ಜೊತೆಜೊತೆಯಲಿ ಧಾರಾವಾಹಿಗೆ ಸೋಲಿನ ರುಚಿ ತೋರಿಸಿದ ಹೊಸ ಧಾರಾವಾಹಿ.. ಪಡೆದ ಟಿ ಆರ್ ಪಿ ಎಷ್ಟು ಗೊತ್ತಾ?

0 views

ಜೊತೆಜೊತೆಯಲಿ.. ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ.. ಕಳೆದ ಒಂದು ವರ್ಷದಿಂದ ಟಾಪ್ ಒಂದು ಅಥವಾ ಎರಡನೇ ಸ್ಥಾನ ಬಿಟ್ಟು ಕದಲದ ಧಾರಾವಾಹಿ ಈಗ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.. ಹೌದು ಟಾಪ್ ಸ್ಥಾನದ ಸೋಲು ಕಾಣದ ಜೊತೆಜೊತೆಯಲಿ ಧಾರಾವಾಹಿಗೆ ಹೊಸ ಧಾರಾವಾಹಿಯೊಂದು ಸೋಲಿನ ರುಚಿ ತೋರಿಸಿದಂತಾಗಿದೆ.. ಸದ್ಯ ಜೊತೆಜೊತೆಯಲಿ ಸಂಚಿಕೆಗಳಲ್ಲಿ‌ ಅನು ಆರ್ಯವರ್ಧನ್ ರ ಪ್ರೀತಿಯ ಸಂಚಿಕೆಗಳು ಪ್ರಸಾರವಾಗುತ್ತಿದ್ದು‌ ಮದುವೆಯ ಮಾತುಕತೆಯ ಹಂತದಲ್ಲಿದೆ ಎನ್ನಬಹುದು.. ಅತ್ತ ಆರ್ಯವರ್ಧನ್ ಅನು ಅವರ ತಂದೆಯ ಬಳಿ‌ ಮದುವೆಗೆ ಒಪ್ಪಿಗೆ ಪಡೆಯುವ ಹೊಸ್ತಿಲಲ್ಲಿ ನಿಂತಿದ್ದು ಅಭಿಮಾನಿಗಳು ಆರ್ಯ ಅನು ಮದುವೆಗಾಗಿ ಬಹಳಷ್ಟು ತಿಂಗಳಿನಿಂದಲೇ ಕಾಯುತ್ತಿರುವುದೂ ಸಹ ರೇಟಿಂಗ್ ಡೌನ್ ಆಗಲು ಕಾರಣವಾಗಿರಬಹುದು..

ಹೌದು ಕಳೆದ ವರ್ಷ ಸೆಪ್ಟೆಂಬರ್ 9 ರಂದು ತನ್ನ ಪ್ರಸಾರ ಆರಂಭಿಸಿದ ಜೊತೆಜೊತೆಯಲಿ ಧಾರಾವಾಹಿ ಮೊದಲ ವಾರವೇ ದಾಖಲೆಯ 11.8 ಟಿವಿಆರ್ ಅನ್ನು ಪಡೆದುಕೊಂಡಿತ್ತು.. ಆನಂತರ ಹಿಂತಿರುಗಿ ನೋಡಿದ ಮಾತೇ ಇರಲಿಲ್ಲ.. 16 ರವರೆಗೂ ತನ್ನ ಟಿ ಆರ್ ಪಿ ಯನ್ನು ದಾಖಲಿಸಿತು.. ಆನಂತರ ಅದೇ ವಾಹಿನಿಯ ಗಟ್ಟಿಮೇಳ ಧಾರಾವಾಹಿ ಜೊತೆಜೊತೆಯಲಿ ಧಾರಾವಾಹಿಯನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿತ್ತು.. ಕಳೆದ ಎಂಟರಿಂದ ಒಂಭತ್ತು ತಿಂಗಳಿನಿಂದಲೂ ಗಟ್ಟಿಮೇಳ ಧಾರಾವಾಹಿ ಮೊದಲ ಸ್ಥಾನದಲ್ಲಿದ್ದರೆ ಜೊತೆಜೊತೆಯಲಿ ಧಾರಾವಾಹಿ ಎರಡನೇ ಸ್ಥಾನವನ್ನು ಕಾಯ್ದುಕೊಂಡು ಬಂದಿತ್ತು.. ಆದರೀಗ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ..

