ಜಯಂತಿ ಅವರ ಮೇಲೆ ಕೈ ಮಾಡಿದ್ದ ಆ ನಟ.. ಅಂದೇ ಆತನಿಗೆ ಗ್ರಹಚಾರ ಬಿಡಿಸಿ ದಿಟ್ಟತನ ತೋರಿದ್ದ ಕನ್ನಡದ ಮತ್ತೊಬ್ಬ ನಟಿ.. ಆದರೆ ಕೊನೆಗೆ ಜಯಂತಿ ಅವರು ಮಾಡಿದ್ದೇ ಬೇರೆ.

0 views

ಅಭಿನಯ ಶಾರದೆಯನ್ನು ಇಂದು ನಾವೆಲ್ಲರೂ ಆರಾಧಿಸಿ ಗೌರವಿಸುತ್ತೇವೆ.. ಆದರೆ ಈ ಹಂತಕ್ಕೆ ಬರುವ ಹಾದಿ ಜಯಂತಿ ಅವರಿಗೆ ಸುಗಮವಾಗಿರಲಿಲ್ಲ.. ಹೌದು ಸಾಕಷ್ಟು ಏಳು ಬೀಳುಗಳನ್ನು ನೋಡಿಕೊಂಡು ಬಂದ ಜಯಂತಿ ಅವರು ಅನೇಕ ಅವಮಾನಗಳನ್ನು ಅನುಭವಿಸಿದ್ದರು. ಅದರಲ್ಲೂ ಒಬ್ಬ ತೆಲುಗು ನಟ ಜಯಂತಿ ಅವರ ಮೇಲೆ ಕೈ ಮಾಡಿ ಅವರಿಗೆ ಕಣ್ಣೀರಾಕಿಸಿದ್ದರು.. ಹೌದು ಈ ವಿಚಾರವನ್ನು ಅಂದು ಕಣ್ಣಾರೆ ಕಂಡಿದ್ದ ನಟಿ ಲಕ್ಷ್ಮಿ ಅವರು ನೋವಿನಿಂದಲೇ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಆ ಸಮಯದಲ್ಲಿ ಜಯಂತಿ ಅವರು ನಡೆದುಕೊಂಡ ರೀತಿ ಬಗ್ಗೆಯೂ ಹೇಳಿ ಕಣ್ಣೀರಿಟ್ಟಿದ್ದಾರೆ. ಹೌದು ಜಯಂತಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಬಹಳಷ್ಟು ಕಷ್ಟ ನೋಡಿದವರು.. ಚಿತ್ರರಂಗಕ್ಕೆ ಬಂದ ನಂತರ ಅನೇಕರು ಜಯಂತಿ ಅವರಿಗೆ ಮೋಸ ಮಾಡಿದರೆಂದು ಹತ್ತಿರದಿಂದ ನೋಡಿದವರು ಹೇಳಿದ್ದಾರೆ..

ಡಾ ರಾಜ್ ಕುಮಾರ್ ಅವರು ಬಹಳ ಗೌರವದಿಂದ ಜಯಂತಿ ಅವರನ್ನು ಗೌರವಿಸಿದರು. ಆದರೆ ರಾಜ್‌ ಕುಮಾರ್‌ ಅವರ ಗುಣ ಎಲ್ಲರಿಗೂ ಬರಲಿಲ್ಲ.. ಬಹಳಷ್ಟು ಜನರು ಜಯಂತಿ ಅವರ ಸೌಂದರ್ಯವನ್ನು ಕುಕ್ಕಿ ತಿಂದರು ಇದಕ್ಕೆಲ್ಲಾ ಕಾರಣ ಜಯಂತಿ ಅವರ ಮುಗ್ಧತೆ ಎಂದೂ ಸಹ ಹಿರಿಯ ಪತ್ರಕರ್ತ ಗಣಪತಿ ಅವರು ಹೇಳಿದ್ದರು. ಇನ್ನು ಇಂದು ಲಕ್ಷ್ಮೀ ಅವರು ಸಹ ನೋವಿನ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಜಯಂತಿ ಅವರು ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದರು. ಆಗ ಒಂದು ದಿನ ಹೈದರಾಬಾದಿನಲ್ಲಿ ಚಿತ್ರೀಕರಣದಲ್ಲಿದ್ದ ಸಮಯದಲ್ಲಿ ನಾನು ಸಹ ಅಲ್ಲಿಯೇ ಚಿತ್ರೀಕರಣದಲ್ಲಿದ್ದೆ..

