ಆಕೆಯನ್ನು ನಾನು ಮದುವೆ ಆಗ್ತಾ ಇಲ್ಲ.. ಸಿಟ್ಟಿಗೆದ್ದ ಜೆಕೆ.. ಹಾಗಿದ್ದರೆ ಈಕೆ ಯಾರು.. ಸತ್ಯ ಬೇರೆಯೇ ಇದೆ.

0 views

ಕನ್ನಡದ ಖ್ಯಾತ ನಟ ಕೆಲ ವರ್ಷಗಳ ಹಿಂದೆ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟ ಜೆಕೆ ನಂತರದಲ್ಲಿ ಸಿನಿಮಾ ಹಾಗೂ ಹಿಂದಿ ಧಾರಾವಾಹಿಯಲ್ಲಿ ಬ್ಯುಸಿ ಆಗಿದ್ದರು. ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿದ್ದ ಜೆಕೆ ಟಾಪ್ ನಾಲ್ಕನೇ ಸ್ಥಾನ ಪಡೆದು ಹೊರ ಬಂದಿದ್ದರು.. ವಯಸ್ಸು ನಲವತ್ತು ದಾಟಿದ್ದರೂ ಸಹ ಇನ್ನೂ ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್ ಎನಿಸಿಕೊಂಡಿದ್ದ ನಟ ಜೆಕೆ ಅವರು ಸಧ್ಯ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಮೊನ್ನೆ ಇಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.. ಸಾಕಷ್ಟು ವೈರಲ್ ಕೂಡ ಆಗಿತ್ತು.. ಆದರೆ ಇದೀಗ ನಾನು ಮದುವೆಯಾಗುತ್ತಿಲ್ಲ ಎಂದು ಖುದ್ದು ಜೆಕೆ ಅವರೇ ಬಹಿರಂಗ ಪಡಿಸಿದ್ದು ಹಾಗಿದ್ದರೆ ಆ ಹುಡುಗಿ ಯಾರು.. ಮದುವೆ ಸುದ್ದಿ ಹಬ್ಬಿದ್ದಾದರೂ ಏಕೆ ಎಂದು ಕುತೂಹಲ ಮೂಡಿದೆ.. ಆದರೆ ಇದಕ್ಕೆಲ್ಲಾ ಕಾರಣ ಬೇರೆಯೇ ಇದೆ.. ಹೌದು ಅಷ್ಟಕ್ಕೂ ಆ ಹುಡುಗಿ ಯಾರು.. ಜೆಕೆ ಗೆ ಆಕೆ ಏನಾಗಬೇಕು.. ಸತ್ಯ ಬೇರೆಯೇ ಇದೆ..

ಹೌದು ನಟ ಜಯರಾಮ್ ಕಾರ್ತಿಕ್ ಸ್ಯಾಂಡಲ್ವುಡ್ ನಲ್ಲಿ ಕಿಚ್ಚ ಸುದೀಪ್ ಅವರ ಆಪ್ತವಲಯದಲ್ಲಿ ಕಾಣಿಸಿಕೊಂಡ ನಟ.. ಸಿಸಿಎಲ್ ನಲ್ಲಿಯೂ ಸಕ್ರೀಯರಾಗಿದ್ದ ಜೆಕೆ ಈಗಲೂ ಸಹ ಕ್ಲಬ್ ಕ್ರಿಕೇಟ್ ಗಳಲ್ಲಿ‌ ಪಾಲ್ಗೊಳ್ಳುತ್ತಾರೆ.. ಇನ್ನು ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ದೊಡ್ಡ ಯಶಸ್ಸು ಪಡೆದ ನಟ ಆ ಧಾರಾವಾಹಿ ಮುಗಿದ ಬಳಿಕ ಸಾಕಷ್ಟು ಸಿನಿಮಾಗಳನ್ನು ಮಾಡಿದರೂ ಸಹ ದೊಡ್ಡ ಮಟ್ಟದಲ್ಲಿ ಯಶಸ್ಸು ದೊರೆಯಲಿಲ್ಲ.. ನಂತರದಲ್ಲಿ ಹಿಂದಿಯ ದೊಡ್ಡ ಧಾರಾವಾಹಿ ಸಿಯಾ ಕಿ ರಾಮ್ ಧಾರಾವಾಹಿಯಲ್ಲಿ ರಾವಣನ ಪಾತ್ರದ ಅವಕಾಶ ಸಿಕ್ಕು ಜೆಕೆ ಹಿಂದಿ ಕಿರುತೆರೆಗೆ ಕಾಲಿಟ್ಟರು.. ಅಲ್ಲಿ ರಾವಣನ ಪಾತ್ರದ ಮೂಲಕ‌ಮಿಂಚಿದ ಜೆಕೆ ಅಲ್ಲಿಯೂ ದೊಡ್ಡ ಮಟ್ಟದ ಯಶಸ್ಸನ್ನು ಪಡೆದು ಗುರುತಿಸಿಕೊಂಡರು.. ನಂತರ ಕನ್ನಡದ ಬಿಗ್ ಬಾಸ್.. ಕ್ರಿಕೇಟ್.. ಜಿಮ್.. ಹಾಗೂ ಸಾಕಷ್ಟು ಮಾಡೆಲಿಂಗ್ ಶೋಗಳಲ್ಲಿ ಸಕ್ರೀಯರಾದ ಜೆಕೆ ಮದುವೆಯ ಮನಸ್ಸು ಮಾತ್ರ ಮಾಡಿರಲಿಲ್ಲ..

