ಜೊತೆಜೊತೆಯಲಿ ಧಾರಾವಾಹಿ ಮುಕ್ತಾಯ? ಕಾರಣವೇನು ಗೊತ್ತಾ..

0 views

ಕನ್ನಡ ಕಿರುತೆರೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಒಂದು ರೀತಿ ಸಂಚಲನ ಮೂಡಿಸಿದ ಧಾರಾವಾಹಿ ಎಂದರೆ ಅದು ಜೊತೆಜೊತೆಯಲಿ ಎಂದರೆ ತಪ್ಪಾಗಲಾರದು.. ಕಳೆದ 2019 ರ ಸೆಪ್ಟೆಂಬರ್ ತಿಂಗಳಿನಲ್ಲಿ ಶುರುವಾದ ಜೊತೆಜೊತೆಯಲಿ ಧಾರಾವಾಹಿ ಹಿಂತಿರುಗಿ ನೋಡಿದ್ದೇ ಇಲ್ಲ.. ದಾಖಲೆಯ ಮೇಲೆ ದಾಖಲೆ ಎಂಬಂತೆ ಹದಿನಾರು ಹದಿನೇಳರ ವರೆಗೂ ರೇಟಿಂಗ್ ಪಡೆದುಕೊಂಡಿತ್ತು.. ಹೌದು ತೆರೆ ಮೇಲೆ ಬಂದ ಮೊದಲ ವಾರದಲ್ಲಿಯೇ ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ ಎನಿಸಿಕೊಂಡ ಜೊತೆಜೊತೆಯಲಿ ಧಾರಾವಾಹಿ ಇದೀಗ ಮುಕ್ತಾಯಗೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.. ಅಷ್ಟೇ ಅಲ್ಲದೇ ಇದಕ್ಕೆ ಬಲವಾದ ಕಾರಣವೂ ಇದೆ ಎನ್ನಲಾಗಿದೆ..

ಹೌದು ಜೊತೆಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ಅನಿರುದ್ಧ್ ಅವರಿಗೆ ಈ ಧಾರಾವಾಹಿ ಕಿರುತೆರೆಯ ಸೆನ್ಸೇಷನಲ್ ಹೀರೋ ಎನ್ನುವ ಹೆಸರು ತಂದು ಕೊಟ್ಟಿತ್ತು.. ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸೋಲುಗಳನ್ನು ಕಂಡಿದ್ದ ಅನಿರುದ್ಧ್ ಅವರಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಕಿರುತೆರೆಯಲ್ಲಿ ದೊರೆತಿತ್ತು.. ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ದುಬಾರಿ ಹೀರೋ ಎಂದೂ ಸಹ ಎನಿಸಿಕೊಂಡಿದ್ದರು.. ಇನ್ನು ಕಳೆದ ಮೂರು ವರ್ಷದಿಂದ ಸಾಕಷ್ಟು ಯಶಸ್ಸು ಕಂಡ ಧಾರಾವಾಹಿ ಇದೀಗ ರೋಚಕ ಘಟ್ಟದಲ್ಲಿದ್ದು ಇನ್ನು ಕೆಲ ತಿಂಗಳುಗಳಲ್ಲಿ ಧಾರಾವಾಹಿಯನ್ನು ಮುಕ್ತಾಯ ಮಾಡಲಾಗುತ್ತದೆಯಾ ಎನ್ನುವ ಮಾತುಗಳು ಕೇಳಿ ಬಂದಿದೆ..

ಹೌದು ಶುರುವಿನಲ್ಲಿ ಆರ್ಯ ವರ್ಧನ್ ರನ್ನು ರೋಲ್ ಮಾಡಲ್ ಅಂತೇ ತೋರಿಸಿದ್ದ ನಿರ್ದೇಶಕರು ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳನ್ನು ರೋಚಕತೆಗಳನ್ನು ನೀಡಿದ್ದರು.. ಸಿರಿವಂತ ಆರ್ಯವರ್ಧನ್ ಪಾತ್ರ ಮಧ್ಯಮ ವರ್ಗದ ಕುಟುಂಬದ ಅನು ಪಾತ್ರ ಮಾತ್ರವಲ್ಲದೇ ಸುಬ್ಬು ಪುಷ್ಪ.. ಶಾರದಾ ದೇವಿ ಜೇಂಡೇ.. ಮೀರಾ ರಮ್ಯಾ.. ಹರ್ಷವರ್ಧನ್ ಮಾನ್ಸಿ ಹೊಸಮನಿ ಹೀಗೆ ಪ್ರತಿಯೊಂದು ಪಾತ್ರಕ್ಕೂ ಸಹ ಅದರದ್ದೇ ಆದ ಪ್ರಾಮುಖ್ಯತೆ ಕೊಟ್ಟಿದ್ದು ಜನರ ಮನಸ್ಸಿಗೆ ಹತ್ತಿರವಾಗಿದ್ದವು..ಧಾರಾವಾಹಿಯ ಹೆಸರಿನಿಂದಲೇ ಕಲಾವಿದರನ್ನು ಗುರುತಿಸುವ ಮಟ್ಟಕ್ಕೆ ಧಾರಾವಾಹಿ ಯಶಸ್ವಿಯಾಗಿತ್ತು..

