ಹೊರಬಂತು ಮತ್ತೊಂದು ಸತ್ಯ.. ಜಯಶ್ರೀ ಬರೆದಿಟ್ಟಿರುವ ಅಸಲಿ ವಿಚಾರ ನೋಡಿ..

0 views

ಕಳೆದ ವರ್ಷ ಸ್ಯಾಂಡಲ್ವುಡ್ ಹಾಗೂ ಕನ್ನಡ ಕಿರುತೆರೆಗೆ ಬಹಳ ನೋವಿನ ವರ್ಷವಾಗಿತ್ತು.. ಹಿರಿತೆರೆ ಹಾಗೂ ಕಿರುತೆರೆಯ ಸಾಕಷ್ಟು ಕಲಾವಿದರು ಇಲ್ಲವಾಗಿ ಹೋದರು.. ತುಂಬಲಾರದ ನಷ್ಟವಾಗಿತ್ತು.. ಸಾಲು ಸಾಲು ಕಲಾವಿದರು ಇಹಲೋಕ ತ್ಯಜಿಸಿದ್ದನ್ನು ನೋಡಿ ಸ್ಯಾಂಡಲ್ವುಡ್ ಗೆ ಈ ವರ್ಷ ಅತ್ಯಂತ ಕೆಟ್ಟ ವರ್ಷವೆನ್ನಲಾಗಿತ್ತು.. ಸಿನಿಮಾವನ್ನೇ ನಂಬಿಕೊಂಡಿದ್ದ ಅನೇಕ ಕುಟುಂಬಗಳು ಬೀದಿಗೆ ಬಂದಿದ್ದವು.. ಕಿರುತೆರೆಯ ಖ್ಯಾತ ನಟ ಸುಶೀಲ್ ಗೌಡ ಸೇರಿದಂತೆ ಅನೇಕರು ಸಹ ಆರ್ಥಿಕ ಸಂಕಷ್ಟದಿಂದ ಜೀವ ಕಳೆದುಕೊಂಡಿದ್ದರು.. ಈ ನಡುವೆ ಹೊಸ ವರ್ಷದ ಆಗಮನವಾಗುತ್ತಿದ್ದಂತೆ ಈ ವರ್ಷವಾದರೂ ಹೊಸ ಬೆಳಕನ್ನು ತರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿತ್ತು..

ಆದರೆ ಈ ವರ್ಷ ಶುರುವಾಗುತ್ತಲೇ ಕನ್ನಡ ಕಿರುತೆರೆ ಕಲಾವಿದೆ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಅವರು ಜೀವ ಕಳೆದುಕೊಂಡಿದ್ದು ಎಲ್ಲರಿಗೂ ಒಂದು ರೀತಿ ಶಾಕ್ ಎನ್ನಬಹುದು.. ಕಳೆದ ವರ್ಷ ಇದೇ ರೀತಿ ಒಮ್ಮೆ ಪ್ರಯತ್ನ ಮಾಡಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದಿದ್ದರು.. ಆ ಸಮಯದಲ್ಲಿ ನಟ ಕಿಚ್ಚ ಸುದೀಪ್ ಅವರು ಜಯಶ್ರೀ ಅವರಿಗೆ ಆರ್ಥಿಕ ನೆರವು ನೀಡಿದ್ದರು..

ಆ ಘಟನೆಯಾದ ಬಳಿಕ ಅದರಿಂದ ಹೊರ ಬಂದ ಕೆಲ ದಿನಗಳಲ್ಲಿ ಜಯಶ್ರೀ ಸಂಪೂರ್ಣವಾಗಿ ತನ್ನ ಕೂದಲನ್ನು ತೆಗೆಸಿ ಹೊಸ ಜೀವನ ಶುರು ಮಾಡುತ್ತಿದ್ದೇನೆ ಎಂದಿದ್ದರು.. ಮಾನಸಿಕ ವಾಗಿ ಬಹಳ ಕುಗ್ಗಿದ್ದ ಜಯಶ್ರೀ ಈ ರೀತಿ ಉತ್ಸಾಹದ ಮಾತುಗಳನ್ನಾಡಿದ ನಂತರ ಅವರು ಸರಿ ಹೋಗಿರಬಹುದೆಂದು ಸ್ನೇಹಿತರು ಕೂಡ ತಿಳಿದುಕೊಂಡು ತಮ್ಮ ಪಾಡಿಗೆ ತಾವು ಸುಮ್ಮನಾದರು..

ಆದರೆ ಜಯಶ್ರೀ ಮಾತ್ರ ಒಳಗೊಳಗೆ ಮಾನಸಿಕವಾಗಿ ನೊಂದು ಕೊನೆಗೂ ಗಟ್ಟಿ ನಿರ್ಧಾರ ಮಾಡಿ ಜೀವ ಕಳೆದುಕೊಂಡುಬಿಟ್ಟರು..ಆದರೆ ಜಯಶ್ರೀ ಈ ರೀತಿ ಮಾಡಿಕೊಳ್ಳಲು ನಿಖರವಾದ ಕಾರಣ ಮಾತ್ರ ಯಾರಿಗೂ ತಿಳಿಯಲಿಲ್ಲ..

