ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದ ಕೊನೆಯಾಗುತ್ತಾ?

0 views

ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳು ಬಂದರೂ ಸಹ ನಮ್ಮ ನೇಟಿವಿಟಿಯಲ್ಲಿ ತಯಾರಾದ ಧಾರಾವಾಹಿಗಳದ್ದೇ ಕಾರುಬಾರು.. ರೇಟಿಂಗ್ ಪಟ್ಟಿಯಲ್ಲಿ ಕನ್ನಡದ ಧಾರಾವಾಹಿಗಳೇ ಟಾಪ್ ನಲ್ಲಿವೆ.. ಇನ್ನು ಜೊತೆಜೊತೆಯಲಿ ಧಾರಾವಾಹಿ ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ ಎನಿಸಿಕೊಂಡಿದ್ದ ಧಾರಾವಾಹಿ.. ಸತತ ಒಂದು ವರ್ಷದಿಂದ ಜನರ ಮನರಂಜಿಸುತ್ತಾ ಬರುತ್ತಿದ್ದು ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳ ಪಟ್ಟಿಯಲ್ಲಿ ಒಂದಾಗಿದೆ..

ಜೊತೆಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಕಿರುತೆರೆಯ ಸೆನ್ಸೇಷನಲ್ ಹೀರೋ ಆಗಿ ಹೊರಹೊಮ್ಮಿದರು.. ಹುಡುಗಿಯರು ಅನಿರುದ್ಧ್ಅ ಅವ್ತ್ತಾರ ಸಾಲ್ಟ್ ಅಂಡ್ ಪೆಪ್ಪರ್ ಗಡ್ಡದ ಸ್ಟೈಲ್ ಗೆ ಬಿದ್ದೇ ಹೋದರು.. ಅತ್ತ ಗಂಡಸರು ಕೂಡ ಧಾರಾವಾಹಿ ನೋಡಲು ಶುರು ಮಾಡಿದರು ಎನ್ನಲಾಗುತಿತ್ತು.. ಜೊತೆಜೊತೆಯಲಿ ಧಾರಾವಾಹಿ ಬಂದ ನಂತರ ಆರ್ಯವರ್ಧನ್ ಮಾತ್ರವಲ್ಲ ಪ್ರತಿಯೊಂದು ಪಾತ್ರದ ಕಲಾವಿದರೂ ಸಹ ಮನೆಮಾತಾದರು.. ವಿಭಿನ್ನ ಕತೆಯ ನಿರೂಪಣೆಯ ಮೂಲಕ ಯಶಸ್ವಿಯೂ ಆಯಿತು.. ಇನು ಅನು ಪಾತ್ರಧಾರಿ ಮೇಘಾ ಶೆಟ್ಟಿ ಮೊದಲ ಧಾರಾವಾಹಿಯಲ್ಲಿ ಯಶಸ್ವಿಯಾಗಿ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿಯೂ ಅವಕಾಶ ಪಡೆದುಕೊಂಡಿದ್ದಾರೆ..

ಸದ್ಯ ಜೊತೆಜೊತೆಯಲಿ ಕತೆಯ ವಿಚಾರಕ್ಕೆ ಬಂದರೆ ಅನು ಹಾಗೂ ಆರ್ಯವರ್ಧನ್ ರ ಪ್ರೇಮೋತ್ಸವ ಶುರುವಾಗಿದ್ದು ಕಲ್ಯಾಣೋತ್ಸವಕ್ಕೆ ಮನೆಯವರ ಒಪ್ಪಿಸುವ ಪ್ರಯತ್ನ ನಡೆಯುತ್ತಲಿದೆ.. ಜೊತೆಜೊತೆಯಲಿ ಮೂಲತಃ ಮಳಯಾಳಂ‌ನ ಕತೆಯಾಗಿದ್ದು ಆ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ದುರಂತ ಅಂತ್ಯದಲ್ಲಿ ಕೊನೆಯಾಗಿದೆ.. ಮಳಯಾಳಂ ನಲ್ಲಿ ಆರ್ಯವರ್ಧ‌ ರಾಜನಂದಿನಿಯನ್ನು ಆಸ್ತಿಗಾಗಿ ಪ್ರೀತಿಸಿ ಮದುವೆಯಾಗುತ್ತಾನೆ.. ನಂತರ ಬಾಲ್ಕನಿಯಿಂದ ರಾಜನಂದಿನಿಯನ್ನು ತಳ್ಳಿಬಿಡುತ್ತಾನೆ.. ಈ ಕಾರ್ಯದಲ್ಲಿ ಆರ್ಯವರ್ಧನ್ ನ ಬಲಗೈ ಝೇಂಡೆ ಕೂಡ ಆರ್ಯವರ್ಧನ್ ಗೆ ಸಹಾಯ ಮಾಡಿರುತ್ತಾನೆ..

