ಕಳೆದ ವರ್ಷ ಲಾಕ್ ಡೌನ್ ನಲ್ಲಿ 8 ದಿನ ಸೈಕಲ್‌ ತುಳಿದು 1200 ಕಿ.ಮೀ. ದೂರದಿಂದ ಅಪ್ಪನನ್ನು ಮನೆಗೆ ಕರೆತಂದಿದ್ದ ಮಗಳ ಸುದ್ದಿ ನೆನಪಿದೆಯಾ.. ಆದರೆ ಅವರು ಏನಾದರು ಗೊತ್ತಾ? ಮನಕಲಕುತ್ತದೆ..

0 views

ಕಳೆದ ವರ್ಷ ಲಾಕ್ ಡೌನ್ ಕ್ವಾರಂಟೈನ್ ಐಸೋಲೇಶನ್ ಎಲ್ಲವೂ ನಮ್ಮೆಲ್ಲರಿಗೂ ಹೊಸ ಮಾತುಗಳಾಗಿದ್ದವು.. ಅದರಲ್ಲಿಯೂ ದೇಶವೇ ಲಾಕ್ ಡೌನ್ ಆಗಿ ಸಾಮಾನ್ಯ ಜನರು ಪಟ್ಟ ಕಷ್ಟಗಳು ಆ ಭಗವಂತನಿಗೆ ಪ್ರೀತಿಯಷ್ಟೇ.. ಅದರಲ್ಲಿಯೂ ಊತು ಬಿಟ್ಟು ಅನ್ನದ ದಾರಿ ಕಾಣಲು ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದ ಜನರು ತಮ್ಮ ತಮ್ಮ ಊರುಗಳಿಗೆ ಮರಳಿ ಹೋಗಲು ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲಾ.. ತಿನ್ನೋಕೆ ಅನ್ನ ಇಲ್ಲವದರೂ ಸರಿಯೇ ನಮ್ಮವರ ಬಳಿ ಹೋಗಿ ಸೇರಿಕೊಳ್ಳಬೇಕು ಎಂದು ಎಲ್ಲರೂ ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದರು.. ಲಾಕ್ ಡೌನ್ ಆಗಿದ್ದ ಕಾರಣ ವಾಹನಗಳಿಲ್ಲದೇ ಸಾವಿರಾರು ಜನರು ಸಾವಿರಾರು ಕಿಲೋಮೀಟರ್ ನಡೆದುಕೊಂಡೇ ತಮ್ಮ ತಮ್ಮ ಊರುಗಳಿಗೆ ಸೇರಿಕೊಂಡಿದ್ದು ಇದೆ..

ಆ ಎಲ್ಲಾ ದೃಶ್ಯಗಳು ಇನ್ನೂ ಸಹ ಕಣ್ಣಿಗೆ ಕಟ್ಟಿರುವ ಸಮಯದಲ್ಲಿಯೇ ಈ ವರ್ಷ ಕೊರೊನಾ ಎರಡನೇ ಅಲೆ ಆವರಿಸಿ ಸಾವಿರಾರು ಜೀವಗಳನ್ನು ಪಡೆದುಕೊಂಡು ಆ ಎಲ್ಲಾ ಕುಟುಂಬಗಳು ಜೀವನ ಪರ್ಯಂತ ನೋವು ಅನುಭವಿಸುವಂತಾಗಿ ಹೋಯ್ತು.. ಈ ವರ್ಷ ಕೊರೊನಾ ನಿಯಂತ್ರಣ ಮಾಡಲು ಮತ್ತೊಮ್ಮೆ ಲಾಕ್ ಡೌನ್ ಮಾಡಿದ್ದು ಇದೀಗ ಮತ್ತದೇ ತಿನ್ನೋ ಅನ್ನಕ್ಕೆ ಕಷ್ಟಗಳು ಎದುರಾಗಿದೆ.. ಇನ್ನು ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಸುದ್ದಿಗಳು ಗಮನ ಸೆಳೆದಿದ್ದವು.. ಅದರಲ್ಲೊಂದು ಸುದ್ದಿ ಮನಸ್ಸಿಗೆ ಬಹಳಷ್ಟು ಹತ್ತಿರವಾಗಿತ್ತು.‌. ಮಗಳೊಬ್ಬಳು ಸಾವಿರದ ಇನ್ನೂರು ಕಿಲೋಮೀಟರ್ ದೂರ ಸೈಕಲ್ ತುಳಿದುಕೊಂಡು ತನ್ನ ತಂದೆಯನ್ನು ಕರೆದುಕೊಂಡು ಬಂದಿದ್ದು ನಿಜಕ್ಕೂ ಮನಕಲಕುವಂತಿತ್ತು.. ಆದರೆ ಇಂದು ಅದೇ ತಂದೆಗೆ ಏನಾಗಿದೆ ಗೊತ್ತಾ..

