ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅತಿ ದೊಡ್ಡ ಬದಲಾವಣೆ.. ಬದಲಾಗುತ್ತಿದೆ ಆರ್ಯವರ್ಧನ್ ಪಾತ್ರ..

0 views

ಕನ್ನಡ ಕಿರುತೆರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಜನರ ಮನರಂಜಿಸುತ್ತಾ ಬಂದಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅತಿದೊಡ್ಡ ಬದಲಾವಣೆಯನ್ನು ತರಲಾಗಿದೆ.. ಹೌದು ಅನಿರುದ್ಧ್, ಮೇಘಾ ಶೆಟ್ಟಿ ಹಾಗೂ ಧಾರಾವಾಹಿಯ ಪ್ರತಿಯೊಬ್ಬ ಕಲಾವಿದರ ಮನೋಜ್ಞ ಅಭಿನಯದಿಂದ ಧಾರಾವಾಹಿ ದಾಖಲೆಯ ರೇಟಿಂಗ್ ಪಡೆದು ಬಹಳಷ್ಟು ತಿಂಗಳುಗಳ ಕಾಲ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗಿ ಹೊರ ಹೊಮ್ಮಿತ್ತು.. ಅನಿರುದ್ಧ್ ಅವರಿಗೆ ಕನ್ನಡ ಕಿರುತೆರೆಯ ಸೆನ್ಸೇಷನಲ್ ಹೀರೋ ಎಂಬ ಬಿರುದು ತಂದುಕೊಟ್ಟು ತಮ್ಮ ಕಲಾ ಬದುಕಿನಲ್ಲಿ ಅತಿ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು..

ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಐನೂರು ಸಂಚಿಕೆಗಳನ್ನು ಪೂರೈಸಿದ ಜೊತೆಜೊತೆಯಲಿ ಧಾರಾವಾಹಿಯ ಕತೆಯಲ್ಲಿ‌ ಇದೀಗ ದೊಡ್ಡ ಮಟ್ಟದ ಬದಲಾವಣೆ ತರಲಾಗಿದೆ.. ಹೌದು ಹೊಸದರಲ್ಲಿ‌ ನಂಬರ್ ಒನ್ ಇದ್ದ ಧಾರಾವಾಹಿ ಬರುಬರುತ್ತಾ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು.. ಇನ್ನು ಕೆಲ ತಿಂಗಳ ಹಿಂದೆ ಪ್ರಸಾರ ಶುರು ಮಾಡಿದ ಸತ್ಯ ಧಾರಾವಾಹಿ ನಂಬರ್ ಒನ್ ಧಾರಾವಾಹಿಯಾಗಿ ಹೊರಹೊಮ್ಮಿತ್ತು.. ಗಟ್ಟಿಮೇಳ ಎರಡನೇ ಸ್ಥಾನಫದಲ್ಲಿದ್ದರೆ ಜೊತೆಜೊತೆಯಲಿ ಧಾರಾವಾಹಿ ಮೂರನೇ ಸ್ಥಾನದಲ್ಲಿತ್ತು.. ಆದರೆ ಕಳೆದ ತಿಂಗಳಿನಲ್ಲಿ ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ ಹಾಗೂ ನಟಿ ಸುಧಾರಾಣಿ ಅವರು ಅತಿಥಿ ಪಾತ್ರದ ಮೂಲಕ ಧಾರಾವಾಹಿಗೆ ಎಂಟ್ರಿ ಕೊಟ್ಟರು..

ಸದ್ಯ ಅನು ಹಾಗೂ ಸೂರ್ಯನ ಮದುವೆಯ ಸಂಚಿಕೆಗಳು‌ ಮುಕ್ತಾಯಗೊಂಡಿದ್ದು ಅನಿರುದ್ಧ್ ಅವರ ಅದ್ಭುತ ಅಭಿನಯಕ್ಕೆ ಜನರು ಮತ್ತೊಮ್ಮೆ ಫಿದಾ ಆಗಿದ್ದಾರೆನ್ನಬಹುದು.. ಧಾರಾವಾಹಿ ಮತ್ತೆ ಇದೀಗ ನಂಬರ್ ಒನ್ ಪಟ್ಟಕ್ಕೇರಿದೆ.. ಕನ್ನಡ ಕಿರುತೆರೆಯಲ್ಲಿ ಟಾಪ್ ಒನ್ ಧಾರಾವಾಹಿಯಾಗಿ ಮತ್ತೊಮ್ಮೆ ಸ್ಥಾನ ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಅನಿರುದ್ಧ್ ಅವರು ಸಂತೋಷ ಹಂಚಿಕೊಂಡಿದ್ದಾರೆ..

