ವಿವಾದದ ಬೆನ್ನಲ್ಲೇ ಗಂಡನಿಗೆ ಸಿಹಿಸುದ್ದಿ‌ ಕೊಟ್ಟ ಕೆ.ಕಲ್ಯಾಣ್ ಪತ್ನಿ ಅಶ್ವಿನಿ..

0 views

ಕೆಲ ದಿನಗಳ ಹಿಂದಷ್ಟೇ ಪ್ರೇಮಕವಿ ಕಲ್ಯಾಣ್ ಅವರ ದಾಂಪತ್ಯದ ವಿಚಾರ ಸುದ್ದಿಯಾಗಿತ್ತು.. ಪತಿಯ ವಿರುದ್ಧ ಅಶ್ವಿನಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.. 14 ವರ್ಷದಿಂದ ನೆಮ್ಮದಿ ಇಲ್ಲವೆಂದು ದೂರಿದ್ದರು.. ಆದರೆ ತಮ್ಮ ಮೇಲೆ ಬಂದ ಆರೋಪಗಳನ್ನೆಲ್ಲಾ ನಾಜೂಕಾಗಿ ಬಗೆ ಹರಿಸಿಕೊಂಡರು ಕಲ್ಯಾಣ್ ಅವರು.. ಇದೀಗ ಪತ್ನಿ ಅಶ್ವಿನಿ ಅವರಿಂದ ಸಿಹಿ ಸುದ್ದಿಯೊಂದು ಬಂದಿದೆ..

ಹೌದು ಸಂಸಾರದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಂತೆ ಖುದ್ದು ಕಲ್ಯಾಣ್ ಅವರೇ ಪತ್ರಿಕಾ ಗೋಷ್ಠಿ ಕರೆದು ನನ್ನ ಪತ್ನಿ ಯಾರದ್ದೋ ಮಾತಿನಿಂದ ಈ ರೀತಿ ಆರೋಪ ಮಾಡಿದ್ದಾಳೆ.. ನಾನು ಅವಳು ಕೂತು‌ ಮಾತನಾಡಿದರೆ ಎಲ್ಲವೂ ಬಗೆಹರಿಯಲಿದೆ ಈ ಬಗ್ಗೆ ಸುದ್ದಿ‌ ಮಾಡಬೇಡಿ ಎಂದಿದ್ದರು..

ಅತ್ತ ಅಶ್ವಿನಿ ಅವರು ಅದಾಗಲೇ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.. ಕಲ್ಯಾಣ್ ರಿಂದ ನೆಮ್ಮದಿ ಇಲ್ಲ ಎಂದು ದೂರಿದ್ದರು.. ಆದರೆ ಕಲ್ಯಾಣ್ ಅವರೂ ಸಹ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ಶಿವಾನಂದ ವಾಲಿ ಎಂಬುವವರ ವಿರುದ್ಧ ದೂರು ದಾಖಲಿಸಿದ್ದರು.. ಅಲ್ಲಿ ನಿಜಕ್ಕೂ ನಡೆದ ವಿಚಾರವೇನೆಂದರೆ ಕಲ್ಯಾಣ್ ಅವರ ಪೋಷಕರು ತೀರಿಕೊಂಡ ನಂತರ ಅಶ್ವಿನಿ ಅವರ ತಂದೆ ತಾಯಿಯನ್ನು ತಂದು ಕಲ್ಯಾಣ್ ಅವರ ಮನೆಯಲ್ಲಿ ಇರಿಸಿಕೊಂಡಿದ್ದರು..

ನಂತರ ಅವರ ಮನೆಗೆ ಗಂಗಾ ಕುಲಕರ್ಣಿ ಎಂಬ ಕೆಲಸದವರು ಬಂದು ಶಿವಾನಂದ ವಾಲಿ ಎಂಬಾತನನ್ನು ಆ ಅಡುಗೆಯವಳು ಅಶ್ವಿನಿ ಅವರ ತಂದೆ ತಾಯಿಗೆ ಪರಿಚಯ ಮಾಡಿಕೊಟ್ಟಿದ್ದಳು.. ಅವರು ಅಶ್ವಿನಿ ತಂದೆ ತಾಯಿಯ ಮನವೊಲಿಸಿ ಬಹಳಷ್ಟು ಹಣ ಆಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು..

ಇದೀಗ ಅವರೆಲ್ಲಾ ಪೊಲೀಸರ ವಶದಲ್ಲಿದ್ದಾರೆ.. ಅತ್ತ ಕುಟುಂಬಸ್ತರು ಕಲ್ಯಾಣ್ ಹಾಗೂ ಅಶ್ವಿನಿ ಅವರಿಬ್ಬರು ಪರಸ್ಪರ ಮಾತನಾಡಲು ಅವಕಾಶ ಕಲ್ಪಿಸಿದ್ದರು.. ಇಬ್ಬರೂ ಸಹ ಮಾತನಾಡಿ ಇಬ್ಬರ ನಡುವೆ ಇದ್ದ ಮನಸ್ತಾಪಗಳನ್ನು ದೂರ ಮಾಡಿಕೊಂಡರು.. ಕೊನೆಗೆ ಗಂಡ ಹೆಂಡತಿ ಜಗಳ ಒಂದು ಆಪ್ತ ಸಮಾಲೋಚನೆಯಿಂದ ದೂರಾದಂತಾಯಿತು..

ಇನ್ನು ಇದೀಗ ಕಲ್ಯಾಣ್ ಅವರಿಗೆ ಸಂತೋಷದ ವಿಚಾರವೊಂದನ್ನು ಪತ್ನಿ ಅಶ್ವಿನಿ ಅವರು ತಿಳಿಸಿದ್ದಾರೆ.. ಹೌದು ಮಾದ್ಯಮದ ಜೊತೆ ಮಾತನಾಡಿರುವ ಅಶ್ವಿನಿ ಅವರು ನಮ್ಮ ಕುಟುಂಬ ಯಾವುದೋ ಸುಳಿಯಲ್ಲಿ ಸಿಲುಕಿತ್ತು.. ಇದೀಗ ಸಂಪೂರ್ಣವಾಗಿ ಅದರಿಂದ ಹೊರ ಬಂದಿದ್ದೇವೆ.. ನಾನು ನನ್ನ ಮುಂದಿನ ಜೀವನವನ್ನು ನನ್ನ ಪತಿ ಕಲ್ಯಾಣ್ ಅವರ ಜೊತೆ ಕಳೆಯುವೆ.. ಸದ್ಯದಲ್ಲಿಯೇ ಕಲ್ಯಾಣ್ ಅವರ ಬಳಿ ಹೋಗುವೆ.. ನ್ಯಾಯಾಲಯದಲ್ಲಿ ಹಾಕಿರುವ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆಯುವೆ ಎಂದು ತಿಳಿಸಿದ್ದು ಪ್ರೇಮ ಕವಿಯ ದಾಂಪತ್ಯ ವಿವಾದ ಸುಖಾಂತ್ಯವಾದಂತಾಗಿದೆ..