ಕೆ.ಕಲ್ಯಾಣ್ ಪತ್ನಿಯ ವಿಚಾರದಲ್ಲೀಗ ತಿರುವು.. ಮನೆಯಲ್ಲಿ ಸಿಕ್ಕ ವಸ್ತುಗಳೇ ಬೇರೆ..

0 views

ನಿನ್ನೆಯಷ್ಟೇ ಸ್ಯಾಂಡಲ್ವುಡ್ ನ ಪ್ರೇಮ ಕವಿ ಕೆ.ಕಲ್ಯಾಣ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದ್ದ ಪರಿಣಾಮ ಅವರ ಪತ್ನಿ ಅಶ್ವಿನಿ ಅವರು ನಿನ್ನೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಕಲ್ಯಾಣ್ ಅವರ ವಿರುದ್ಧ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.. ಆದರೀಗ ಪ್ರಕರಣಕ್ಕೆ ಬೇರೆ ರೀತಿಯಲ್ಲಿಯೇ ತಿರುವು ಸಿಕ್ಕಿದೆ.. ಹೌದು ಕೆ.ಕಲ್ಯಾಣ್ ಹಾಗೂ ಅಶ್ವಿನಿ ಅವರು 2015 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಅಂದಿನಿಂದ ಇಂದಿನವರೆಗೆ ಕಲ್ಯಾಣ್ ಅವರು ಅಶ್ವಿನಿ ಅವರ ತಂದೆಯ ಬಳಿ 60 ಲಕ್ಷ ಹಣ ಪಡೆದಿದ್ದಾರೆ ಎಂದು ಅಶ್ವಿನಿ ಆರೋಪ ಮಾಡಿದ್ದರು.. ಜೊತೆಗೆ 14 ವರ್ಷದಿಂದ ಯಾವುದೇ ಸುಖವಿಲ್ಲ.. ಮಕ್ಕಳು ಸಹ ಆಗಿಲ್ಲ.. ಅವರಿಗೆತಂ ತ್ರಮಾಡುವ ಅಭ್ಯಾಸವಿದೆ.. ಮನೆಯಲ್ಲಿ ಅದಕ್ಕೆ ಬೇಕಾದ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದರು..

ಆದರೆ ಮೊನ್ನೆಯಷ್ಟೇ ಕೆ.ಕಲ್ಯಾಣ್ ಅವರು ಬೆಳಗಾವಿಯ ಪೊಲೀಸ್ ಠಾಣೆಯೊಂದರಲ್ಲಿ ಪತ್ನಿ ಹಾಗೂ ಅತ್ತೆ ಮಾವನನ್ನು ಶಿವಾನಂದ ಬಾಲಿ ಎನ್ನುವವನು ಕರೆದುಕೊಂಡು ಹೋಗಿದ್ದಾನೆ ಎಂದು ದೂರು ದಾಖಲಿಸಿದ್ದರು.. ಆತನಿಗೆತಂ ತ್ರಗಾರಿಕೆಗೊತ್ತು.. ಅವನು ನಮ್ಮ ಅತ್ತೆ ಮಾವನನ್ನು ಮನವೊಲಿಸಿ 19.8 ಲಕ್ಷ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ.. ಅಷ್ಟೇ ಅಲ್ಲದೇ ಜಾಯಿಂಟ್ ಪ್ರಾಪರ್ಟಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ ಎಂದು ಸೆಪ್ಟೆಂಬರ್ 30 ರಂದು ನೀಡಿರುವ ದೂರಿನಲ್ಲಿ ತಿಳಿಸಿದ್ದರು.. ಇದೀಗ ಕಲ್ಯಾಣ್ ಅವರ ದೂರಿನ ಮೇರೆಗೆ ಶಿವಾನಂದ್ ನನ್ನು ವಶಕ್ಕೆ ಪಡೆದಿರುವ ಪೊಲೀಸರಿಗೆ ಆತನ ಮನೆಗೆ ತೆರಳಿದಾಗ ಶಾಕ್ ಆಗಿದೆ.. ಹೌದು ಮನೆಯ ತುಂಬೆಲ್ಲಾ ಮಾ ಟಮಂ ತ್ರಕ್ಕೆ ಸಂಬಂಧಪಟ್ಟ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.. ಅತ್ತ ಗಂಡ ಕಲ್ಯಾಣ್ ನೇತಂ ತ್ರಮಾಡುತ್ತಾನೆ ಎಂದು ಪತ್ನಿ ಅಶ್ವಿನಿ ದೂರಿದ್ದಾರೆ.. ಇತ್ತ ಪತ್ನಿ ಅತ್ತೆ ಮಾವ ಕಾಣುತ್ತಿಲ್ಲ ಎಂದು ಕಲ್ಯಾಣ್ ದೂರಿದ್ದಾರೆ..

ಆದರೆ ಈ ಬಗ್ಗೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಕಲ್ಯಾಣ್ ಅವರು ನನ್ನ ಪತ್ನಿಯ ಹೇಳಿಕೆಗಳನ್ನು ಸುದ್ದಿ ಬಿತ್ತರಿಸಬೇಡಿ.. ನಾನು ನ್ಯಾಯಾಲಯದಲ್ಲಿ ಸಾಬೀತು ಮಾಡುತ್ತೇನೆ ಎಂದಿದ್ದಾರೆ..
All rights reserved Star NEws Kannada 2.0.