ಐಸಿಯು ಬಾಗಿಲಲ್ಲಿ ನಿಂತಿದ್ದ ಆ ವ್ಯಕ್ತಿಯನ್ನು ದಯವಿಟ್ಟು ಒಳಗೆ ಕಳುಹಿಸಿ ಎಂದಿದ್ದ ಅಭಿನಯ ಶಾರದೆ ಜಯಂತಿ ಅವರು.. ಆ ವ್ಯಕ್ತಿ ಯಾರು ಗೊತ್ತಾ..

0 views

ಕನ್ನಡ ಚಿತ್ರರಂಗದ ಅಭಿನಯ ಶಾರದೆ, ಖ್ಯಾತ ನಟಿ, ಈಗಲೂ ವೀರ ವನಿತೆ ಓಬವ್ವ ಎಂದ ಕೂಡಲೇ ಕಣ್ಣ ಮುಂದೆ ಬರುವ ನಟಿ ಜಯಂತಿ ಅಮ್ಮನವರು ಇಂದು ಇಹಲೋಕ ತ್ಯಜಿಸಿದ್ದು ಕನ್ನಡ ಚಿತ್ರರಂಗ ಮತ್ತೊಂದು ಹೆಮ್ಮರವನ್ನು ಕಳೆದುಕೊಂಡಂತಾಗಿದ್ದು ನಾಡಿನ ಜನರು ಚಿತ್ರರಂಗದವರು ಎಲ್ಲರೂ ಸಹ ಕಂಬನಿ‌ ಮಿಡಿದು ಸಂತಾಪ ಸೂಚಿಸಿದ್ದಾರೆ. ಆದರೆ ಜಯಂತಿ ಅಮ್ಮನವರು ಐಸಿಯು ನಲ್ಲಿ ಇದ್ದ ಸಮಯದಲ್ಲಿ ವ್ಯಕ್ತಿಯೊಬ್ಬರು ಅವರನ್ನು ನೋಡಲು ಆಸ್ಪತ್ರೆಗೆ ತೆರಳಿ ಐಸಿಯು ಬಾಗಿಲ ಬಳಿ ನಿಂತಾಗ ಅದನ್ನು ಕಂಡ ಜಯಂತಿ ಅವರು ಆ ವ್ಯಕ್ತಿಯನ್ನು ಒಳಗೆ ಕಳುಹಿಸಿ ಅಲ್ಯಾಕೆ ನಿಲ್ಲಿಸಿದ್ದೀರಿ ಎಂದಿದ್ದರಂತೆ.. ಹೌದು ಈ ಬಗ್ಗೆ ಹಂಚಿಕೊಂಡಿರುವ ಆ ನಟ ಜಯಂತಿ ಅಮ್ಮನವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಹೌದು ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಹೆಸರು ಮಾಡಿದ ನಟಿ ಜಯಂತಿ ಅವರು ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಶಾರದೆ ಎನಿಸಿಕೊಂಡರು. 1945 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಕಮಲಾ ಕುಮಾರಿ ನಂತರ ಕನ್ನಡ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡುವರು ಎಂದು ಕನಸಿನಲ್ಲಿಯೂ ಅವರ ತಂದೆ ತಾಯಿ ನೆನೆಸಿರಲಿಲ್ಲ. ನೃತ್ಯಗಾರ್ತಿ ಆಗಲಿ ಎಂದು ಅವರ ತಾಯಿ ಬಯಸಿದ್ದು ನಂತರ ಚಿತ್ರರಂಗದಲ್ಲಿ ಅವಕಾಶ ಸಿಕ್ಕು ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಅವರ ಜೊತೆಯೇ ನಲವತ್ತೈದು ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಪಡೆದಿದ್ದರು.

ಇನ್ನೂ ವಯಸ್ಸಾದಂತೆ ಕೆಲ ಪೋಷಕ ಪಾತ್ರಗಳಲ್ಲಿಯೂ ಕಾಣಿಸಿಕೊಂಡ ಜಯಂತಿ ಅವರು ನಂತರ ಅನಾರೋಗ್ಯದ ಕಾರಣ ಚಿತ್ರರಂಗದಿಂದ ಹೊರಗುಳಿದರು. ಬರುಬರುತ್ತಾ ಆರೋಗ್ಯ ತೀವ್ರ ಹದಗೆಟ್ಟಿದ್ದು ಕೆಲ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಹಂಪಿಯ ದೇವಸ್ಥಾನಗಳ ಭೇಟಿಗೆ ಆಗಮಿಸಿದ್ದ ಜಯಂತಿ ಹಾಗೂ ಅವರ ಮಗ ಅಲ್ಲಿಯೇ ಉಳಿಯುವಂತಾಗಿ ಹೋಯ್ತು. ಕೆಲ ದಿನಗಳ ಕಾಲ ಹೊಟೆಲ್‌ ನಲ್ಲಿಯೇ ಉಳಿದ್ದಿದ್ದ ಜಯಂತಿ ಅವರ ಆರೋಗ್ಯ ಕೆಟ್ಟು ಕೊನೆಗೆ ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು.

