರ ನೀಡಿದ್ದು ಜೀವ ವಿಮೆಯ ಪರಿಹಾರವನ್ನೂ ಸಹ ತಕ್ಷಣ ಕುಟುಂಬಕ್ಕೆ ನೀಡಿ ಎಂದು ಸೂಚಿಸಿದ್ದಾರೆ..

ಆದರೆ ಮಗುವಿನ ಬಗ್ಗೆ ನೂರಾರು ಕನಸು ಕಂಡಿದ್ದ ಜೀವ.. ಆ ಜೀವಗಳನ್ನು ರಕ್ಷಣೆ ಮಾಡಲು ಜೊತೆಯಾಗಿ ಹೋಗಿದ್ದ ಅತ್ತೆ ಹಾಗೂ ನಾದಿನಿ ಎಲ್ಲರೂ ಸಹ ಒಮ್ಮೆಲೆ ಬಾರದ ಲೋಕಕ್ಕೆ ಹೋಗಿದ್ದು ನಿಜಕ್ಕೂ ದುರಾದೃಷ್ಟವೋ ಹಣೆಬರಹವೋ ತಿಳಿಯದು.. ಆ ಎಲ್ಲರಿಗೂ ಶಾಂತಿ ಸಿಗುವಂತಾಗಲಿ.. ಒಮ್ಮೆಲೆ ನಾಲ್ಕು ಜೀವಗಳನ್ನು ಕಳೆದುಕೊಂಡ ಆ ಕುಟುಂಬದ ಆಕ್ರಂದನ ನಿಜಕ್ಕೂ ಮುಗಿಲು ಮುಟ್ಟಿತ್ತು.. ಆ ನೋವು ತಡೆಯುವ ಶಕ್ತಿ ಆ ಕುಟುಂಬಕ್ಕೆ ಆ ದೇವರು ನೀಡಲಿ..