ಇನ್ನು ಇತ್ತ ನಿರ್ದೇಶನ ನಿರ್ಮಾಣದ ವಿಚಾರಕ್ಕೆ ಬಂದರೆ ಮಿಕ್ಕೆಲ್ಲಾ ಧಾರಾವಾಹಿಗಳಿಂದ ಬಹಳ ಅದ್ಧೂರಿಯಾಗಿ ನಿರ್ಮಾಣಗೊಂಡಿದ್ದ ಜೊತೆಜೊತೆಯಲಿ ಧಾರಾವಾಹಿ ನಿರ್ಮಾಪಕರ ಜೇಬಿಗೂ ಅಷ್ಟೇ ಹೊರೆ ಆಗಿತ್ತು ಎನ್ನುವ ಮಾತು ಕಿರುತೆರೆಯಲ್ಲಿ ಕೇಳಿ ಬಂದಿತ್ತು.. ಎಲ್ಲಾ ಸ್ಟಾರ್ ಕಲಾವಿದರುಗಳು.. ದೊಡ್ಡ ದೊಡ್ಡ ಬಂಗಲೆಗಳು.. ದೊಡ್ಡ ಆಫೀಸಿನಲ್ಲಿ ಚಿತ್ರೀಕರಣವಾಗಬೇಕಿದ್ದರಿಂದ ನಿರ್ಮಾಪಕರಿಗೆ ಕೊಂಚ ಹೊರೆಯಾಗಿತ್ತು ಎನ್ನಲಾಗಿದೆ.. ಇನ್ನು ನಿರ್ಮಾಣ ಹಾಗೂ ನಿರ್ದೇಶನ ಎರಡರ ಜವಾಬ್ದಾರಿಯೂ ಕಿರುತೆರೆಯ ಹೆಸರಾಂತ ನಿರ್ದೇಶಕ ಆರೂರು ಜಗದೀಶ್ ಅವರದ್ದೇ ಆಗಿದ್ದು ಎಲ್ಲಿಯೂ ಯಾವುದರಲ್ಲಿಯೂ ಕಾಂಪ್ರಮೈಸ್ ಆಗದೇ ಧಾರಾವಾಹಿಯನ್ನು ಚೆಂದವಾಗಿ ತೋರುತ್ತಿದ್ದರು.. ಮಧ್ಯ ಒಂದಷ್ಟು ದಿನ ಕತೆ ಬೋರ್ ಎನಿಸಿದಾಗ ತಕ್ಷಣವೇ ಎಚ್ಚೆತ್ತುಕೊಂಡು ಕತೆಯಲ್ಲಿ ತಿರುವುಗಳ ತಂದು ಮತ್ತೆ ತಮ್ಮ ಸ್ಥಾನಕ್ಕೆ ಮರಳಿದ್ದರು..

ಇನ್ನೂ ಸಧ್ಯ ಇದೀಗ ಧಾರಾವಾಹಿಯಲ್ಲಿ ಅನು ರಾಜನಂದಿನಿಯಾಗಿದ್ದು ಆರ್ಯವರ್ಧನ್ ಪಾತ್ರವೇ ರಾಜನಂದಿನಿಯ ಅಗಲಿಕೆಗೆ ಕಾರಣವೆಂದು ತೋರಿಸಲಾಗಿದ್ದು ಅನು ತನ್ನ ಸಾಮ್ರಾಜ್ಯವನ್ನು ತನ್ನ ತಮ್ಮ ಹರ್ಷವರ್ಧನ್ ಗೆ ಕೊಡಿಸಿ ಆರ್ಯವರ್ಧನ್ ಮಾಡಿದ ತಪ್ಪಿಗೆ ಶಿಕ್ಷೆ ನೀಡಲು ಮುಂದಾಗಿದ್ದು ಸಾಕಷ್ಟು ರೋಚಕತೆಯಿಂದ ಕೂಡಿದ್ದು ಕುತೂಹಲ ಮೂಡಿಸಿದೆ.. ಇನ್ನೂ ಧಾರಾವಾಹಿ ಎಂದಿನಂತೆ ಸಿನಿಮಾದಂತೆ ವೇಗವಾಗಿ ಸಾಗುತ್ತಿದ್ದು ಕೆಲ ತಿಂಗಳುಗಳಲ್ಲಿ ಅನು ಅಂದುಕೊಂಡದ್ದು ಸಾಧಿಸುವಳು..

ಮುಂದೆ ಆರ್ಯವರ್ಧನ್ ಗೆ ಶಿಕ್ಷೆಯಾದ ಬಳಿಕ ಕತೆ ಮುಕ್ತಾಯವಾಗುವುದು ಸಹಜವಾಗಿದ್ದು ಇದೇ ಕಾರಣಕ್ಕೆ ಧಾರಾವಾಹಿ ಮುಕ್ತಾಯವಾಗಲಿದೆಯಾ ಎನ್ನುವ ಮಾತು ಕೇಳಿ ಬಂದಿದೆ.. ಇನ್ನು ಆರೂರು ಜಗದೀಶ್ ಅವರದ್ದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಧ್ಯ ಕಿರುತೆರೆಯ ಟಾಪ್ ಧಾರಾವಾಹಿಯಾಗಿದ್ದು ಜೊತೆಜೊತೆಯಲಿ ಮುಗಿಸಿ ಮತ್ತೊಂದು ಹೊಸ ಧಾರಾವಾಹಿಯನ್ನು ಕೈಗೆತ್ತಿಕೊಳ್ಳುವರು ಎನ್ನುವ ಮಾತು ಕೇಳಿ ಬರುತ್ತಿದೆ.. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಧಾರಾವಾಹಿಗಳ ಹೊಸತನ ತುಂಬುತ್ತಿರುವುದು ಕಿರುತೆರೆ ಪ್ರಿಯರಿಗೆ ಮನರಂಜನೆಗೆ ಯಾವುದೇ ಕೊರತೆ ಇಲ್ಲವೆನ್ನಬಹುದು..