ನಂತರದ ದಿನಗಳಲ್ಲಿ ಆರ್ಯವರ್ಧನ್ ಗೆ ಅನು ಮೇಲೆ ಹುಟ್ಟಿದ ಪ್ರೀತಿ ನಿಜವಾಗಿರುತ್ತದೆ.. ಅನುವನ್ನು ಮದುವೆಯಾದ ನಂತರ ರಾಜನಂದಿನಿಯ ಸತ್ಯಾಂಶ ಅನುಗೆ ತಿಳಿಯುತ್ತದೆ.. ಆಗ ಆರ್ಯವರ್ಧನ್ ರಾಜನಂದಿನಿಯನ್ನು ನಿಜವಾಗಿ ಪ್ರೀತಿಸಿದ್ದರಾ? ಅಥವಾ ನನ್ನನ್ನಾ? ಎಂಬ ಪ್ರಶ್ನೆ ಅನುವಿನಲ್ಲಿ ಮೂಡುತ್ತದೆ.. ಆರ್ಯವರ್ಧನ್ ನನ್ನು ಗಂಡನಾಗಿ ಒಪ್ಪಿಕೊಂಡಿರುವುದಿಲ್ಲ.. ಆದರೆ ರಾಜನಂದಿನಿಯಯೇ ಮರುಜನ್ಮವಾಗಿ ಅನುವಾಗಿ ಹುಟ್ಟಿರುತ್ತಾಳೆ.. ಈ ವಿಚಾರ ತಿಳಿದು ಆರ್ಯವರ್ಧನ್ ತಾನು ಮಾಡಿದ ತಪ್ಪಿನ ಅರಿವಾಗಿ ಅದೇ ಬಾಲ್ಕನಿಯಿಂದ ತಾನು ಬಿದ್ದು ಜೀವ ಕಳೆದುಕೊಳ್ಳುತ್ತಾನೆ.. ಅಲ್ಲಿಗೆ ಆ ಧಾರವಾಹಿ ಸಂಪೂರ್ಣವಾಗುತ್ತದೆ‌‌..

ಆದರೆ ನಮ್ಮ ಕನ್ನಡದ ಜೊತೆಜೊತೆಯಲಿ ವಿಚಾರಕ್ಕೆ ಬಂದರೆ ಆರ್ಯವರ್ಧನ್ ರನ್ನ ನೆಗಟಿವ್ ರೋಲ್ ನಲ್ಲಿ ನೋಡಲು ಯಾರಿಗೂ ಸಹ ಇಷ್ಟವಿಲ್ಲ.. ಇದೇ ಕಾರಣಕ್ಕೆ ನಮ್ಮ ಕನ್ನಡ ಪ್ರೇಕ್ಷಕರಿಗೆ ಬೇಕಾದ ರೀತಿಯಲ್ಲಿ ಈ ಮೊದಲಿನಿಂದಲೂ ಜೊತೆಜೊತೆಯಲಿ ಕತೆಯಲ್ಲಿ ಬಹಳಷ್ಟು ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಬಂದಿದ್ದಾರೆ.. ಆದರೆ ಇದೀಗ ಅನು ಆರ್ಯನ ಮದುವೆಯಾಗಲು ಮುಂದಾಗಿದ್ದು.. ಮದುವೆಯ ನಂತರ ಆರ್ಯವರ್ಧನ್ ಪಾತ್ರವನ್ನು ಕೊನೆಗೊಳಿಸುತ್ತಾರೋ ಅಥವಾ ಕತೆಗೆ ಬೇರೆಯ ತಿರುವು ಕೊಟ್ಟು ಮುಂದುವರೆಸುತ್ತಾರೋ ಕುತೂಹಲದ ಸಂಚಿಕೆಗಳಿಗಾಗಿ ಕಾದು ನೋಡಬೇಕಿದೆ..