ತದನಂತರ ಕೆಲ ತಿಂಗಳ ಹಿಂದಷ್ಟೇ ಜಯಂತಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ಐಸಿಯು ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು. ಆ ಸಮಯದಲ್ಲಿ ಚಿತ್ರರಂಗದ ಅನೇಕರು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಅದೇ ರೀತಿ ಈ ವ್ಯಕ್ತಿಯೂ ಸಹ ಜಯಂತಿ ಅವರ ಆರೋಗ್ಯ ವಿಚಾರಿಸಲೆಂದು ಆಸ್ಪತ್ರೆಗೆ ತೆರಳಿ ಐಸಿಯು ಬಾಗಿಲ ಬಳಿಯೇ ನಿಂತಿದ್ದರು. ಇದನ್ನು ಕಂಡ ಜಯಂತಿ ಅವರು ಆಸ್ಪತ್ರೆ ಸಿಬ್ಬಂದಿಗೆ ಆ ವ್ಯಕ್ತಿಯನ್ನೇಕೆ ಬಾಗಿಲಲ್ಲಿ ನಿಲ್ಲಿಸಿದ್ದೀರಿ ಒಳಗೆ ಕಳುಹಿಸಿ ಎಂದು ದೊಡ್ಡ ನಟಿಯಾದರೂ ಕೊಂಚವೂ ಅಹಂ ಇಲ್ಲದೇ ಆತನನ್ನು ಪ್ರೀತಿಯಿಂದ ಮಾತನಾಡಿಸಿ ಕಳುಹಿಸಿದ್ದರು.

ಆ ವ್ಯಕ್ತಿ ಮತ್ಯಾರೂ ಅಲ್ಲ ಬಿಗ್ ಬಾಸ್ ಖ್ಯಾತಿಯ ಪ್ರಥಮ್. ಹೌದು ಇಂದು ಮುಂಜಾನೆ ಜಯಂತಿ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಜಯಂತಿ ಅವರ ಅಗಲಿಕೆಗೆ ಕಂಬನಿ ಮಿಡಿದ ಪ್ರಥಮ್ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. “ಐಸಿಯು ಬಾಗಿಲ ಹೊರಗೆ ಯಾಕೆ ನಿಲ್ಲಿಸಿದ್ದೀರಿ? ಒಳಗೆ ಕರೆಯಿರಿ ಪ್ರಥಮ್ ನ. ಅವ್ರು ಹೇಳಿದ ಈ ಮಾತು ಈಗಲೂ ನನ್ನ ಕಿವಿಯಲ್ಲಿ ಹಾಗೇ ಇದೆ. ಇದು ಜಯಂತಿ ಮೇಡಂ ಜೊತೆಗೆ ಕೊನೆಯ ಭೇಟಿ. ಅವ್ರು ಕಳೆದ ಬಾರಿ ಆಸ್ಪತ್ರೆಯಲ್ಲಿ ಇದ್ದಾಗ ನೋಡೋಕೆ ಹೋಗಿದ್ದೆ. ದಕ್ಷಿಣ ಭಾರತದ ಚಿತ್ರರಂಗವನ್ನ ಆಳಿದ ಅತ್ಯುನ್ನತ ನಟಿ, ನನ್ನ ಗುರುತಿಸಿ, ಐಸಿಯು ನಲ್ಲಿ ಇದ್ದರೂ ಕರೆದು ಮಾತಾಡಿಸಿದ್ದು ನನ್ನ ಜೀವ ಇರುವ ತನಕ ಮರೆಯುವುದಿಲ್ಲ. ಅಣ್ಣವ್ರ ಸಿನಿಮಾಗಳಿಗೆ ಅತೀ ಹೆಚ್ಚು ಸಿನಿಮಾಗೆ ನಾಯಕಿಯದವರು ಇವ್ರೇ. ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಯಾರೂ ಮರೆಯೋಹಾಗಿಲ್ಲ. ಸಾರ್ಥಕ ಬದುಕು ಬದುಕಿದ್ದೀರಿ. ನಿಮಗೆ ಈಶ್ವರ ಮುಕ್ತಿ ನೀಡಲಿ. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..