ಹೌದು ಕೊರೊನಾ ಮೊದಲನೆ ಅಲೆಯ ಸಮಯದಲ್ಲಿ ಆದ ಲಾಕ್ ಡೌನ್ ನಲ್ಲಿ ಗುರುಗ್ರಾಮದಲ್ಲಿದ್ದ ಮೋಹನ್ ಪಾಸ್ವನ್ ಎಂಬ ವ್ಯಕ್ತಿಯನ್ನು ಆತನ ಮಗಳು ಜ್ಯೋತಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ಸಾವಿರದ ಇನ್ನೂರು ಕಿಲೋಮೀಟರ್ ದೂರ ಸೈಕಲ್ ತುಳಿದುಕೊಂಡೇ ಬಿಹಾರಕ್ಕೆ ತಲುಪಿದ್ದಳು.. ಆ ಸಮಯದಲ್ಲಿ ಇದು ದೊಡ್ಡದಾಗಿ ಸುದ್ದಿಯಾಗಿತ್ತು..

ಆದರೆ ತಂದೆಯನ್ನು ಕರೆದುಕೊಂಡು ಬಂದ ವರ್ಷದಲ್ಲಿ ಇದೀಗ ಆ ತಂದೆಯೇ ಇಲ್ಲವಾಗಿದ್ದಾರೆ.. ಹೌದು ದರ್ಬಾಂಗ ಜಿಲ್ಲೆಯ ಮೋಹನ್ ಪಾಸ್ವನ್ ಅವರು ಕೊನೆಯುಸಿರೆಳೆದಿದ್ದಾರೆ.. ಮಗಳು ಅಷ್ಟು ಕಷ್ಟ ಪಟ್ಟಿದ್ದಕ್ಕೆ ಕೇವಲ ಒಂದು ವರ್ಷ ಮಾತ್ರವೇ ತನ್ನ ತಂದೆಯನ್ನು ತನ್ನ ಬಳಿ ಇರಿಸಿಕೊಳ್ಳಲು ಸಾಧ್ಯವಾಯಿತು.. ಆದರೆ ಮೊನ್ನೆ ಮೊನ್ನೆತಷ್ಟೇ ಮೋಹನ್ ಪಾಸ್ವನ್ ಹೃದಯ ಘಾತದಿಂದಾಗಿ ಕೊನೆಯುಸಿರೆಳೆದಿದ್ದು ಮಗಳು ಜ್ಯೋತಿ ಕಣ್ಣೀರು ಹಾಕಿದ್ದಾಳೆ.. ಇನ್ನು ಕಳೆದ ವರ್ಷ ಜ್ಯೋತಿ ತಂದೆಗೋಸ್ಕರ ಅಷ್ಟು ದೂರ ಬರೋಬ್ಬರಿ ಎಂಟು ದಿನಗಳ ಕಾಲ ಸೈಕಲ್ ತುಳಿದು ಊರು ತಲುಪಿದಾಗ ಸಾಕಷ್ಟು ಜನ ಜ್ಯೋತಿ ತನ್ನ ತಂದೆಯ ಮೇಲಿಟ್ಟಿರುವ ಪ್ರೀತಿಯನ್ನು ಕೊಂಡಾಡಿದ್ದರು..

ಅಷ್ಟೇ ಅಲ್ಲದೇ ಅನೇಕರು ಜ್ಯೋತಿಗೆ ಆರ್ಥಿಕ ನೆರವನ್ನೂ ಸಹ ನೀಡಿದ್ದರು.. ಆದರೆ ಕಳೆದ ವರ್ಷ ಇದ್ದ ಜೀವ ಇಂದಿಲ್ಲ.. ಇಷ್ಟೇ ಜೀವನ ಯಾವುದು ಶಾಶ್ವತವಲ್ಲ.. ಇಂದು ಆತ ಮುಂದೆ ನಾವು.. ಇದ್ದಷ್ಟು ದಿನ ಮಾನವೀಯತೆ ಇಂದ ಬದುಕಬೇಕಷ್ಟೇ.. ತಂದೆಯನ್ನು ಕಳೆದುಕೊಂಡ ಜ್ಯೋತಿ ಕಣ್ಣೀರಿಟ್ಟಿದ್ದು.. ಆ ತಂದೆ ಮೋಹನ್‌ ಪಾಸ್ವನ್ ಇನ್ನಿಲ್ಲವಾದ ವಿಚಾರ ಇದೀಗ ಸುದ್ದಿಯಾಗಿದ್ದು ನೆಟ್ಟಿಗರು‌ ಸಹ ಕಂಬನಿ‌ ಮಿಡಿದಿದ್ದಾರೆ..