ಹೌದು ವಯಸ್ಸು ನಲವತ್ತು ದಾಟಿದರೂ ಸಹ ಅದ್ಯಾಕೋ ಮದುವೆ ಬಗ್ಗೆ ಒಲವು ತೋರದ ಜೆಕೆ ತಮ್ಮ ವೃತ್ತಿ ಬದುಕಿನ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದರು.. ಆದರೆ ಮೊನ್ನೆ ಇದ್ದಕಿದ್ದ ಹಾಗೆ ಹುಡುಗಿಯೊಬ್ಬರ ಜೊತೆಗಿನ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು ಜೆಕೆ ಅದೇ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.. ಹೌದು ಆಕೆಯ ಹೆಸರು ಅರ್ಪಣಾ.. ಖ್ಯಾತ ವಸ್ತ್ರ ವಿನ್ಯಾಸಕಿ.. ದೊಡ್ಡ ದೊಡ್ಡ ಸೆಲಿಬ್ರೆಟಿ ಶೋಗಳಲ್ಲಿ.. ಮಾಡೆಲಿಂಗ್ ಶೋ ಗಳಲ್ಲಿ ಇವರದ್ದೇ ವಸ್ತ್ರ ವಿನ್ಯಾಸ..

ಕಳೆದ ಸಾಕಷ್ಟು ವರ್ಷಗಳಿಂದ ಜೆಕೆ ಅವರ ವಸ್ತ್ರ ವಿನ್ಯಾಸವನ್ನೂ ಸಹ ಇವರೇ ಮಾಡುತ್ತಿರುವುದು.. ಬಹಖ ಆತ್ಮೀಯವಾಗಿರುವ ಈ ಇಬ್ಬರು ಹುಟ್ಟುಹಬ್ಬದ ಆಚರಣೆ ಇನ್ನಿತರ ಸಂಭ್ರಮಾಚರಣೆಯನ್ನು ಒಟ್ಟಾಗಿಯೇ ಮಾಡುತ್ತಿದ್ದರು.. ಇಬ್ಬರು ಬಹಳ ಆತ್ಮೀಯವಾಗಿಯೇ ಫೋಟೋ ತೆಗೆಸಿಕೊಳ್ಳುತ್ತಿದ್ದರು..ಇನ್ನು ಮೊನ್ನೆಯಷ್ಟೇ ಸ್ವತಃ ಅರ್ಪಣಾ ಅವರೇ ಜೆಕೆ ಜೊತೆಗಿನ ಫೋಟೋ ಹಂಚಿಕೊಂಡು ಲೈಫ್ ಲೈನ್ ಎಂದು ಬರೆದು ಹೃದಯದ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದರು.. ಇದನ್ನು ನೋಡಿ ಅರ್ಪಣಾ ಹಾಗೂ ಜೆಕೆ ಮದುವೆಯಾಗ್ತಾ ಇದ್ದಾರೆ ಎಂದು ಸುದ್ದಿಯಾಗಿ ಅದು ಸಾಮಾಜಿಕ ಜಾಲತಾಣದ ತುಂಬೆಲ್ಲಾ ವೈರಲ್ ಆಯಿತು..