ಮಧ್ಯಾಹ್ನ ಊಟದ ಸಮಯದಲ್ಲಿ ಇಬ್ಬರು ಭೇಟಿಯಾಗಿ ಮಾತನಾಡಿದೆವು.. ಆಗ ನನಗೆ ಸಂಜೆ ಬೆಂಗಳೂರಿನಲ್ಲಿ ಚಿತ್ರೀಕರಣ ಇದೆ ಅಲ್ಲಿಗೆ ಹೋಗಬೇಕು ಆದರೆ ಈ ಹೀರೋ ಬಿಡ್ತಾನೆ ಇಲ್ಲ.. ಇಲ್ಲಿಂದ ಏರ್ ಪೋರ್ಟ್ ಗೆ ಹೋಗಬೇಕು ಅಂದ್ರೆ ಒಂದು ಘಂಟೆ ಬೇಕು ಏನು‌ ಮಾಡಲಿ ಎಂದು ಆತಂಕದಿಂದ ಮಾತನಾಡಿದ್ರು.. ನೀವು ಹಿರಿಯ ನಟಿ ನೀವು ಹೇಳಿ ನನಗೆ ಚಿತ್ರೀಕರಣ ಇದೆ ಹೋಗಬೇಕು ಅಂತ.. ಆಗ ಬಿಡ್ತಾರೆ ಎಂದು ಲಕ್ಷ್ಮೀ ಅವರು ಹೇಳಿದ್ದರಂತೆ. ಆದರೆ ಅವನೇ ನಿರ್ಮಾಪಕ ಕೂಡ.. ಬಹಳ ಕೋಪಿಷ್ಟ.. ಆತ ಬಿಡೋದಿಲ್ಲ ಎಂದಿದ್ದರಂತೆ. ನಂತರ ಇಬ್ಬರೂ ಸಹ ಚಿತ್ರೀಕರಣದಲ್ಲಿ ತೊಡಗಿಕೊಂಡರು..

ಆದರೆ ಕೆಲವೇ ಸಮಯದ ನಂತರ ಹುಡುಗನೊಬ್ಬ ಓಡೋಡಿ ಬಂದು ಜಯಂತಿ ಅಮ್ಮನ ಮೇಲೆ ಕೈ ಮಾಡಿ ಬಿಟ್ಟರು. ಎಂದ.. ನನಗೆ ಮೈಯೆಲ್ಲಾ ಉರಿದುಹೋಯಿತು.. ಅಲ್ಲಿಗೆ ಓಡಿ ಹೋದೆ.. ಆಗ ಜಯಂತಿ ಅವರು ಅಳುತ್ತಿದ್ದರು. ನಾನು ತಕ್ಷಣ ಜಯಂತಿ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದೆ.. ಏನಾಯಿತು ಎಂದು ಕೇಳಿದಾಗ.. ನೀವು ಸುಮ್ಮನೆ ತಡ ಮಾಡುತ್ತಿದ್ದೀರಿ.. ನನ್ನ ಭಾಗದ ಚಿತ್ರೀಕರಣ ಮುಗಿಸಿ ನನ್ನನ್ನು ಹೋಗಲು ಬಿಡಿ ಎಂದೆ.. ಅದಕ್ಕೆ ನನಗೆ ಹೇಳೋಕೆ ಬರ್ತೀಯಾ ಎಂದು ಕೈ ಮಾಡಿದ ಎಂದರು.. ನಂತರ ಆತನ ಮುಖ ನೋಡದೇ ಗ್ರಹಚಾರ ಬಿಡಿಸಿದೆ.. ನೀನು ಹುಟ್ಟೋಕು ಮುಂಚೆ ಅವರು ಚಿತ್ರರಂಗಕ್ಕೆ ಬಂದಿದ್ದಾರೆ. ಅವರ ಮೇಲೆ ಕೈ ಮಾಡಿದ ನಿನಗೆ ಒಳ್ಳೇದು ಆಗಲ್ಲ..

ಅವರು ಹಿರಿಯ ನಟಿ ಪ್ರತಿಭಾವಂತ ನಟಿ ನಿನಗೆ ಈ ರೀತಿ ಮಾಡಲು ನಾಚಿಕೆಯಾಗಲ್ವಾ ಎಂದೆ. ತಕ್ಷಣ ಜಯಂತಿ ಅವರೇ ನನ್ನನ್ನು ತಡೆದು ಹೋಗಲಿ ಬಿಡು ಆಗೋದು ಆಗಿ ಹೋಯ್ತು.. ನನ್ನ ಮಗನೇ ಈ ರೀತಿ ಮಾಡಿದ ಎಂದು ಕ್ಷಮಿಸಿ ಬಿಡ್ತೀನಿ ಎಂದರಂತೆ.. ಎಷ್ಟೇ ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೂ ಅದನ್ನು ಯಾರ ಜೊತೆಯೇ ಹೇಳಿಕೊಳ್ಳದೇ ಎಲ್ಲರೊಟ್ಟಿಗೆ ನಗು ನಗುತ್ತಲೇ ಇದ್ದು ಒಳಗೆ ಮಾತ್ರ ಅವರೊಬ್ಬರೇ ಕೊರಗುತ್ತಿದ್ದರು ಎಂದು ಜಯಂತಿ ಅವರ ದೊಡ್ಡ ಗುಣವನ್ನು ನೆನೆದು ಲಕ್ಷ್ಮೀ ಅವರು ಕಣ್ಣೀರಿಟ್ಟರು..