ಹೌದು ಜೊತೆಜೊತೆಯಲಿ ಧಾರಾವಾಹಿಯನ್ನು ಹಿಂದಿಕ್ಕಿದ ಧಾರಾವಾಹಿ ಮತ್ಯಾವುದೂ ಅಲ್ಲ ಜೀ ಕನ್ನಡದಲ್ಲಿ ಕಳೆದ ವಾರವಷ್ಟೇ ಹೊಸದಾಗಿ ಶುರುವಾದ ಸತ್ಯ ಧಾರಾವಾಹಿ.. ಹೌದು ಹೆಣ್ ಮಕ್ಳು ಸ್ಟ್ರಾಂಗು ಗುರು ಎನ್ನುವಂತೆ ಕುಟುಂಬಕ್ಕೆ ಆಸರೆಯಾಗಿ ಗಂಡು ಮಗನಂತೆ ದುಡಿದು ಕುಟುಂಬ ಸಾಕುತ್ತಿರುವ ಸತ್ಯ ಳ ಕತೆ ಜನರಿಗೆ ಇಷ್ಟವಾಗಿದ್ದು ಮೊದಲ ವಾರವೇ ಒಳ್ಳೆಯ ಟಿ ಆರ್ ಪಿ ಯನ್ನು ಪಡೆದುಕೊಂಡಿದೆ.. ಹೌದು ಕಳೆದ ವಾರದ ರೇಟಿಂಗ್ ಬಿಡುಗಡೆಯಾಗಿದ್ದು ಸತ್ಯ ಧಾರಾವಾಹಿ 9.8 ರೇಟಿಂಗ್ ಪಡೆದು ಸದ್ಯ ಕನ್ನಡ ಕಿರುತೆರೆಯ ಧಾರಾವಾಹಿಗಳ ಪೈಕಿ ಟಾಪ್ ಎರಡನೇ ಸ್ಥಾನದಲ್ಲಿದೆ.. ಇನ್ನುಳಿದಂತೆ

ಇನ್ನುಳಿದಂತೆ ಗಟ್ಟಿಮೇಳ ಧಾರಾವಾಹಿ ಮೊದಕ ಸ್ಥಾನ.. ಸತ್ಯ ಎರಡನೇ ಸ್ಥಾನ.. ಜೊತೆಜೊತೆಯಲಿ ಮೂರನೇ ಸ್ಥಾನ.. ಪಾರು ನಾಲ್ಕನೇ ಸ್ಥಾನ.. ಮಂಗಳ ಗೌರಿ‌ ಮದುವೆ ಐದನೇ ಸ್ಥಾನ.. ನಾಗಿಣಿ ಆರನೇ ಸ್ಥಾನ.. ಮುದ್ದುಲಕ್ಷ್ಮಿ ಏಳನೇ ಸ್ಥಾನ.. ಕಲರ್ಸ್ ಕನ್ನಡದ ನಮ್ಮನೆ ಯುವರಾಣಿ ಮತ್ತು ಗೀತಾ ಧಾರಾವಾಹಿ ಎಂಟನೇ ಸ್ಥಾನ.. ಕನ್ನಡತಿ ಹಾಗೂ ನನ್ನರಸಿ ರಾಧೆ ಒಂಭತ್ತನೇ ಸ್ಥಾನ.. ಕಮಲಿ ಹತ್ತನೇ ಸ್ಥಾನ.. ಗಿಣಿರಾಮ ಹೂಮಳೆ ಹನ್ನೊಂದನೇ ಸ್ಥಾನ.. ಜೀವ ಹೂವಾಗಿದೆ ಹನ್ನೆರಡನೇ ಸ್ಥಾನ.. ರಾಧಾ ಕೃಷ್ಣ ಹದಿಮೂರನೇ ಸ್ಥಾನ.. ಮಿಥುನ ರಾಶಿ ಹದಿನಾಲ್ಕು.. ಕಾವ್ಯಾಂಜಲಿ ಹದಿನೈದು.. ಕಸ್ತೂರಿ ನಿವಾಸ ಹದಿನಾರು.. ಮನಸಾರೆ ಹದಿನೇಳು.. ಸರಸು ಹದಿನೆಂಟು.. ಬ್ರಹ್ಮ ಗಂಟು ಪರಮಾವತಾರಿ ಶ್ರೀ ಕೃಷ್ಣ ಹತ್ತೊಂಭತ್ತು.. ಯಾರಿವಳು ಇಪ್ಪತ್ತು.. ಸೇವಂತಿ‌ ಇಪ್ಪತ್ತೊಂದು.. ಮನಸ್ಸೆಲ್ಲಾ ನೀನೆ ಇಪ್ಪತ್ತೆರೆಡನೆ ಸ್ಥಾನದಲ್ಲಿದೆ..

ಸದ್ಯ ಮೊದಲ ವಾರವೇ ಸತ್ಯ ಧಾರಾವಾಹಿಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು ಮುಂಬರುವ ದಿನಗಳಲ್ಲಿ ಟಾಪ್ ಒಂದರ ಸ್ಥಾನದಲ್ಲಿ ಬಂದರೂ ಆಶ್ವರ್ಯ ಪಡಬೇಕಿಲ್ಲ.. ಇನ್ನು ಸತ್ಯ ಧಾರಾವಾಹಿಯನ್ನು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ನಿರ್ದೇಶಕರಾದ ಸ್ವಪ್ನ ಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದು ತಮ್ಮದೇ ಆರ್ ಆರ್ ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಸಹ ಅವರೇ ಹೊತ್ತು ಕೊಂಡಿದ್ದಾರೆ..