ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕನ್ನಡದ ಮತ್ತೊಬ್ಬ ಖ್ಯಾತ ನಟಿ..

0 views

ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಈಗ ಮದುವೆ ಸೀಸನ್ ಶುರುವಾದ ಹಾಗಿದೆ. ಸಾಕಷ್ಟು ಕಿರುತೆರೆ ಸೆಲೆಬ್ರಿಟಿಗಳು ಮತ್ತು ಬೆಳ್ಳಿತೆರೆಯ ಸೆಲೆಬ್ರಿಟಿಗಳು ಸಹ ಮದುವೆ ಆಗಿ ಅಥವಾ ಮದುವೆ ಬಗ್ಗೆ ಅಪ್ಡೇಟ್ ನೀಡುವ ಮೂಲಕ ಸಿಹಿ ಸುದ್ದಿ ನೀಡುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ನಮ್ಮ ಕನ್ನಡ ಕಿರುತೆರೆಯ ಸಾಕಷ್ಟು ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಟಿಯೊಬ್ಬರು ಮದುವೆ ಆಗುತ್ತಿರುವ ಬಟ್ಟೆ ಗುರ್ ನ್ಯೂಸ್ ನೀಡುವ ಮೂಲಕ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ..

ಈಗ ಮದುವೆಯ ಬಗ್ಗೆ ಗುಡ್ ನ್ಯೂಸ್ ನೀಡಿರುವುದು ಮತ್ಯಾರು ಅಲ್ಲ, ಹಲವು ವರ್ಷಗಳ ಹಿಂದೆ ತೆರೆಕಂಡ ಯೂತ್ ಫುಲ್ ಸಿನಿಮಾ, ಜೋಶ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಪೂರ್ಣ ಅವರು. ಯುವ ಪ್ರತಿಭೆಗಳು, ಹೊಸ ಕಲಾವಿದರೇ ಇದ್ದ ಜೋಶ್ ಸಿನಿಮಾದಲ್ಲಿ ಪೂರ್ಣ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಬಳಿಕ ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದರು ಪೂರ್ಣ. ಇತ್ತೀಚೆಗೆ ರಮೇಶ್ ಅರವಿಂದ್ ಅವರೊಡನೆ 100 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.

ಪೂರ್ಣ ಅವರು ಮೂಲತಃ ಕೇರಳಾದವರು. ಇವರ ನಿಜವಾದ ಹೆಸರು ಶಮ್ನ ಕಾಸಿಂ. ಚಿತ್ರರಂಗಕ್ಕೆ ಬಂದ ಬಳಿಕ ಪೂರ್ಣ ಎಂದು ಹೆಸರು ಬದಲಾಯಿಸಿಕೊಂಡರು. ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಪೂರ್ಣ ಅವರು ಅದೃಷ್ಟದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲಿಗೆ ಇವರಿ ನಟಿಸಿದ್ದು, 2004 ರಲ್ಲಿ ಮಲಯಾಳಂ ಸಿನಿಮಾದಲ್ಲಿ, ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲೇ ನಟಿಸುತ್ತಿದ್ದ ಪೂರ್ಣ ನಂತರದ ದಿನಗಳಲ್ಲಿ ತೆಲುಗು, ತಮಿಳು ಮತ್ತು ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು. ತೆಲುಗು ಮತ್ತು ತಮಿಳಿನಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಪೂರ್ಣ.

ನಟಿ ಎನ್ನುವುದರ ಜೊತೆಗೆ ಒಳ್ಳೆಯ ಡ್ಯಾನ್ಸರ್ ಆಗಿ ಕೂಡ ಗುರುತಿಸಿಕೊಂಡಿರುವ ಪೂರ್ಣ, ತೆಲುಗಿನಲ್ಲಿ ಮತ್ತು ಮಲಯಾಳಂ ನಲ್ಲಿ ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದಾರೆ. ಕೆಲವು ಗಾಸಿಪ್ ಗಳಿಂದಲೂ ಸಹ ಆಗಾಗ ಸುದ್ದಿಯಾಗಿದ್ದಾರೆ ಪೂರ್ಣ. ಇದೀಗ ಪೂರ್ಣ ಅವರು ತಮ್ಮ ವೈಕ್ಯಕ್ತಿಕ ಜೀವನದ ಬಗ್ಗೆ ಅಂದರೆ ಮದುವೆ ಬಗ್ಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಎಲ್ಲಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಪೂರ್ಣ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ಈ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ.

ತಮ್ಮ ಭಾವಿ ಪತಿಯ ಜೊತೆಗೆ ಫೋಟೋಸ್ ಶೇರ್ ಮಾಡಿಕೊಂಡಿರುವ ಪೂರ್ಣ ಅವರು, “ಕುಟುಂಬದವರ ಒಪ್ಪಿಗೆಯ ಜೊತೆಗೆ ಜೀವನದ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇನೆ..” ಎಂದು ಕ್ಯಾಪ್ಶನ್ ಬರೆದಿರುವ ಪೂರ್ಣ ಅವರು, ತಮ್ಮ ಭಾವಿ ಪತಿಯ ಜೊತೆಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪೂರ್ಣ ಅವರು ಮದುವೆ ಆಗಲಿರುವ ಹುಡುಗನ ಹೆಸರು ಶಾನಿದ್ ಆಸಿಫ್ ಅಲಿ. ಕುಟುಂಬದವರ ಒಪ್ಪಿಗೆ ಪಡೆದು, ಶಾನಿದ್ ಅವರೊಡನೆ ಮದುವೆ ಆಗುತ್ತಿದ್ದಾರೆ ಪೂರ್ಣ. ಈ ಗುಡ್ ನ್ಯೂಸ್ ಕೇಳಿದ ಅಭಿಮಾನಿಗಳು ಕಮೆಂಟ್ಸ್ ಗಳ ಮೂಲಕ ವಿಶ್ ಮಾಡುತ್ತಿದ್ದು, ಮದುವೆ ಯಾವಾಗ ಎಲ್ಲಿ ಎನ್ನುವ ಅಪ್ಡೇಟ್ ಗಳನ್ನು ಪೂರ್ಣ ಅವರು ಕೊಡಬೇಕಿದೆ.