ಇನ್ನು ಕತೆಯ ವಿಚಾರಕ್ಕೆ ಬಂದರೆ ಧಾರಾವಾಹಿಯಲ್ಲಿ ದೊಡ್ಡ ತಿರುವೊಂದನ್ನು ನೀಡಿದ್ದು ಆರ್ಯವರ್ಧನ್ ಪಾತ್ರವೇ ಬದಲಾಗುತ್ತಿದೆ.. ಹೌದು ಇಷ್ಟು ದಿನ ಆರ್ಯವರ್ಧನ್ ವರ್ಧನ್ ಕುಟುಂಬದ ಮಗ ಎಂದು ತೋರಿಸಲಾಗಿತ್ತು.. ವರ್ಧನ್ ಸಾಮ್ರಾಜ್ಯದ ಅಧಿಪತಿಯಾಗಿ ತೋರಿಸಲಾಗಿತ್ತು.. ಆದರೀಗ ಅನು ಸಿರಿಮನೆಯಿಂದಲೇ ಆರ್ಯವರ್ಧನ್ ವರ್ಧನ್ ಕುಟುಂಬದ ಮಗನಲ್ಲ ಎಂಬ ವಿಚಾರ ತಿಳಿದಿದೆ.. ಹೌದು ರಾಜನಂದಿನಿ ಬರೆದ ವಿಲ್ ಅನು ಕೈಗೆ ಸಿಕ್ಕಿದ್ದು ಅದನ್ನು ವರ್ಧನ್ ಹಾಗೂ ತನ್ನ ಮನೆಯವರ ಮುಂದೆ ಹರ್ಷವರ್ಧನ್ ಬಳಿಯಲ್ಲೇ ಓದಿಸಿದ್ದು.. “ನನ್ನ ನಂತರ ರಾಜನಂದಿನಿ ಸಂಸ್ಥೆಗೆ ನನ್ನ ತಮ್ಮ ಹರ್ಷವರ್ಧನ್ ಹಾಗೂ ನನ್ನ ತಾಯಿ ಶಾರದಾ ದೇವಿಗೆ ಸೇರತಕ್ಕದ್ದು” ಎಂದು ಬರೆದಿದ್ದು.. ತಾಯಿ ಶಾರದಾ ದೇವಿ.. ತಮ್ಮ ಹರ್ಷವರ್ಧನ್ ಆದರೆ ಈ ಆರ್ಯವರ್ಧನ್ ಯಾರು.. ಶಾರದಾ ದೇವಿ ಅವರ ಮಗನೇ ಅಲ್ಲ ಎಂಬ ಸತ್ಯವನ್ನು ಅನು ಸಿರಿಮನೆ ಎಲ್ಲರ ಮುಂದೆ ಬಯಲು ಮಾಡಿದ್ದಾಳೆ..

ಸದ್ಯ ಧಾರಾವಾಹಿ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆಯುತ್ತಿದ್ದು ಅತ್ತ ಆರ್ಯವರ್ಧನ್ ಹಾಗೂ ಝೇಂಡೆ ಪಾತ್ರದ ಬಾಲ್ಯದ ಜೀವನವನ್ನು ಡ್ರಾಮಾ ಜೂನಿಯರ್ ಕಲಾವಿದರು ಅಭಿನಯಿಸುತ್ತಿದ್ದು ಧಾರಾವಾಹಿಗೆ ಮತ್ತಷ್ಟು ಕಳೆ ತಂದುಕೊಟ್ಟಿದೆ.. ಒಟ್ಟಿನಲ್ಲಿ ಮಧ್ಯ ಕೆಲ ದಿನಗಳು ಪ್ರೇಕ್ಷಕರಿಗೆ ನಿರಾಸೆ ಉಂಟುಮಾಡಿದ್ದ ಧಾರಾವಾಹಿ ಇದೀಗ ಮತ್ತೆ ಎಂದಿನಂತೆ ತನ್ನ ಟ್ರ್ಯಕ್ ಗೆ ಮರಳಿದ್ದು ಮತ್ತೊಮ್ಮೆ ನಂಬರ್ ಒನ್ ಧಾರಾವಾಹಿಯಾಗಿ ಮುಂದುವರೆಯುತ್ತಿದೆ..