ಆದರೆ ಇದೀಗ ಖುದ್ದು ಜೆಕೆ ಅವರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನಾನು ಆಹುಡುಗಿಯನ್ನು ಮದುವೆ ಆಗ್ತಿಲ್ಲ.. ಎಂದಿದ್ದಾರೆ.. ಹೌದು “ಬೇಜಾರ್ ಆಗೋ ವಿಷಯ ಏನು ಅಂದರೆ ನಮ್ಮ ವೃತ್ತಿ ಬದುಕಲ್ಲಿ ನಡೆಯುವ ವಿಚಾರ ಬಿಟ್ಟು ವ್ಯಯಕ್ತಿಕ ವಿಚಾರದ ಬಗ್ಗೆ ಹೇಳದೇ ಕೇಳದೇ ಬರೆಯುತ್ತಾರೆ.. ನಾನು ಮಾಡುತ್ತಿರುವ ಪ್ರಾಜೆಕ್ಟ್ಸ್ ಬಗ್ಗೆ ಯಾವುದೂ ಬರೆಯೋದಿಲ್ಲ.. ಅದನ್ನು ಬಿಟ್ಟು ಬರಿ ತಪ್ಪು ವ್ಯಯಕ್ತಿಕ ಪ್ರಚಾರ ಮಾಡುತ್ತಾರೆ.. ನನ್ನ ವ್ಯಯಕ್ತಿಕ ವಿಚಾರದ ಬಗ್ಗೆ ಏನಾದರೂ ಆದರೆ ನಾನೇ ಖುದ್ದಾಗಿ ಹೇಳುತ್ತೇನೆ.. ನಂಗೆ ಇನ್ನು ಎಷ್ಟು ಮದುವೆ ಮಾಡುಸ್ತಾರೋ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದು ಈ ಮೂಲಕ ತಮ್ಮ ಮದುವೆ ವಿಚಾರವನ್ನು ತೆಗೆದು ಹಾಕಿದ್ದಾರೆ..

ಆದರೆ ಇತ್ತ ಹೃದಯದ ಎಮೋಜಿ ಹಾಕಿ ಅಪ್ಪಿಕೊಂಡು ಫೋಟೋ ಹಂಚಿಕೊಂಡು ಅದಕ್ಕೆ ಮೈ ಲೈಫ್ ಲೈನ್ ಎಂದು ಪೋಸ್ಟ್ ಮಾಡಿದರೆ ಸಾಮಾನ್ಯವಾಗಿ ಎಲ್ಲರೂ ಸಹ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದೇ ಭಾವಿಸುವುದು ಎಂದು ಕಮೆಂಟ್ ಮಾಡಿದ್ದು.. ಆದಷ್ಟು ಬೇಗ ಮದುವೆಯಾಗಿ ನೀವೇ ಸಿಹಿ ಸುದ್ದಿ ಹಂಚಿಕೊಳ್ಳಿ ಎಂದಿದ್ದಾರೆ. ಒಟ್ಟಿನಲ್ಲಿ ಸಧ್ಯಕ್ಕೆ ಕಿರುತೆರೆಯ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಜೆಕೆ ಬ್ಯಾಚುಲರ್ ಆಗಿಯೇ ಉಳಿದುಕೊಳ್ಳಲ್ಲಿದ್ದು ಸಧ್ಯಕ್ಕಂತೂ ಜೆಕೆ ಹೆಂಡತಿ ಎಂದು ಕರೆಯಲು ಹುಡುಗಿಯೊಬ್ಬರ ವರಿಸುವ ನಿರ್ಧಾರವನ್ನು ಮಾಡಿದಂತೆ ಕಾಣುತ್ತಿಲ್ಲವಷ್ಟೇ.. ಇನ್ನು ಇತ್ತ ಇವರ ವೃತ್ತಿ ಬದುಕಿನ ವಿಚಾರಕ್ಕೆ ಬಂದರೆ ಸಧ್ಯ ರಾವಣನ ಪಾತ್ರದ ಮೂಲಕ ಹಿಂದಿ ಕಿರಿತೆರೆಯಲ್ಲಿ ಸೈ ಎನಿಸಿಕೊಂಡಿದ್ದ ಜೆಕೆ ಇದೀಗ ಮತ್ತೆ ಹಿಂದಿ ಕಿರುತೆರೆಗೆ ಮರಳಿದ್ದು ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಕಿರುತೆರೆಗೆ ಭರ್ಜರಿಯಾಗಿಯೇ ಎಂಟ್ರಿ ನೀಡುತ್ತಿದ್ದಾರೆ..