ಆದರೆ ವಿಚಾರಣೆ ನಡೆಸುತ್ತಿರುವ ಪೊಲೀಸರ ಕೈಗೆ ಬಲವಾದ ಆಧಾರವೊಂದು ಸಿಕ್ಕಿದೆ.. ಹೌದು ಜಯಶ್ರೀ ಗೆ ಪ್ರತಿದಿನ ಡೈರಿ ಬರೆಯುವ ಅಭ್ಯಾಸವಿತ್ತು.. ಜಯಶ್ರೀ ಬರೆಯುತ್ತಿದ್ದ ಎರಡೂ ಡೈರಿಗಳು ಸಹ ಪೊಲೀಸರ ಕೈಗೆ ಸಿಕ್ಕಿದ್ದು ಅದರಲ್ಲಿ ಕೆಲವೊಂದು ವಿಚಾರ ಬೆಳಕಿಗೆ ಬಂದಿದೆ..

ಹೌದು ಆ ಡೈರಿಯಲ್ಲಿ ಜಯಶ್ರೀ ಅವರು ತಮ್ಮ ಮಾವನನ್ನು ಕ್ಷಮೆ ಕೇಳಿದ್ದಾರೆ.. ಹೌದು ಜೀವ ಕಳೆದುಕೊಳ್ಳುವ ಮುನ್ನ ಡೈರಿಯಲ್ಲಿ ಬರೆದಿರುವ ಜಯಶ್ರೀ ತನ್ನ ಮಾವನನ್ನು ಕ್ಷಮೆ ಕೇಳಿದ್ದಾಳೆ.. ಅಷ್ಟೇ ಅಲ್ಲದೇ ಮಾವನಿಗೆ ತಾನು ಮಾಡಿರುವ ಸಾಲವನ್ನು ತೀರಿಸುವಂತೆ ಕೇಳಿಕೊಂಡಿದ್ದಾಳೆ..

ಹೌದು ಜಯಶ್ರೀ ಅವರು ಆರ್ಥಿಕ ಸಂಕಷ್ಟ ಕೂಡ ಎದುರಿಸುತ್ತಿದ್ದರು ಎಂಬುವುದು ಈ ಮೂಲಕ ಹೊರಬಂದಿದೆ.. ನಟಿ ಹಾಗೂ ಮಾಡೆಲ್ ಆಗಿದ್ದ ಜಯಶ್ರೀ ಕೊರೊನಾ ಕಾರಣದಿಂದ ಯಾವುದೇ ಅವಕಾಶವಿಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು.. ಅದೇ ಕಾರಣಕ್ಕೆ ಬಹಳಷ್ಟು ಜನರ ಬಳಿ ಜಯಶ್ರೀ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.. ಯಾರಿಗೆ ಎಷ್ಟು ಹಣ ನೀಡಬೇಕು ಎಂಬುದನ್ನು ಪ್ರತಿಯೊಂದನ್ನು ಡೈರಿಯಲ್ಲಿ ಬರೆದಿರುವ ಜಯಶ್ರೀ ಆ ಎಲ್ಲಾ ಸಾಲವನ್ನು ತೀರಿಸು ಎಂದು ಮಾವನ ಬಳಿ‌ಮನವಿ ಮಾಡಿಕೊಂಡಿದ್ದಾಳೆ..

ಒಟ್ಟಿನಲ್ಲಿ ಆರ್ಥಿಕ ಸಂಕಷ್ಟ ಹಾಗೂ ಮಾನಸಿಕ ನೋವು ಎರಡೂ ಕಾರಣದಿಂದ ಒಂದು ಜೀವವೇ ಹೋಗಿದ್ದು ಬಣ್ಣದ ಬದುಕು ಹೆಸರು ತಂದು ಕೊಡುತ್ತದೆ ನಿಜ.. ಆದರೆ ಜನರು ತಿಳಿದುಕೊಂಡಂತೆ ಅವರೆಲ್ಲರೂ ಕೈತುಂಬಾ ದುಡ್ಡು ಕಾಣುವವರಲ್ಲ ಎಂಬುದು ಈ ಮೂಲಕ ತಿಳಿಯುತ್ತದೆ.. ಇನ್ನು ಈ ಬಗ್ಗೆ ಬಿಗ್ ಬಾಸ್ ಬಲ್ಲಿ ಜಯಶ್ರೀ ಜೊತೆ ಭಾಗವಹಿಸಿದ್ದ ನಟಿ ಕೃತ್ತಿಕಾ ರವೀಂದ್ರ ಅವರೂ ಸಹ ಮಾತನಾಡಿದ್ದು ತಾವಿಬ್ಬರು ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡು “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು” ಎಂದು ಬರೆದು ಪೋಸ್ಟ್ ಮಾಡಿದ್ದು ಕಣ್ಣೀರಿಟ್ಟಿದ್ದಾರೆ..